ಮಲೇಷ್ಯಾದಲ್ಲಿ 80 ಸಾವಿರ ಮಂದಿಯ ಮಧ್ಯೆ "ನಾಯಕ 2026 ನಮ್ಮದೇ" ಎಂದು ಅಭಿಮಾನಿ; ಜನ ನಾಯಕ ಆಗೋದು ಪಕ್ಕನಾ?
ದಳಪತಿ ವಿಜಯ್ ಕೊನೆಯ ಸಿನಿಮಾ ಅದ್ದೂರಿಯಾಗಿ ಬಿಡುಗಡೆಯಾಗುವುದಕ್ಕೆ ವೇದಿಕೆ ಸಜ್ಜಾಗುತ್ತಿದೆ. ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದ ಈ ಅದ್ಧೂರಿ ವೆಚ್ಚದ ಸಿನಿಮಾ 'ಜನ ನಾಯಗನ್' ಜನವರಿಯ ಪೊಂಗಲ್‌ಗೆ ರಿಲೀಸ್ ಆಗಲಿದೆ. ಈ ಸಿನಿಮಾ ರಿಲೀಸ್ ಮೂಲಕ ವಿಜಯ್ ಅಧಿಕೃತವಾಗಿ ನಟನೆಗೆ ತೆರೆ ಎಳೆಯಲಿದ್ದಾರೆ. ಇದು ಒಂದು ಅಭಿಮಾನಿಗಳಿಗೆ ನೋವಿನ ಸಂಗತಿಯಾಗಿದ್ದರೂ, ಹೊಸ ಹೆಜ್ಜೆ ಇಟ್ಟಿರುವ ವಿಜಯ್‌ರನ್ನು ಮುಂದಿನ ಸಿಎಂ ಆಗಿ ನೋಡುವ ಬಯಕೆ ಪಟ್ಟಿದ್ದಾರೆ.
ಹೀಗಾಗಿ 'ಜನ ನಾಯಗ್' ವಿಜಯ್ ರಾಜಕೀಯ ಎಂಟ್ರಿ ಪ್ರತ್ಯಕ್ಷವಾಗಿಯೋ..? ಪರೋಕ್ಷವಾಗಿಯೋ ಅಡಿಪಾಯ ಹಾಕುತ್ತಿದೆ. 2026 ದಳಪತಿ ವಿಜಯ್ ಪಾಲಿಗೆ ಮರೆಯಲಾಗದ ವರ್ಷ ಆಗಲಿದೆ. ಒಂದ್ಕಡೆ ಸಿನಿಮಾ ರಂಗಕ್ಕೆ ಗುಡ್ ಬೈ ಹೇಳುತ್ತಿದ್ದರೆ, ಇನ್ನೊಂದು ಕಡೆ ರಾಜಕೀಯ ಕ್ಷೇತ್ರಕ್ಕೆ ಎಂಟ್ರಿಯಾಗುತ್ತಿದೆ. ಈ ಎರಡೂ ಘಟನೆಗಳಿಗೆ ವಿಜಯ್ ಸಾಕ್ಷಿಯಾಗಲಿದ್ದಾರೆ.

'ಜನ ನಾಯಗನ್' ಕೊನೆಯ ಸಿನಿಮಾ ಆಗಿದ್ದರಿಂದ ಮಲೇಷ್ಯಾ ಬೃಹತ್ ಆಡಿಯೋ ರಿಲೀಸ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ವೇಳೆ ವಿಜಯ್ ನೋಡವುದಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಅಭಿಮಾನಿಗಳ ಸೇರಿದ್ದರು. ಈ ವೇಳೆ ಅಭಿಮಾನಿಯೊಬ್ಬ ಕೂಗಿದ ಘೋಷಣೆಗೆ ಸ್ವತ: ದಳಪತಿ ವಿಜಯ್ ಕ್ಲೀನ್ ಬೌಲ್ಡ್ ಆಗಿದ್ದಾರೆ. ಅಷ್ಟಕ್ಕೂ ವಿಜಯ್ ಫ್ಯಾನ್ ಹೇಳಿದ್ದೇನು? ಅದಕ್ಕೆ ನಟ ಖುಷಿಯಾಗಿ ಕೈ ಕುಲುಕಿದ್ದೇಕೆ? ತಿಳಿಯುವುದಕ್ಕೆ ಮುಂದೆ ಓದಿ.
ಮಲೇಷ್ಯಾದಲ್ಲಿ 'ಜನ ನಾಯಗನ್' ಆಡಿಯೋ ರಿಲೀಸ್ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದೆ. ಈ ಕಾರ್ಯಕ್ರಮದಲ್ಲಿ ನಟ ವಿಜಯ್ ಅಭಿಮಾನಿಯೊಬ್ಬ ಆವೇಶಭರಿತನಾಗಿ ಕೂಗಿದ ಮಾತು ಹಾಗೂ ಅದಕ್ಕೆ ವಿಜಯ್ ವ್ಯಕ್ತಪಡಿಸಿದ ಪ್ರತಿಕ್ರಿಯೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವಿಜಯ್ ಹಾಗೂ ಅಭಿಮಾನಿಯ ನಡುವಿನ ಈ ಸನ್ನಿವೇಶ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಮಲೇಷ್ಯಾದಲ್ಲಿ 'ಜನ ನಾಯಗನ್' ಆಡಿಯೋ ರಿಲೀಸ್ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದೆ. ಈ ಕಾರ್ಯಕ್ರಮದಲ್ಲಿ ನಟ ವಿಜಯ್ ಅಭಿಮಾನಿಯೊಬ್ಬ ಆವೇಶಭರಿತನಾಗಿ ಕೂಗಿದ ಮಾತು ಹಾಗೂ ಅದಕ್ಕೆ ವಿಜಯ್ ವ್ಯಕ್ತಪಡಿಸಿದ ಪ್ರತಿಕ್ರಿಯೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವಿಜಯ್ ಹಾಗೂ ಅಭಿಮಾನಿಯ ನಡುವಿನ ಈ ಸನ್ನಿವೇಶ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ದಳಪತಿ ವಿಜಯ್ ತಮ್ಮ 'ತಮಿಳಿಗ ವೆಟ್ರಿ ಕಳಗಂ' ಪಕ್ಷದ ಘೋಷಣೆಯಾದ ಬಳಿಕ ಹಲವು ಸಮಾವೇಶಗಳನ್ನು ಮಾಡುತ್ತಲೇ ಇದ್ದಾರೆ. ಈಗಾಗಲೇ ರಾಜಕೀಯಕ್ಕೆ ಅಧಿಕೃತವಾಗಿ ಎಂಟ್ರಿ ಕೊಟ್ಟಿರುವ ವಿಜಯ್‌ಗೆ 'ಜನ ನಾಯಗನ್' ಸಾಥ್ ಕೊಡುತ್ತಿದೆ. ತಮಿಳುನಾಡಿನಲ್ಲಿ ಆಡಳಿತ ಪಕ್ಷ ಡಿಎಂಕೆ ವಿಜಯ್ ನಟಿಸಿದ ಸಿನಿಮಾದ ಯಾವುದೇ ಕಾರ್ಯಕ್ರಮ ನಡೆಸುವುದಕ್ಕೆ ಅವಕಾಶ ನೀಡುತ್ತಿಲ್ಲವೆಂಬ ಆರೋಪ ಕೂಡ ಇದೆ. ಈ ಕಾರಣಕ್ಕೆ ವಿಜಯ್ 'ಜನ ನಾಯಗನ್' ಸಿನಿಮಾದ ಆಡಿಯೋ ಬಿಡುಗಡೆಯನ್ನು ಮಲೇಷ್ಯಾದಲ್ಲಿ ನಿಗದಿ ಪಡಿಸಿದ್ದರು. ಅದಕ್ಕೆ ಅಭೂತಪೂರ್ವ ಯಶಸ್ಸು ಸಿಕ್ಕಿದೆ.

'ಜನ ನಾಯಗನ್' ಆಡಿಯೋ ರಿಲೀಸ್ ಕಾರ್ಯಕ್ರಮ ತಮಿಳು ಚಿತ್ರರಂಗದ ಇತಿಹಾಸದಲ್ಲೇ ಅತೀ ದೊಡ್ಡ ಕಾರ್ಯಕ್ರಮ ಎನಿಸಿದೆ. ಮಲೇಷ್ಯಾದಲ್ಲಿ ಸುಮಾರು 80,000 ಅಭಿಮಾನಿಗಳು ಈ ಮೆಗಾ ಇವೆಂಟ್‌ಗೆ ಸಾಕ್ಷಿಯಾಗಿದ್ದರು. ವಿಜಯ್ ವೇದಿಕೆಗೆ ಕಾಲಿಟ್ಟಾಗ ಫ್ಯಾನ್ಸ್ ಕಿಕ್ಕಿರಿದು ಕೇಕೆ ಹಾಕಿದ್ದರು. ನಿರ್ಮಾಪಕ ಕೆವಿಎನ್, ಸಂಗೀತ ನಿರ್ದೇಶಕ ಅನಿರುದ್ಧ್ ಹಾಗೂ ಪೂಜಾ ಹೆಗ್ಡೆ ವೇದಿಕೆ ಮೇಲೆ ಕಾಣಿಸಿಕೊಂಡಿದ್ದಾರೆ.
ಈ ವೇಳೆ ವೇದಿಕೆ ಮೇಲಿದ್ದ ವಿಜಯ್ ನೋಡಿ ಅಭಿಮಾನಿಯೊಬ್ಬ "ನಾಯಕ.. 2026 ನಮ್ಮದೇ" ಎಂದು ಕೂಗಿದ್ದ. ಇದನ್ನು ಗಮನಿಸಿದ ವಿಜಯ್ ಆ ಅಭಿಮಾನಿಯನ್ನು ನೋಡಿ ಗೆಲುವಿನ ಚಿಹ್ನೆ ತೋರಿಸಿ ಪ್ರತಿಕ್ರಿಯಿಸಿದ್ದಾರೆ. ಕೂಡಲೇ ತಾವು ಕೂತಿದ್ದ ಆಸನದಿಂದ ಎದ್ದು ಬಂದು ಆ ಅಭಿಮಾನಿಯ ಕೈ ಕುಲುಕಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ವಿಜಯ್ 'ತಮಿಳಗ ವೆಟ್ರಿ ಕಳಗಂ' ಪಕ್ಷ ಸ್ಥಾಪಿಸಿ, ಅವರು ಪೂರ್ಣ ಪ್ರಮಾಣದಲ್ಲಿ ರಾಜಕೀಯಕ್ಕೆ ಧುಮುಕಿದ್ದಾರೆ. 2026ರ ಚುನಾವಣೆಯಲ್ಲಿ ಡಿಎಂಕೆ ವಿರುದ್ಧ ನೇರ ಹಣಾಹಣಿ ನಡೆಸಿ ತಮಿಳುನಾಡಿನ ಮುಖ್ಯಮಂತ್ರಿಯಾಗುವ ದೃಢ ವಿಶ್ವಾಸವನ್ನು ವಿಜಯ್ ವ್ಯಕ್ತಪಡಿಸಿದ್ದಾರೆ.


Click it and Unblock the Notifications











