ಗೋವಾದಲ್ಲಿ ಗಾಯಕಿ ಜೊತೆ ಇದ್ದರೇ ಜಯಂ ರವಿ? ನಟ ವಿಚ್ಛೇದನಕ್ಕೆ ಕೆನಿಶಾ ಫ್ರಾನ್ಸಿಸ್ ಕಾರಣನಾ?

ತಮಿಳಿನ 'ಪೊನ್ನಿಯಿನ್ ಸೆಲ್ವನ್' ಸಿನಿಮಾ ಮೂಲಕ ಮತ್ತೆ ಗೆಲುವು ಕಂಡ ನಟ ಜಯಂ ರವಿ. ಹಳಿ ತಪ್ಪಿದ್ದ ಈ ನಟನ ವೃತ್ತಿ ಬದುಕು ಈಗ ಮತ್ತೆ ಟ್ರ್ಯಾಕ್‌ಗೆ ಬಂದಿದೆ. ಆದರೆ, ವೈಯಕ್ತಿಕ ಬದುಕು ಮಾತ್ರ ಬೀದಿಗೆ ಬಂದಿದೆ. ಇತ್ತೀಚೆಗೆ ಜಯಂ ರವಿ ಏಕಾಏಕಿ ತಮ್ಮ ಪತ್ನಿಯೊಂದಿಗೆ ಬೇರೆಯಾಗುತ್ತಿರುವುದಾಗಿ ಘೋಷಣೆ ಮಾಡಿದ್ದರು.

ತಮಿಳು ನಟ ಜಯಂ ರವಿ ಹಾಗೂ ಪತ್ನಿ ಆರತಿ ದಾಂಪತ್ಯ ಜೀವನದಲ್ಲಿ ಬಿರುಕು ಬಿಟ್ಟಿದೆ ಅನ್ನೋ ಸುದ್ದಿ ಹಲವು ದಿನಗಳಿಂದ ಓಡಾಡುತ್ತಿದ್ದರು. ಇವರಿಬ್ಬರೂ ಕೂಡ ಈ ವಿಷಯದ ಬಗ್ಗೆ ಎಲ್ಲೂ ಬಾಯಿಬಿಟ್ಟಿರಲಿಲ್ಲ. ಆದರೆ, ಏಕಾಏಕಿ ಪತ್ನಿಯಿಂದ ವಿಚ್ಛೇದನ ಪಡೆಯುತ್ತಿರುವುದಾಗಿ ಜಯಂ ರವಿ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದರು.

Jayam Ravi and Aarti Ravi divorce because of singer Kenisha Francis who is she

ಇಲ್ಲಿಂದ ಜಯಂ ರವಿ ಹಾಗೂ ಆರತಿ ದಾಂಪತ್ಯದಲ್ಲಿ ಬಿರುಕು ಬಿಟ್ಟಿದ್ದು ಯಾಕೆ? ಇಬ್ಬರ ಮಧ್ಯೆ ಬಂದವರು ಯಾರು? ಅನ್ನೋ ಬಗ್ಗೆ ಚರ್ಚೆ ಶುರುವಾಗಿತ್ತು. ಅದಕ್ಕೀಗ ಹೊಸ ಟ್ವಿಸ್ಟ್ ಸಿಕ್ಕಿದೆ. ಜಯಂ ರವಿ ಹಾಗೂ ಆರತಿ ದಾಂಪತ್ಯದಲ್ಲಿ ಬಿರುಕು ಮೂಡಲು ಗಾಯಕಿ ಕೆನಿಶಾ ಫ್ರಾನ್ಸಿಸ್ ಕಾರಣ ಅಂತ ತಮಿಳು ಮಾಧ್ಯಮಗಳು ವರದಿ ಮಾಡಿವೆ.

ಜಯಂ ರವಿ ಜೊತೆ ತಳುಕು ಹಾಕಿಕೊಂಡಿರುವ ಈ ಗಾಯಕಿ ಯಾರು? ಈಕೆಯ ಹಿನ್ನೆಲೆಯೇನು? ಇಬ್ಬರ ನಡುವಿನ ಸಂಬಂಧವೇನು? ಗೋವಾದಲ್ಲಿ ಪತಿಯೊಂದಿಗೆ ಸಿಕ್ಕಿಬಿದ್ದಿದ್ದರೇ ನಟ ಜಯಂ ರವಿ? ಈ ಎಲ್ಲಾ ವಿಷಯಗಳ ಬಗ್ಗೆನೂ ಕಾಲಿವುಡ್‌ನಲ್ಲಿ ಬಿಸಿ ಬಿಸಿ ಚರ್ಚೆಯಾಗುತ್ತಿದೆ.

Jayam Ravi and Aarti Ravi divorce because of singer Kenisha Francis who is she

ಜಯಂ ರವಿ ಹಾಗೂ ಆರತಿ ವಿಚ್ಛೇದನದಲ್ಲಿ ಧನುಷ್ ಪಾತ್ರವಿದೆ ಅನ್ನೋ ಬಗ್ಗೆನೂ ವರದಿಯಾಗಿದೆ. ಅಲ್ಲದೆ ಆರತಿ ರವಿ ಕೂಡ ಧನುಷ್ ವಿರುದ್ಧವೇ ಗಂಭೀರ ಆರೋಪಗಳನ್ನು ಮಾಡಿದ್ದರು ಅಂತಾನೂ ವರದಿಗಳಾಗಿವೆ. ಅದೇನೇ ಇದ್ದರೂ ಜಯಂ ರವಿ ದಾಂಪತ್ಯದಲ್ಲಿ ಬಿರುಕು ಬಿಡಲು ಕಾರಣ ಕೆನಿಶಾ ಫ್ರಾನ್ಸಿಸ್ ಅನ್ನೋ ಗಾಯಕಿ ಅಂತ ನಕೀರನ್ ಪತ್ರಿಕೆ ಮಾಹಿತಿ ನೀಡಿದ್ದಾಗಿ ವರದಿಗಳಾಗಿವೆ.

ಜಯಂ ರವಿ ಹಾಗೂ ಗಾಯಕಿ ಕೆನಿಶಾ ಫ್ರಾನ್ಸಿಸ್ ಇಬ್ಬರೂ ಒಂದು ತಿಂಗಳಿನಿಂದ ಗೋವಾದಲ್ಲಿ ಇದ್ದಾರೆಂದು ವರದಿ ಮಾಡಲಾಗಿದೆ. ಕೆನಿಶಾ ಫ್ರಾನ್ಸಿಸ್ ಯಾರು ಅಂತ ನೋಡುವುದಾದರೇ, ಇತ್ತೀಚೆಗಷ್ಟೇ ಡೆಫ್ ಫ್ರಾಗ್ಸ್ ಅನ್ನೋ ಅಲ್ಬಂ ಅನ್ನು ಈಕೆ ಬಿಡುಗಡೆ ಮಾಡಿದ್ದರು. ಈ ಅಲ್ಬಂ ಅನ್ನು ನಟ ಜಯಂ ರವಿ, ಜೀವಾ ಹಾಗೂ ವಿಜಯ್ ಆಂಟೋನಿ ಬಿಡುಗಡೆ ಮಾಡಿದ್ದರು. ಇಷ್ಟೇ ಅಲ್ಲದೆ, ಇತ್ತೀಚೆಗೆ ಜಯಂ ರವಿಯ ದೊಡ್ಡ ಅಭಿಮಾನಿ ಎಂದು ಗಾಯಕಿ ಕೆನಿಶಾ ಫ್ರಾನ್ಸಿಸ್ ಹೇಳಿದ್ದರು. ಅದೇ ಹೇಳಿಕೆ ಈಗ ವೈರಲ್ ಆಗುತ್ತಿದೆ.

ಜಯಂ ರವಿ ಹಾಗೂ ಕೆನಿಶಾ ಫ್ರಾನ್ಸಿಸ್ ಇಬ್ಬರೂ ಗೋವಾದಲ್ಲಿ ತಂಗಿದ್ದರು. ಇಬ್ಬರೂ ಒಂದೇ ಕಾರಿನಲ್ಲಿ ಓಡಾಡಿದ್ದು, ದಂಡ ಕೂಡ ಕಟ್ಟಿದ್ದಾರೆ. ಗೋವಾದಲ್ಲಿದ್ದ ಜಯಂ ರವಿಯನ್ನು ಭೇಟಿ ಮಾಡುವುದಕ್ಕೆ ಆರತಿ ಹೋಗಿದ್ದರು. ಆದರೆ, ಕೆನಿಶಾ ಭೇಟಿ ಮಾಡುವುದಕ್ಕೆ ಅವಕಾಶ ನೀಡಲಿಲ್ಲ. ಅಲ್ಲದೆ ಬೆಂಗಳೂರಿನ ಐಷಾರಾಮಿ ಹೋಟೆಲ್‌ನಲ್ಲೂ ಈ ಜೋಡಿ ಒಟ್ಟಿಗೆ ಇತ್ತು ಎನ್ನಲಾಗಿದೆ.

More from Filmibeat

English summary
Jayam Ravi and Aarti Ravi divorce because of singer Kenisha Francis who is she?
Read more about: kollywood divorce filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X