ತಮಿಳಿನ 'ಕ್ಯಾಪ್ಟನ್ ಮಿಲ್ಲರ್' ಸಿನಿಮಾದಲ್ಲಿ ಧನುಷ್‌ಗೆ ಅಣ್ಣ ನಮ್ಮ ಶಿವಣ್ಣ

60ರಲ್ಲೂ ಶಿವಣ್ಣ ಎನರ್ಜಿಗೆ ಸರಿಸಾಟಿನೇ ಇಲ್ಲ. 125 ಸಿನಿಮಾಗಳ ಸರದಾರ ಸೆಂಚುರಿ ಸ್ಟಾರ್ ಶಿವಣ್ಣ ಸಿನಿಮಾಗಳಲ್ಲಿ ಫುಲ್ ಬ್ಯುಸಿ. ಒಂದರ ಹಿಂದೊಂದು ಸಿನಿಮಾಗಳು ಸೆಟ್ಟೇರುತ್ತಲೇ ಇವೆ. ಈಗಲೂ ಸ್ಯಾಂಡಲ್‌ವುಡ್‌ನ ಬ್ಯುಸಿ ನಟರ ಸಾಲಿನಲ್ಲಿ ಶಿವರಾಜ್‌ಕುಮಾರ್ ಹೆಸರೇ ಮೊದಲ ಸ್ಥಾನದಲ್ಲಿದೆ.

ಶಿವಣ್ಣ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಹೊಸ ಪ್ರಾಜೆಕ್ಟ್‌ಗಳಿಗೆ ಗ್ರೀನ್ ಸಿಗ್ನಲ್ ಕೊಡುತ್ತಿದ್ದಾರೆ. ಅದೇ ಇನ್ನೊಂದು ಕಡೆ ಮತ್ತೊಂದು ಪಕ್ಕದ ರಾಜ್ಯಕ್ಕೂ ಹಾರಿದ್ದಾರೆ. ತಮಿಳಿನಲ್ಲಿ ಈಗಾಗಲೇ ಎರಡು ಪ್ರಾಜೆಕ್ಟ್‌ಗಳಲ್ಲಿ ನಟಿಸುತ್ತಿದ್ದಾರೆ.

ಸೂಪರ್‌ಸ್ಟಾರ್ ರಜನಿಕಾಂತ್ ನಟಿಸುತ್ತಿರುವ 'ಜೈಲರ್' ಸಿನಿಮಾದಲ್ಲಿ ಶಿವಣ್ಣ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರ ಬೆನ್ನಲ್ಲೇ ಮತ್ತೊಂದು ತಮಿಳು ಸಿನಿಮಾಗೂ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಅದುವೇ 'ಕ್ಯಾಪ್ಟನ್ ಮಿಲ್ಲರ್'.

In Tamil Movie Captain Miller Shivarajkumar Will Be Seen As Dhanush Brother

ತಲೈವಾ ರಜನಿಕಾಂತ್ ಅಳಿಯ ಧನುಷ್ ನಟಿಸುತ್ತಿರುವ ಹೊಚ್ಚ ಸಿನಿಮಾವೇ 'ಕ್ಯಾಪ್ಟನ್ ಮಿಲ್ಲರ್'. ಈ ಸಿನಿಮಾದಲ್ಲಿ ಸೆಂಚುರಿ ಸ್ಟಾರ್ ಶಿವಣ್ಣ ಧನುಷ್ ಅಣ್ಣನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗಂತ ಇದು ಅಣ್ಣ ತಮ್ಮ ಕಥೆ ಅಲ್ಲದೇ ಇದ್ದರೂ, ಶಿವಣ್ಣ ಪಾತ್ರಕ್ಕೆ ಸಿನಿಮಾದಲ್ಲಿ ಉತ್ತಮ ಹಿನ್ನೆಲೆಯಿದೆಯಂತೆ. ಈ ಕಾರಣಕ್ಕೆ ಶಿವರಾಜ್‌ಕುಮಾರ್ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ.

ಶಿವರಾಜ್‌ಕುಮಾರ್ ಈಗಾಗಲೇ 'ಕ್ಯಾಪ್ಟನ್ ಮಿಲ್ಲರ್' ಸಿನಿಮಾಗೆ ಈಗಾಗಲೇ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈಗಾಗಲೇ ಚಿತ್ರೀಕರಣಕ್ಕೆ ಬೇಕಾಗಿರೋ ಸಿದ್ಧತೆಗಳನ್ನು ಚಿತ್ರತಂಡ ಮಾಡಿಕೊಳ್ಳುತ್ತಿದ್ದು, ಮುಂದಿನ ತಿಂಗಳಿಂದ ಶೂಟಿಂಗ್ ಆರಂಭ ಆಗಲಿದೆ ಅನ್ನೋದು ಸುದ್ದಿ ಕಾಲಿವುಡ್‌ನಲ್ಲಿ ಓಡಾಡುತ್ತಿದೆ.

In Tamil Movie Captain Miller Shivarajkumar Will Be Seen As Dhanush Brother

ಶಿವರಾಜ್‌ಕುಮಾರ್ ಹಾಗೂ ಧನುಷ್ ಇಬ್ಬರ ಸ್ನೇಹ ಇಂದಿನದಲ್ಲ. ಬಹಳ ವರ್ಷಗಳಿಂದಲೂ ಇವರಿಬ್ಬರ ಒಡನಾಟವಿದೆ. ಈ ಹಿಂದೆ ಶಿವರಾಜ್‌ಕುಮಾರ್ ನಟಿಸಿದ್ದ 'ವಜ್ರಕಾಯ' ಸಿನಿಮಾದ ಹಾಡೊಂದಕ್ಕೆ ಧನುಷ್ ಧ್ವನಿ ನೀಡಿದ್ದರು.

"ನಾನು ಧನುಶ್‌ರ ದೊಡ್ಡ ಅಭಿಮಾನಿ. ಅವರ ಎಲ್ಲ ಸಿನಿಮಾಗಳನ್ನೂ ನಾನು ನೋಡಿದ್ದೇನೆ. ನನ್ನನ್ನು ನಾನು ಧನುಶ್ ಅವರಲ್ಲಿ ಕಾಣುತ್ತೇನೆ. ಅವರ ವ್ಯಕ್ತಿತ್ವ ಸಹ ನನ್ನೊಂದಿಗೆ ಹೋಲುತ್ತದೆ. ಅವರು ನನ್ನಂತೆಯೇ ಇದ್ದಾರೆ ಅಥವಾ ನಾನು ಅವರಂತೆ ಇದ್ದೇನೆ. ಅವರೊಟ್ಟಿಗೆ ನಟಿಸುವ ಅವಕಾಶವನ್ನು ಕೈಬಿಡುವುದು ನನಗೆ ಇಷ್ಟವಿರಲಿಲ್ಲ ಹಾಗಾಗಿ ಸಿನಿಮಾವನ್ನು ಒಪ್ಪಿಕೊಂಡೆ" ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು.

More from Filmibeat

English summary
In Tamil Movie Captain Miller Shivarajkumar Will Be Seen As Dhanush Brother, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X