ಅಜಿತ್ ಸಿನಿಮಾ ಮಿಶ್ರ ಪ್ರತಿಕ್ರಿಯೆ; ಪರೋಕ್ಷ ಟಾಂಗ್ ಕೊಟ್ಟರೇ ನಯನತಾರಾ ಪತಿ ವಿಘ್ನೇಶ್ ಶಿವನ್?

ಅಜಿತ್ ಕುಮಾರ್ ನಟನೆಯ 62ನೇ ಸಿನಿಮಾ 'ವಿಡಾಮುಯಾರ್ಚಿ' ಇಂದು (ಫೆಬ್ರವರಿ 6) ವಿಶ್ವದಾದ್ಯಂತ ರಿಲೀಸ್ ಆಗಿದೆ. ಫಸ್ಟ್ ಡೇ ಫಸ್ಟ್ ಶೋನಿಂದಲೇ ಈ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೆಲವರಿಗೆ ಈ ಸಿನಿಮಾ ಇಷ್ಟ ಆಗಿಲ್ಲ. ಅಜಿತ್‌ ಸಿನಿಮಾದಲ್ಲಿ ಕತೆನೇ ಇಲ್ಲ ಎಂದು ಬೇಸರ ಹೊರ ಹಾಕುತ್ತಿದ್ದಾರೆ. ಹೀಗಿರುವಾಗಲೇ ನಯನತಾರಾ ಪತಿ ವಿಘ್ನೇಶ್ ಶಿವನ್ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿರುವ ಪೋಸ್ಟ್ ಒಂದು ಸದ್ದು ಮಾಡುವುದಕ್ಕೆ ಶುರು ಮಾಡಿದೆ.

ಅಜಿತ್ ಸಿನಿಮಾ 'ವಿಡಾಮುಯಾರ್ಚಿ' ಕುರಿತು ನಯನತಾರಾ ಪತಿ ವಿಘ್ನೇಶ್ ಶಿವನ್ ಪರೋಕ್ಷವಾಗಿ ಟಾಂಕ್ ಕೊಟ್ಟಿದ್ದಾರೆ ಅಂತ ಸುದ್ದಿಯಾಗುತ್ತಿದೆ. ಆದರೆ ವಿಘ್ನೇಶ್ ಶಿವನ್‌ಗೂ ಅಜಿತ್ ಕುಮಾರ್ ಸಿನಿಮಾಗೂ ಏನು ಸಂಬಂಧ? 'ವಿಡಾಮುಯಾರ್ಚಿ' ಸಿನಿಮಾಗೆ ನೆಗೆಟಿವ್ ವಿಮರ್ಶೆಗಳು ಬಂದಿದ್ದಕ್ಕೆ ಯಾಕೆ ಪೋಸ್ಟ್ ಮಾಡಿದ್ದಾರೆ? ಅಷ್ಟಕ್ಕೂ ಆ ಪೋಸ್ಟ್‌ನಲ್ಲಿ ಅಂತಹದ್ದೇನಿದೆ? ಅನ್ನೋದನ್ನು ಅನ್ನೋದನ್ನು ನೋಡುವುದಾರೆ.

Is Vignesh Shivan indirectly replied through instagram story on Ajith Kumar s Vidamuyarchi film

'ವಿಡಾಮುಯಾರ್ಚಿ' ಸಿನಿಮಾವನ್ನು ಮಗಿಳ್ ತಿರುಮೇನಿ ನಿರ್ದೇಶನ ಮಾಡಿದ್ದಾರೆ. ಲೈಕಾ ಪ್ರೊಡಕ್ಷನ್ಸ್ ಈ ಸಿನಿಮಾವನ್ನು ನಿರ್ಮಾಣ ಮಾಡಿದೆ. ಅಜಿತ್ ಹಾಗೂ ತ್ರಿಶಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದು ಎರಡು ವರ್ಷಗಳ ಬಳಿಕ ರಿಲೀಸ್ ಆಗುತ್ತಿರುವ ಅಜಿತ್ ಸಿನಿಮಾ. ಹೀಗಾಗಿ ಅಜಿತ್ ಫ್ಯಾನ್ಸ್ 'ವಿಡಾಮುಯಾರ್ಚಿ' ಬಗ್ಗೆ ಸಿಕ್ಕಾಪಟ್ಟೆ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು. ಆದರೆ, ಫಸ್ಟ್‌ ಡೇ ಫಸ್ಟ್ ಶೋನಲ್ಲಿಯೇ ನಿರಾಸೆ ಆಗಿದೆ. ಇದೇ ಸಮಯಕ್ಕೆ ಕಾಯುತ್ತಿದ್ದ ವಿಜಯ್ ಫ್ಯಾನ್ಸ್ ಕೂಡ ಟ್ರೋಲ್ ಮಾಡುವುದಕ್ಕೆ ಶುರು ಮಾಡಿದ್ದಾರೆ.

ಇನ್ನು ಅಜಿತ್ ಸಿನಿಮಾ ಕುರಿತು ವಿಘ್ನೇಶ್ ಶಿವನ್ ಯಾಕೆ ನೆಗೆಟಿವ್ ಕಾಮೆಂಟ್‌ಗಳನ್ನು ಮಾಡುತ್ತಾರೆ. ನೆಟ್ಟಿಗರು ಯಾಕೆ ಟ್ರೋಲ್ ಮಾಡುತ್ತಿದ್ದಾರೆ? ಈ ಪ್ರಶ್ನೆಗೆ ಉತ್ತರ ಸಿಂಪಲ್. ಅಜಿತ್ ಕುಮಾರ್ ನಟಿಸಬೇಕಿದ್ದ 62ನೇ ಸಿನಿಮಾವನ್ನು ನಯನತಾರಾ ಪತಿ ವಿಘ್ನೇಶ್ ಶಿವನ್ ನಿರ್ದೇಶನ ಮಾಡಬೇಕಿತ್ತು. ಆದರೆ, ಅಜಿತ್ ಸೇರಿದಂತೆ ನಿರ್ಮಾಣ ಸಂಸ್ಥೆಗೆ ಕಥೆಯನ್ನೂ ಹೇಳಿದ್ದರು. ಆದರೆ, ಅದ್ಯಾಕೋ ವರ್ಕ್‌ಔಟ್ ಆಗದೆ ಅಜಿತ್ 62ನೇ ಸಿನಿಮಾದಿಂದ ವಿಘ್ನೇಶ್ ಶಿವನ್ ಹೊರಬಿದ್ದಿದ್ದರು.

Is Vignesh Shivan indirectly replied through instagram story on Ajith Kumar s Vidamuyarchi film

ಆ ವೇಳೆ ಅಜಿತ್ ಹಾಗೂ ವಿಘ್ನೇಶ್ ಸಿನಿಮಾಗಳು ಯಾಕೆ ಸೆಟ್ಟೇರಲಿಲ್ಲ ಅನ್ನೋದು ತಿಳಿದಿರಲಿಲ್ಲ. ಗಲಾಟಾ ಪ್ಲಸ್ ಯೂಟ್ಯೂಬ್‌ಗೆ ನೀಡಿದ ಸಂದರ್ಶನ ವೇಳೆ ವಿಘ್ನೇಶ್ ಶಿವನ್ ಅಸಲಿ ವಿಷಯವನ್ನು ಹೊರ ಹಾಕಿದ್ದರು. ವಿಘ್ನೇಶ್ ಹೇಳಿದ ಕಥೆ ನಿರ್ಮಾಣ ಸಂಸ್ಥೆಗೆ ಇಷ್ಟ ಆಗಿರಲಿಲ್ಲ. ಈ ಕಥೆಯಲ್ಲಿ ಯಾಕೆ ಇಷ್ಟೊಂದು ಹಾಸ್ಯದ ಸನ್ನಿವೇಶಗಳು ಇವೆ ಅಂತ ಪ್ರಶ್ನೆ ಮಾಡಿದ್ದರು ಎಂದು ವಿಘ್ನೇಶ್ ಶಿವನ್ ಹೇಳಿಕೊಂಡಿದ್ದರು. ಇದೇ ಕಾರಣಕ್ಕೆ ಅಜಿತ್ 62ನೇ ಸಿನಿಮಾ ಕೈ ತಪ್ಪಿದೆ ಅನ್ನೋ ಬೆಳಕಿಗೆ ಬಂದಿತ್ತು.

ವಿಘ್ನೇಶ್ ಶಿವನ್ ನಿರ್ದೇಶಿಸಿದ್ದ 'ನಾನುಮ್ ರೌಡಿ ಧನ್' ಸಿನಿಮಾವನ್ನು ಅಜಿತ್ ಮೆಚ್ಚಿಕೊಂಡಿದ್ದರು. ಆ ಸಿನಿಮಾ ಕೂಡ ಹಾಸ್ಯದಿಂದಲೇ ಕೂಡಿತ್ತು. ಹೀಗಾಗಿ ಅಜಿತ್‌ಗೆ ಅದೇ ಜಾನರ್‌ಗೆ ಸೇರುವ ಸೇರುವ ಸಿನಿಮಾವನ್ನು ನಿರ್ದೇಶನ ಮಾಡುವುದಕ್ಕೆ ಮುಂದಾಗಿದ್ದರು. ಆದರೆ, ಕಥೆ ಓಕೆ ಆಗಲಿಲ್ಲ. ಆ ಜಾಗಕ್ಕೆ ಮಗಿಳ್ ತಿರುಮೇನಿ ಎಂಟ್ರಿ ಕೊಟ್ಟಿದ್ದರು. ಆಕ್ಷನ್ ಸಿನಿಮಾ ಮಾಡುವುದಕ್ಕೆ ಸಿದ್ಧತೆಗಳು ಆರಂಭ ಆಗಿದ್ದವು.

ಈಗ 'ವಿಡಾಮುಯಾರ್ಚಿ' ರಿಲೀಸ್ ಸಮಯಕ್ಕೆ ವಿಘ್ನೇಶ್ ಶಿವನ್ ತನ್ನ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. "ಕೆಲವೊಮ್ಮೆ ಏನಾಗುತ್ತೋ ಎಂದು ಚಿಂತಿಸುವುದನ್ನು ನಿಲ್ಲಿಸಿದಾಗ ಮ್ಯಾಜಿಕ್ ಆಗುತ್ತೆ" ಎಂದು ವಿಘ್ನೇಶ್ ಶಿವನ್ ಇನ್‌ಸ್ಟಗ್ರಾಂ ಸ್ಟೋರಿಯಲ್ಲಿ ಹಾಕಿಕೊಂಡಿದ್ದಾರೆ. ಇದು ಅಜಿತ್ ಕುಮಾರ್ ಸಿನಿಮಾ 'ವಿಡಾಮುಯಾರ್ಚಿ' ನೆಗೆಟಿವ್ ವಿಮರ್ಶೆಗಳನ್ನು ಪಡೆದಿದ್ದಕ್ಕೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆಂದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.

More from Filmibeat

English summary
Vignesh Shivan Indirectly Responds on Instagram story to Ajith Kumar's Vidamuyarchi Film;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X