Jailer Day 1 Collection: ಬಾಕ್ಸಾಫೀಸ್‌ನಲ್ಲಿ 'ಜೈಲರ್'ಗೆ ಜೈಕಾರ.. ವಿಶ್ವದಾದ್ಯಂತ ₹72 ಕೋಟಿ.. ಕರ್ನಾಟಕದಲ್ಲೆಷ್ಟು?

ರಜನಿ ಈಸ್ ಬ್ಯಾಕ್.. ಸತತ ಎರಡು ಸೋಲು.. ಸೂಪರ್‌ಸ್ಟಾರ್ ಪಟ್ಟದ ಮೇಲೆ ಕಣ್ಣು ಇವೆಲ್ಲವನ್ನೂ ಭೇದಿಸಿಕೊಂಡು ರಜನಿಕಾಂತ್ ಮುಂದೆ ಬಂದಿದ್ದಾರೆ. 2023ರ ಬಹು ನಿರೀಕ್ಷಿತ ಸಿನಿಮಾ 'ಜೈಲರ್' ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸುತ್ತಿದೆ. ಮೊದಲ ದಿನವೇ ಸಿನಿಮಾ ಕೋಟಿ ಕೋಟಿ ಲೂಟಿ ಮಾಡುತ್ತಿದೆ.

'ಜೈಲರ್' ಸಿನಿಮಾದ ಅಡ್ವಾನ್ಸ್ ಬುಕಿಂಗ್ ಹಾಗೂ ಫಸ್ಟ್ ಡೇ ಫಸ್ಟ್ ಶೋಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಭಾರತ ಹಾಗೂ ವಿದೇಶದಲ್ಲಿಯೂ ಅಡ್ವಾನ್ಸ್ ಬುಕಿಂಗ್‌ನಿಂದ ಸುಮಾರು 19 ಕೋಟಿ ರೂ. ಅಧಿಕ ಗಳಿಕೆ ಕಂಡಿದೆ ಎಂದು ಟ್ರೇಡ್ ಎಕ್ಸ್‌ಪರ್ಟ್ ವರದಿ ಮಾಡಿದ್ದರು. ಈಗ ಮೊದಲ ವಿಶ್ವದಾದ್ಯಂತ ಎಷ್ಟು ಕಲೆಕ್ಷನ್ ಆಗಿದೆ ಅನ್ನೋದು ಹೊರಬಿದ್ದಿದೆ.

Jailer Box Office Collection Day 1: Rajinikanth’s Jailer Earns Astonishing 72 Crores in Just One Day

ರಜನಿಕಾಂತ್ ಸಿನಿಮಾ 'ಜೈಲರ್' ಈ ವರ್ಷದಲ್ಲಿ ಮೊದಲ ದಿನ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾ ಪಟ್ಟಿ ಸೇರಿದೆ. ದಳಪತಿ ವಿಜಯ್ ಸಿನಿಮಾ 'ವಾರಿಸು', 'ಪೊನ್ನಿಯನ್ ಸೆಲ್ವನ್ 2' ಸಿನಿಮಾ ಮೊದಲ ದಿನದ ಕಲೆಕ್ಷನ್ ಅನ್ನು ಹಿಂದಿಕ್ಕಿದೆ. ಫಸ್ಟ್ ಡೇ 'ಜೈಲರ್' ಸಿನಿಮಾ ಶೇ.78ರಷ್ಟು ಚಿತ್ರಮಂದಿರಗಳು ಭರ್ತಿಯಾಗಿವೆ. ತಮಿಳುನಾಡು, ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ ಹಾಗೂ ಕೇರಳದಲ್ಲಿ ಕಲೆಕ್ಷನ್ ಸಖತ್ ಆಗಿಯೇ ಆಗಿದೆ.

'ಜೈಲರ್' ವಿಶ್ವದಾದ್ಯಂತ ಗಳಿಸಿದ್ದೆಷ್ಟು?

ರಜನಿ ಹಾಗೂ ನೆಲ್ಸನ್ ದಿಲೀಪ್ ಕುಮಾರ್ ಮೊದಲ ಕಾಂಬಿನೇಷನ್ ವರ್ಕ್‌ಔಟ್ ಆಗಿದೆ. ವಿಶ್ವದಲ್ಲಿ ಎಲ್ಲೆಲ್ಲಿ ತೆರೆ ಕಂಡಿದೆಯೋ ಅಲ್ಲೆಲ್ಲಾ ಸಿನಿಮಾಗೆ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ವಿಶ್ವದಾದ್ಯಂತ ಈ ಸಿನಿಮಾ ಸುಮಾರು 7 ಸಾವಿರಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಿತ್ತು. ಅದರಲ್ಲಿ ವಿದೇಶದಲ್ಲಿಯೇ 3 ಸಾವಿರ ಸ್ಕ್ರೀನ್‌ನಲ್ಲಿ ರಿಲೀಸ್ ಆಗಿತ್ತು. ಹೀಗಾಗಿ 'ಜೈಲರ್' ವರ್ಲ್ಡ್‌ವೈಡ್ ಸುಮಾರು 72 ಕೋಟಿ ರೂ. ಕಲೆಕ್ಷನ್ ಆಗಿದೆ ಎಂದು ಟ್ರೇಡ್ ಎಕ್ಸ್‌ಪರ್ಟ್ ವರದಿ ಒಪ್ಪಿಸಿದ್ದಾರೆ.

ಕರ್ನಾಟಕದಲ್ಲಿ 'ಜೈಲರ್' ಗಳಿಕೆ ಎಷ್ಟು?

ರಜನಿಕಾಂತ್ ಸಿನಿಮಾ ಕೆಲವೊಮ್ಮ ತಮಿಳುನಾಡಿಗಿಂತಲೂ ಕರ್ನಾಟಕದಲ್ಲಿ ಹೆಚ್ಚು ಕ್ರೇಜ್ ಇರುತ್ತೆ. ಕೆಲವು ಸಿನಿಮಾಗಳಿಗೆ ಕರ್ನಾಟಕದಲ್ಲಿರೋ ರಜನಿ ಅಭಿಮಾನಿಗಳು ಮುಗಿಬಿದ್ದು ಸಿನಿಮಾ ನೋಡುತ್ತಾರೆ. 'ಜೈಲರ್'ಗೂ ಅದೇ ಕ್ರೇಜ್ ಇದೆ. ಟ್ರೇಡ್ ಎಕ್ಸ್‌ಪರ್ಟ್‌ಗಳು ನಿರೀಕ್ಷೆ ಮಾಡಿದಂತೆ ಈ ಸಿನಿಮಾ ಕೇವಲ ಕರ್ನಾಟಕದಲ್ಲಿಯೇ 11 ಕೋಟಿ ರೂ. ಕಲೆಕ್ಷನ್ ಮಾಡಿದೆ. ಇತ್ತೀಚೆಗೆ ಪರಭಾಷೆಯ ಸಿನಿಮಾ ಕರ್ನಾಟಕದಲ್ಲಿ ಈ ಮಟ್ಟಿಗೆ ಕಲೆಕ್ಷನ್ ಮಾಡಿರಲಿಲ್ಲ.

Jailer Box Office Collection Day 1: Rajinikanth’s Jailer Earns Astonishing 72 Crores in Just One Day

ಯಾವ್ಯಾವ ರಾಜ್ಯದಲ್ಲಿ ಎಷ್ಟೆಷ್ಟು ಕಲೆಕ್ಷನ್?

'ಜೈಲರ್' ದಕ್ಷಿಣ ಭಾರತದ ಎಲ್ಲಾ ರಾಜ್ಯಗಳಲ್ಲಿ ಸೂಪರ್ ರೆಸ್ಪಾನ್ಸ್ ಸಿಕ್ಕಿದೆ. ರಜನಿ ಸಿನಿಮಾ ಬೇರೆ ರಾಜ್ಯಗಳಲ್ಲಿ ಈ ಮಟ್ಟಿಗೆ ಕಲೆಕ್ಷನ್ ಮಾಡದೆ ಬಹಳ ದಿನಗಳಾಗಿತ್ತು. ಈಗ ಸೂಪರ್‌ಸ್ಟಾರ್ ಮತ್ತೆ ಟ್ರ್ಯಾಕ್‌ಗೆ ಮರಳಿದ್ದು, ತಮಿಳುನಾಡು ಸೇರಿದಂತೆ ಆಂಧ್ರ, ತೆಲಂಗಾಣ, ಕೇರಳ ಕರ್ನಾಟಕದ ಒಟ್ಟು ಕಲೆಕ್ಷನ್ ಹೀಗಿದೆ.

ತಮಿಳುನಾಡು 23 ಕೋಟಿ
ಕರ್ನಾಟಕ 11 ಕೋಟಿ
ಆಂಧ್ರ ಪ್ರದೇಶ+ತೆಲಂಗಾಣ 10 ಕೋಟಿ
ಕೇರಳ 5 ಕೋಟಿ
ಒಟ್ಟು 49 ಕೋಟಿ

'ಜೈಲರ್‌'ಗೆ ಕಾಂಪಿಟೇಷನ್

ರಜನಿಯ 'ಜೈಲರ್' ಸಿನಿಮಾ ಇಂದಿನಿಂದ (ಆಗಸ್ಟ್ 11) ಕಾಂಪಿಟೇಷನ್ ಎದುರಾಗಲಿದೆ. ಇಂದು (ಆಗಸ್ಟ್ 11) ತೆಲುಗಿನಲ್ಲಿ ಮೆಗಾಸ್ಟಾರ್ ಚಿರಂಜೀವಿ ನಟನೆಯ 'ಭೋಳಾ ಶಂಕರ್' ರಿಲೀಸ್ ಆಗಿದೆ. ಹಾಗೇ ಉತ್ತರ ಭಾರತದಲ್ಲಿ ಅಂದರೆ, ಹಿಂದಿ ಬೆಲ್ಟ್‌ನಲ್ಲಿ ಅಕ್ಷಯ್ ಕುಮಾರ್ ನಟನೆಯ 'ಓ ಮೈ ಗಾಡ್ 2' ಹಾಗೂ ಸನ್ನಿ ಡಿಯೋ, ಅಮಿಷಾ ಪಟೇಲ್ ಸಿನಿಮಾ 'ಗದರ್ 2' ರಿಲೀಸ್ ಆಗುತ್ತಿದೆ. ಹೀಗಾಗಿ ಈ ಸಿನಿಮಾಗಳ ಮಧ್ಯೆ 'ಜೈಲರ್' ಪೈಪೋಟಿಗೆ ಇಳಿಯಬೇಕಿದೆ. ಆ ಬಳಿಕ ಕಲೆಕ್ಷನ್ ಹೇಗಿರುತ್ತೆ? ಅನ್ನೋದು ಸದ್ಯಕ್ಕೆ ಕುತೂಹಲ.

More from Filmibeat

English summary
Check out the Jailer Movie Box Office Collection on Day 1 in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X