ಮಾವ ಸೊಸೆಯ ಅಫೇರ್.. 17ನೇ ವಯಸ್ಸಿನಲ್ಲಿ ನಿರ್ದೇಶಕನ ನಂಬಿ ಮೋಸ ಹೋಗಿದ್ದ 'ಹೆಬ್ಬುಲಿ' ನಟಿ ಅಮಲಾ ಪೌಲ್!
ದಕ್ಷಿಣ ಭಾರತದಲ್ಲಿ ಬೋಲ್ಡ್ ಪಾತ್ರಗಳ ಮೂಲಕ ಜನಪ್ರಿಯರಾಗಿರುವ ನಟಿ ಅಮಲಾ ಪೌಲ್. ತನ್ನ ವೃತ್ತಿ ಬದುಕಿನ ಆರಂಭದಲ್ಲಿಯೇ ಈ ಕಾರಣಕ್ಕೆ ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದರು. ತಮಿಳು ಚಿತ್ರರಂಗದ ಕೆಂಗಣ್ಣಿಗೆ ಗುರಿಯಾಗಿದ್ದರು. ಅದಕ್ಕೆ ಕಾರಣ ಅಮಲಾ ಪೌಲ್ ನಟಿಸಿದ ಒಂದು ಸಿನಿಮಾ. ತನ್ನ 17ನೇ ವಯಸ್ಸಿನಲ್ಲಿ ತೆಗೆದುಕೊಂಡ ಒಂದು ಕೆಟ್ಟ ನಿರ್ಧಾರ ಆಕೆಯ ವೃತ್ತಿ ಬದುಕನ್ನೇ ಮುಗಿಸಿಬಿಡುತ್ತಿತ್ತು.
ಹೀಗಿದ್ದರೂ, ಅಮಲಾ ಪೌಲ್ ಆ ವಿವಾದಗಳನ್ನು ಎದುರಿಸಿ ತಮಿಳು ಚಿತ್ರರಂಗದಲ್ಲಿ ಗಮನ ಸೆಳೆದರು. ವಿಜಯ್, ವಿಕ್ರಮ್ ಅಂತಹ ದಿಗ್ಗಜರ ಸಿನಿಮಾಗಳಲ್ಲಿ ನಟಿಸಿ ಕಾಲಿವುಡ್‌ನಲ್ಲಿ ಗಟ್ಟಿಯಾಗಿ ನೆಲೆಯೂರಿದರು. ಈಗ ವೈವಾಹಿಕ ಜೀವನಕ್ಕೆ ಕಾಲಿಟ್ಟು, ತನ್ನ ಕುಟುಂಬದೊಂದಿಗೆ ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದಾರೆ. ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಅಮಲಾ ಪೌಲ್ ತನ್ನನ್ನು ವಿವಾದಕ್ಕೆ ಎಡೆ ಮಾಡಿಕೊಟ್ಟಿದ್ದ ಸಿನಿಮಾದ ಬಗ್ಗೆ ಮಾತಾಡಿದ್ದಾರೆ.

ಈ ನಟಿ ಕನ್ನಡದಲ್ಲೂ ಕಿಚ್ಚ ಸುದೀಪ್ ಜೊತೆ 'ಹೆಬ್ಬುಲಿ' ಸಿನಿಮಾದಲ್ಲಿ ನಟಿಸಿದ್ದಾರೆ. ಕಿಚ್ಚನಿಗೆ ನಾಯಕಿಯಾಗಿ ನಟಿಸಿದ್ದ ಈ ಸಿನಿಮಾಗೆ ಕನ್ನಡಿಗರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅಮಲಾ ಪೌಲ್ ಚಿಕ್ಕ ವಯಸ್ಸಿನಲ್ಲಿಯೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಆರಂಭದಲ್ಲಿ ಇವರನ್ನು ನಾಯಕಿಯನ್ನಾಗಿ ಮಾಡಿದ್ದ ಒಂದು ಸಿನಿಮಾ 17 ವಯಸ್ಸಿನಲ್ಲೇ ವೃತ್ತಿ ಬದುಕಿಗೆ ಅಂತ್ಯ ಹಾಡುತ್ತಿತ್ತು. ಅಸಲಿಗೆ ಆ ಸಿನಿಮಾ ಯಾವುದು? ಅಷ್ಟೊಂದು ವಿವಾದ ಆಗಿದ್ದು ಯಾಕೆ? ಈಕೆಯ ಬೆಂಬಲಕ್ಕೆ ನಿಂತಿದ್ದು ಯಾರು? ತಿಳಿಯುವುದಕ್ಕೆ ಮುಂದೆ ಓದಿ.
ಅಮಲಾ ಪೌಲ್ ವೃತ್ತಿ ಬದುಕಿನಲ್ಲಿ ಸಾಕಷ್ಟು ವಿವಾದಗಳು ನಡೆದಿವೆ. ಈಕೆ ನಟಿಸಿದ ಕೊನೆಯ ಸಿನಿಮಾ 'ಅಡೈ'ನಲ್ಲೂ ಬೆತ್ತಲೆಯಾಗಿ ನಟಿಸಿದ್ದರು. ಆ ವೇಳೆ ಕೂಡ ಸಾಕಷ್ಟು ಟೀಕೆ ಟಿಪ್ಪಣಿಗಳನ್ನು ಎದುರಿಸಬೇಕಾಗಿತ್ತು. ಆದರೆ, ಆಗ ತಾನೇ ತಮಿಳು ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದ್ದ ಅಮಲಾ ಪೌಲ್ 'ಸಿಂಧು ಸಮವೇಲಿ' ಎನ್ನುವ ಸಿನಿಮಾವನ್ನು ಒಪ್ಪಿಕೊಂಡಿದ್ದರು. ಈ ಸಿನಿಮಾದಲ್ಲಿ ಅಮಲಾ ಪೌಲ್ ಪಾತ್ರ ದೊಡ್ಡ ವಿವಾದವನ್ನೇ ಸೃಷ್ಟಿಸಿತ್ತು.
17ನೇ ವಯಸ್ಸಿನಲ್ಲಿ ಅಮಲಾ ಪೌಲ್ ಇಂತಹ ವಿವಾದಾತ್ಮಕ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ಹರೀಶ್ ಕಲ್ಯಾಣ್ ಹಾಗೂ ಅಮಲಾ ಪೌಲ್ ಅವರದ್ದು ಪ್ರಮುಖ ಪಾತ್ರವಾಗಿತ್ತು. ಆಗಿನ್ನೂ ವಯಸ್ಸು ಚಿಕ್ಕದಾಗಿದ್ದರಿಂದ ಎಂತಹ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಅನ್ನೋ ಅರಿವು ಈಕೆಗೆ ಇರಲಿಲ್ಲ. ಇದು ಇಡೀ ತಮಿಳುನಾಡು ಅಮಲಾ ವಿರುದ್ಧ ತಿರುಗಿಬೀಳುವಂತೆ ಮಾಡಿತ್ತು. ಅಷ್ಟಕ್ಕೂ ಅಷ್ಟೊಂದು ವಿವಾದ ಸೃಷ್ಟಿಯಾಗುವುದಕ್ಕೆ ಬಲವಾದ ಕಾರಣವಿದೆ.

2010ರಲ್ಲಿ ತೆರೆಕಂಡಿದ್ದ 'ಸಿಂಧು ಸಮವೇಲಿ' ಸಿನಿಮಾವನ್ನು ಸ್ವಾಮಿ ಎನ್ನುವವರು ನಿರ್ದೇಶಿಸಿದ್ದರು. ಈ ಸಿನಿಮಾದ ಕಥೆಯೇ ವಿವಾದವನ್ನು ಸೃಷ್ಟಿಸುವಂತೆ ಇತ್ತು. ಮಾವ ಹಾಗೂ ಸೊಸೆಯ ಅಕ್ರಮ ಸಂಬಂಧವನ್ನು ಈ ಸಿನಿಮಾದಲ್ಲಿ ಚಿತ್ರಿಸಲಾಗಿತ್ತು. ಸೊಸೆಯ ಪಾತ್ರದಲ್ಲಿ 17 ವರ್ಷದ ಅಮಲಾ ಪೌಲ್ ನಟಿಸಿದ್ದರು. ಈ ದೃಶ್ಯಗಳು ದೊಡ್ಡ ವಿವಾದವನ್ನೇ ಹುಟ್ಟಾಗಿತ್ತು. ಅದ್ಯಾವ ಮಟ್ಟಿಗೆ ಅಂದರೆ, ತಮಿಳು ಚಿತ್ರರಂಗ ಈಕೆಯಿಂದ ದೂರ ಉಳಿಯುವುದಕ್ಕೆ ನೋಡುತ್ತಿತ್ತು. ಅಮಲಾ ತಂದೆ ಕೂಡ ಅಸಮಧಾನವನ್ನು ಹೊರ ಹಾಕಿದ್ದರು. ವಿವಾದ ಅದೆಷ್ಟು ತೀವ್ರವಾಗಿತ್ತು ಅಂದರೆ, ಈ ನಟಿ ಕೇರಳದಿಂದ ತಮಿಳುನಾಡಿಗೆ ಬರುವುದಕ್ಕೆ ಹೆದರುತ್ತಿದ್ದರು.
ವಿವಾದದಲ್ಲಿ ಸಿಲುಕಿದ್ದ ಅಮಲಾ ಪೌಲ್ ಮತ್ತೊಂದು ಸಿನಿಮಾ ಬಿಡುಗಡೆಗೆ ರೆಡಿಯಾಗಿತ್ತು. ಅದುವೇ 'ಮೈನಾ'. ಈ ಸಿನಿಮಾದಲ್ಲಿ ಅಮಲಾ ನಟಿಸಿದ್ದರೂ ಪ್ರೀಮಿಯರ್‌ಗೆ ಆಕೆಗೆ ಆಹ್ವಾನವನ್ನು ನೀಡಿರಲಿಲ್ಲ. ಬಳಿಕ ತಮಿಳು ಚಿತ್ರರಂಗದ ಸೂಪರ್‌ಸ್ಟಾರ್ ರಜನಿಕಾಂತ್, ಕಮಲ್ ಹಾಸನ್ ಅಂತಹ ದಿಗ್ಗಜರು ನಟಿ ಅಮಲಾ ಪೌಲ್‌ಗೆ ಧೈರ್ಯವನ್ನು ಹೇಳಿದ್ದರು. ಬಳಿಕ ಆ ಎಲ್ಲಾ ವಿವಾದಗಳನ್ನು ಎದುರಿಸಿ ಅಮಲಾ ಪೌಲ್ ಸಿನಿಮಾಗಳಲ್ಲಿ ನಟಿಸಿ, ಅದೇ ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಯೂರಿದ್ದರು. ಈ ಕಹಿ ಘಟನೆಗಳನ್ನು ಅಮಲಾ ಪೌಲ್ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.


Click it and Unblock the Notifications











