ಚಾಂಪಿಯನ್ಸ್ ಟ್ರೋಫಿ ಹೀರೋ ವರುಣ್ ಚಕ್ರವರ್ತಿ ನಟಿಸಿದ ಸಿನಿಮಾ ಯಾವುದು ಗೊತ್ತೇ?
ಇತ್ತೀಚೆಗೆ ಐಸಿಸಿ ಚಾಂಪಿಯನ್ಸ್ ಟ್ರೋಫಿ ಅಂತ್ಯಗೊಂಡಿದೆ. ಭಾರತ ಚಾಂಪಿಯನ್ಸ್ ಟ್ರೋಫಿ ಗೆದ್ದು ಇತಿಹಾಸ ಸೃಷ್ಟಿಸಿದೆ. ಈ ಟೂರ್ನಿಯಲ್ಲಿ ಸ್ಟಾರ್ ಆಗಿ ಮಿಂಚಿದವರು ವರುಣ್ ಚಕ್ರವರ್ತಿ. ಭಾರತದ ಪ್ರಮುಖ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಮಾಡಿ ಎದುರಾಳಿಯ ಪ್ರಮುಖ ವಿಕೆಟ್‌ಗಳನ್ನು ತೆಗೆದು ಭಾರತದ ಪಾಲಿಗೆ ಸ್ಟಾರ್ ಕ್ರಿಕೆಟರ್ ಆಗಿದ್ದಾರೆ. ಆದರೆ, ಭಾರತದ ಪರ ಆಡುವುದಕ್ಕೂ ಮುನ್ನ ವರುಣ್ ಚಕ್ರವರ್ತಿ ಸಿನಿಮಾವೊಂದರಲ್ಲಿ ನಟಿಸಿದ್ದರು ಅನ್ನೋದು ನಿಮಗೆ ಗೊತ್ತೇ?
ಹೌದು, ವರುಣ್ ಚಕ್ರವರ್ತಿ ಲೈಮ್‌ಲೈಟ್‌ಗೆ ಬರುವುದಕ್ಕೂ ಮುನ್ನ ಸಿನಿಮಾದಲ್ಲಿ ನಟಿಸಿದ್ದರು. ಚಾಂಪಿಯನ್ಸ್ ಟ್ರೋಫಿ ಮುಗಿಯುತ್ತಿದ್ದಂತೆ ಅವರು ನಟಿಸಿದ ಸಿನಿಮಾದ ತುಣುಕುಗಳು ವೈರಲ್ ಆಗುವುದಕ್ಕೆ ಶುರುವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ. ಅಷ್ಟಕ್ಕೂ ಲೆಗ್ ಸ್ಪಿನ್ನರ್ ವರುಣ್ ಚಕ್ರವರ್ತಿ ನಟಿಸಿದ ಆ ಸಿನಿಮಾ ಯಾವುದು ತಿಳಿಯಲು ಮುಂದೆ ಓದಿ.

ವರುಣ್ ಚಕ್ರವರ್ತಿ ಭಾರತದ ಪರ ಆಡುವುದಕ್ಕೂ ಮುನ್ನ ವರುಣ್ ಚಕ್ರವರ್ತಿ ತಮಿಳುನಾಡು ಪರ ಆಡುತ್ತಿದ್ದರು. ತಮಿಳು ನಾಡು ಪ್ರೀಮಿಯರ್ ಲೀಗ್‌ನಲ್ಲಿ ಲೆಗ್ ಸ್ಪಿನ್ನರ್ ಆಗಿ ಬೆಳಕಿಗೆ ಬಂದಿದ್ದರು. ಬಳಿಕ ಐಪಿಎಲ್‌ಗೆ ಎಂಟ್ರಿ ಕೊಟ್ಟಿದ್ದರು. ಕೊಲ್ಕತ್ತಾ ನೈಟ್‌ರೈಡರ್ಸ್ ಪರ ಆಡಿ ಮಿಂಚಿದ್ದರು. ಅಲ್ಲಿಂದ ಭಾರತೀಯ ಕ್ರಿಕೆಟ್ ತಂಡದ ಸದಸ್ಯನಾಗಿ ಮಿಂಚುತ್ತಿದ್ದಾರೆ. ಆದರೆ, ಕ್ರಿಕೆಟ್ ಇವರ ಮೊದಲ ಆಯ್ಕೆ ಆಗಿರಲಿಲ್ಲ ಅನ್ನೋದು ಗೊತ್ತೇ?
ಹೌದು, ವರುಣ್ ಚಕ್ರವರ್ತಿ ಮೊದಲ ಆಯ್ಕೆ ಕ್ರಿಕೆಟ್ ಆಗಿರಲಿಲ್ಲ. ಆರ್ಕಿಟೆಕ್ಚರ್‌ನಲ್ಲಿ ಪದವಿ ಪಡೆದ ಬಳಿಕ ಕೆಲಸಕ್ಕೆ ಸೇರಿಕೊಂಡಿದ್ದರು. ಬಳಿಕ ತನ್ನ 25ನೇ ವರ್ಷದಲ್ಲಿ ಕೆಲಸ ಬಿಟ್ಟು ಕ್ರಿಕೆಟ್ ಅನ್ನು ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ನಿರ್ಧರಿಸಿದ್ದರು. ಆದರೆ, ಕ್ರಿಕೆಟರ್ ಆಗುವುದಕ್ಕೂ ಮುನ್ನ ಸಿನಿಮಾದಲ್ಲೂ ನಟಿಸಿದ್ದರು. 2014ರಲ್ಲಿ ತೆರೆಕಂಡಿದ್ದ ತಮಿಳು ಸಿನಿಮಾದಲ್ಲಿ ನಟಿಸಿದ್ದರು. ಆ ಸಿನಿಮಾ ಯಾವುದು ಅಂತಿರಾ? ಅದುವೇ ತಮಿಳು ಸಿನಿಮಾ 'ಜೀವ'.
ತಮಿಳು ನಟ ವಿಷ್ಣು ಹಾಗೂ ಶ್ರೀ ದಿವ್ಯಾ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾವನ್ನು ಸುಸೀತಿರನ್ ನಿರ್ದೇಶನ ಮಾಡಿದ್ದರು. ಈ ಸಿನಿಮಾ ಕೆಳ ಮಧ್ಯಮ ವರ್ಷದ ಕ್ರಿಕೆಟರ್ ಭಾರತೀಯ ಕ್ರಿಕೆಟ್ ತಂಡಕ್ಕೆ ಎಂಟ್ರಿ ಕೊಡಬೇಕು ಅನ್ನೋ ಕನಸು ಕಾಣುತ್ತಾನೆ. ಆ ಪ್ರಯತ್ನದಲ್ಲಿ ಇರುವಾಗ ಅತನಿಗೆ ಎದುರಾಗುವ ಕಷ್ಟಗಳನ್ನು ಸಿನಿಮಾದಲ್ಲಿ ತೋರಿಸಲಾಗಿತ್ತು. ಸ್ಟ್ರಗಲಿಂಗ್ ಕ್ರಿಕೆಟ್ ಪಾತ್ರದಲ್ಲಿ ವಿಷ್ಣು ನಟಿಸಿದ್ದರು.
ಇದೇ ಸಿನಿಮಾದಲ್ಲಿ ವರುಣ್ ಚಕ್ರವರ್ತಿ ತಮ್ಮ ರಿಯಲ್ ಲೈಫ್ ಅನ್ನೇ ಪ್ರತಿನಿಧಿಸಿದ್ದರು. 'ಜೀವ' ಸಿನಿಮಾ ಕ್ಲಬ್ ಕ್ರಿಕೆಟರ್ ಆಗಿ ಕಾಣಿಸಿಕೊಂಡಿದ್ದರು. ಕ್ರಿಕೆಟರ್ ಆಗಿ ದೊಡ್ಡ ಸಾಧನೆ ಮಾಡಬೇಕು ಅಂತ ಹೊರಟ ಕ್ರಿಕೆಟರ್ ಆಗಿ ಕಾಣಿಸಿಕೊಂಡಿದ್ದರು. ಇದೇ ಪಾತ್ರದ ತುಣುಕುಗಳು ಇದ್ದಕ್ಕಿದ್ದ ಹಾಗೇ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವುದಕ್ಕೆ ಶುರು ಮಾಡಿದೆ. ಚಾಂಪಿಯನ್ಸ್ ಟ್ರೋಫಿ ಗೆದ್ದ ಬಳಿಕ ವರುಣ್ ಚಕ್ರವರ್ತಿ ಸಿನಿಮಾದಲ್ಲಿ ನಟಿಸಿದ ವಿಷಯ ಚರ್ಚೆಯಾಗುತ್ತಿದೆ.
ಇನ್ನು ಕೇವಲ ಸಿನಿಮಾ ಅಷ್ಟೇ ಅಲ್ಲ. ವರುಣ್ ಚಕ್ರವರ್ತಿ ರಿಯಾಲಿಟಿ ಶೋನಲ್ಲೂ ಭಾಗವಹಿಸಿದ್ದರು. ತಮಿಳಿನ 'ಕೂಕು ವಿತ್ ಕೊಮಲಿ' ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. ಆದರೆ, ಇದರಲ್ಲಿ ಹೆಚ್ಚು ದಿನ ಉಳಿಯಲಿಲ್ಲ. ಕ್ರಿಕೆಟ್‌ನಲ್ಲಿ ಸಾಧನೆ ಮಾಡಬೇಕು ಅಂತ ಪೋಕಸ್ ಇಟ್ಟುಕೊಂಡು ಸಿನಿಮಾ ಹಾಗೂ ರಿಯಾಲಿಟಿ ಶೋಗಳಿಂದ ದೂರವೇ ಉಳಿದಿದ್ದರು. ಹಾಗಂತ ವರುಣ್ ಚಕ್ರವರ್ತಿ ಹಾದಿ ಅಷ್ಟೊಂದು ಸುಲಭ ಆಗಿರಲಿಲ್ಲ. ಕೊನೆಗೂ ಆ ಕಷ್ಟಗಳಿಗೆ ಇಂದು ಬೆಲೆ ಸಿಕ್ಕಿದೆ.


Click it and Unblock the Notifications











