Jailer Day 2 Collection: 2 ದಿನಗಳಲ್ಲೇ ₹100 ಕೋಟಿ ಬಾಚಿದ ರಜನಿ.. ಎಲ್ಲೆಲ್ಲಿ ಹೇಗಿದೆ ಬಾಕ್ಸಾಫೀಸ್‌ ರಿಪೋರ್ಟ್?

ಸೂಪರ್‌ಸ್ಟಾರ್ ಜಮಾನ ಮುಗೀತು ಅಂದಾಗಲೆಲ್ಲಾ ರಜನಿಕಾಂತ್ ಅಬ್ಬರಿಸಿದ್ದಾರೆ. ಇದಕ್ಕೆ ಉದಾಹರಣೆಗಳು ಸಾಕಷ್ಟು ಸಿಗುತ್ತಿದೆ. ಲೆಟೆಸ್ಟ್ ಅಂದರೆ, ಅದು 'ಜೈಲರ್' ಸಿನಿಮಾ. 72ನೇ ವಯಸ್ಸಿನಲ್ಲೂ ರಜನಿಯ ಮಾಸ್ ಅವತಾರಕ್ಕೆ ಪ್ರೇಕ್ಷಕರು ಥ್ರಿಲ್ ಆಗಿದ್ದಾರೆ.

ಒಂದಲ್ಲ ರಜನಿ ನಟಿಸಿದ ಎರಡು ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಸೋತಿದ್ದರು. ಬಾಕ್ಸಾಫೀಸ್‌ನಲ್ಲಿ ಮುಜುಗರಕ್ಕೀಡು ಮಾಡಿದ್ದವು. 'ದರ್ಬಾರ್', 'ಅಣ್ಣಾತ್ತೆ' ಸೋಲಿನ ಬಳಿಕ ಇನ್ನು ರಜನಿ ಆಟ ಮುಗೀತು ಅಂತ ಕಾಮಿಡಿ ಮಾಡಿದ್ದರು. ಅದಕ್ಕೆಲ್ಲ 'ಜೈಲರ್' ಉತ್ತರ ಕೊಟ್ಟಿದೆ.

Jailer Box Office Collection Day 2: Rajinikanth’s Jailer cross 100cr. in 2 days

ಇತ್ತ ನೆಲ್ಸನ್ ದಿಲೀಪ್ ಕುಮಾರ್ ಸಿನಿಮಾ 'ಬೀಸ್ಟ್' ಕೂಡ ಹೀನಾಯವಾಗಿ ಸೋತಿತ್ತು. ಇಬ್ಬರು ಸೋಲಿನ ಸರದಾರರು ತಿರುಗೇಟು ನೀಡಿದ ಸಿನಿಮಾವೇ 'ಜೈಲರ್'. ಎರಡನೇ ದಿನವೂ ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸುತ್ತಿದೆ.

2 ದಿನಕ್ಕೇ ₹100 ಕೋಟಿ ಬಾಚಿದ 'ಜೈಲರ್'

'ಜೈಲರ್' ಭಾರತದಲ್ಲಷ್ಟೇ ಅಲ್ಲ, ವಿಶ್ವದಾದ್ಯಂತ ರಿಲೀಸ್ ಆಗಿದೆ. ಸುಮಾರು 7 ಸಾವಿರ ಸ್ಕ್ರೀನ್‌ಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಿದೆ. ಅಮೆರಿಕ, ದುಬೈ, ಮಲೇಷ್ಯ, ಜಪಾನ್ ಸೇರಿದಂತೆ ಹಲವು ಭಾಗಗಳಲ್ಲಿ ಗ್ರ್ಯಾಂಡ್ ಆಗಿಯೇ ರಿಲೀಸ್ ಆಗಿದೆ. ಅಮೆರಿಕದಲ್ಲಿ ಸಿನಿಮಾ ಗ್ರ್ಯಾಂಡ್ ಓಪನಿಂಗ್ ಸಿಕ್ಕಿದೆ. ಮೊದಲನೇ ದಿನ ವಿಶ್ವದಾದ್ಯಂತ ₹72 ಕೋಟಿ ರೂ. ಕಲೆಕ್ಷನ್ ಆಗಿತ್ತು. ಅದೇ ಎರಡನೇ ದಿನದ ಅಂತ್ಯಕ್ಕೆ ಕಲೆಕ್ಷನ್ ₹100 ಕೋಟಿ ದಾಟಿದೆ ಟ್ರೇಡ್ ಎಕ್ಸ್‌ಪರ್ಟ್‌ಗಳು ಅಂದಾಜು ಮಾಡಿದ್ದಾರೆ. ಎರಡನೇ ದಿನ ಎಷ್ಟು ಕಲೆಕ್ಷನ್ ಆಗಿದೆ ಅನ್ನೋ ರಿಪೋರ್ಟ್ ಇನ್ನಷ್ಟೇ ಹೊರಬೀಳಬೇಕಿದೆ.

Jailer Box Office Collection Day 2: Rajinikanth’s Jailer cross 100cr. in 2 days

2ನೇ ದಿನ ಭಾರತದಲ್ಲಿ ಗಳಿಸಿದ್ದೆಷ್ಟು?

ರಜನಿಕಾಂತ್ ಮಾಸ್ ಲುಕ್.. ನೆಲ್ಸನ್ ದಿಲೀಪ್ ಕುಮಾರ್ ಡೈರೆಕ್ಷನ್, ಅನಿರುದ್ಧ್ ಹಿನ್ನೆಲೆ ಸಂಗೀತದ ಬಗ್ಗೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಆದರೂ, ಎರಡನೇ ದಿನ ಎಲ್ಲಾ ಸಿನಿಮಾಗಳಂತೆ ಕಲೆಕ್ಷನ್‌ನಲ್ಲಿ ಮಟ್ಟಿಗೆ ಡ್ರಾಪ್ ಆಗಿದೆ. ಟ್ರೇಡ್ ಎಕ್ಸ್‌ಪರ್ಟ್ ಪ್ರಕಾರ, ಎರಡನೇ ದಿನ ಕೇವಲ ಭಾರತದಲ್ಲಿ ₹27 ಕೋಟಿ ಕಲೆಕ್ಷನ್ ಆಗಿದೆ. ಈ ಮೂಲಕ ಕೇವಲ ಭಾರತದಲ್ಲಿ ಎಲ್ಲಾ ಭಾಷೆಗಳಿಂದ ₹72 ಕೋಟಿ ಕಲೆಕ್ಷನ್ ಆಗಿದೆ ಎನ್ನಲಾಗಿದೆ. ವಿದೇಶದಲ್ಲಿ ಆದ ಕಲೆಕ್ಷನ್ ಎಷ್ಟು ಅನ್ನೋದನ್ನು ಟ್ರೇಡ್ ಎಕ್ಸ್‌ಪರ್ಟ್ ಇನ್ನೂ ರಿವೀಲ್ ಮಾಡಿಲ್ಲ.

'ಜೈಲರ್‌'ಗೆ ದಿಗ್ಗಜರ ಸಿನಿಮಾಗಳ ಪೈಪೋಟಿ

ಸ್ವಾತಂತ್ರ್ಯ ದಿನೋತ್ಸವದ ಹಿನ್ನೆಲಯಲ್ಲಿ ದಿಗ್ಗಜರ ಸಿನಿಮಾಗಳು ಥಿಯೇಟರ್‌ಗೆ ಲಗ್ಗೆ ಇಟ್ಟಿವೆ. 'ಜೈಲರ್' ಸಿನಿಮಾಗೆ ಪೈಪೋಟಿ ಕೊಡುವುದಕ್ಕೆ ಹಿಂದಿಯಲ್ಲಿ ಸನ್ನಿ ಡಿಯೋಲ್, ಅಮಿಶಾ ಪಟೇಲ್ ನಟನೆಯ 'ಗದರ್ 2', ಅಕ್ಷಯ್ ಕುಮಾರ್ ನಟನೆಯ 'ಓಮೈಜಿ 2' ಸಿನಿಮಾಗಳು ರಿಲೀಸ್ ಆಗಿವೆ. ಹಾಗೇ ಮೆಗಾಸ್ಟಾರ್ ಚಿರಂಜೀವಿ ನಟನೆಯ 'ಭೋಳಾ ಶಂಕರ್' ಬಿಡುಗಡೆಯಾಗಿ ಮುನ್ನುಗ್ಗುತ್ತಿದೆ. ಹೀಗಾಗಿ 2ನೇ ದಿನ ಕಲೆಕ್ಷನ್ ಡ್ರಾಪ್ ಆಗಿದೆ.

ಇನ್ನೂ 4 ದಿನ ಜೈಲರ್‌ಗೆ ಬಂಪರ್

ಜೈಲರ್ ಸಿನಿಮಾಗೆ ಎರಡು ವೀಕೆಂಡ್ ಜೊತೆ ಎರಡು ರಜಾ ದಿನಗಳು ಸಿಗುತ್ತವೆ. ಸಿನಿಮಾಗೆ ಪಾಸಿಟಿವ್ ಟಾಕ್ ಇರೋದ್ರಿಂದ 'ಜೈಲರ್' ಮುಂದಿನ ನಾಲ್ಕು ದಿನ ಬಾಕ್ಸಾಫೀಸ್‌ ದೋಚುವ ಸಾಧ್ಯತೆಯಿದೆ. ಈ ನಾಲ್ಕು ದಿನಗಳಲ್ಲಿ ಹೀಗೆ ಕಲೆಕ್ಷನ್ ಆದರೆ, ಆರಾಮಾಗಿ ರಜನಿಕಾಂತ್ ಸಿನಿಮಾ ₹200 ಕೋಟಿ ಕ್ಲಬ್ ಸೇರಲಿದೆ. ಶಿವಣ್ಣ ಮಾಸ್ ಎಂಟ್ರಿಗೆ ತಮಿಳು ಪ್ರೇಕ್ಷಕರೇ ಫಿದಾ ಆಗಿದ್ದಾರೆ. ಇವರೊಂದಿಗೆ ಮೋಹನ್‌ಲಾಲ್, ಶಾಕಿ ಶ್ರಾಫ್, ಸುನಿಲ್ ಕೂಡ ಜನರನ್ನು ಥಿಯೇಟರ್‌ಗೆ ಎಳೆಯುತ್ತಿದ್ದಾರೆ.

More from Filmibeat

English summary
Check out the Jailer Movie Box Office worldwide Collection on Day 2 in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X