ಬೇರೆ-ಬೇರೆ ಆದ ಕಮಲ್‌ಹಾಸನ್ ಕುಟುಂಬ: ಕಾರಣ ಕೊರೊನಾ

ಕರುಣೆಯಿಲ್ಲದ ಕೊರೊನಾ ವೈರಸ್ ಗಂಡ-ಹೆಂಡತಿಯನ್ನು, ತಂದೆ-ಮಕ್ಕಳನ್ನು ಬೇರೆ-ಬೇರೆಯನ್ನಾಗಿ ಮಾಡಿಬಿಟ್ಟಿದೆ.

ಒಂದೇ ಕುಟುಂಬದವರಾದರೂ ರೋಗದ ಭೀತಿಯಿಂದ ಪರಸ್ಪರ ದೂರ ಇರುವಂತೆ ಮಾಡಿದೆ ಕೊರೊನಾ. ನಟಿ ಸುಹಾಸಿನಿ ಮತ್ತು ಮಗ ಪರಸ್ಪರ ದೂರ ಇರುವ ಚಿತ್ರವನ್ನು ಮೊನ್ನೆಯಷ್ಟೆ ಹಂಚಿಕೊಂಡಿದ್ದರು. ಈಗ ಕಮಲ್‌ಹಾಸನ್ ಕುಟುಂಬದ ಸರದಿ.

ನಟ, ರಾಜಕಾರಣಿ ಕಮಲ್‌ ಹಾಸನ್ ಕುಟುಂಬ ಹೋಮ್ ಕ್ವಾರೆಂಟೈನ್‌ನಲ್ಲಿದೆ. ಕಮಲ್‌ ಹಾಸನ್ ಪುತ್ರಿಯರು ಮತ್ತು ಹೆಂಡತಿ ಪರಸ್ಪರಿಂದ ದೂರ ಉಳಿದಿದ್ದು, ಬೇರೆ-ಬೇರೆ ಮನೆಗಳಲ್ಲಿ ಒಂಟಿಯಾಗಿದ್ದಾರೆ.

ಕೊರೊನಾದ ಕಾರಣದಿಂದ ಬೇರೆ-ಬೇರೆಯಾಗಿರುವ ಕುಟುಂಬ

ಕೊರೊನಾದ ಕಾರಣದಿಂದ ಬೇರೆ-ಬೇರೆಯಾಗಿರುವ ಕುಟುಂಬ

ಹೌದು, ಕಮಲ್‌ಹಾಸನ್ ಪುತ್ರಿ ಶ್ರುತಿ ಹಾಸನ್ ಅವರು ಪತ್ರಿಕೆಯೊಂದಿಗೆ ನೀಡಿರುವ ಸಂದರ್ಶನದ ಪ್ರಕಾರ ಕಮಲ್ ಹಾಸನ್ ಕುಟುಂಬ ಕೊರೊನಾದ ಕಾರಣದಿಂದ ಒಟ್ಟಿಗೆ ಇಲ್ಲವಂತೆ.

ಬೇರೆ-ಬೇರೆ ಕಡೆ ಓಡಾಡಿದ್ದೇವೆ, ಹಾಗಾಗಿ ಇದು ಅವಶ್ಯಕ

ಬೇರೆ-ಬೇರೆ ಕಡೆ ಓಡಾಡಿದ್ದೇವೆ, ಹಾಗಾಗಿ ಇದು ಅವಶ್ಯಕ

ನಮ್ಮ ಕುಟುಂಬದವರೆಲ್ಲರೂ ಚಿತ್ರೀಕರಣ ಮತ್ತಿತರೆ ಕಾರಣದಿಂದ ಬೇರೆ-ಬೇರೆ ಕಡೆಗಳಲ್ಲಿ ಓಡಾಡುತ್ತಿರುತ್ತೇವೆ. ವಿದೇಶಗಳಿಗೂ ಹೋಗಿದ್ದೆವು ಹಾಗಾಗಿ ನಾವೆಲ್ಲರೂ ಈ ಸದ್ಯಕ್ಕೆ ಬೇರೆ-ಬೇರೆಯಾಗಿದ್ದೇವೆ ಎಂದು ಶ್ರುತಿ ಹಾಸನ್ ಹೇಳಿದ್ದಾರೆ.

ಬೇರೆ ಬೇರೆ ಮನೆಗಳಲ್ಲಿ ವಾಸಿಸುತ್ತಿರುವ ಕುಟುಂಬ

ಬೇರೆ ಬೇರೆ ಮನೆಗಳಲ್ಲಿ ವಾಸಿಸುತ್ತಿರುವ ಕುಟುಂಬ

ಅಕ್ಷರಾ ಹಾಸನ್ ಮತ್ತು ಕಮಲ್ ಹಾಸನ್ ಚೆನ್ನೈನಲ್ಲಿದ್ದರೂ ಪರಸ್ಪರ ಬೇರೆ-ಬೇರೆ ಮನೆಗಳಲ್ಲಿ ವಾಸವಿದ್ದಾರೆ. ಶ್ರುತಿ ಹಾಸನ್ ಮುಂಬೈನಲ್ಲಿದ್ದಾರೆ. ಅವರ ತಾಯಿ ಸಾರಿಕಾ ಸಹ ಮುಂಬೈ ನಲ್ಲಿದ್ದಾರೆ ಆದರೆ ಬೇರೆ ಮನೆಯಲ್ಲಿ ವಾಸವಿದ್ದಾರೆ.

ಸುಹಾಸಿನಿ ಹಾಗೂ ಪುತ್ರನ ನಡುವೆ ಗಾಜಿನ ಗೋಡೆ

ಸುಹಾಸಿನಿ ಹಾಗೂ ಪುತ್ರನ ನಡುವೆ ಗಾಜಿನ ಗೋಡೆ

ಸುಹಾಸಿನಿ ಪುತ್ರ ನಂದನ್ ಮಣಿರತ್ನಂ ಸಹ ಸೆಲ್ಫ್ ಕ್ವಾರೆಂಟೈನ್‌ನಲ್ಲಿದ್ದಾರೆ. ಅವರ ಮಗನನ್ನು ಒಮ್ಮೆ ಮಾತ್ರ ಗಾಜಿನ ಗೋಡೆಯ ಆಚೆ ಬದಿಯಿಂದ ಸುಹಾಸಿನಿ ನೋಡಲು ಸಾಧ್ಯವಾಗುತ್ತಿದೆಯಂತೆ. ಈ ಬಗ್ಗೆ ಅವರು ನಿನ್ನೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

More from Filmibeat

English summary
Actor and politician Kamal Haasan family members living in separate homes due to coronavirus scare. They are all home quarantine.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X