"ನಾನು ಸತ್ತರೂ ಹೇಡಿಯಾಗಿ ಸಾಯೋದಿಲ್ಲ" ಮತ್ತೆ ಹಲ್‌ಚಲ್ ಎಬ್ಬಿಸಿದ ರಜನಿಕಾಂತ್ ವಿಡಿಯೋ

ತಮಿಳುನಾಡಿನ ವಿಧಾನಸಭಾ ಚುನಾವಣೆ ದಿನಾಂಕ ಅನೌನ್ಸ್ ಆಗಿದೆ. ರಾಜಕೀಯ ಪಕ್ಷಗಳು ಭರ್ಜರಿಯಾಗಿ ಪ್ರಚಾರವನ್ನು ಈಗಾಗಲೇ ಶುರು ಮಾಡಿವೆ. ಈ ಬಾರಿ ತಮಿಳುನಾಡಿನ ಚುನಾವಣೆ ದೇಶದ ಗಮನ ಸೆಳೆದಿದೆ. ಅದಕ್ಕೆ ಕಾರಣ ದಳಪತಿ ವಿಜಯ್. ಇದೇ ಮೊದಲ ಬಾರಿ ತಮ್ಮದೇ ಸ್ವಂತ ಪಕ್ಷ ಕಟ್ಟಿ ಅಖಾಡಕ್ಕೆ ಇಳಿಯುತ್ತಿದ್ದಾರೆ. ಈ ಬಾರಿ ಚುನಾವಣೆಗೆ ಗೆಲ್ಲುವ ಪಕ್ಷಗಳ ಪಟ್ಟಿಯಲ್ಲಿ ವಿಜಯ್ ಪಕ್ಷ 'ಟಿವಿಕೆ' ಕೂಡ ಸೇರಿಕೊಂಡಿದೆ.

ತಮಿಳುನಾಡಿನಲ್ಲಿ ಚುನಾವಣೆ ಬಂದರೆ, ಆ ವೇಳೆ ಸೂಪರ್‌ಸ್ಟಾರ್ ರಜನಿಕಾಂತ್ ಪ್ರಮುಖವಾಗಿ ಚರ್ಚೆಯಾಗುತ್ತಾರೆ. ರಜನಿಕಾಂತ್ ಯಾರಿಗೆ ಬೆಂಬಲ ನೀಡುತ್ತಾರೆ? ಅವರ ಒಲವು ಯಾರ ಕಡೆಗೆ ಇದೆ? ಅನ್ನೋ ಕುತೂಹಲದಲ್ಲಿ ಅಭಿಮಾನಿಗಳು ಇರುತ್ತಾರೆ. ಹೀಗಾಗಿ ನೂರೆಂಟು ಆಯಾಮಗಳಲ್ಲಿ ಚರ್ಚೆ ಆಗುತ್ತಲೇ ಇರುತ್ತೆ. ಅಲ್ಲದೆ ರಜನಿಕಾಂತ್‌ಗೂ ರಾಜಕೀಯದಲ್ಲಿ ಆಸಕ್ತಿಯಿದೆ. ವಿಜಯ್‌ಗಿಂತ ಮುನ್ನವೇ ಅವರು ರಾಜಕೀಯ ಪಕ್ಷ ಕಟ್ಟುವುದಕ್ಕೆ ಮುಂದಾಗಿದ್ದರು. ಆದರೆ, ಮಧ್ಯದಲ್ಲಿಯೇ ಕೈ ಬಿಟ್ಟರು.

I will not die as coward Rajinikanth old speech trending by fans against Vijay

ಈ ಬಾರಿ ವಿಜಯ್ ಪಕ್ಷ ತಮಿಳಿಗಾ ವೆಟ್ರಿ ಕಳಗಂ ಪಕ್ಷದ ಮುಖಂಡ ಆದ್ಧವ್ ಅರ್ಜುನ ವಿವಾದಾತ್ಮಕ ಹೇಳಿಕೆ ನೀಡಿದ್ದರು. ರಜನಿಕಾಂತ್ ವಿರುದ್ಧ ನೀಡಿದ ಈ ಹೇಳಿಕೆ ಸಿಕ್ಕಾಪಟ್ಟೆ ಆಕ್ರೋಶಕ್ಕೆ ಕಾರಣವಾಗಿದೆ. "ಡಿಎಂಕೆ ಪಕ್ಷ ರಜನಿಕಾಂತ್‌ ಹೆದರಿಸಿ, ಬೆದರಿಸಿ ರಾಜಕೀಯಕ್ಕೆ ಬಾರದಂತೆ ನೋಡಿಕೊಂಡಿದೆ. ಆದರೆ, ವಿಜಯ್‌ ಹಾಗಲ್ಲ. ಅವರು ಮಾನಸಿಕವಾಗಿ ಧೈರ್ಯಶಾಲಿ. ಅದಕ್ಕಾಗಿಯೇ ರಾಜಕೀಯಕ್ಕೆ ಪ್ರವೇಶ ಮಾಡಿದ್ದಾರೆಂದು" ಎಂದು ಆದ್ಧವ್ ಅರ್ಜುನ ಟೀಕಿಸಿದ್ದರು.

ಈ ಹೇಳಿಕೆ ರಜನಿಕಾಂತ್ ಅಭಿಮಾನಿಗಳ ಕಣ್ಣುಗಳನ್ನು ಕೆಂಪಾಗುವಂತೆ ಮಾಡಿದೆ. ಟಿವಿಕೆ ಪಕ್ಷದ ಮುಖಂಡನ ಆದ್ಧವ್ ಅರ್ಜುನ ವಿರುದ್ಧ ಕಿಡಿಕಾರುವುದಕ್ಕೆ ಶುರು ಮಾಡಿದ್ದಾರೆ. ದಳಪತಿ ವಿಜಯ್ ವಿರುದ್ಧ ಕೆಂಡಕಾರುತ್ತಿದ್ದಾರೆ. ಸೂಪರ್‌ಸ್ಟಾರ್ ರಜನಿಕಾಂತ್ ಮುಖ್ಯಮಂತ್ರಿಗಳ ಎದುರೇ ತಪ್ಪುಗಳನ್ನು ನೇರವಾಗಿ ಎತ್ತಿ ತೋರಿಸೋರು. ವಿಜಯ್‌ ಅವರಂತೆ ಸಿನಿಮಾ ಬಿಡುಗಡೆಗಾಗಿ ಕೈಕಟ್ಟಿ ಕೂರಲ್ಲ. ಅನುಕಂಪ ಗಿಟ್ಟಿಸಿಕೊಳ್ಳುವ ವಿಡಿಯೋಗಳನ್ನು ಪ್ರಕಟಿಸುವವರಲ್ಲ ಎಂದು ಟೀಕಿಸುತ್ತಿದ್ದಾರೆ.

ರಜನಿಕಾಂತ್ ಹಾಗೂ ವಿಜಯ್ ಅಭಿಮಾನಿಗಳ ಈ ಸಮರದ ನಡುವೆ ಹಳೆಯ ವಿಡಿಯೋ ಒಂದು ವೈರಲ್ ಆಗುತ್ತಿದೆ. ಇದರಲ್ಲಿ ರಜನಿಕಾಂತ್ ವೀರಾವೇಶದಿಂದ ಆಡಿರುವ ಮಾತುಗಳಿದ್ದು, ಅದನ್ನು ಹಂಚಿಕೊಂಡು ವಿಜಯ್‌ಗೆ ಟಕ್ಕರ್ ಕೊಡುತ್ತಿದ್ದಾರೆ. ರಜನಿಕಾಂತ್‌ಗೂ ರಾಜಕೀಯಕ್ಕೂ ಬಿಡಲಾರದ ನಂಟಿದೆ. ಸೂಪರ್‌ಸ್ಟಾರ್ ಹವಾಗೆ ತಮಿಳುನಾಡಿನ ರಾಜಕೀಯ ಮುಖಂಡರು ಬೆದರಿ ಸುಮ್ಮನಾದ ಉದಾಹರಣೆಗಳು ಸಾಕಷ್ಟಿವೆ.

ರಜನಿಕಾಂತ್ ಹಾಗೂ ಜಯಲಲಿತಾ ನಡುವಿನ ಸಂಘರ್ಘಗಳನ್ನು ಫ್ಯಾನ್ಸ್ ನೆನಪು ಮಾಡಿಕೊಳ್ಳುತ್ತಿದ್ದಾರೆ. 1996ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ "ಒಂದು ವೇಳೆ ಜಯಲಲಿತಾ ಮತ್ತೆ ಮುಖ್ಯಮಂತ್ರಿಯಾದರೆ, ತಮಿಳುನಾಡನ್ನು ದೇವರಿಂದಲೂ ರಕ್ಷಿಸುವುದಕ್ಕೆ ಸಾಧ್ಯವಿಲ್ಲ" ಎಂದು ರಜನಿಕಾಂತ್ ಬಹಿರಂಗವಾಗಿ ಹೇಳಿಕೊಟ್ಟಿದ್ದರು. ಇನ್ನು ದಿವಂಗತ ಜಯಲಲಿತಾ ಮುಖ್ಯಮಂತ್ರಿಯಾಗಿದ್ದಾಗ ಶಿವಾಜಿ ಅವರಿಗೆ ಗೌರವ ಕೊಡಲಿಲ್ಲವೆಂದುವೇದಿಕೆಯಲ್ಲೇ ತಿರುಗೇಟು ಕೊಟ್ಟಿದ್ದರು ಎಂದು ಹಳೆಯ ಘಟನೆಗಳನ್ನು ರಜನಿಕಾಂತ್ ಫ್ಯಾನ್ಸ್ ನೆನಪಿಸಿಕೊಂಡಿದ್ದಾರೆ.

ಈ ನಡುವೆ ರಜನಿಕಾಂತ್ ಅವರ ಹಳೆಯ ವಿಡಿಯೋವನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಹಳೆಯ ಭಾಷಣದ ವಿಡಿಯೋದಲ್ಲಿ ರಜನಿಕಾಂತ್ "ನಾನು ಸತ್ತರೂ ಹೇಡಿಯಾಗಿ ಸಾಯೋದಿಲ್ಲ" ಹೇಳಿದ್ದಾರೆ. ಈ ವಿಡಿಯೋವನ್ನು ಸೂಪರ್‌ಸ್ಟಾರ್ ಫ್ಯಾನ್ಸ್ ವೈರಲ್ ಮಾಡುತ್ತಿದ್ದಾರೆ. ಸೂಪರ್‌ಸ್ಟಾರ್ ರಜನಿಕಾಂತ್ ಸಿನಿಮಾ ಕ್ಷೇತ್ರದ ದಿಗ್ಗಜರಾದರೂ, ರಾಜಕೀಯ ವೇದಿಕೆಯಲ್ಲಿ ಅವರ ಪ್ರಭಾವ ಇದ್ದೇ ಇದೆ. ಈ ಬಾರಿ ರಜನಿಕಾಂತ್ ಅಭಿಮಾನಿಗಳು ಯಾರ ಪರವಾಗಿ ಕಣಕ್ಕಿಳಿಯಲಿದ್ದಾರೆ ಎಂಬುದಕ್ಕೆ ಖಚಿತ ಮಾಹಿತಿ ಇಲ್ಲವಾದರೂ, ಆದ್ಧವ್ ಅರ್ಜುನ ಹೇಳಿಕೆ ಬಳಿಕ ವಿಜಯ್ ವಿರುದ್ಧ ಕಣಕ್ಕಿಳಿಯೋದು ಸ್ಪಷ್ಟವಾಗಿದೆ.

More from Filmibeat

English summary
I will not die as coward Rajinikanth old speech trending by fans against Vijay.
Read more about: rajinikanth vijay
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X