Rajini-Yogi: ಯೋಗಿ ಕಾಲಿಗೆ ರಜನಿ ಬಿದ್ದ ಬಳಿಕ 'ಜೈಲರ್' ಕಲೆಕ್ಷನ್ ಕುಸಿತ.. 12ನೇ ದಿನ ಬಾಕ್ಸಾಫೀಸ್ ಡಲ್?
ಸೂಪರ್‌ಸ್ಟಾರ್ ರಜನಿಕಾಂತ್ 'ಜೈಲರ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ದರ್ಬಾರ್ ಮಾಡಿತ್ತು. ಸತತ ಎರಡು ಸೋಲುಗಳಿಂದ ಕಂಗೆಟ್ಟಿದ್ದ ತಲೈವಾಗೆ 'ಜೈಲರ್' ಸೂಪರ್ ಸಕ್ಸಸ್ ಕೊಟ್ಟಿದೆ. ಇದೇ ಖುಷಿಯಲ್ಲಿ ರಜನಿಕಾಂತ್ ಉತ್ತರ ಭಾರತದ ಪ್ರವಾಸದಲ್ಲಿದ್ದಾರೆ.
'ಜೈಲರ್' ಸಿನಿಮಾ ರಿಲೀಸ್‌ಗೂ ಮುನ್ನ ರಜನಿಕಾಂತ್ ಹಿಮಾಲಯಕ್ಕೆ ಹೋಗಿದ್ದರು. ಅಲ್ಲಿ ತಮ್ಮ ಗುರುಗಳನ್ನು ಭೇಟಿ ಮಾಡಿ, ಒಂದಿಷ್ಟು ದಿನ ಧ್ಯಾನ ಮಾಡಿದ್ದರು. ಬಳಿಕ ಉತ್ತರ ಭಾರತದ ಪ್ರವಾಸ ಮಾಡಿದ್ದರು. ಅದರಲ್ಲೂ ಉತ್ತರ ಪ್ರದೇಶ ಹಾಗೂ ಜಾರ್ಖಂಡ್‌ನ ಪ್ರಮುಖ ದೇವಸ್ಥಾನಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದರು.

ಇದೇ ವೇಳೆ ಉತ್ತರ ಪ್ರದೇಶದ ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ್ ಭೇಟಿ ಮಾಡಿದ್ದರು. ಆ ಸಂದರ್ಭದಲ್ಲಿ ರಜನಿ ಯುಪಿ ಸಿಎಂ ಯೋಗಿ ಕಾಲು ಮುಟ್ಟಿ ನಮಸ್ಕರಿಸಿದ್ದರು. ಆ ಬಳಿಕ ರಜನಿಕಾಂತ್ ಟ್ರೋಲ್ ಹೆವೀ ಆಗಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಹಲವರು ರಜನಿ ನಡೆಯನ್ನು ವಿರೋಧಿಸಿದ್ದರು. ತಮಿಳುನಾಡಿನಲ್ಲೂ ವಿರೋಧ ವ್ಯಕ್ತವಾಗಿತ್ತು. ಇಲ್ಲಿಂದ ರಜನಿಕಾಂತ್ 'ಜೈಲರ್' ಸಿನಿಮಾದ ಕಲೆಕ್ಷನ್ ಬೀಳುವುದಕ್ಕೆ ಆರಂಭ ಆಗಿದೆ. ಅಷ್ಟಕ್ಕೂ ಎರಡನೇ ಸೋಮವಾರದ ಕಲೆಕ್ಷನ್ ಎಷ್ಟು? ಗಳಿಕೆ ಯಾವ ಮಟ್ಟದಲ್ಲಿ ಕುಸಿದಿದೆ? ತಿಳಿಯಲು ಮುಂದೆ ಓದಿ.
ಯೋಗಿ ಕಾಲಿಗೆ ಬಿದ್ದ ಬಳಿಕ ರಜನಿ ಸ್ಪಷ್ಟನೆ
ಸೂಪರ್‌ಸ್ಟಾರ್ ರಜನಿಕಾಂತ್ ಉತ್ತರ ಭಾರತ ಪ್ರವಾಸ ಮುಗಿಸಿ ಚೆನ್ನೈಗೆ ಮರಳಿದ್ದಾರೆ. ಈ ವೇಳೆ ರಜನಿಕಾಂತ್ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಕಾಲು ಮುಟ್ಟಿ ಆಶೀರ್ವಾದ ಪಡೆದಿದ್ದು ಯಾಕೆ? ಅನ್ನೋದಕ್ಕೆ ಸ್ಪಷ್ಟನೆ ನೀಡಿದ್ದಾರೆ. ಯೋಗಿ ಆದಿತ್ಯನಾಥ್‌ಗಿಂತ ರಜನಿಕಾಂತ್ 21 ವರ್ಷ ಹಿರಿಯರು ಹೀಗಿದ್ದೂ ಕಾಲಿಗೆ ಬೀಳುವ ಅಗತ್ಯವಿತ್ತೇ ಎಂದು ನೆಟ್ಟಿಗರು ಕಿಡಿಕಾರಿದ್ದರು. ಅದಕ್ಕೆ ರಜನಿ ಚೆನ್ನೈನಲ್ಲಿ ಉತ್ತರ ಕೊಟ್ಟಿದ್ದಾರೆ. "ಒಬ್ಬ ಸನ್ಯಾಸಿ ಅಥವಾ ಯೋಗಿ, ವಯಸ್ಸಿನಲ್ಲಿ ನನಗಿಂತ ಚಿಕ್ಕವರು ಆಗಿದ್ದರೂ, ಅವರ ಪಾದಕ್ಕೆ ಬಿದ್ದಿ ಆಶೀರ್ವಾದ ಪಡೆಯುವುದು ನನ್ನ ಅಭ್ಯಾಸ. ನಾನು ಅದನ್ನೇ ಮಾಡಿದ್ದೇನೆ" ಎಂದು ರಜನಿ ಕ್ಲಾರಿಟಿ ಕೊಟ್ಟಿದ್ದರು.

'ಜೈಲರ್' ಬಾಕ್ಸಾಫೀಸ್‌ನಲ್ಲಿ ಕುಸಿತ
ಯೋಗಿ ಆದಿತ್ಯನಾಥ್ ಕಾಲಿಗೆ ಬಿದ್ದಿದ್ದು ಯಾಕೆ ಅನ್ನೋದಕ್ಕೆ ಸೂಪರ್‌ಸ್ಟಾರ್ ರಜನಿಕಾಂತ್ ಸ್ಪಷ್ಟನೆ ನೀಡಿದ್ದರೂ ಜನರು ಸಮಾಧಾನಗೊಂಡಂತೆ ಕಂಡಿಲ್ಲ. ಎರಡನೇ ಸೋಮವಾರ ಅಂದರೆ, ನಿನ್ನೆಯಿಂದ (ಆಗಸ್ಟ್ 21) 'ಜೈಲರ್' ಕಲೆಕ್ಷನ್‌ನಲ್ಲಿ ಇಳಿಕೆಯಾಗುತ್ತಿದೆ. ಇದೂವರೆಗೂ 'ಜೈಲರ್' ಕಲೆಕ್ಷನ್ ಸಿಂಗಲ್ ಡಿಜಿಟ್‌ಗೆ ಇಳಿದೇ ಇರಲಿಲ್ಲ. ಆದರೆ, 12ನೇ ದಿನವಾದ ನಿನ್ನೆ ಸಿನಿಮಾ ಗಳಿಸಿದ್ದು ಬರೀ 6.1 ಕೋಟಿ ರೂ. ಎಂದು ಟ್ರೇಡ್ ಎಕ್ಸ್‌ಪರ್ಟ್ ವರದಿ ನೀಡಿದ್ದಾರೆ. ಭಾನುವಾರ (ಆಗಸ್ಟ್ 20) ಸುಮಾರು 19.2 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಇದಕ್ಕೆ ಹೋಲಿಕೆ ಮಾಡಿದ್ರೆ, ಸೋಮವಾರ ಶೇ.70ರಷ್ಟು ಇಳಿಕೆ ಕಂಡಿದೆ.
ತಮಿಳುನಾಡಿನಲ್ಲಿ ತೀವ್ರ ವಿರೋಧ
ರಜನಿಕಾಂತ್ ಯುಪಿ ಸಿಎಂ ಆದಿತ್ಯ ಯೋಗಿನಾಥ್ ಕಾಲಿಗೆ ಬೀಳುತ್ತಿದ್ದಂತೆ ತಮಿಳುನಾಡಿನಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ರಜನಿ ನಡೆಯನ್ನು ತಮಿಳಿಗರು ವಿರೋಧಿಸಿದ್ದರು. ಹೀಗಾಗಿ ಇಲ್ಲಿ ಮೇಜರ್ ಡ್ರಾಫ್ ಆಗಿದೆ. ಭಾನುವಾರ (ಆಗಸ್ಟ್ 20) ಕೇವಲ ತಮಿಳುನಾಡಿನಲ್ಲಿ 14 ಕೋಟಿ ರೂ. ಕಲೆಕ್ಷನ್ ಆಗಿತ್ತು. ಅದೇ ಸೋಮವಾರ (ಆಗಸ್ಟ್ 21) ಕೇವಲ 3.95 ಕೋಟಿ ರೂ. ಕಲೆಕ್ಷನ್ ಮಾಡಿದೆ. ತಮಿಳುನಾಡಿನಲ್ಲೇ ಬಾಕ್ಸಾಫೀಸ್ ಮೇಜರ್ ಡ್ರಾಪ್ ಕಂಡಿದೆ.
500 ಕೋಟಿ ದಾಟಿದ ಜೈಲರ್ ಕಲೆಕ್ಷನ್
'ಜೈಲರ್' ಬಾಕ್ಸಾಫೀಸ್ ಕಲೆಕ್ಷನ್ ಬಗ್ಗೆ ಏಕರೂಪದ ವರದಿ ಇಲ್ಲದೆ ಹೋದರೂ, 500 ಕೋಟಿ ರೂ. ಕಲೆಕ್ಷನ್ ಮಾಡಿದ್ದನ್ನು ಟ್ರೇಡ್ ಎಕ್ಸ್‌ಪರ್ಟ್ಸ್ ವರದಿ ಮಾಡಿದ್ದಾರೆ. ಮನೋಬಾಲ ವಿಜಯಬಾಲನ್ 'ಜೈಲರ್' ಕಲೆಕ್ಷನ್ 550 ಕೋಟಿ ರೂ. ಎಂದು ಲೆಕ್ಕ ಕೊಟ್ಟಿದ್ದರೆ, ಇನ್ನೊಂದು ಕಡೆ Sacnilk 507 ಕೋಟಿ ರೂ. ಎಂದು ವರದಿ ಮಾಡಿದೆ. ಇನ್ನು ಎರಡನೇ ಸೋಮವಾರ ಸಹಜವಾಗಿ ಗಳಿಕೆಯಲ್ಲಿ ಡ್ರಾಪ್ ಆಗುತ್ತೆ. ಆದರೆ, ಜೈಲರ್ ವಿಚಾರದಲ್ಲಿ ಸ್ವಲ್ಪ ದೊಡ್ಡ ಮಟ್ಟಕ್ಕೆ ಆಗಿದೆ.


Click it and Unblock the Notifications











