ಶುರುವಾಗೇ ಬಿಡ್ತು ಫ್ಯಾನ್ಸ್ ವಾರ್; ಶಿವಕಾರ್ತಿಕೇಯನ್ 'ಪರಾಶಕ್ತಿ' ಪೋಸ್ಟರ್ ಹರಿದು ಹಾಕಿದ ವಿಜಯ್ ಫ್ಯಾನ್ಸ್

ಭಾರತದಲ್ಲಿ ಸಿನಿಮಾ ಸ್ಟಾರ್‌ಗಳಿಗೆ ಇರುವ ಕ್ರೇಜ್ ಮತ್ಯಾರಿಗೂ ಇಲ್ಲ. ಅಭಿಮಾನಿಗಳು ತಮ್ಮ ನೆಚ್ಚಿನ ತಾರೆಯರಿಗಾಗಿ ಜೀವವನ್ನು ಬೇಕಾದೂ ಕೊಡುತ್ತಾರೆ. ಅವರನ್ನು ದೇವರಂತೆ ಪೂಜೆ ಮಾಡುತ್ತಾರೆ. ತಮ್ಮ ನೆಚ್ಚಿನ ನಟನ ಯಶಸ್ಸಿನಲ್ಲಿ, ಸೋಲಿನಲ್ಲಿ ಸದಾ ಇರುತ್ತಾರೆ. ಅದರಲ್ಲೂ ತಮಿಳು ನಾಡಿನಲ್ಲಿ ಸಿನಿಮಾ ತಾರೆಯರನ್ನು ತಲೆ ಮೇಲೆ ಹೊತ್ತಿಕೊಂಡು ಪೂಜಿಸುತ್ತಾರೆ. ಹಾಗೇ ಅಭಿಮಾನಿಗಳ ನಡುವೆ ಯುದ್ಧ ಕೂಡ ಹಾಗೆ ನಡೆಯುತ್ತೆ.

ತಮಿಳುನಾಡಿನಲ್ಲಿ ಅಭಿಮಾನಿ ಕಾದಾಟಗಳು ದುರಂತದವರೆಗೂ ತಲುಪಿದ ಉದಾಹರಣೆಗಳು ಇವೆ. ಇಲ್ಲಿ ಸೂಪರ್‌ಸ್ಟಾರ್‌ಗಳ ಅಭಿಮಾನಿಗಳು ಹತ್ತ ಹಲವು ವಿಷಯಗಳಿಗೆ ಕಾದಾಡುತ್ತಾರೆ. ಅದರಲ್ಲೂ ಬಾಕ್ಸಾಫೀಸ್ ದಾಖಲೆಗಳ ಬಗ್ಗೆ ಸೋಶಿಯಲ್ ಮೀಡಿಯಾಗಳಲ್ಲಿ ವಾಗ್ಯುದ್ದ ನಡೆಯುತ್ತಲೇ ಇರುತ್ತದೆ. ಅದರಲ್ಲೂ ಇಬ್ಬರು ಸ್ಟಾರ್ ನಟರ ಸಿನಿಮಾಗಳು ಒಂದೇ ಸಮಯದಲ್ಲಿ ರಿಲೀಸ್ ಆದರೆ, ಮುಗಿದೇ ಹೋಯ್ತು. ಸ್ಟಾರ್ ಅಭಿಮಾನಿಗಳ ಕಾದಾಟ ಬೇರೆ ಲೆವೆಲ್‌ನಲ್ಲಿ ಇರುತ್ತೆ.

Jana Nayagan Thalapathy Vijay fans tear down the Sivakarthikeyan Parasakthi Poster in tamil nadu

ಸದ್ಯಕ್ಕೀಗ ದಳಪತಿ ವಿಜಯ್ ಹಾಗೂ ಶಿವಕಾರ್ತಿಕೇಯನ್ ಅಭಿಮಾನಿಗಳ ನಡುವೆ ಕಾದಾಟ ಶುರುವಾಗಿದೆ. ಈ ಮೂಲಕ ದಳಪತಿ ವಿಜಯ್‌ಗೆ ಇದೀಗ ಮತ್ತೊಂದು ಸವಾಲು ಎದುರಾಗಿದೆ. 2026ರಸ ಸಂಕ್ರಾಂತಿಗೆ ಕಾಲಿವುಡ್‌ನ ಇಬ್ಬರು ಸ್ಟಾರ್ ಹೀರೋಗಳ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಸೂಪರ್‌ಸ್ಟಾರ್ ದಳಪತಿ ವಿಜಯ್ ನಟಿಸಿರುವ 'ಜನ ನಾಯಗನ್' ಜನವರಿ 9 ರಂದು ವಿಶ್ವಾದ್ಯಂತ ಬಿಡುಗಡೆಯಾಗುತ್ತಿದೆ. ಮಲೇಷ್ಯಾದಲ್ಲಿ ನಡೆದ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ವಿಜಯ್ ಖುದ್ದಾಗಿ "ಇದು ತನ್ನ ಸಿನಿ ಬದುಕಿನ ಕೊನೆಯ ಚಿತ್ರ" ಎಂದು ಘೋಷಿಸಿದ್ದು, 'ಜನ ನಾಯಗನ್' ಸಿನಿಮಾ ಬಗ್ಗೆ ನಿರೀಕ್ಷೆಗಳು ಗರಿಗೆದರಿವೆ.

ದಳಪತಿ ವಿಜಯ್ ಟಿವಿಕೆ(ತಮಿಳುನಾಡು ವೆಟ್ರಿ ಕಳಗಂ) ಪಕ್ಷ ಕಟ್ಟಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹೀಗಾಗಿ 'ಜನ ನಾಯಗನ್' ಕೊನೆಯ ಸಿನಿಮಾ ಆಗಿದ್ದರಿಂದ ತಮ್ಮ ಫೇವರಿಟ್ ನಟನಿಗೆ ಅದ್ಧೂರಿ ಬೀಳ್ಕೊಡುಗೆ ನೀಡಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಹೀಗಾಗಿ ಈಗಾಗಲೇ ಎಲ್ಲಾ ಕಡೆ ಕಟೌಟ್‌ಗಳು, ಪೋಸ್ಟರ್‌ಗಳು ಮತ್ತು ಬ್ಯಾನರ್‌ಗಳನ್ನು ಹಾಕಲಾಗುತ್ತಿದೆ. ಇದರ ಜೊತೆಗೆ 'ಜನ ನಾಯಗನ್' ರಿಲೀಸ್ ಆದ ನಾಲ್ಕು ದಿನಗಳ ಬಳಿಕ ತಮಿಳಿನ ಮತ್ತೊಬ್ಬ ಯುವ ನಟ ಶಿವಕಾರ್ತಿಕೇಯನ್ ಸಿನಿಮಾ 'ಪರಾಶಕ್ತಿ' ಕೂಡ ರಿಲೀಸ್ ಆಗುತ್ತಿದೆ.

Jana Nayagan Thalapathy Vijay fans tear down the Sivakarthikeyan Parasakthi Poster in tamil nadu

'ಜನ ನಾಯಗನ್' ಅಂತೆಯೇ ಶಿವಕಾರ್ತಿಕೇಯನ್ ಸಿನಿಮಾ 'ಪರಾಶಕ್ತಿ' ನೈಜ ಘಟನೆಗಳನ್ನು ಆಧರಿಸಿದೆ. ಹೀಗಾಗಿ ಈ ಸಿನಿಮಾ ಬಗ್ಗೆಯೂ ಸಾಕಷ್ಟು ನಿರೀಕ್ಷೆಗಳಿವೆ.
ಎರಡು ಬಿಗ್ ಸಿನಿಮಾಗಳು ಒಂದೇ ಸಮಯದಲ್ಲಿ ಅಖಾಡಕ್ಕೆ ಇಳಿದಿರುವುದು ಮತ್ತೆ ಬಾಕ್ಸ್ ಆಫೀಸ್‌ನಲ್ಲಿ ಬಿಗ್ ಫೈಟ್ ನಡೆಯುವ ಸಾಧ್ಯತೆಯಿದೆ. ಇದೇ ವೇಳೆ ಸೋಶೀಯಲ್ ಮೀಡಿಯಾದಲ್ಲಿ ವಿಜಯ್ ಹಾಗೂ ಶಿವಕಾರ್ತಿಕೇಯನ್ ಅಭಿಮಾನಿಗಳು ತಮ್ಮ ನೆಚ್ಚಿನ ಹೀರೋ ಸಿನಿಮಾ ಬರೆಯುವ ದಾಖಲೆಗಳ ಬಗ್ಗೆ ಕಮೆಂಟ್ ಮಾಡುತ್ತಿದ್ದು, ಅದಕ್ಕೆ ತಿಕ್ಕಾಟ ಶುರುವಾಗಿದೆ.

ಜನವರಿ 3ರಂದು 'ಜನ ನಾಯಗನ್' ಟ್ರೈಲರ್ ರಿಲೀಸ್ ಆಗಿತ್ತು. ಮಲೇಷ್ಯಾದಲ್ಲಿ ಟ್ರೈಲರ್ ರಿಲೀಸ್ ಆದರೂ, ಜನರು ಸಹಸ್ರಾರು ಸಂಖ್ಯೆಯಲ್ಲಿ ಸೇರಿ ಅಚ್ಚರಿ ಮೂಡಿಸಿದ್ದರು. ಇನ್ನೊಂದು ಕಡೆ 'ಮಧುರೈ'ನಲ್ಲಿ ಶಿವಕಾರ್ತಿಕೇಯನ್ 'ಪರಾಶಕ್ತಿ' ಸಿನಿಮಾದ ಕಾರ್ಯಕ್ರಮವಿತ್ತು. ಅಲ್ಲಿ ಶಿವಕಾರ್ತಿಕೇನ್ ಸಿನಿಮಾದ ಪೋಸ್ಟರ್‌ಗಳು ಹಾಗೂ ಬ್ಯಾನರ್‌ಗಳು ಕಾಣಿಸಿಕೊಂಡವು. ಇದನ್ನು ನೋಡಿ ರೊಚ್ಚಿಗೆದ್ದ ವಿಜಯ್ ಫ್ಯಾನ್ಸ್ ಪೋಸ್ಟರ್ ಹಾಗೂ ಬ್ಯಾನರ್‌ಗಳನ್ನು ಹರಿದು ಹಾಕಿದ್ದಾರೆ. ಈ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

More from Filmibeat

English summary
Jana Nayagan Thalapathy Vijay fans tear down the Sivakarthikeyan Parasakthi Poster in tamil nadu.
Read more about: vijay tamil movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X