Jailer Box Office: 'ಜೈಲರ್' ಸೈಲೆಂಟ್ ಆಗಲ್ಲ.. 5 ದಿನಕ್ಕೆ ₹350 ಕೋಟಿ.. ಕರ್ನಾಟಕದಲ್ಲೂ ಕಲೆಕ್ಷನ್ ಎಷ್ಟು ಅಂತಿರಾ?
ಅದ್ಯಾರೇ ಕಾಲೆಳೆದರೂ, ಕಿಂಡಲ್ ಮಾಡಿದರೂ ಅಷ್ಟೇ ಸೂಪರ್‌ಸ್ಟಾರ್ ಖದರ್ ಮಾತ್ರ ಕಮ್ಮಿ ಆಗೋದಿಲ್ಲ. 'ದರ್ಬಾರ್', 'ಅಣ್ಣಾತ್ತೆ' ಎರಡು ಸೋಲು ರಜನಿ ವೃತ್ತಿ ಬದುಕಿಗೆ ಕುತ್ತು ತರೋ ಹಾಗಿತ್ತು. ಆದರೆ, 'ಜೈಲರ್' ಅದೆಲ್ಲದಕ್ಕೂ ಬ್ರೇಕ್ ಹಾಕಿದೆ.
ಸೂಪರ್‌ಸ್ಟಾರ್ ಮತ್ತೆ ಟ್ರ್ಯಾಕ್‌ಗೆ ಬಂದಿದ್ದಾಗಿದೆ. ಬಾಕ್ಸಾಫೀಸ್‌ನಲ್ಲಿ ಕಲೆಕ್ಷನ್ ರಜನಿಕಾಂತ್ ಅಷ್ಟೇ ಸ್ಪೀಡ್ ಆಗಿದೆ. ಸಿನಿಮಾ ರಿಲೀಸ್ ಆದಲ್ಲಿಂದ ಐದನೇ ದಿನದವರೆಗೂ ಕಲೆಕ್ಷನ್ ಅದ್ಭುತವಾಗಿದೆ. ಎಲ್ಲಾ ಭಾಷೆಯ ವಿತರಕರೂ ದಿಲ್ ಖುಷಿಯಾಗಿದ್ದಾರೆ.

ಸ್ವಾತಂತ್ರ್ಯ ದಿನವನ್ನು ಗಮನದಲ್ಲಿಟ್ಟುಕೊಂಡೇ 'ಜೈಲರ್' ಸಿನಿಮಾವನ್ನು ರಿಲೀಸ್ ಮಾಡಲಾಗಿತ್ತು. ರಜನಿ ಸಿನಿಮಾಗೆ ವಿಶ್ವದಾದ್ಯಂತ ಗ್ರ್ಯಾಂಡ್ ಓಪನಿಂಗ್ ಸಿಕ್ಕಿದೆ. ಹಾಗೇ ಐದನೇ ದಿನದವರೆಗೂ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಲೇ ಇದೆ. ಐದನೇ ದಿನವೂ ಕಲೆಕ್ಷನ್ ಜೋರಾಗಿಯೇ ಇದೆ. ಅಲ್ಲದೆ ಕರ್ನಾಟಕದಲ್ಲೂ ಪರಭಾಷೆಯ ಸಿನಿಮಾ ದಾಖಲೆ ಬರೆಯೋ ಹಾಗೆ ಕಾಣಿಸುತ್ತಿದೆ. ಅಷ್ಟಕ್ಕೂ ಎಲ್ಲೆಲ್ಲಿ ಎಷ್ಟೆಷ್ಟು ಕಲೆಕ್ಷನ್ ಆಗಿದೆ? ಕರ್ನಾಟಕದಲ್ಲಿ ಐದು ದಿನದ ಗಳಿಕೆ ಹೇಗಿದೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.
ವಿಶ್ವದಾದ್ಯಂತ 'ಜೈಲರ್' ಭರ್ಜರಿ ಕಲೆಕ್ಷನ್
ರಜನಿಕಾಂತ್ ಸಿನಿಮಾ 'ಜೈಲರ್' ಕೇವಲ ತಮಿಳುನಾಡಿನಲ್ಲಷ್ಟೇ ಅಲ್ಲ. ಭಾರತದಲ್ಲಷ್ಟೇ ಅಲ್ಲ. ವಿಶ್ವದಾದ್ಯಂತ ಈ ಸಿನಿಮಾಗೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿತ್ತು. ಅಡ್ವಾನ್ಸ್ ಬುಕಿಂಗ್‌ನಲ್ಲೇ ಸಿನಿಮಾ 'ಶೂರ್ ಹಿಟ್' ಅಂತಲೇ ಭವಿಷ್ಯ ನುಡಿದಿದ್ದರು. ಹಾಗೇ ವಿಶ್ವದಾದ್ಯಂತ ಈ ಐದು ದಿನಗಳಲ್ಲಿ 'ಜೈಲರ್' ಸಿನಿಮಾದ ಬಾಕ್ಸಾಫೀಸ್ ಕಲೆಕ್ಷನ್ 350 ಕೋಟಿ ರೂಪಾಯಿ ದಾಟಿದೆ. ಜಗತ್ತಿನಾದ್ಯಂತ ರಜನಿ ಸಿನಿಮಾದ ಕ್ರೇಜ್ ಹೀಗಿದೆ.
ಐದನೇ ದಿನ ರಜನಿ ಸಿನಿಮಾ ಗಳಿಸಿದ್ದೆಷ್ಟು?
ಯಾವುದೇ ಸಿನಿಮಾ ಆಗಿದ್ದರೂ, ಮೊದಲ ಸೋಮವಾರದ ಕಲೆಕ್ಷನ್ ಮೇಲೆ ಸಿನಿಮಾದ ಭವಿಷ್ಯ ನಿಂತಿರುತ್ತೆ. ಈ ದಿನ ಬಾಕ್ಸಾಫೀಸ್‌ನಲ್ಲಿ ಸಿನಿಮಾ ಕಚ್ಚಿಕೊಂಡರೆ ಮುಗೀತು. ದಾಖಲೆಗಳನ್ನು ಧೂಳೀಪಟ ಮಾಡುತ್ತೆ ಅಂತಲೇ ಅರ್ಥ. 'ಜೈಲರ್' ಸಿನಿಮಾ ಐದನೇ ದಿನ ಕೂಡ ಬಾಕ್ಸಾಫೀಸ್‌ನಲ್ಲಿ ₹28 ಕೋಟಿ ಕಲೆ ಹಾಕಿದೆ. ಇನ್ನು ಆರನೇ ದಿನ (ಆಗಸ್ಟ್ 15) ಸ್ವಾತಂತ್ರ್ಯ ದಿನದ ರಜೆ ಹಿನ್ನೆಲೆಯಲ್ಲಿ 'ಜೈಲರ್' ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಈ ಐದು ದಿನಗಳಲ್ಲಿ ಕೇವಲ ಭಾರತದಲ್ಲಿ ₹178.60 ಕೋಟಿ ಕಲೆಕ್ಷನ್ ಆಗಿದೆ.

ಕರ್ನಾಟಕದಲ್ಲೂ ಭರ್ಜರಿ ಕಲೆಕ್ಷನ್
ರಜನಿಕಾಂತ್ ಸಿನಿಮಾಗಳಿಗೆ ಕರ್ನಾಟಕದಲ್ಲೂ ಅಭಿಮಾನಿಗಳಿದ್ದಾರೆ. ಕನ್ನಡದವರೇ ಆಗಿದ್ದರಿಂದ ತಮಿಳರ ಜೊತೆಗೆ ಕನ್ನಡಿಗರೂ ಕೂಡ ಮುಗಿಬಿದ್ದು ಸಿನಿಮಾ ನೋಡುತ್ತಾರೆ. ಹೀಗಾಗಿ ಮೊದಲ ದಿನವೇ 'ಜೈಲರ್' ₹11 ಕೋಟಿ ಕಲೆಕ್ಷನ್ ಮಾಡಿತ್ತು. ಐದನೇ ದಿನ ಹೊತ್ತಿಗೆ ಕರ್ನಾಟಕದಿಂದಲೇ ಸುಮಾರು ₹36 ಕೋಟಿ ಕಲೆಕ್ಷನ್ (Gross) ಆಗಿದೆ ಎಂದು ವಿತರಕರ ವಲಯದಲ್ಲಿ ಚರ್ಚೆಯಾಗುತ್ತಿದೆ. ಹೀಗೆ ಮುಂದುವರೆದರೆ, ಕೇವಲ ಕರ್ನಾಟಕದಲ್ಲಿಯೇ ₹50 ರಿಂದ ₹75 ಕೋಟಿ ಅನಾಯಾಸವಾಗಿ ಕಲೆಕ್ಷನ್ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ.
ಶಿವಣ್ಣನಿಂದ ಕಲೆಕ್ಷನ್ ಜೋರು
'ಜೈಲರ್'ನಲ್ಲಿ ಶಿವಣ್ಣನ ಖದರ್‌ಗೆ ಸಿನಿಪ್ರಿಯರ ಪಾಗಲ್ ಆಗಿದ್ದಾರೆ. ತಮಿಳುನಾಡು, ಆಂಧ್ರ, ತೆಲಂಗಾಣದಲ್ಲಿಯೇ ಶಿವಣ್ಣ ಕ್ರೇಜಿ ಇರುಬೇಕಾದರೆ, ಇನ್ನು ಕರ್ನಾಟಕದಲ್ಲಿ ಖದರ್ ಹೇಗಿರುತ್ತೆ ಅಂತ ಪ್ರತ್ಯೇಕವಾಗಿ ಹೇಳಬೇಕಿಲ್ಲ. ನರಸಿಂಹನಾಗಿ ಶಿವಣ್ಣ ಕನ್ನಡಿಗರು ಹೆಜ್ಜೆ ಸಂಖ್ಯೆಯಲ್ಲಿ ಚಿತ್ರಮಂದಿರಕ್ಕೆ ಸೆಳೆಯುತ್ತಿದ್ದಾರೆ.


Click it and Unblock the Notifications











