ರಜನಿ ಜೊತೆ ಅಮಿತಾಭ್ ಬಚ್ಚನ್ ನಟಿಸಿದ್ರೂ ಹಿಂದಿ ಪ್ರೇಕ್ಷಕರಿಗೆ ಇಷ್ಟ ಆಗಿಲ್ಲ; ಮೊದಲ ದಿನ 10 ಲಕ್ಷನೂ ಕಲೆಕ್ಷನ್ ಆಗಿಲ್ಲ!
300 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ 'ವೆಟ್ಟೈಯಾನ್' ಸಿನಿಮಾ ರಿಲೀಸ್ ಮುನ್ನ ಒಂದಿಷ್ಟು ಗೊಂದಲವಿತ್ತು. ಟ್ರೈಲರ್ ರಿಲೀಸ್ ಆದ್ಮೇಲೆ ಇದು ರಜನಿಕಾಂತ್ ಸಿನಿಮಾನಾ? ಇಲ್ಲ ನಿರ್ದೇಶಕ ಟಿ ಜೆ ಜ್ಞಾನವೇಲ್ ಸಿನಿಮಾನಾ ಅನ್ನೋ ಗೊಂದಲಕ್ಕೆ ಬಿದ್ದಿದ್ದರು. ಹೀಗಾಗಿ ಬಾಕ್ಸಾಫೀಸ್‌ನಲ್ಲಿ ಲೆಕ್ಕಾಚಾರ ತಲೆ ಕೆಳೆಗಾಗ ಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು.
ರಜನಿಕಾಂತ್ ಸಿನಿಮಾ 'ವೆಟ್ಟೈಯಾನ್'ಗೆ ಮೊದಲ ದಿನ ದಕ್ಷಿಣ ಭಾರತದಲ್ಲಿ ಸೂಪರ್ ರೆಸ್ಪಾನ್ಸ್ ಸಿಕ್ಕಿದೆ. ತಮಿಳುನಾಡು, ಕರ್ನಾಟಕ, ಆಂಧ್ರ ಹಾಗೂ ತೆಲಂಗಾಣದಲ್ಲಿ ಒಳ್ಳೆಯ ಕಲೆಕ್ಷನ್ ಆಗಿದೆ. ಆದರೆ, ಹಿಂದಿ ಆಡಿಯನ್ಸ್‌ಗೆ ಈ ಸಿನಿಮಾ ನೋಡಬೇಕು ಅಂತ ಯಾಕೋ ಅನಿಸುತ್ತಿ. ಅದರಲ್ಲೂ ಬಾಲಿವುಡ್ ಮೆಗಾಸ್ವಾರ್ ಅಮಿತಾಭ್ ಬಚ್ಚನ್ ನಟಿಸಿದರೂ, ಹಿಂದಿ ಆಡಿಯನ್ಸ್‌ಗೆ ಸಿನಿಮಾ ನೋಡುವುದಕ್ಕೆ ಥಿಯೇಟರ್‌ಗೆ ಬಂದಿಲ್ಲ.

'ವೆಟ್ಟೈಯಾನ್' ಕಂಟೆಂಟ್ ಬೇಸ್ಡ್ ಸಿನಿಮಾ ಅನ್ನೋ ಅಭಿಪ್ರಾಯ ವ್ಯಕ್ತವಾಗಿದೆ. ರಜನಿಕಾಂತ್ ಇಮೇಜ್‌ಗೆ ತಕ್ಕಂತೆ ಟಿ ಜೆ ಜ್ಞಾನವೇಲ್ ಸಿನಿಮಾ ಮಾಡಿಲ್ಲ. ಈ ಕಾರಣಕ್ಕೆ ಸಿನಿಮಾ ಬಗ್ಗೆ ಕ್ರೇಜ್ ಅಷ್ಟಕ್ಕಷ್ಟೇ ಅಂತಲೇ ಭಾವಿಸಿದ್ದರು. ಆದರೆ, ಸೂಪರ್‌ಸ್ಟಾರ್ ಸಿನಿಮಾಗೆ ದಕ್ಷಿಣ ಭಾರತದಲ್ಲಿ ಒಳ್ಳೆಯ ಒಪಿನಿಯನ್ ಸಿಕ್ಕಿದೆ. ಹೀಗಿದ್ಮೇಲೆ ಹಿಂದು ಆಡಿಯನ್ಸ್ ಯಾಕೆ ಇಷ್ಟ ಆಗಿಲ್ಲ? ಮೊದಲ ದಿನ ಹಿಂದಿ ಬೆಲ್ಟ್‌ನಲ್ಲಿ ಗಳಿಸಿದ್ದೆಷ್ಟು? ಎಲ್ಲಕ್ಕಿಂತ ಹೆಚ್ಚಾಗಿ ಕರ್ನಾಟಕದಲ್ಲಿ ಗಳಿಸಿದ ಕಲೆಕ್ಷನ್ ತಿಳಿಯಲು ತಿಳಿಯಲು ಮುಂದೆ ಓದಿ.
ಕರ್ನಾಟಕದಲ್ಲಿ ಎಷ್ಟು ಕಲೆಕ್ಷನ್ ?
ಸೂಪರ್‌ಸ್ಟಾರ್ ರಜನಿಕಾಂತ್ ಕರ್ನಾಟಕ ಬಾಕ್ಸಫೀಸ್‌ನಲ್ಲಿ ಒತ್ತಮ ಕಲೆಕ್ಷ್ ಮಾಡಿದೆ. ರಜನಿಗೆ ಇಲ್ಲೂ ಸಿಕ್ಕಾಪಟ್ಟೆ ಫ್ಯಾನ್ಸ್ ಇದ್ದಾರೆ. ಮೊದಲ ದಿನ ಈ ಸಿನಿಮಾ ಬರೋಬ್ಬರಿ ಆರು ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂದು ವಿತರಕರ ವಲಯ ಮಾಹಿತಿ ನೀಡಿದೆ. ಹೀಗಾಗಿ ಕರ್ನಾಟದಕದಲ್ಲಿ ಸಿನಿಮಾ ಕಲೆಕ್ಷನ್ ಜೋರಾಗಿಯೇ ಇದೆ. ಆದರೆ, ಹಿಂದಿ ಬೆಲ್ಟ್‌ನಲ್ಲಿ ಈ ಸಿನಿಮಾ ಕಲೆಕ್ಷನ್ ತಲೆಕೆಳಗಾಗಿದೆ.
ಹಿಂದಿ ಬೆಲ್ಟ್‌ನಲ್ಲಿ ಗಳಿಸಿದ್ದೆಷ್ಟು?
ಹಿಂದಿ ಆಡಿಯನ್ಸ್‌ಗೂ ರಜನಿಕಾಂತ್ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ಈ ಹಿಂದೆ ಕೂಡ ಅಮಿತಾಭ್ ಹಾಗೂ ರಜನಿ ಒಟ್ಟಿಗೆ ನಟಿಸಿದ್ದರು. ಜೊತೆಯಾಗಿ ನಟಿಸಿದ ಮೂರು ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಗೆದ್ದಿದ್ದವು. ಆದರೆ, ನಾಲ್ಕನೇ ಸಿನಿಮಾ ಯಾಕೋ ಸದ್ದು ಮಾಡುತ್ತಿಲ್ಲ. ಮೊದಲ ದಿನ ಕೇವಲ 6 ಲಕ್ಷ ರೂಪಾಯಿಯನ್ನಷ್ಟೇ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಇದು ರಜನಿಯ ಇತ್ತೀಚೆಗಿನ ವೃತ್ತಿ ಬದುಕಿನಲ್ಲಿ ಅತೀ ಕಡಿಮೆ ಎಂದು ಹೇಳಲಾಗುತ್ತಿದೆ. ರಜನಿ ಅಂತಹ ಸೂಪರ್‌ಸ್ಟಾರ್‌ಗೆ 6 ಲಕ್ಷ ರೂಪಾಯಿ ಕಲೆಕ್ಷನ್ ಏನೂ ಅಲ್ಲ.

ಹಿಂದಿ ಪ್ರೇಕ್ಷಕರು ಯಾಕೆ ಸಿನಿಮಾ ನೋಡಿಲ್ಲ
ರಜನಿಕಾಂತ್ ಸಿನಿಮಾ 'ವೆಟ್ಟೈಯಾನ್' ಮೊದಲ ದಿನ ಹಿಂದಿ ಬೆಲ್ಟ್‌ನಲ್ಲಿ 6 ಲಕ್ಷ ರೂಪಾಯಹಿ ಕಲೆಕ್ಷ್ ಮಾಡಿದೆ ಎಂದು ಟ್ರೇಡ್ ಎಕ್ಸ್‌ಪರ್ಟ್ಸ್ ಹೇಳುತ್ತಿದ್ದಾರೆ. ಅಮಿತಾಭ್ ಬಚ್ಚನ್ ಅಂತಹ ಮೆಗಾ ಸ್ಟಾರ್ ಇದ್ದರೂ ಬಾಕ್ಸಾಫೀಸ್‌ನಲ್ಲಿ ಯಾಕೆ ಇಷ್ಟೇ ಕಲೆಕ್ಷನ್ ಮಾಡಿದೆ ಅನ್ನೋದಕ್ಕೆ ಕಾರಣವಿದೆ. ಆಲಿಯಾ ಭಟ್ ನಟನೆಯ 'ಜಿಗ್ರಾ' ಈ ವಾರ ರಿಲೀಸ್ ಆಗಿದೆ. ಹಾಗೇ ರಾಜ್‌ಕುಮಾರ್ ರಾವ್ ಹಾಗೂ ತೃಪ್ತಿ ದಿಮ್ರಿ ನಟಿಸಿರುವ 'ವಿಕ್ಕಿ ವಿಧ್ಯಾ ಕಾ ವೋ ವಾಲ ವಿಡಿಯೋ' ರಿಲೀಸ್ ಆಗಿದೆ. ಈ ಕಾರಣಕ್ಕೆ ಹಿಂದಿ ಪ್ರೇಕ್ಷಕರು ಆ ಎರಡು ಸಿನಿಮಾಗಳ ಕಡೆಗೆ ಹೆಚ್ಚು ಒಲವು ತೋರುತ್ತಿದ್ದಾರೆ.
ಟ್ರೈಲರ್ ಅರ್ಥ ಆಗಿಲ್ಲ
ರಜನಿಕಾಂತ್ ಸಿನಿಮಾ ಟ್ರೈಲರ್ ರಿಲೀಸ್ ಆದ್ಮೇಲೆ ಈಜ್ ಹುಟ್ಟಿಕೊಳ್ಳಲಿಲ್ಲ. ಯಾಕಂದ್ರೆ ಟ್ರೈಲರ್‌ನಲ್ಲಿ ರಜನಿಕಾಂತ್ ಹಾಗೂ ಅಮಿತಾಭ್ ಮುಖಾ ಮುಖಾಯನ್ನು ಪವರ್‌ಫುಲ್ ಆಗಿ ತೋರಿಸಲಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ, 'ವೆಟ್ಟೈಯಾನ್' ಟ್ರೈಲರ್ ಹಿಂದಿ ಆಡಿಯನ್ಸ್‌ಗೆ ಅರ್ಥವೇ ಆಗಲಿಲ್ಲ. ಹೀಗಾಗಿ ಹಿಂದಿ ಆಡಿಯನ್ಸ್ ತಲುಪುವುಕ್ಕೆ ಈ ಮೆಗಾ ಸಿನಿಮಾ ಸೋತಿದೆ.


Click it and Unblock the Notifications











