ಅಮೆರಿಕಾದ ಶಾಲೆಗೆ ಸೇರಿದ ಕಮಲ್ ಹಾಸನ್; ಹೊಸ ಕೋರ್ಸ್ ಕಲಿಯುತ್ತಿರುವ ಉಳಗ ನಾಯಗನ್

ಭಾರತೀಯ ಚಿತ್ರರಂಗದ ದಿಗ್ಗಜ ನಟ ಕಮಲ್ ಹಾಸನ್. ತಮಿಳು ಮಾತ್ರವಲ್ಲದೇ ಕನ್ನಡ ಸೇರಿ ಹಲವು ಭಾಷೆಗಳಲ್ಲಿ ಕಮಲ್ ಬಣ್ಣ ಹಚ್ಚಿ ನಟಿಸಿದ್ದಾರೆ. ಬಾಲನಟನಾಗಿ ಚಿತ್ರರಂಗಕ್ಕೆ ಬಂದವರು ಮುಂದೆ ಹೀರೊ ಆಗಿಯೂ ಗೆದ್ದರು. ನೂರಾರು ಸಿನಿಮಾಗಳಲ್ಲಿ ನಟಿಸಿ ತಮ್ಮ ಅದ್ಭುತ ನಟನೆಯಿಂದ ಉಳಗ ನಾಯಗನ್ ಎನ್ನುವ ಬಿರುದು ಪಡೆದಿದ್ದಾರೆ.

ಕಮಲ್ ನಟಿಸಿದ 'ಇಂಡಿಯನ್-2' ಸಿನಿಮಾ ಇತ್ತೀಚೆಗೆ ತೆರೆಗೆ ಬಂದು ಹೀನಾಯವಾಗಿ ಸೋತಿತ್ತು. ಆದರೂ ಕಮಲ್ ನಟನೆ ಬಗ್ಗೆ ಭಾರೀ ಮೆಚ್ಚು ವ್ಯಕ್ತವಾಗಿತ್ತು. ವಯಸ್ಸು 65 ದಾಟಿದರೂ ಇವತ್ತಿನ ಹೊಸ ಕಲಾವಿದರಿಗೂ ಪೈಪೋಟಿ ಕೊಡುತ್ತಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ನಟಿಸ್ತಿದ್ದಾರೆ. ನಟನಾಗಿ ಮಾತ್ರವಲ್ಲದೇ ನಿರ್ದೇಶಕನಾಗಿ ನಿರ್ಮಾಪಕರಾಗಿಯೂ ಸಕ್ಸಸ್ ಕಂಡಿದ್ದಾರೆ.

Kamal Haasan flies to US to Study Artificial Intelligence Course

'ಇಂಡಿಯನ್-2' ಬಳಿಕ ಪಾರ್ಟ್-3 ತೆರೆಗೆ ಬರಲಿದೆ. ಇನ್ನು ಮಣಿರತ್ನಂ ನಿರ್ದೇಶನದ ಚಿತ್ರವೊಂದರಲ್ಲಿ ಕಮಲ್ ಹಾಸನ್ ನಟಿಸುತ್ತಿದ್ದಾರೆ. ಇದೆಲ್ಲದರ ನಡುವೆ ಉಳಗ ನಾಯಗನ್ ಒಂದು ಕೋರ್ಸ್ ಕಲಿಯಲು ವಿದೇಶಕ್ಕೆ ತೆರಳುತ್ತಿದ್ದಾರೆ. ಅಮೆರಿಕಾದಲ್ಲಿ ಈಗಾಗಲೇ ಇನ್ಸಿಟ್ಯೂಟ್‌ಗೆ ಸೇರಿಕೊಂಡಿದ್ದಾರೆ. ಅರೇ ಈ ವಯಸ್ಸಿನಲ್ಲಿ ಅದ್ಯಾವ ಕೋರ್ಸ್ ಕಲಿಯುತ್ತಾರೆ ಎಂದು ಅಭಿಮಾನಿಗಳು ಹುಬ್ಬೇರಿಸಿದ್ದಾರೆ.

ಕಲಿಕೆಗೆ ಹಾಗೂ ಸಾಧನೆಗೆ ವಯಸ್ಸಿನ ಹಂಗಿಲ್ಲ. ಜೀವನ ಪರ್ಯಂತ ಕಲಿತರು ಕಲಿಕೆ ಮಾತ್ರ ಮುಗಿಯುವುದಿಲ್ಲ. ಇದೀಗ ಕಮಲ್ ಹಾಸನ್ AI ತಂತ್ರಜ್ಞಾನದ ಬಗ್ಗೆ ತರಬೇತಿ ಪಡೆಯಲು ಮುಂದಾಗಿದ್ದಾರೆ. ಅದಕ್ಕಾಗಿ ಹೆಚ್ಚು ಕಮ್ಮಿ 3 ತಿಂಗಳ ಕಾಲ ಅಮೆರಿಕಾದಲ್ಲಿ ತಮಿಳು ನಟ ಉಳಿದುಕೊಳ್ಳಲಿದ್ದಾರೆ. 90 ದಿನಗಳ ಕೋರ್ಸ್‌ ಇದಾಗಿದೆ. ಆದರೆ ಬಹಳ ಬ್ಯುಸಿ ಇರುವುದರಿಂದ 45 ದಿನ ಮಾತ್ರ ಹಾಜರಾಗಿ ತರಬೇತಿ ಪಡೆಯಲು ಅವರು ನಿರ್ಧರಿಸಿದ್ದಾರೆ ಎನ್ನಲಾಗ್ತಿದೆ.

Kamal Haasan flies to US to Study Artificial Intelligence Course

ಕಮಲ್ ಹಾಸನ್ ಅದ್ಭುತ ಕಲಾವಿದ ಮಾತ್ರವಲ್ಲ. ಒಳ್ಳೆ ತಂತ್ರಜ್ಞ ಕೂಡ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಪ್ರಪಂಚದ ಚಿತ್ರಣವನ್ನೇ ಬದಲಿಸಲಿದೆ. ಕೃತಕ ಬುದ್ದಿಮತ್ತೆ ಈಗಾಗಲೇ ಸಾಕಷ್ಟು ಕ್ಷೇತ್ರಗಳಿಗೆ ನಿಧಾನವಾಗಿ ಕಾಲಿಟ್ಟಿದೆ. ಸಿನಿಮಾ ನಿರ್ಮಾಣದಲ್ಲಿ ಕೂಡ ಇದರ ಬಳಕೆ ಆರಂಭವಾಗಿದೆ. ಆದರೆ ಸದ್ಯಕ್ಕೆ ಎಐ ತಂತ್ರಜ್ಞಾನದ ಬಗ್ಗೆ ಎಲ್ಲರಿಗೂ ಅರಿವು ಇಲ್ಲ. ನಿಧಾನವಾಗಿ ಕಲಿಯಲು ಆರಂಭಿಸಿದ್ದಾರೆ. ಕಮಲ್ ಹಾಸನ್ ಕೂಡ ಇದೀಗ ಕಲಿಯಬೇಕು ಎಂದು ನಿರ್ಣಯಿಸಿದ್ದಾರೆ.

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದ ಬಗ್ಗೆ ಕಲಿತು ಅದನ್ನು ಬಳಸಿ ಸಿನಿಮಾ ಮೇಕಿಂಗ್‌ನಲ್ಲಿ ಬಳಸಿಕೊಳ್ಳು ನಿರ್ಧರಿಸಿದ್ದಾರೆ ಎನ್ನಲಾಗ್ತಿದೆ. ಅದೇ ಕಾರಣಕ್ಕೆ ಅಮೆರಿಕಾದಲ್ಲಿ ಸ್ಪೆಷಲ್ ಕೋರ್ಸ್ ಕಲಿಯಲು ಮನಸ್ಸು ಮಾಡಿದ್ದಾರೆ. ಎಐ ತಂತ್ರಜ್ಞಾನ ಬಲ್ಲವರು ಸಿನಿಮಾ ನಿರ್ಮಾಣಕ್ಕೆ ಕೈಜೋಡಿಸುತ್ತಿದ್ದಾರೆ. ಆದರೆ ತನಗೆ ಆ ಬಗ್ಗೆ ಹೆಚ್ಚು ಗೊತ್ತಿದ್ದರೆ ಮತ್ತಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು ಎನ್ನುವುದು ಕಮಲ್ ಹಾಸನ್ ಲೆಕ್ಕಾಚಾರ.

ಮಣಿರತ್ನಂ ನಿರ್ದೇಶನದ 'ಥಗ್ ಲೈಫ್' ಸಿನಿಮಾ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಕಮಲ್ ಹಾಸನ್ ಸಾಧ್ಯವಾದಷ್ಟು ಬೇಗ ತಮ್ಮ ಭಾಗದ ಶೂಟಿಂಗ್ ಮುಗಿಸಿ ಎಐ ಕೋರ್ಸ್ ಕಲಿಯಲು ಹೊರಟಿದ್ದಾರೆ. 5 ವರ್ಷದ ಹುಡುಗನಾಗಿದ್ದಾಗಲೇ ಕಮಲ್ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದರು. ಬಳಿಕ ಕೆಲ ದಿನ ಓದಿನ ಕಡೆ ಮುಖ ಮಾಡಿದ ಕಮಲ್ ಮತ್ತೆ ಹೀರೊ ಆಗಿ ವಾಪಸ್ ಆಗಿದ್ದರು. ಕಳೆದ 6 ದಶಕಗಳಿಂದ ಚಿತ್ರರಂಗಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. ಹಲವು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಕೆಲ ಚಿತ್ರಗಳಿಗೆ ಬಂಡವಾಳ ಹೂಡಿದ್ದಾರೆ.

More from Filmibeat

English summary
Tamil Actor Kamal Haasan to study AI in US
Read more about: kamal haasan tamil kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X