ಕಿಂಗ್ ವಿರಾಟ್ ಕೊಹ್ಲಿ ಬಯೋಪಿಕ್‌ನಲ್ಲಿ ಸಿಂಬು?

ಕೆಲವು ದಿನಗಳಿಂದ ದೇಶದಲ್ಲಿ ಐಪಿಎಲ್ ಜ್ವರ ಜೋರಾಗಿದೆ. ಎಚ್ಚರ ಚಿತ್ತ ಐಪಿಎಲ್ ಪಂದ್ಯಗಳ ಮೇಲಿದೆ. ಅದರಲ್ಲೂ ಆರ್‌ಸಿಬಿ ಮೇಲೆ ಒಂದು ಕಣ್ಣು ಇಟ್ಟು ಕೂತಿದ್ದಾರೆ. ಈ ಬಾರಿಯಾದರೂ ಆರ್‌ಸಿಬಿ ಕಪ್ ಗೆಲ್ಲಬಹುದೇ? ಎಂದು ಎದುರು ನೋಡುತ್ತಿದ್ದಾರೆ. "ಈ ಸಲ ಕಪ್ ನಮ್ದೇ" ಅಂತ ಹೇಳಿ ಹೇಳಿ ಸುಸ್ತಾಗಿದ್ದ ಆರ್‌ಸಿಬಿ ಫ್ಯಾನ್ಸ್ ಬೆರಳು ಕಚ್ಚುತ್ತಾ ಪ್ರತಿಯೊಂದು ಪಂದ್ಯವನ್ನೂ ವೀಕ್ಷಣೆ ಮಾಡುತ್ತಿದ್ದಾರೆ. ಕಳೆದ ಸೀಸನ್‌ಗೆ ಹೋಲಿಸಿದರೆ, ಆರ್‌ಸಿಬಿ ಚೆನ್ನಾಗಿಯೇ ಆಡುತ್ತಿದ್ದು, ಫೈನಲ್‌ಗೆ ಹೋಗುವವರೆಗೂ ಫ್ಯಾನ್ಸ್‌ಗೆ ಸಮಾಧಾನವಿಲ್ಲ.

ಪ್ರತಿ ಐಪಿಎಲ್ ಸೀಸನ್ ಬಂದಾಗಲೂ ವಿರಾಟ್ ಕೊಹ್ಲಿ ಕ್ರೇಜ್ ದುಪ್ಪಟ್ಟಾಗುತ್ತಲೇ ಇದೆ. ಹಾಗೇ ವಿರಾಟ್ ಬ್ಯಾಟ್ ಹಿಡಿದು ಫೀಲ್ಡ್‌ಗೆ ಇಳಿದು ರನ್‌ಗಳ ಸುರಿಮಳೆಯನ್ನು ಹರಿಸುತ್ತಿದ್ದಾರೆ. ವಿರಾಟ್ ಬ್ಯಾಟಿಂಗ್ ಮೋಡಿಗೆ ಅವರ ಫ್ಯಾನ್ಸ್ ಕಳೆದು ಹೋಗಿದ್ದಾರೆ. ವಿರಾಟ್ ಲಕ್ಕಿ ನಂಬರ್ 18ನೇ ಸೀಸನ್ ಆಗಿದ್ದರಿಂದ ಏನಾದರೂ ಚಮತ್ಕಾರ ನಡೆಯುತ್ತಾ? ಅಂತ ಎದುರು ನೋಡುತ್ತಿದ್ದಾರೆ.

Is Virat Kohli s biopic on the card RCB star player listening to Simbu movie Nee Singam Dhan song

ಸಚಿನ್, ರಾಹುಲ್ ದ್ರಾವಿಡ್, ಎಂ.ಎಸ್ ಧೋನಿ ಬಳಿಕ ವಿರಾಟ್ ಕೊಹ್ಲಿ ಭಾರತದ ಕ್ರಿಕೆಟ್ ತಂಡದ ಸ್ಟಾರ್ ಸದಸ್ಯನಾಗಿದ್ದಾರೆ. ದಿನದಿಂದ ದಿನಕ್ಕೆ ಅಭಿಮಾನಿಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಲೇ ಇದೆ. ಈ ವೇಳೆ ವಿರಾಟ್ ಕೊಹ್ಲಿಯ ಬಯೋಪಿಕ್ ಏನಾದರೂ ಬರುತ್ತಾ? ಅನ್ನೋ ಅನುಮಾನ ಮೂಡಿದೆ. ಅದಕ್ಕೆ ವಿರಾಟ್ ಕೇಳುತ್ತಿರುವ ಒಂದು ಹಾಡು. ಇತ್ತೀಚೆಗೆ ಆರ್‌ಸಿಬಿ ಚಾಟ್‌ ಶೋನಲ್ಲಿ ಕೊಹ್ಲಿ ಪದೇ ಪದೆ ಕೇಳುವ ತಮ್ಮಿಷ್ಟದ ಹಾಡನ್ನು ರಿವೀಲ್‌ ಮಾಡಿದ್ದಾರೆ.

ವಿರಾಟ್ ಕೊಹ್ಲಿ ಯಾವ ಹಾಡನ್ನು ಪದೇ ಪದೆ ಕೇಳುತ್ತಾರೆ ಅನ್ನೋ ಕುತೂಹಲ ಅವರ ಅಭಿಮಾನಿಗೆ ಇರುತ್ತೆ. ಅದಕ್ಕೆ ಆರ್‌ಸಿಬಿ ಚಾಟ್‌ ಶೋನಲ್ಲಿ ಕೇಳಿದ ಪ್ರಶ್ನೆಗೆ ಕೊಹ್ಲಿ ಸದ್ಯ ಅವರು ಕೇಳುತ್ತಿರುವ ಫೇವರಿಟ್ ಸಾಂಗ್ ಅನ್ನು ರಿವೀಲ್ ಮಾಡಿದ್ದಾರೆ. ಅದು ಮತ್ಯಾವುದೂ ಅಲ್ಲ. ತಮಿಳಿನ ಸ್ಟಾರ್ ನಟ ಸಿಂಬು ನಟಿಸಿರುವ 'ಪತ್ತು ತಲಾ' ಸಿನಿಮಾದ 'ನೀ ಸಿಂಗಮ್ ಧಾನ್' ಸಾಂಗ್. ಈ ಹಾಡು ಅಂದರೆ, ತುಂಬಾನೇ ಇಷ್ಟವಂತೆ. ಈ ಕಾರಣಕ್ಕೆ ಏರ್ಫೋನ್ ಹಾಕಿಕೊಂಡು ಒಂದೇ ಹಾಡನ್ನು ರಿಪೀಟ್ ಆಗಿ ಕೇಳುತ್ತಿರುತ್ತಾರಂತೆ.

ಸಿಂಬು (ಸಿಲಂಬರಸನ್) ನಟಿಸಿದ 'ಪತ್ತು ತಲಾ' ಸಿನಿಮಾ 2023ರಲ್ಲಿ ರಿಲೀಸ್ ಆಗಿತ್ತು. ಅಂದ್ಹಾಗೆ, ಇದು ಶಿವಣ್ಣ ಹಾಗೂ ಶ್ರೀಮುರಳಿ ನಟಿಸಿದ 'ಮಫ್ತಿ' ಸಿನಿಮಾದ ರೀಮೇಕ್ ಆಗಿತ್ತು. ಈ ಸಿನಿಮಾದ "ನೀ ಸಿಂಗಮ್ ಧಾನ್" ಹಾಡನ್ನು ಗಾಯಕ ಸಿದ್ ಶ್ರೀರಾಮ್ ಹಾಡಿದ್ದರು. ಎ.ಆರ್ ರೆಹಮಾನ್ ಸಂಗೀತ ನೀಡಿದ್ದ ಈ ಹಾಡು ಈಗ ವಿರಾಟ್ ಕೊಹ್ಲಿ ಫೋನ್‌ನಲ್ಲಿರುವ ಹಾಡುಗಳ ಫೇವರಿಟ್ ಲಿಸ್ಟ್‌ನಲ್ಲಿದೆ.

ಈ ವಿಡಿಯೋವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸೋಶಿಯಲ್ ಮೀಡಿಯಾ ಪೇಜ್‌ನಲ್ಲಿ ಶೇರ್ ಮಾಡಲಾಗಿತ್ತು. ಆ ಪೋಸ್ಟ್‌ಗೆ ತಮಿಳು ನಟ ಸಿಂಬು ಕೂಡ " ನೀವು ಸಿಂಹವೇ ತಾನೇ" ಪ್ರತಿಕ್ರಿಯೆ ನೀಡಿದ್ದಾರೆ. ಈ ಪ್ರತಿಕ್ರಿಯೆಯನ್ನು ನೋಡಿ ಅಭಿಮಾನಿಗಳು ಹೊಸ ಲೆಕ್ಕಾಚಾರ ಹಾಕುವುದಕ್ಕೆ ಶುರು ಮಾಡಿದ್ದಾರೆ. ವಿರಾಟ್ ಕೊಹ್ಲಿ ಬಯೋಪಿಕ್‌ನಲ್ಲಿ ನಟಿಸಲು ಸಿಂಬು ಸೂಕ್ತ ಎಂದು ಕಾಮೆಂಟ್ ಮಾಡುವುದಕ್ಕೆ ಶುರು ಮಾಡಿದ್ದಾರೆ.

ಇನ್ನು ವಿರಾಟ್‌ ಕೊಹ್ಲಿ ಫಿಟ್ನೆಸ್‌, ಅವರ ಸ್ಟೈಲ್‌, ಲುಕ್‌ಗೆ ತಮಿಳು ನಟ ಸಿಂಬು ಕೂಡ ಹೆಚ್ಚು ಕಡಿಮೆ ಹೋಲುತ್ತಾರೆ. ಈ ಕಾರಣಕ್ಕೆ ವಿರಾಟ್‌ ಕೊಹ್ಲಿ ಬಯೋಪಿಕ್‌ ಮಾಡುವುದಕ್ಕೆ ಏನಾದರೂ ಮುಂದಾದರೇ, ಆ ಸಿನಿಮಾ ಸಿಂಬು ಸೂಕ್ತ ವ್ಯಕ್ತಿ ಎಂದು ಚರ್ಚೆ ಮಾಡುತ್ತಿದ್ದಾರೆ. ಇಷ್ಟೇ ಅಲ್ಲದೆ ಬಾಲಿವುಡ್‌ ಅಂಗಳಲ್ಲಿ ಈ ಬಗ್ಗೆ ಚರ್ಚೆ ಶುರುವಾಗಿದೆ ಎಂದು ಹೇಳಲಾಗುತ್ತಿದೆ. ವಿರಾಟ್‌ ಅನುಷ್ಕಾ ನಿರ್ಮಾಣ ಸಂಸ್ಥೆ ಆರಂಭಿಸಿ ಸಿನಿಮಾ ಶುರು ಮಾಡಿದಲ್ಲಿ ಸಿಂಬು ಅವರನ್ನು ಅಪ್ರೋಚ್‌ ಆದರು ಅಚ್ಚರಿಪಡುಬೇಕಿಲ್ಲ ಎನ್ನುತ್ತಿದ್ದಾರೆ. ಅಂದ್ಹಾಗೆ, ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಮಿಂಚುತ್ತಿದ್ದರೆ, ಅತ್ತ ಸಿನಿಮಾ ಸಿಂಬು ಅಬ್ಬರ ಮುಂದುವರೆದಿದೆ. ಮುಂದಿನ ದಿನಗಳಲ್ಲಿ ಈ ಕಾಂಬಿನೇಷನ್‌ನಲ್ಲಿ ಬಯೋಪಿಕ್ ಆಗುತ್ತಾ? ಎಂದು ಎದುರು ನೋಡಬೇಕಿದೆ.

More from Filmibeat

English summary
Is Virat Kohli's biopic on the card? RCB star player listening to Simbu movie Nee Singam Dhan song;
Read more about: virat kohli simbu
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X