ರಹಸ್ಯವಾಗಿ ಮದುವೆ ಆದ್ರಾ ಸಾಯಿ ಪಲ್ಲವಿ? ಈ ಫೋಟೊ ವೈರಲ್ ಆಗುತ್ತಿದ್ದಂತೆ ಹೊಸ ಸಿನಿಮಾ ಸೆಟ್ಟೇರಿದ್ದೇಗೆ?

ದಕ್ಷಿಣ ಭಾರತದ ನಟಿ ಸಾಯಿ ಪಲ್ಲವಿ ಎಲ್ಲರ ಫೇವರಿಟ್. 'ಪ್ರೇಮಂ' ಸಿನಿಮಾ ಮೂಲಕ ಹುಡುಗರ ಅಚ್ಚು ಮೆಚ್ಚಿನ ನಟಿಯಾಗಿದ್ದರು. ಸಾಯಿ ಪಲ್ಲವಿ ನಗುವಿಗೆ, ನಟನೆಗೆ, ಡ್ಯಾನ್ಸ್‌ಗೆ ಪಡ್ಡೆ ಹುಡುಗರು ಫಿದಾ ಆಗಿದ್ದರು. ಇಲ್ಲಿಂದ ಸಾಯಿ ಪಲ್ಲವಿ ಒಂದರ ಹಿಂದೊಂದು ಸಿನಿಮಾಗಳಲ್ಲಿ ಬ್ಯುಸಿಯಾಗಿಬಿಟ್ಟರು.

ಮಲಯಾಳಂ ಚಿತ್ರರಂಗದಿಂದ ಸಿನಿಮಾ ಜರ್ನಿ ಆರಂಭ ಮಾಡಿದ್ದರೂ, ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ಹೆಚ್ಚು ಜನಪ್ರಿಯರಾಗಿದ್ದಾರೆ. ಈ ಎರಡೂ ಭಾಷೆಯ ಸೂಪರ್‌ಸ್ಟಾರ್‌ಗಳೊಂದಿಗೆ ಸಿನಿಮಾ ಮಾಡಿದ್ದಾರೆ. ತಮ್ಮ ಪ್ರತಿಭೆಯಿಂದಲೇ ಜನರ ಮನಗೆದ್ದಿರೋ ಈ ನಟಿ ಇತ್ತೀಚೆಗೆ ಹೆಚ್ಚಾಗಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿರಲಿಲ್ಲ.

fact-check-sai-pallavi-marriage

ಕೆಲವು ದಿನಗಳ ಹಿಂದಷ್ಟೇ ಸಾಯಿ ಪಲ್ಲವಿ 'ಗಾರ್ಗಿ' ಅನ್ನೋ ಸಿನಿಮಾದಲ್ಲಿ ನಟಿಸಿದ್ದರು. ಆ ಸಿನಿಮಾ ಕನ್ನಡದಲ್ಲೂ ರಿಲೀಸ್ ಆಗಿತ್ತು. ಅವರೇ ಸ್ವತ: ಕನ್ನಡಕ್ಕೂ ಡಬ್ ಮಾಡಿದ್ದರು. ಆದರೆ, ಇಂದು (ಸೆಪ್ಟೆಂಬರ್ 20) ಬೆಳಗ್ಗೆಯಿಂದ ಸೋಶಿಯಲ್ ಮೀಡಿಯಾದಲ್ಲಿ ಸಾಯಿ ಪಲ್ಲವಿ ಮದುವೆ ಸುದ್ದಿನೇ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಅಸಲಿಗೆ ಆ ಫೋಟೊ ಅಸಲಿಯತ್ತೇನು? ತಿಳಿಯಲು ಮುಂದೆ ಓದಿ.

ಮದುವೆ ಆದರೇ ಸಾಯಿ ಪಲ್ಲವಿ?

ಸಾಯಿ ಪಲ್ಲವಿ ಮದುವೆ ಆಗೇ ಬಿಟ್ಟರು ಅನ್ನೋ ಸುದ್ದಿ ಹಬ್ಬಿತ್ತು. ಅಲ್ಲದೆ ಹಾರ ಹಾಕಿಕೊಂಡಿರೋ ಫೋಟೊ ಕೂಡ ವೈರಲ್ ಆಗಿತ್ತು. ನಿರ್ದೇಶಕನೊಂದಿಗೆ ಸಾಯಿ ಪಲ್ಲವಿ ರಹಸ್ಯವಾಗಿಯೇ ಮದುವೆ ಆಗಿದ್ದಾರೆಂದು ಹಬ್ಬಿಸಿದ್ದರು. ಸಾಯಿ ಪಲ್ಲವಿ ಕೂಡ ಹಾರ ಹಾಕಿಕೊಂಡು ವ್ಯಕ್ತಿಯೊಬ್ಬರ ಪಕ್ಕದಲ್ಲಿ ನಿಂತಿದ್ದರು. ಈ ಫೋಟೊ ವೈರಲ್ ಆಗುತ್ತಿದ್ದಂತೆ ಒಮ್ಮೆ ಅವರ ಕೆಲವು ಅಭಿಮಾನಿಗಳು ದು:ಖದಲ್ಲೂ, ಮತ್ತೆ ಕೆಲವರು ಖುಷಿಯಲ್ಲೂ ತೇಲಾಡಿದ್ದರು.

fact-check-sai-pallavi-marriage

ಸಾಯಿ ಪಲ್ಲವಿಗೆ ಫ್ಯಾನ್ಸ್ ಅಭಿನಂದನೆ

ಸಾಯಿ ಪಲ್ಲವಿ ಮದುವೆ ಸೋಶಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಎಬ್ಬಿಸಿತ್ತು. ಆ ಫೋಟೊ ವೈರಲ್ ಆಗುತ್ತಿದ್ದಂತೆ " ಸಾಯಿ ಪಲ್ಲವಿಗೆ ಅಭಿನಂದನೆಗಳು.. ಪ್ರೀತಿಗೆ ಬಣ್ಣವಿಲ್ಲ ಅಂತ ಸಾಯಿ ಪಲ್ಲವಿ ಸಾಬೀತು ಮಾಡಿದ್ದಾರೆ" ಎಂದು ಒಬ್ಬರು ಕಮೆಂಟ್ ಮಾಡಿದ್ದರು. ಹೀಗೆ ಹಲವು ಮಂದಿ ಸಾಯಿ ಪಲ್ಲವಿಗೆ ಅಭಿನಂದನೆಗಳನ್ನು ಹೇಳಿದ್ದೇ ಹೇಳಿದ್ದು. ಆದರೆ, ಸಾಯಿ ಪಲ್ಲವಿ ಮಾತ್ರ ಈ ಬಗ್ಗೆ ಪ್ರತಿಕ್ರಿಯೆ ನೀಡಲು ಹೋಗಿರಲಿಲ್ಲ.

ಸಾಯಿ ಪಲ್ಲವಿ ಆಗಿದ್ದು ನಿಜವೇ?

ಸಾಯಿ ಪಲ್ಲವಿ ಪಕ್ಕದಲ್ಲಿ ಹಾರ ಹಾಕಿ ನಿಂತಿದ್ದು ನಿರ್ದೇಶಕ ರಾಜಕುಮಾರ್ ಪೆರಿಯಸ್ವಾಮಿ. ಈ ವಿಷಯ ಅಭಿಮಾನಿಗಳಿಗೆ ಮತ್ತಷ್ಟು ಕುತೂಹಲ ಕೆರಳಿಸಿತ್ತು. ಆದರೆ, ಈ ಸುದ್ದಿ ನಿಜವಲ್ಲ ಅನ್ನೋದನ್ನು ತಿಳಿಯಲು ಹೆಚ್ಚು ಸಮಯ ಬೇಕಾಗಿರಲಿಲ್ಲ. ಅಂದ್ಹಾಗೆ, ಇದು ಸಾಯಿ ಪಲ್ಲವಿ ಹಾಗೂ ಶಿವಕಾರ್ತಿಕೇಯನ್ ನಟಿಸುತ್ತಿರುವ 'ಎಸ್‌ಕೆ 21' ಸಿನಿಮಾದ ಮುಹೂರ್ತದ ವೇಳೆ ತೆಗೆದ ಫೋಟೊ. ಇದನ್ನೇ ಕಿಡಿಗೇಡಿಗಳು ಅರ್ಧಕ್ಕೆ ಕಟ್ ಮಾಡಿ ವೆಡ್ಡಿಂಗ್ ಮಾಡಿ, ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದರು.

ನಾಗಚೈತನ್ಯ ಜೊತೆ ಮತ್ತೊಂದು ಸಿನಿಮಾ

ಈಗಾಗಲೇ 'ಎಸ್‌ಕೆ 21' ಸಿನಿಮಾದಲ್ಲಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಮತ್ತೊಂದು ಸಿನಿಮಾ 'ಎನ್‌ಸಿ 23' ಅನೌನ್ಸ್ ಆಗಿದೆ. ಮತ್ತೊಮ್ಮೆ ನಾಗಚೈತನ್ಯ ಸಿನಿಮಾ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇದು ನಾಗ ಚೈತನ್ಯ ನಟನೆಯ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಅನ್ನೋದು ವಿಶೇಷ.

More from Filmibeat

English summary
Is Sai Pallavi secretly married to a director? whats the fact?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X