ಅದೇ ಕೊನೆ ಸಿನಿಮಾ; ಚಿತ್ರರಂಗಕ್ಕೆ ವಿದಾಯದ ಬಗ್ಗೆ ಕಮಲ್ ಹಾಸನ್ ಮಾತು

ತಮಿಳು ನಟ ಕಮಲ್ ಹಾಸನ್ ನೂರಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ತರಹೇವಾರಿ ಪಾತ್ರಗಳಲ್ಲಿ ಮಿಂಚಿ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಅಭಿಮಾನಿಗಳು ಉಳಗನಾಯಗನ್ ಎಂಬ ಬಿರುದು ಕೊಟ್ಟಿದ್ದಾರೆ. ಇತ್ತೀಚೆಗೆ ಅದನ್ನು ಕಮಲ್ ತಿರಸ್ಕರಿಸಿದ್ದರು. ಇದೀಗ ಚಿತ್ರರಂಗಕ್ಕೆ ಗುಡ್‌ಬೈ ಹೇಳುವ ಬಗ್ಗೆ ಕಮಲ್ ಮಾತನಾಡಿದ್ದಾರೆ.

ಬಾಲನಟನಾಗಿ ಚಿತ್ರರಂಗಕ್ಕೆ ಬಂದವರು ಕಮಲ್ ಹಾಸನ್. ಮುಂದೆ ಹೀರೊ ಆಗಿ ಕೂಡ ಸಕ್ಸಸ್ ಕಂಡರು. ನಿರ್ದೇಶಕ, ನಿರ್ಮಾಪಕನಾಗಿ ಅದ್ಭುತ ಸಿನಿಮಾಗಳನ್ನು ತೆರೆಗೆ ತಂದಿದ್ದಾರೆ. ಇತ್ತೀಚಿಗೆ ರಾಜಕೀಯ ರಂಗದಲ್ಲಿ ಕೂಡ ಗುರ್ತಿಸಿಕೊಂಡಿದ್ದರು ರಾಜ್ಯಸಭೆ ಸದಸ್ಯರಾಗಿ ಆಯ್ಕೆ ಆಗಿದ್ದಾರೆ. ಇದೆಲ್ಲದರ ನಡುವೆ ಸಿನಿಮಾ ಬೇಕಾ? ಎನ್ನುವ ಪ್ರಶ್ನೆ ಕೆಲವರು ಕೇಳುತ್ತಾರಂತೆ. ಈ ಬಗ್ಗೆ ಕಮಲ್ ಮಾತನಾಡಿದ್ದಾರೆ.

Kamal Haasan Breaks Silence on Retirement Talks I ll Quit Only After One Truly Good Film

ಮನೋರಮಾ ಹಾರ್ಟಸ್ ಸಾಹಿತ್ಯ ಮತ್ತು ಕಲಾ ಉತ್ಸವದಲ್ಲಿ ಕಮಲ್ ಹಾಸನ್ ಭಾಗಿ ಆಗಿ ಮಾತನಾಡಿದ್ದಾರೆ. ಈ ವೇಳೆ ಚಿತ್ರರಂಗದಿಂದ ನಿವೃತ್ತಿ ಹೊಂದುವ ಬಗ್ಗೆ ಹರಿದಾಡುತ್ತಿರುವ ವದಂತಿಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಯಾರೂ ಕೂಡ ನನ್ನ ನಿವೃತ್ತಿ ಬಗ್ಗೆ ಕೇಳಿಲ್ಲ ಆದರೆ "ಕೆಟ್ಟ ಚಿತ್ರಗಳನ್ನು ಮಾಡಿದಾಗ ನನಗೆ ಆ ರೀತಿ ಅನ್ನಿಸುತ್ತದೆ" ಎಂದು ಕಮಲ್ ಹೇಳಿದ್ದಾರೆ.

ಮಾತು ಮುಂದುವರೆಸಿರುವ ಕಮಲ್ ಹಾಸನ್ "ನನ್ನ ಆತ್ಮೀಯರು, ಅಭಿಮಾನಿಗಳು ಸಿನಿಮಾ ಮಾಡುವುದನ್ನು ನಿಲ್ಲಿಸಬೇಡಿ ಎಂದು ಹೇಳುತ್ತಾರೆ. ಒಂದೊಳ್ಳೆ ಸಿನಿಮಾ ಮಾಡಿ ನಿವೃತ್ತಿ ಆಗಿಬಿಡಿ ಎನ್ನುವವರು ಇದ್ದಾರೆ. ನಾನು ಕೂಡ ಅಂಥಾದೊಂದು ಒಳ್ಳೆ ಚಿತ್ರಕ್ಕಾಗಿ ಕಾಯುತ್ತಿದ್ದೇನೆ" ಎಂದು ಕಮಲ್ ಹಾಸನ್ ವಿವರಿಸಿದ್ದಾರೆ.

Kamal Haasan Breaks Silence on Retirement Talks I ll Quit Only After One Truly Good Film

ರಾಷ್ಟ್ರಪ್ರಶಸ್ತಿ ಸೇರಿ ಹಲವು ಪ್ರಶಸ್ತಿ ಪುರಸ್ಕಾರಗಳು ಕಮಲ್ ಹಾಸನ್‌ಗೆ ಲಭಿಸಿದೆ. 1960ರಲ್ಲಿ ಬಾಲನಟನಾಗಿ ನಟಿಸಿದ್ದ 'ಕಲತ್ತೂರ್ ಕಣ್ಣಮ್ಮ' ಚಿತ್ರಕ್ಕೆ ಅತ್ಯುತ್ತಮ ಬಾಲನಟ ರಾಷ್ಟ್ರಪ್ರಶಸ್ತಿ ಪಡೆದಿದ್ದರು. ಬಳಿಕ ಮೂಡ್ರಾಂ ಪಿರೈ, ನಾಯಕನ್ ಹಾಗೂ ಇಂಡಿಯನ್ ಚಿತ್ರದ ನಟನೆಗಾಗಿ 3 ಬಾರಿ ರಾಷ್ಟ್ರಪ್ರಶಸ್ತಿ ಲಭಿಸಿತ್ತು. ತರಹೇವಾರಿ ಪಾತ್ರಗಳಲ್ಲಿ ಕಮಲ್ ನಟಿಸಿದ್ದಾರೆ. ತಮಿಳು ಮಾತ್ರವಲ್ಲದೇ ಹಿಂದಿ, ಕನ್ನಡ, ತೆಲುಗು ಚಿತ್ರಗಳಲ್ಲಿ ಸಹ ಬಣ್ಣ ಹಚ್ಚಿದ್ದಾರೆ. ಇನ್ನು ಕಮಲ್ ವಿಭಿನ್ನ ಮೇಕಪ್ ಹಾಕಿ ನಟಿಸುವುದರಲ್ಲಿ ಸಿದ್ಧಹಸ್ತರು.

'ಇಂಡಿಯನ್' ಚಿತ್ರದಲ್ಲಿ ಸೇನಾಪತಿಯಾಗಿ ವಯಸ್ಸಾದ ಮುದುಕನ ವೇಷ ಹಾಕಿದ್ದರು. 'ಅವ್ವೈ ಷಣ್ಮುಗಿ' ಚಿತ್ರದಲ್ಲಿ ಮಹಿಳೆಯ ಅವತಾರ ತಾಳಿದ್ದರು. ಇನ್ನು 'ದಶಾವತಾರಂ' ಚಿತ್ರದಲ್ಲಿ 10 ವಿಭಿನ್ನ ಗೆಟಪ್‌ಗಳಲ್ಲಿ ಕಮಾಲ್ ಮಾಡಿದ್ದರು. ಇದೇ ವರ್ಷ ಮಣಿರತ್ನಂ ನಿರ್ದೇಶನದಲ್ಲಿ ಕಮಲ್ ನಟಿಸಿದ 'ಥಗ್‌ಲೈಫ್' ಸಿನಿಮಾ ಹೀನಾಯವಾಗಿ ಸೋತಿತ್ತು.

ಕಮಲ್ ಹಾಸನ್ ಸೋತಾಗಲೆಲ್ಲಾ ಎದ್ದು ಬಂದಿದ್ದಾರೆ. ದೊಡ್ಡ ದೊಡ್ಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸತತ ಸೋಲುಗಳಿಂದ ಕಂಗೆಟ್ಟಿದ್ದ ಕಮಲ್ 'ವಿಕ್ರಂ' ಚಿತ್ರದ ಮೂಲಕ ಭರ್ಜರಿ ಕಂಬ್ಯಾಕ್ ಮಾಡಿದ್ದರು. ಆ ಸಕ್ಸಸ್ ಬಳಿಕ ಮತ್ತಷ್ಟು ದೊಡ್ಡ ಸಿನಿಮಾಗಳಲ್ಲಿ ನಟಿಸಿದ್ದರು. 'ಇಂಡಿಯನ್'-2 ಬಂದು ಸೋತಿತ್ತು. 'ಥಗ್‌ಲೈಫ್' ಮತ್ತೊಂದು ಪೆಟ್ಟು ಕೊಟ್ಟಿದೆ.

ಒಂದ್ಕಾಲದಲ್ಲಿ ಕಮಲ್ ಮೇಕಪ್, ಗೆಟಪ್, ಅಭಿನಯ ಪ್ರೇಕ್ಷಕರ ಹುಬ್ಬೇರಿಸುತ್ತಿತ್ತು. ಆದರೆ ವಿಕ್ರಂ, ಸೂರ್ಯ ರೀತಿಯ ನಟರೆಲ್ಲಾ ಅದನ್ನು ಈಗ ಟ್ರೈ ಮಾಡುತ್ತಿದ್ದಾರೆ. ಅವರ ಮುಂದೆ ಕಮಲ್ ಮ್ಯಾಜಿಕ್ ನಡೀತಿಲ್ಲ. ಮೊದಲಿನಿಂದಲೂ ಮಾಸ್ ಆಡಿಯನ್ಸ್ ಕಮಲ್ ಹಾಸನ್‌ ಸಿನಿಮಾಗಳಿಗೆ ಬರಲ್ಲ. ದೊಡ್ಡಮಟ್ಟದಲ್ಲಿ ಓಪನಿಂಗ್ ಎನ್ನುವುದು ಸಿಗಲ್ಲ. ಈಗಾಗಲೇ 236 ಸಿನಿಮಾಗಳಲ್ಲಿ ಕಮಲ್ ನಟಿಸಿದ್ದಾರೆ. 237ನೇ ಸಿನಿಮಾ ಪ್ರೀ ಪ್ರೊಡಕ್ಷನ್ ಕೆಲಸ ನಡೀತಿದೆ. ಅರ್ಧಕ್ಕೆ ನಿಂತಿರುವ 'ಇಂಡಿಯನ್- 3' ಸಿನಿಮಾ ತೆರೆಗೆ ಬರಬೇಕಿದೆ.

ಬಹಳ ವರ್ಷಗಳ ಬಳಿಕ ರಜನಿಕಾಂತ್ ಜೊತೆ ಕಮಲ್ ಕೈಜೋಡಿಸಿದ್ದಾರೆ. ಇಬ್ಬರೂ ಒಟ್ಟಿಗೆ ನಟಿಸಲು ಒಪ್ಪಿದ್ದಾರೆ. ಅದಕ್ಕೂ ಮುನ್ನ ಕಮಲ್ ನಿರ್ಮಾಣದ ಚಿತ್ರದಲ್ಲಿ ತಲೈವಾ ನಟಿಸಲಿದ್ದಾರೆ. ಇಬ್ಬರು ನಟಿಸಲು ಸೂಕ್ತ ಕಥೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

More from Filmibeat

Read more about: kamal haasan kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X