Jailer: ನಿರ್ದೇಶಕ ನೆಲ್ಸನ್ ಕನಸಿನ ಸಿನಿಮಾದಲ್ಲಿ ರಜನಿಕಾಂತ್-ದಳಪತಿ ವಿಜಯ್ !
ಸೂಪರ್‌ಸ್ಟಾರ್ ರಜನಿಕಾಂತ್ ಎರಡು ವರ್ಷದ ಗ್ಯಾಪ್ ನಂತರ ತೆರೆ ಮೇಲೆ ಕಾಣಿಸಿಕೊಂಡ ಸಿನಿಮಾ 'ಜೈಲರ್'. ಬಿಡುಗಡೆಯಾದಲ್ಲಿಂದ ಎಲ್ಲಾ ದಾಖಲೆಗಳನ್ನು ಧೂಳೀಪಟ ಮಾಡ್ತಿರೋದನ್ನ ನೋಡುತ್ತಲೇ ಇದ್ದೇವೆ. ಸಿನಿಮಾ ಬಿಡುಗಡೆಯಾದ ಮೊದಲ ದಿನವೇ 72 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ರಜನಿ ಸಿನಿಮಾ ತನ್ನದೇ ಹವಾ ಸೃಷ್ಟಿಸಿಕೊಂಡಿದೆ.
ಒಂದು ಸಲ ತಲೈವಾನನ್ನು ದೊಡ್ಡ ಪರದೆ ಮೇಲೆ ನೋಡಿ ಖುಷಿಪಟ್ಟ ಜನ ಮತ್ತೆ ಮತ್ತೆ ಮತ್ತೆ ಥಿಯೇಟರ್ ಕಡೆ ಹೋಗ್ತಿರೋದು 'ಜೈಲರ್' ಯಶಸ್ಸಿಗೆ ಮತ್ತೊಂದು ಸಾಕ್ಷಿ ಎನ್ನುವಂತಾಗಿದೆ. ರಜನಿ ಫ್ಯಾನ್ಸ್ ಮತ್ತೆ ಗರ್ವದಿಂದ ಜೈಕಾರ ಹಾಕುತ್ತಿದ್ದಾರೆ.

ಇನ್ನೂ ಅಭಿಮಾನಿಗಳು 'ಜೈಲರ್' ಹ್ಯಾಂಗೋವರ್‌ನಲ್ಲಿ ಇರುವಾಗ ಚಿತ್ರದ ನಿರ್ದೇಶಕ ನೆಲ್ಸನ್ ದಿಲೀಪ್‌ಕುಮಾರ್ ಕಡೆಯಿಂದ ಸಖತ್ ಅನೌನ್ಸ್‌ಮೆಂಟ್ ಸಿಕ್ಕಿದೆ. ಇದೆ ಯಶಸ್ಸಿನ ಖುಷಿಯಲ್ಲಿ 'ಜೈಲರ್ 2' ಸಿನಿಮಾ ಮಾಡುವುದಾಗಿ ಘೋಷಿಸಿದ್ದಾರೆ. ಅಷ್ಟೇ ಅಲ್ಲ, ಹಿಂದೆಂದೂ ಕಾಣದಂತ ಧಮಾಕಾ ತಾರಾ ಕಾಂಬಿನೇಶನ್ ತೆರೆ ಮೇಲೆ ತರೋದೇ ತನ್ನ ಕನಸು ಎಂದು ಹೇಳಿದ್ದಾರೆ.
ಒಂದೇ ಸಿನಿಮಾದಲ್ಲಿ ತಲೈವಾ-ದಳಪತಿ
'ಜೈಲರ್' ಸಿನಿಮಾದಲ್ಲಿ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್, ಮೋಹನ್‌ಲಾಲ್ ಸೇರಿದಂತೆ ಬಹುಭಾಷಾ ಸೂಪರ್‌ಸ್ಟಾರ್‌ಗಳ ಭರ್ಜರಿ ತಾರಾಗಣವನ್ನೇ ಜೈಲರ್‌ನಲ್ಲಿ ನೋಡಿ ಅಭಿಮಾನಿಗಳು ಸಖತ್ ಎಕ್ಸೈಟ್ ಆಗಿದ್ದಾರೆ. ಅದ್ರಲ್ಲೂ ಶಿವಣ್ಣ ಪಾತ್ರ ಮತ್ತು ಅದನ್ನವರು ನಿಭಾಯಿಸಿದ ರೀತಿ ಎರಡಕ್ಕೂ ಸಿಕ್ಕಾಪಟ್ಟೆ ಶಿಳ್ಳೆ-ಚಪ್ಪಾಳೆ ನಿರಂತರವಾಗಿ ಬರ್ತಿದೆ. ಹಾಗಿದ್ಮೇಲೆ 'ಜೈಲರ್ 2'ನಲ್ಲೂ ನಿರ್ದೇಶಕ ನೆಲ್ಸನ್ ಇಂಥದ್ದೇ ಒಂದು ಭರ್ಜರಿ ತಾರಾಗಣ ತರೋದು ಗ್ಯಾರಂಟಿ ಅನ್ನೋದನ್ನ ಎಲ್ಲರೂ ಊಹಿಸಬಹುದು. ಇಷ್ಟೇ ಅಲ್ಲ ತಲೈವಾ ರಜನಿಕಾಂತ್ ಜೊತೆ ಇದೇ ಮೊದಲ ಬಾರಿಗೆ ದಳಪತಿ ವಿಜಯ್‌ರನ್ನು ತೆರೆ ಮೇಲೆ ತರುವ ಕನಸು ನೆಲ್ಸನ್ ದಿಲೀಪ್ ಕುಮಾರ್‌ಗಿದೆ ಎನ್ನಲಾಗಿದೆ.
'ಜೈಲರ್ 2' ಬರೋದು ಪಕ್ಕಾ
ಇನ್ನು ಇಷ್ಟೆಲ್ಲಾ ಅದ್ಭುತ ಸಿನಿಮಾಗಳಲ್ಲದೇ 'ಜೈಲರ್ 2' ಸಿನಿಮಾ ಮಾಡೋದಂತೂ ಫಿಕ್ಸ್ ಎಂದಿದ್ದಾರೆ ನೆಲ್ಸನ್ ದಿಲೀಪ್ಕುಮಾರ್. ಎರಡು ವರ್ಷದ ನಂತರ ತಲೈವಾನನ್ನ ತೆರೆ ಮೇಲೆ ನೋಡಿ ಸಂತಸಪಡ್ತಿರೋ ಅಭಿಮಾನಿಗಳು 'ಜೈಲರ್ 2' ಬರೋ ವಿಚಾರ ಕೇಳಿ ಮತ್ತಷ್ಟು ಖುಷಿಯಾಗಿದ್ದಾರೆ. ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಈ ವಿಷಯ ತಿಳಿಸಿರೊ ಬಗ್ಗೆ ಫಿಲ್ಮ್ ಕ್ರಿಟಿಕ್ ಮನೋಬಾಲ ವಿಜಯಬಾಲನ್ ಟ್ವಿಟರ್ ಮೂಲಕ ಬಹಿರಂಗಪಡಿಸಿದ್ದಾರೆ.
ಸೀಕ್ವೆಲ್ ಮೇಲೆ ನೆಲ್ಸನ್ ಕಣ್ಣು
ಸದ್ಯ 'ಜೈಲರ್' ಯಶಸ್ಸಿನಲ್ಲಿ ತೇಲಾಡ್ತಿರೋ ನಿರ್ದೇಶಕ ನೆಲ್ಸನ್ ತನ್ನ ನಿರ್ದೇಶನದ ಹಿಂದಿನ ಕೆಲವು ಚಿತ್ರಗಳ ಸೀಕ್ವೆಲ್ ಮಾಡುವ ಆಸೆ ವ್ಯಕ್ತಪಡಿಸಿದ್ದಾರೆ. 'ಕೊಲಮಾವು' ಕೋಕಿಲ', 'ಡಾಕ್ಟರ್' ಮತ್ತು 'ಬೀಸ್ಟ್' ಚಿತ್ರಗಳ ಎರಡನೇ ಭಾಗವನ್ನು ತೆರೆ ಮೇಲೆ ತರೋ ಪ್ರಯತ್ನ ಮಾಡೋದು ಪಕ್ಕಾ ಅಂದಿದ್ದಾರೆ.
'ಜೈಲರ್'ನಲ್ಲಿ ದಿಗ್ಗಜರ ಸಾಥ್
ಕಲಾನಿಧಿ ಮಾರನ್ ನಿರ್ಮಾಣ ಮಾಡಿರೋ 'ಜೈಲರ್' ನೆಲ್ಸನ್ ನಿರ್ದೇಶನದಲ್ಲಿ ರಜನಿಕಾಂತ್ ನಟಿಸಿರುವ ಮೊಟ್ಟ ಮೊದಲ ಸಿನಿಮಾ. ರಜನಿಕಾಂತ್ ಜೊತೆ ಶಿವರಾಜ್‌ಕುಮಾರ್, ರಮ್ಯಾ ಕೃಷ್ಣನ್, ವಿನಾಯಕನ್, ಮೋಹನ್‌ಲಾಲ್, ವಸಂತ್ ರವಿ ಸೇರಿದಂತೆ ಭಾರೀ ತಾರಾಗಣವೇ ಈ ಚಿತ್ರದಲ್ಲಿದೆ. ಕಾವಾಲಾ ಐಟಂ ಸಾಂಗ್ ಮೂಲಕ ಮಿಲ್ಕಿ ಬ್ಯೂಟಿ ತಮನ್ನಾ ಕೂಡಾ ಒಂದು ಝಲಕ್ ನೀಡದ್ದಾರೆ. ಅನಿರುದ್ಧ ರವಿಶಂಕರ್ ಮ್ಯೂಸಿಕ್ ಚಿತ್ರದ ಯಶಸ್ಸಿಗೆ ತಕ್ಕಂತೆ ಇದೆ.


Click it and Unblock the Notifications











