ಸೂಪರ್‌ಸ್ಟಾರ್ 'ಕೂಲಿ'ಗೆ ಲೀಗಲ್ ನೋಟಿಸ್ ಕಳಿಸಿದ ಇಳಯರಾಜಾ; ಆರಂಭದಲ್ಲೇ ಕಿರಿಕಿರಿ!

ಕಾಲಿವುಡ್‌ನಲ್ಲಿ ಹೊಸ ವಿವಾದವೊಂದು ಭುಗಿಲೆದ್ದಿದೆ. ಇತ್ತೀಚೆಗೆ ಸಂಗೀತ ಮಾಂತ್ರಿಕ ಇಳಯರಾಜಾ ವಿರುದ್ಧ ಜನಪ್ರಿಯ ಸಾಹಿತಿ ವೈರಮುತ್ತು ಕಿಡಿಕಾರಿದ್ದು ಗೊತ್ತೇ ಇದೆ. ಇಳೆಯರಾಜ ತಾವು ಕಂಪೋಸ್ ಮಾಡಿದ ಹಾಡನ್ನು ಬೇರೆಯವರು ಬಳಸಿಕೊಂಡರೆ, ಅದನ್ನು ಕೃತಿಚೌರ್ಯವೆಂದು ನೋಟಿಸ್ ಕಳುಹಿಸುತ್ತಾರೆ. ಇದರ ವಿರುದ್ಧ ಕೆಲವರು ಧ್ವನಿ ಎತ್ತಿದ್ದಾರೆ.

ಇದೇ ಸಂದರ್ಭದಲ್ಲಿ ಇಳಯರಾಜಾ ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಸೂಪರ್‌ಸ್ಟಾರ್ ರಜನಿಕಾಂತ್ 171ನೇ ಸಿನಿಮಾ 'ಕೂಲಿ' ಟೈಟಲ್ ಟೀಸರ್ ರಿಲೀಸ್ ಆಗಿತ್ತು. ಇದರಲ್ಲಿ ಇಳೆಯರಾಜಾ ಕಂಪೋಸ್ ಮಾಡಿದ್ದ ಹಾಡಿನ ತುಣುಕನ್ನು ಬಳಸಿಕೊಂಡಿದ್ದಾರೆಂದು ಚಿತ್ರತಂಡಕ್ಕೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಈ ವಿಷಯ ದೊಡ್ಡ ಮಟ್ಟಕ್ಕೆ ಚರ್ಚೆಯಾಗುತ್ತಿದೆ.

Ilaiyaraaja sent legal notice Rajinikanth movie team

ಕಾಲಿವುಡ್‌ನ ಯಶಸ್ವಿ ನಿರ್ದೇಶಕ ಲೋಕೇಶ್ ಕನಕರಾಜ್ 'ಕೂಲಿ' ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾ ಟೈಟಲ್ ಟೀಸರ್‌ಗೆ ಇತ್ತೀಚೆಗೆ ಮೆಚ್ಚುಗೆ ವ್ಯಕ್ತವಾಗಿತ್ತು ಇಂತಹ ಸಂದರ್ಭದಲ್ಲಿ ಇಳಯರಾಜಾ ಟ್ಯೂನ್ ಹಾಕಿದ ಹಾಡನ್ನು ನೆಟ್ಟಿಗರೇ ಗುರುತಿಸಿದ್ದರು. ಅದಾದ ಬಳಿಕ ಸಂಗೀತ ಮಾತ್ರ ಸನ್‌ ಪಿಕ್ಚರ್ಸ್‌ಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ.

ರಜನಿಕಾಂತ್ ಹಾಗೂ ಲೋಕೇಶ್ ಕನಕರಾಜ್ ಇಬ್ಬರದ್ದೂ ರೇರ್ ಕಾಂಬಿನೇಷನ್. ಹೀಗಾಗಿ ಟೈಟಲ್ ಟೀಸರ್ ರಿಲೀಸ್ ಆಗುತ್ತಿದ್ದಂತೆ 'ಕೂಲಿ' ಕ್ರೇಜ್ ದುಪ್ಪಟ್ಟಾಗಿದೆ. ರಜನಿ ಅಭಿಮಾನಿಗಳಿಗೆ ಚಿಕ್ಕದೊಂದು ಥ್ರಿಲ್ ಕೊಡುವುದಕ್ಕೆ ಲೋಕೇಶ್ ಕನಕರಾಜ್ ಟೀಸರ್ ಬಿಟ್ಟಿದ್ದರು. ಅನಿರುದ್ಧ್ ಹಿನ್ನೆಲೆ ಸಂಗೀತ ನೀಡಿದ್ದ ಈ ಟೀಸರ್‌ನಲ್ಲಿ ಡಿಸ್ಕೋ ಹಾಡನ್ನು ಬಳಸಲಾಗಿತ್ತು. ಅದು ಇಳಯರಾಜಾ ಹಾಕಿದ ಟ್ಯೂನ್ ಹೀಗಾಗಿ 'ಕೂಲಿ' ನಿರ್ಮಾಣ ಸಂಸ್ಥೆಗೆ ಮ್ಯೂಸಿಕ್ ಮಾಂತ್ರಿಕ ನೋಟಿಸ್ ಕಳುಹಿಸಿದ್ದಾರೆ.

ಇಳಯರಾಜ ಹೀಗೆ ಲೀಗಲ್ ನೋಟಿಸ್ ಕಳುಹಿಸುವುದು ಇದೇ ಮೊದಲೇನಲ್ಲ. ತಾನು ಕಂಪೋಸ್ ಮಾಡಿದ ಹಾಡಿನ ಹಕ್ಕುಗಳು ತನ್ನದೇ. ತನ್ನ ಅನುಮತಿ ಇಲ್ಲದೇ ಗಾಯಕರು ವೇದಿಕೆ ಮೇಲೆ ಹಾಡಬಾರದು ಎಂದಿದ್ದರು. ಗೆಳೆಯ ದಿವಂಗತ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರಿಗೂ ನೋಟಿಸ್ ಕಳುಹಿಸಿದ್ದರು. ಈಗ ಸಿನಿಮಾದಲ್ಲಿ ತನ್ನ ಹಾಡನ್ನು ಬಳಸಿದ್ದು ತಮ್ಮ ಅನುಮತಿ ಇಲ್ಲದೆ ಬಳಸಿಕೊಳ್ಳಲಾಗಿದೆ ಎಂದು ನೋಟಿಸ್‌ನಲ್ಲಿ ತಿಳಿಸಿದ್ದಾರೆ.

1983ರಲ್ಲಿ ರಜನಿಕಾಂತ್ 'ತಂಗಮಗನ್' ಅನ್ನುವ ಸಿನಿಮಾದಲ್ಲಿ ನಟಿಸಿದ್ದರು. ಆ ಸಿನಿಮಾಗೆ ಇಳಯಾ ರಾಜ ಅವರೇ ಸಂಗೀತ ಸಂಯೋಜನೆ ಮಾಡಿದ್ದರು. ಅದೇ ಸಿನಿಮಾ "ವಾ ವಾ.." ಅನ್ನುವ ಹಾಡಿನ ತುಣುಕನ್ನು ಬಳಸಿಕೊಳ್ಳಲಾಗಿತ್ತು. ಈ ಸಂಬಂಧ ಅನುಮತಿ ಪಡೆಯದೆ ಹಾಡನ್ನು ಬಳಿಸಿದ್ದು, ಕೂಡಲೇ ತೆಗೆದುಹಾಕಬೇಕು. ಇಲ್ಲದೇ ಹೋದಲ್ಲಿ ಕಾನೂನು ಕ್ರಮ ಜರುಗಿಸಲಾಗವುದು ಎಂದು ಇಳ

More from Filmibeat

English summary
Ilaiyaraaja sent legal notice to rajinikanth coolie movie makers for using song without permission
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X