'ಡ್ಯೂಡ್'ಗೆ ಶಾಕ್ ಕೊಟ್ಟ ಇಳಯರಾಜ; ಹಾಡು ಕದ್ದಿದ್ದಾರೆಂದು ಮದ್ರಾಸ್ ಕೋರ್ಟ್‌ನಲ್ಲಿ ಕೇಸ್

ಸಂಗೀತ ಲೋಕದ ದಿಗ್ಗಜ ಇಳಯರಾಜ ಇತ್ತೀಚೆಗೆ ಲೀಗಲ್ ನೋಟೀಸ್‌ ಮೂಲಕವೇ ಹೆಚ್ಚು ಜನಪ್ರಿಯರಾಗುತ್ತಿದ್ದಾರೆ. ತಮ್ಮ ಸಿನಿಮಾದ ಹಾಡುಗಳನ್ನು ಕದ್ದಿದ್ದಾರೆಂದು ಮೂರ್ನಾಲ್ಕು ಸಿನಿಮಾಗಳಿಗೆ ಲೀಗಲ್ ನೋಟೀಸ್ ಕಳುಹಿಸಿದ್ದಾರೆ. ಈಗ 'ಡ್ಯೂಡ್' ಸಿನಿಮಾದ ಯುವ ತಂಡ ಇಳಯರಾಜ ಅವರ ಕೆಂಗಣ್ಣಿಗೆ ಗುರಿಯಾಗಿದೆ. ಇದೇ ತಂಡದ ವಿರುದ್ಧ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ತಮಿಳು ಚಿತ್ರರಂಗದ ಯುವ ನಟ ಪ್ರದೀಪ್ ರಂಗನಾಥನ್ ನಟಿಸಿರುವ 'ಡ್ಯೂಡ್' ರಿಲೀಸ್ ಆಗಿದೆ. ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿಯೂ ಅದ್ಭುತ ಪ್ರದರ್ಶನವನ್ನೇ ಕಾಣುತ್ತಿದೆ. ದೀಪಾವಳಿ ಹಬ್ಬಕ್ಕೆ ರಿಲೀಸ್ ಆಗಿರುವ ಈ ಸಿನಿಮಾವನ್ನು ತಮಿಳಿಗರು ಇಷ್ಟಪಟ್ಟು ನೋಡುತ್ತಿದ್ದಾರೆ. ಸಿನಿಮಾ ಹೆಚ್ಚಾಗಿ ಓಡುತ್ತಿರುವಾಗಲೇ ಹಿರಿಯ ಸಂಗೀತ ನಿರ್ದೇಶಕ ಇಳಯರಾಜ ಈ ಚಿತ್ರತಂಡದ ವಿರುದ್ಧ ರೊಚ್ಚಿಗೆದ್ದು ಕೋರ್ಟ್ ಮೆಟ್ಟಿಲೇರಿದ್ದಾರೆ.

Ilaiyaraaja Takes Legal Action Against Dude Makers and music company over Copyright Violation

'ಡ್ಯೂಡ್' ಒಂದು ಯೂತ್ ರೊಮ್ಯಾಂಟಿಕ್-ಕಾಮಿಡಿ ಸಿನಿಮಾ. ಇದು ಬಿಡುಗಡೆಯಾದ ಕೇವಲ ನಾಲ್ಕು ದಿನಕ್ಕೆ ಸುಮಾರು ₹60 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಪ್ರದೀಪ್ ರಂಗನಾಥನ್ ಹಾಗೂ ಮಾಮಿತಾ ಬೈಜು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಆಕ್ಷನ್ ಕಟ್ ಹೇಳಿದ್ದು ಕೀರ್ತೀಶ್ವರನ್. ಮೈತ್ರಿ ಮೂವಿ ಮೇಕರ್ಸ್ ನಿರ್ದೇಶಿಸಿರುವ ಈ ಸಿನಿಮಾ ದೀಪಾವಳಿ ಹಬ್ಬಕ್ಕೆಂದು ಗ್ರ್ಯಾಂಡ್ ಆಗಿ ರಿಲೀಸ್ ಆಗಿತ್ತು. ಸಿನಿಮಾ ಯಶಸ್ಸಿನ ಹಾದಿ ಹಿಡಿದು ಖುಷಿಯಲ್ಲಿ ಇರುವಾಗಲೇ ಇಳಯರಾಜ ಶಾಕ್ ಕೊಟ್ಟಿದ್ದಾರೆ. ಈ ಸಿನಿಮಾ ತಂಡ ತನ್ನ ಎರಡು ಹಾಡುಗಳನ್ನು ಕದ್ದಿದ್ದಾರೆಂದು ಆರೋಪಿಸಿ, ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.

ಪ್ರದೀಪ್ ರಂಗನಾಥನ್ ಅವರ 'ಡ್ಯೂಡ್' ಸಿನಿಮಾ ತಂಡ ತಮ್ಮ ಅನುಮತಿ ಇಲ್ಲದೆ ಎರಡು ಹಾಡುಗಳನ್ನು ಬಳಸಿಕೊಂಡಿದ್ದಾರೆಂದು ಆರೋಪಿಸಿದ್ದಾರೆ. ಈ ಸಂಬಂಧ ಸಿನಿಮಾದ ನಿರ್ಮಾಪಕರು ಹಾಗೂ ಆಡಿಯೋ ಸಂಸ್ಥೆ ಸೋನಿ ಮ್ಯೂಸಿಕ್ ವಿರುದ್ಧವೂ ಕಾನೂನು ಸಮರ ಸಾರಿದ್ದಾರೆ. ಇಳಯರಾಜಾ ಪರ ವಕೀಲರು ತಮ್ಮ ಟ್ಯೂನ್‌ಗಳನ್ನು ಅನಧಿಕೃತವಾಗಿ ಮತ್ತು ಯಾವುದೇ ಅನುಮತಿಯಿಲ್ಲದೆ ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ.ಈ ಪ್ರಕರಣವನ್ನು ನ್ಯಾಯಾಲಯ ಕೈಗೆತ್ತಿಕೊಂಡಿದೆ.

ಇಳಯರಾಜ ತಾವು ಸಲ್ಲಿಸಿದ ಅರ್ಜಿಯಲ್ಲಿ "ನಾನು ಕಾಂಪೋಸ್ ಮಾಡಿರುವ ಹಾಡುಗಳನ್ನು ಯಾರೂ ನನ್ನ ಅನುಮತಿಯಿಲ್ಲದೆ ಬಳಸಿಕೊಳ್ಳುವಂತಿಲ್ಲ. ಇದು ಸಂಪೂರ್ಣವಾಗಿ ಹಕ್ಕುಸ್ವಾಮ್ಯ ಉಲ್ಲಂಘನೆಯಾಗಿದೆ. ಇದು ಕೇವಲ ಕಾನೂನು ವಿಷಯ ಅಷ್ಟೇ ಅಲ್ಲ. ಇದು ಕಲಾವಿದನ ಗೌರವಕ್ಕೆ ಸಂಬಂಧಿಸಿದೆ. ನನ್ನ ಟ್ಯೂನ್‌ಗಳು ಕಾನೂನುಬದ್ಧವಾಗಿ ರಕ್ಷಿಸಲ್ಪಟ್ಟಿವೆ. ಯಾರೂ ನನ್ನ ಅನುಮತಿಯಿಲ್ಲದೆ ಬಳಸಿಕೊಳ್ಳುವಲಂತಿಲ್ಲ " ಎಂದು ಇಳಿಯರಾಜ ಅರ್ಜಿಯಲ್ಲಿ ಹೇಳಿದ್ದಾರೆ.

Ilaiyaraaja Takes Legal Action Against Dude Makers and music company over Copyright Violation

ಈ ವಿಚಾರವಾಗಿ ಇಳಯರಾಜ ಪರ ವಕೀಲರು ನ್ಯಾಯಾಲಯದಲ್ಲಿ 'ಡ್ಯೂಡ್' ನಿರ್ಮಾಪಕರು ಹಾಗೂ ಮ್ಯೂಸಿಕ್ ಸಂಸ್ಥೆ ಸೋನಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಕ್ಕೆ ಅನುಮತಿಯನ್ನು ಕೋರಿದ್ದಾರೆ. ಈ ಮನವಿಯನ್ನು ಪರಿಶೀಲಿಸಿದ್ದ ಬಳಿಕ ಮದ್ರಾಸ್ ಹೈಕೋರ್ಟ್‌ನ ನ್ಯಾಯಾಧೀಶರು ಕಾನೂನು ಕ್ರಮಗಳನ್ನು ತೆಗೆದುಕೊಳ್ಳುವುದಕ್ಕೆ ಅನುಮತಿಯನ್ನು ನೀಡಿದ್ದಾರೆ.

ಹೀಗಾಗಿ 'ಡ್ಯೂಡ್' ಸಿನಿಮಾ ನಿರ್ಮಾಪಕರು, ತಂಡ ಹಾಗೂ ಸೋನಿ ಸಂಸ್ಥೆಯ ವಿರುದ್ದ ಇಳಯರಾಜ ಕೇಸ್ ಅನ್ನು ದಾಖಲಿಸುವುದಕ್ಕೆ ನ್ಯಾಯಾಲಯದಿಂದ ಅಧಿಕೃತವಾಗಿ ಪರ್ಮಿಷನ್ ಸಿಕ್ಕಿದೆ. ಹಾಗೇ ಈ ಪ್ರಕರಣದ ವಿಚಾರಣೆಯನ್ನು ಮುಂದಿನ ತಿಂಗಳು 19ಕ್ಕೆ ನ್ಯಾಯಾಧೀಶರು ಮುಂದೂಡಿದ್ದಾರೆ. ಈ ಹಿಂದೆ ಕೂಡ ಇಳಯರಾಜ ಮಲಯಾಳಂ ಸಿನಿಮಾ 'ಮಂಜುಮ್ಮಲ್ ಬಾಯ್ಸ್', ಅಜಿತ್ ನಟನೆಯ 'ಗುಡ್ ಬ್ಯಾಡ್ ಅಗ್ಲಿ' ವಿರುದ್ಧವೂ ದೂರನ್ನು ದಾಖಲಿಸಿದ್ದರು. ಈಗ ಮತ್ತೆ ಇಂತಹದ್ದೇ ಇನ್ನೊಂದು ಪ್ರಕರಣದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಾರೆ.

More from Filmibeat

English summary
Ilaiyaraaja Takes Legal Action Against Dude' Makers and music company over Copyright Violation.
Read more about: ilayaraja court copyright
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X