ಇದೇ ಮೊದಲ ಬಾರಿಗೆ ಮಗನ ಮುಖ ತೋರಿಸಿದ 'ಹೆಬ್ಬುಲಿ' ನಟಿ; ಪತಿಯೊಂದಿಗೆ ಪುಲ್ ರೊಮ್ಯಾಂಟಿಕ್
ದಕ್ಷಿಣ ಭಾರತದ ನಟಿ ಅಮಲಾ ಪೌಲ್ ಇತ್ತೀಚೆಗೆ ವಿವಾದಗಳಿಂದ ಸದ್ದು ಮಾಡಿದ್ದೇ ಹೆಚ್ಚು. ಈಕೆ ಹೋದಲ್ಲೆಲ್ಲ ಒಂದಲ್ಲ ಒಂದು ವಿವಾದ ಈ ನಟಿಯನ್ನು ಸುತ್ತಿಕೊಳ್ಳುತ್ತಲೇ ಇತ್ತು. ಅದರಲ್ಲೂ ಗರ್ಭಿಣಿಯಾಗಿದ್ದಾಗ, ಅಮಲಾ ಪೌಲ್ ಧರಿಸಿದ ಕಾಸ್ಟ್ಯೂಮ್ ಕೂಡ ಹಲವು ಬಾರಿ ನೆಟ್ಟಿಗರ ಕಣ್ಣನ್ನು ಕುಕ್ಕಿತ್ತು. ಈ ಕಾರಣಕ್ಕೆ ಟ್ರೋಲ್ ಆಗಿದ್ದೂ ಇದೆ.
ಅಮಲಾ ಪೌಲ್ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ ಅನ್ನೋದನ್ನು ಹಲವು ಬಾರಿ ಸಾಬೀತು ಮಾಡಿದ್ದಾರೆ. ಕಾಸ್ಯೂಮ್ ವಿಚಾರಕ್ಕೆ ವಿವಾದ ಎದ್ದಾಗಲೂ, ಕಮೆಂಟ್ ಪಾಸ್ ಆದಾಗಲೂ ಅಮಲಾ ಪೌಲ್ ಪ್ರತಿಕ್ರಿಯೆ ನೀಡುವುದಕ್ಕೆ ಹೋಗಿರಲಿಲ್ಲ. ತನ್ನ ಜೀವನದ ಅತ್ಯಮೂಲ್ಯ ಕ್ಷಣಗಳನ್ನು ಈ ಬಹುಭಾಷಾ ನಟಿ ಅಮಲಾ ಪೌಲ್ ಎಂಜಾಯ್ ಮಾಡಿದ್ದರು.

ನಟಿ ಅಮಲಾ ಪಾಲ್ ಇದೇ ವರ್ಷ ಜೂನ್ ತಿಂಗಳಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಇಲ್ಲಿಂದ ಅಮಲಾ ಪೌಲ್ ಬದುಕು ಬದಲಾಗಿದೆ. ಪುತ್ರನ ಆಗಮನದಿಂದ ನಟಿ ಖುಷಿಯ ಅಲೆಯಲ್ಲಿ ತೇಲಾಗಡುತ್ತಿದ್ದಾರೆ. ಇದೂವರೆಗೂ ಮಗುವಿನ ಮುಖವನ್ನು ತೋರಿಸಿರಲಿಲ್ಲ. ಈಗ ತನ್ನ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿರುವ ಫೋಟೊಗಳಲ್ಲಿ ಮಗುವಿನ ಮುಖವನ್ನು ರಿವೀಲ್ ಮಾಡಿದ್ದಾರೆ.
ಓಣಂ ಹಬ್ಬದ ವಿಶೇಷ ದಿನದಂದು ತಮ್ಮ ಮಗು ಹಾಗೂ ಪತಿಯೊಂದಿಗೆ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಮಗುವಿನ ಜೊತೆಗೆ ಪತಿ ಜಗತ್ ದೇಸಾಯಿ ಜೊತೆ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿರುವುದು ಅಷ್ಟೇ ವಿಶೇಷ. ಮಲಯಾಳಂನ 'ನೀಲತಾಮರ' ಅನ್ನೋ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ನಟಿ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಬಳಿಕ ನಟಿಸಿದ ಸಿನಿಮಾಗಳು ಪ್ರೇಕ್ಷಕರನ್ನು ಸೆಳೆದಿದ್ದವು.
ವೈಯಕ್ತಿಕ ಜೀವನದಲ್ಲೂ ಕೂಡ ಅಮಲಾ ಪೌಲ್ ವಿವಾದಕ್ಕೆ ಸಿಲುಕಿದ್ದರು. ನಿರ್ದೇಶಕ ಎ ಎಲ್ ವಿಜಯ್ ಅವರನ್ನು ಮೊದಲು ಮದುವೆಯಾಗಿದ್ದರು. ಆದರೆ, ಈ ಮದುವೆ ಹೆಚ್ಚು ದಿನ ಉಳಿಯಲಿಲ್ಲ. ಒಂದಿಷ್ಟು ದಿನ ಒಂಟಿಯಾಗಿದ್ದ ಅಮಲಾ ಪೌಲ್ ಮತ್ತೆ ಪ್ರೀತಿಯಲ್ಲಿ ಬಿದ್ದರು. ಉದ್ಯಮಿ ಜಗತ್ ದೇಸಾಯಿ ಜೊತೆ ಡೇಟಿಂಗ್ ಮಾಡುತ್ತಿದ್ದ ನಟಿ ಕಳೆದ ವರ್ಷ ವಿವಾಹವಾಗಿದ್ದರು. ಮದುವೆಯಾದ ಕೆಲವೇ ದಿನಗಳಲ್ಲಿ ಗರ್ಭಿಣಿ ಎಂದು ಘೋಷಿಸಿದ್ದರು.
ಮದುವೆಗೂ ಮುನ್ನವೇ ಅಮಲಾ ಪೌಲ್ ಗರ್ಭಿಣಿಯಾಗಿದ್ದರು ಎಂಬ ಮಾತು ವಿವಾದಕ್ಕೆ ಕಾರಣವಾಗಿತ್ತು. ಅಮಲಾ ಪೌಲ್ ಇದು ವರ್ಷ ಜೂನ್ 11ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ಆ ಮಗುವಿಗೆ ಇಲೈ ಅಂತಾನೂ ಹೆಸರಿಟ್ಟಿದ್ದಾರೆ. ಇದಾದ ಕೆಲವು ದಿನಗಳಲ್ಲಿ ಮೊದಲ ಬಾರಿಗೆ ಮಗುವಿನೊಂದಿಗೆ ಫೋಟೊವನ್ನು ಹಂಚಿಕೊಂಡಿದ್ದಾರೆ.
ಓಣಂ ಹಬ್ಬದಂದು ಮಗ, ಪತಿಯೊಂದಿಗಿರುವ ಫೋಟೊ ವೈರಲ್ ಆಗುತ್ತಿದೆ. ಕೇರಳದ ಸಾಂಪ್ರದಾಯಿಕ ಉಡುಗೆ ಸೀರೆಯುಟ್ಟು ಮಿಂಚಿದ್ದಾರೆ. ಇಷ್ಟೇ ಅಲ್ಲದೆ ಕೈಯಲ್ಲಿ ಮಗುವನ್ನು ಹಿಡಿದುಕೊಂಡು ಪತಿಗೆ ಮುತ್ತಿಕ್ಕಿದ್ದಾರೆ. ಮಗುವಿನ ಪೋಟೊಗಳನ್ನು ನೋಡಿ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಕಾಮೆಂಟ್‌ಗಳನ್ನು ಹಾಕುತ್ತಿದ್ದಾರೆ.


Click it and Unblock the Notifications











