ಕಮಲ್ ಹಾಸನ್- ಶಂಕರ್ ಸಿನಿಮಾ 'ಇಂಡಿಯನ್ 2' ಶೂಟಿಂಗ್ ಫಿನಿಶ್; ಇನ್ನು ಆಕ್ಷನ್ ಶುರು

By ಫಿಲ್ಮಿಬೀಟ್ ಡೆಸ್ಕ್

ಈ ವರ್ಷದ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ 'ಇಂಡಿಯನ್ 2' ಹೆಚ್ಚು ಸದ್ದು ಮಾಡುತ್ತಿದೆ. ಕಮಲ್ ಹಾಸನ್ ಹಾಗೂ ಶಂಕರ್ ಕಾಂಬಿನೇಷನ್ ಸಿನಿಮಾ ಆಗಿರುವುದರಿಂದ ಈ ಸಿನಿಮಾ ನೋಡುವುದಕ್ಕೆ ಸಿನಿಪ್ರಿಯರು ತುದಿಗಾಲಲ್ಲಿ ನಿಂತಿದೆ. ಬಿಗ್ ಬಜೆಟ್ ಸಿನಿಮಾ ಆಗಿದ್ದರಿಂದ ಪ್ಯಾನ್ ಇಂಡಿಯಾ ರಿಲೀಸ್ ಮಾಡಲು ಲೈಕಾ ಮುಂದಾಗಿದೆ.

'ಇಂಡಿಯನ್ 2' ಸಿನಿಮಾ ಕಳೆದ ಐದು ವರ್ಷಗಳಿಂದ ಶೂಟಿಂಗ್ ನಡೆಯುತ್ತಲೇ ಇತ್ತು. ಕೊನೆಗೂ ಶಂಕರ್ ಈ ಸಿನಿಮಾದ ಶೂಟಿಂಗ್ ಮುಗಿಸಿದ್ದಾರೆ. 'ಇಂಡಿಯನ್ 2' ಮೇಕಿಂಗ್ ನಿರ್ದೇಶಕ ಶಂಕರ್ ಹಾಗೂ ಕಮಲ್ ಹಾಸನ್ ಅಂದುಕೊಂಡಷ್ಟು ಸುಲಭ ಆಗಿರಲಿಲ್ಲ. 2015ರಲ್ಲಿ 'ಇಂಡಿಯನ್ 2' ನಿರ್ಮಾಣದ ಬಗ್ಗೆ ಟಾಕ್ ಶುರುವಾಗಿತ್ತು.

Kamal Haasan Indian 2 Shooting finis

ಅಲ್ಲಿಂದ ಸಾಕಷ್ಟು ಮಂದಿ ನಿರ್ಮಾಪಕರು ಬದಲಾಗಿದ್ದಾರೆ. ತಾಂತ್ರಿಕ ವರ್ಗ ಬದಲಾಗಿದೆ. ಇನ್ನೇನು ಶೂಟಿಂಗ್ ಶುರುವಾಗೇ ಬಿಡ್ತು ಅನ್ನುವಾಗ ನಿಂತಿದೆ. 2019ರಲ್ಲಿ ಈ ಸಿನಿಮಾ ಮತ್ತೆ ಟೇಕ್ ಆಗಿತ್ತು. ಅಲ್ಲಿಂದ ಶೂಟಿಂಗ್ ಸೆಟ್‌ನಲ್ಲಿ ದುರಂತ ಸಂಭವಿಸಿ, ಮತ್ತೆ ಶೂಟಿಂಗ್ ಸ್ಥಗಿತಗೊಂಡಿತ್ತು. ಇಷ್ಟೆಲ್ಲ ಅಡೆತಡೆಗಳನ್ನು ಪೂರೈಸಿ, ಕೊನೆಗೂ ಬಿಡುಗಡೆಗೆ ಮುಂದಾಗಿದ್ದಾರೆ.

'ಇಂಡಿಯನ್ 2' ಇದೇ ಜೂನ್ ತಿಂಗಳಲ್ಲಿ ರಿಲೀಸ್ ಎಂದು ಅನೌನ್ಸ್ ಮಾಡಲಾಗಿದೆ. 1996ರಲ್ಲಿ ತೆರೆಕಂಡಿದ್ದ ಮೆಗಾ ಬ್ಲಾಕ್‌ಬಸ್ಟರ್ ಸಿನಿಮಾ 'ಇಂಡಿಯನ್' ಸಿನಿಮಾ ಸೀಕ್ವೆಲ್. ಹೀಗಾಗಿ ಮತ್ತೆ ಅದೇ ಅವತಾರದಲ್ಲಿ ಕಮಲ್ ಹಾಸನ್ ಅನ್ನು ನೋಡುವುದಕ್ಕೆ ಅವರ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.

ಕಮಲ್ ಹಾಸನ್ ಹಿರಿಯ ಸ್ವಾತಂತ್ರ್ಯ ಹೋರಾಟಗಾರನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಹೋರಾಡುವ ಕಥೆ ಈ ಸಿನಿಮಾದಲ್ಲಿದ್ದು, ಕಮಲ್ ಹಾಸನ್ ಮತ್ತದೇ ಅವತಾರದಲ್ಲಿ ನೋಡಬಹುದಾಗಿದೆ. ಕಮಲ್ ಹಾಸನ್ ಜೊತೆಗೆ ಸಿದ್ಧಾರ್ಥ್, ರಕುಲ್ ಪ್ರೀತ್ ಸಿಂಗ್, ಕಾಳಿದಾಸ್ ಜಯರಾಮ್, ಪ್ರಿಯಾ ಭವಾನಿ ಶಂಕರ್, ಗುಲ್ಷನ್ ಗ್ರೋವರ್, ಸಮುದ್ರಖನಿ, ಬಾಬಿ ಸಿಂಹ, ಸೇರಿದಂತೆ ಹಲವರು ನಟಿಸಿದ್ದಾರೆ.

ಕಮಲ್ ಹಾಸನ್ ಹಾಗೂ ಶಂಕರ್ ಜೋಡಿಯ ದುಬಾರಿ ಸಿನಿಮಾವನ್ನು ಲೈಕಾ ಪ್ರೊಡಕ್ಷನ್ ನಿರ್ಮಾಣ ಮಾಡುತ್ತಿದೆ. ಲೈಕಾ ಪ್ರೊಡಕ್ಷನ್ಸ್ ಹಾಗೂ ಉದಯನಿಧಿ ಸ್ಟಾಲಿನ್ ಅವರ ರೆಡ್ ಜೈಂಟ್ ಮೂವೀಸ್ ಜಂಟಿಯಾಗಿ ಸಿನಿಮಾ ಬಿಡುಗಡೆ ಮಾಡುತ್ತಿದೆ. ಅನಿರುದ್ಧ್ ರವಿಚಂದರ್ ಮ್ಯೂಸಿಕ್, ರವಿವರ್ಮನ್ ಹಾಗೂ ರತ್ನವೇಲು ಛಾಯಾಗ್ರಹಣ ಈ ಸಿನಿಮಾಗಿದೆ. ಸದ್ಯ ಯಶಸ್ಸಿನ ಅಲೆಯಲ್ಲಿ ತೇಲುತ್ತಿರೋ ಕಮಲ್ ಹಾಸನ್‌ಗೆ 'ಇಂಡಿಯನ್ 2' ಕೂಡ ಯಶಸ್ಸು ಕೊಡುತ್ತಾ? ಅನ್ನೋದು ಸದ್ಯದ ಕುತೂಹಲ.

More from Filmibeat

English summary
Kamal Haasan and Shankar Movie Indian 2 Shooting finished releasing in June
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X