ರಾಜಕೀಯಕ್ಕಿಂತ ರಾಷ್ಟ್ರೀಯ ಜವಾಬ್ದಾರಿ ಹೆಚ್ಚಾಗಬೇಕು; ಪ್ರಧಾನಿ ಕರೆಗೆ ದನಿಗೂಡಿಸಿದ ಕಮಲ್

ತಮಿಳು ನಟ ಕಮಲ್ ಹಾಸನ್ ರಾಜ್ಯಸಭಾ ಸದಸ್ಯರಾಗಿ ಕೂಡ ಸೇವೆ ಸಲ್ಲಿಸುತ್ತಿದ್ದಾರೆ. ಡಿಎಂಕೆ ಮೈತ್ರಿಕೂಟದ ಬೆಂಬಲದೊಂದಿಗೆ ಕಳೆದ ವರ್ಷ ಅವರು ರಾಜ್ಯಸಭೆಗೆ ಆಯ್ಕೆ ಆಗಿದ್ದರು. ಸದಾ ಬಿಜೆಪಿ, ಆರ್‌ಎಸ್‌ಎಸ್‌ ವಿರುದ್ಧ ಮಾತನಾಡಿ ಟೀಕಿಸುತ್ತಾ ಬರುತ್ತಿದ್ದ ಕಮಲ್ ಹಾಸನ್ ರಾಜಕೀಯ ಬದಿಗೊತ್ತಿ ಪ್ರಧಾನಿ ಮೋದಿ ಕರೆಗೆ ದನಿಗೂಡಿಸಿದ್ದಾರೆ. ವೀಡಿಯೋ ಮಾಡಿ ದೇಶದ ಜನತೆಗೆ ಮನವಿ ಮಾಡಿದ್ದಾರೆ.

ಇರಾನ್- ಇಸ್ರೇಲ್ ಯುದ್ಧದ ಪರಿಣಾಮ ಇಂಧನ ಬಿಕ್ಕಟ್ಟು ನಿರ್ಮಾಣವಾಗಿದ್ದು ಪೆಟ್ರೋಲ್ ಹಾಗೂ ಡೀಸೆಲ್ ಮಿತ ಬಳಕೆಗೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ವಿಶೇಷ ಮನವಿ ಮಾಡಿದ್ದಾರೆ. ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ಮಾಡಿ, ವೈಯಕ್ತಿಕ ವಾಹನ ಬಿಟ್ಟು ಸಾರ್ವಜನಿಕ ಸಾರಿಗೆ ಬಳಸಿ, ವಿದ್ಯುತ್ ಚಾಲಿತ ವಾಹನಗಳಿಗೆ ಆದ್ಯತೆ ನೀಡಿ ಎಂದು ಕರೆ ನೀಡಿದ್ದಾರೆ. ನಟ ಕಮಲ್ ಹಾಸನ್ ಕೂಡ ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಈಗಾಗಲೇ ಕೆಲ ದೇಶಗಳು ಇಂಧನ ಉಳಿತಾಯಕ್ಕೆ ಮುಂದಾಗಿವೆ. ಭಾರತ ಕೂಡ ಆ ನಿಟ್ಟಿನಲ್ಲಿ ಯೋಚಿಸಬೇಕು, ಕಾರ್ಯಪ್ರವೃತ್ತರಾಗಬೇಕು ಎಂದು ಕಮಲ್ ಹಾಸನ್ ಮನವಿ ಮಾಡಿದ್ದಾರೆ.

Kamal Haasan Backs PM Narendra Modi s Energy-Saving Call Amid Iran-Israel Crisis

"ನನ್ನ ಪ್ರೀತಿಯ ದೇಶವಾಸಿಗಳೇ, ಇರಾನ್-ಇಸ್ರೇಲ್ ಯುದ್ಧದ ಪರಿಣಾಮದಿಂದ ತೀವ್ರ ಕಳವಳಗೊಂಡ ಭಾರತೀಯನಾಗಿ ಇಂದು ನಾನು ನಿಮ್ಮೊಂದಿಗೆ ಮಾತನಾಡುತ್ತಿದ್ದೇನೆ" ಎಂದು ಕಮಲ್ ಹಾಸನ್ ಮಾತು ಆರಂಭಿಸಿದ್ದಾರೆ. ತೈಲ ಬೆಲೆ ಏರುತ್ತಿದೆ, ಸದ್ಯ ಸಮುದ್ರ ವ್ಯಾಪಾರ ಮಾರ್ಗಗಳು ನಿರ್ಬಂಧಿಸಲ್ಪಟ್ಟಿವೆ. ಇಂಧನ ದುಬಾರಿಯಾಗಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ, 60ಕ್ಕೂ ಅಧಿಕ ದೇಶಗಳು ಈಗಾಗಲೇ ಇಂಧನ ಉಳಿತಾಯ ನಿಯಮಗಳನ್ನು ಅನುಸರಿಸುತ್ತಿವೆ. ಮುಂಬರುವ ಕಠಿಣ ಸಮಯಗಳಿಗೆ ಸಿದ್ಧರಾಗುವಂತೆ ಸಿಂಗಾಪುರದ ಪ್ರಧಾನಿ ತಮ್ಮ ಜನರನ್ನು ಮನವಿ ಮಾಡಿದ್ದನ್ನು ಕೇಳಿದ್ದೇವೆ. ನಮ್ಮದು ದೊಡ್ಡ ದೇಶ. ನಮ್ಮ ಪ್ರಧಾನಿ ಇಂಧನವನ್ನು ಉಳಿಸಲು ನಮ್ಮನ್ನು ಕೇಳಿದ್ದಾರೆ. ಇಂತಹ ಸಮಯದಲ್ಲಿ ಪಕ್ಷ ರಾಜಕೀಯಕ್ಕಿಂತ ರಾಷ್ಟ್ರೀಯ ಜವಾಬ್ದಾರಿ ಹೆಚ್ಚಾಗಬೇಕು" ಎಂದಿದ್ದಾರೆ.

ವಾಜಪೇಯಿ ಹೇಳಿದಂತೆ ಸರ್ಕಾರಗಳು ಬರ್ತಾವೆ, ಹೋಗ್ತಾವೆ, ಆದ್ರೆ ರಾಷ್ಟ್ರ ಉಳಿಯುತ್ತದೆ. 1962ರ ಚೀನಾ ಯುದ್ಧದ ಸಮಯದಲ್ಲಿ, ಗಡಿಯಲ್ಲಿ ಹೋರಾಡುತ್ತಿರುವ ನಮ್ಮ ಸೈನಿಕರನ್ನು ಬೆಂಬಲಿಸಲು ನಾವು ನಮ್ಮ ಮನೆಗಳಿಂದ ಚಿನ್ನವನ್ನು ದಾನ ಮಾಡಿದ್ದೇವೆ. 1965 ರಲ್ಲಿ, ಭಾರತದಲ್ಲಿ ಸಾಕಷ್ಟು ಆಹಾರ ಧಾನ್ಯಗಳು ಇಲ್ಲದಿದ್ದಾಗ, ಲಾಲ್ ಬಹದ್ದೂರ್ ಶಾಸ್ತ್ರಿಜಿ ನಾಗರಿಕರು ಇಡೀ ರಾಷ್ಟ್ರಕ್ಕೆ ವಾರಕ್ಕೆ ಒಂದು ಊಟವನ್ನು ಬಿಟ್ಟುಬಿಡುವಂತೆ ಕೇಳಿಕೊಂಡಿದ್ದರು. ಇಂದು, ಭಾರತಕ್ಕೆ ಅಂತಹ ತ್ಯಾಗದ ಅಗತ್ಯವಿಲ್ಲ" ಎಂದು ಕಮಲ್ ಅಭಿಪ್ರಾಯಪಟ್ಟಿದ್ದಾರೆ.

ಪ್ರಧಾನಿಯವರ ನಾಯಕತ್ವದಲ್ಲಿ, ಕಳೆದ ದಶಕದಲ್ಲಿ ಭಾರತದ ಸೌರ ಮತ್ತು ಪವನ ಶಕ್ತಿ ಸಾಮರ್ಥ್ಯ ಹೆಚ್ಚಾಗಿದೆ. ಅದೇ ಸಮಯದಲ್ಲಿ, ತ್ಯಾಗವನ್ನು ನಾಗರಿಕರಿಂದ ಮಾತ್ರ ನಿರೀಕ್ಷಿಸಲಾಗುವುದಿಲ್ಲ. ಸರ್ಕಾರಗಳು ಸಹ ಹೊರೆಯನ್ನು ಹಂಚಿಕೊಳ್ಳಬೇಕು. ಆದ್ದರಿಂದ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಎಲ್ಲಾ ಮುಖ್ಯಮಂತ್ರಿಗಳ ರಾಷ್ಟ್ರೀಯ ಶೃಂಗಸಭೆಯನ್ನು ಕರೆಯಬೇಕೆಂದು ನಾನು ಪ್ರಧಾನಿ ಬಳಿ ಮನವಿ ಮಾಡುತ್ತೇನೆ. ಸಾಮಾನ್ಯ ಜನರನ್ನು ರಕ್ಷಿಸಲು ಒಟ್ಟಾಗಿ ಕೆಲಸ ಮಾಡಬೇಕು ಮತ್ತು ತಕ್ಷಣವೇ ಎರಡು ಕೆಲಸಗಳನ್ನು ಮಾಡಬೇಕು. ಮೊದಲನೆಯದಾಗಿ, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್‌ನಂತಹ ರಾಜ್ಯ ತೆರಿಗೆಗಳನ್ನು ಕಡಿಮೆ ಮಾಡಬೇಕು. ಮತ್ತು ಎರಡನೆಯದಾಗಿ, ಹೆಚ್ಚಿನ ಜನರು ಖಾಸಗಿ ವಾಹನಗಳಿಂದ ದೂರ ಸರಿಯುವಂತೆ ರೈಲು, ಮೆಟ್ರೋ ಮತ್ತು ಬಸ್ ದರಗಳನ್ನು ಸಹ ಕಡಿಮೆ ಮಾಡಬೇಕು ಎಂದು ಕಮಲ್ ಹಾಸನ್ ತಿಳಿಸಿದ್ದಾರೆ.

ಸಾಕಷ್ಟು ಜನ ಕಮಲ್ ಹಾಸನ್ ಮಾತಿಗೆ ದನಿಗೂಡಿಸಿದ್ದಾರೆ. ಕಷ್ಟದ ಸಮಯದಲ್ಲಿ ರಾಜಕೀಯ ಬಿಟ್ಟು ದೇಶದ ಒಳಿತು ನೋಡಬೇಕು ಎಂದು ಕಾಮೆಂಟ್ ಮಾಡಿದ್ದಾರೆ.

Read more about: kamal haasan politics kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X