For Quick Alerts
  ALLOW NOTIFICATIONS  
  For Daily Alerts

  'ವಿಕ್ರಂ' ಹಿಟ್: ನಿರ್ದೇಶಕನಿಗೆ ಕಾರು ಉಡುಗೊರೆ ಕೊಟ್ಟ ಕಮಲ್ ಹಾಸನ್, ಬೆಲೆ ಎಷ್ಟು ಗೊತ್ತೆ?

  |

  ಕಳೆದ ನಾಲ್ಕು ವರ್ಷಗಳಿಂದ ಸಿನಿಮಾ ರಂಗದಿಂದ ದೂರವಿದ್ದ ಕಮಲ್ ಹಾಸನ್ 'ವಿಕ್ರಂ' ಮೂಲಕ ಭರ್ಜರಿ ಕಮ್‌ಬ್ಯಾಕ್ ಮಾಡಿದ್ದಾರೆ.

  ಕಮಲ್ ನಟನೆಯ 'ವಿಕ್ರಂ' ಸಿನಿಮಾ ಭರ್ಜರಿ ಹಿಟ್ ಆಗಿದೆ. ಮಾಸ್, ಕ್ಲಾಸ್ ಎಲ್ಲ ಮಾದರಿಯ ಪ್ರೇಕ್ಷಕರಿಗೂ ಇಷ್ಟವಾಗಿರುವ ಈ ಸಿನಿಮಾಕ್ಕೆ ಮೆಚ್ಚುಗೆಯ ಸುರಿಮಳೆಯನ್ನೇ ಸುರಿಸಿದ್ದಾರೆ ಸಿನಿಮಾ ವಿಶ್ಲೇಷಕರು.

  ಲೋಕೇಶ್ ಕನಕರಾಜ್ ನಿರ್ದೇಶನದಲ್ಲಿ ಕಮಲ್ ಹಾಸನ್ ಹಿಂದೆಂದೂ ಕಾಣದ ಅವತಾರದಲ್ಲಿ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ. ಹಿಟ್ ಇಲ್ಲದೆ ಬಡವಾಗಿದ್ದ ತಮಿಳು ಚಿತ್ರರಂಗಕ್ಕೆ ನವ ಚೈತನ್ಯವನ್ನೇ ತುಂಬಿದ್ದಾರೆ.

  ಸ್ವತಃ ಅತ್ಯುತ್ತಮ ಸಿನಿಮಾ ಬರಹಗಾರ, ನಿರ್ದೇಶಕರಾಗಿರುವ ಕಮಲ್ ಹಾಸನ್‌ಗೆ ನಿರ್ದೇಶಕನ ಮಹತ್ವ ಚೆನ್ನಾಗಿ ಅರಿವಿದೆ. ಹಾಗಾಗಿ ಸಿನಿಮಾ ಒಳ್ಳೆಯ ಓಪನಿಂಗ್ ಪಡೆದು, ಮೊದಲ ದಿನ ದಾಖಲೆಯ ಕಲೆಕ್ಷನ್ ಗಳಿಸಿದ ಬೆನ್ನಲ್ಲೆ ನಿರ್ದೇಶಕ ಲೋಕೇಶ್ ಕನಕರಾಜ್‌ಗೆ ತಮ್ಮ ಕೈಯಾರೆ ಪ್ರೀತಿಯಿಂದ ಪತ್ರವನ್ನು ಬರೆದಿದ್ದರು. ತಮ್ಮ ಮಗನಂತೆ ಎಂದು ಸಂಭೋಧಿಸಿ ಬರೆದ ಪತ್ರದಿಂದ ಲೋಕೇಶ್ ಕನಕರಾಜ್ ಭಾವುಕರಾಗಿದ್ದರು. ಆದರೆ ಈಗ ನಿರ್ದೇಶಕ ಲೋಕೇಶ್‌ಗೆ ಐಶಾರಾಮಿ ಕಾರೊಂದನ್ನು ಉಡುಗೊರೆಯಾಗಿ ನೀಡಿ ಇನ್ನಷ್ಟು ಖುಷಿ ಪಡಿಸಿದ್ದಾರೆ.

  ಹೌದು, 'ವಿಕ್ರಂ' ಸಿನಿಮಾದ ಸಹ ನಿರ್ಮಾಪಕರೂ ಆಗಿರುವ ಕಮಲ್ ಹಾಸನ್, ಲೋಕೇಶ್ ಕನಕರಾಜ್‌ಗೆ ಅದ್ಧೂರಿಯಾದ ಕಾರೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಲೋಕೇಶ್‌ಗೆ ಕಾರಿನ ಚಾವಿ ಹಸ್ತಾಂತರಿಸುತ್ತಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸ್ವತಃ ಲೋಕೇಶ್ ಕನಕರಾಜ್ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  ವಿದೇಶಿ ಬ್ರ್ಯಾಂಡ್‌ ಆದ ಲೆಕ್ಸಸ್‌ನ ಇಎಸ್‌ ಸರಣಿಯ ಸೆಡಾನ್ ಕಾರನ್ನು ಕಮಲ್ ಹಾಸನ್ ಲೋಕೇಶ್‌ಗೆ ಉಡುಗೊರೆಯಾಗಿ ನೀಡಿದ್ದಾರೆ. ಈ ಕಾರಿನ ಆರಂಭಿಕ ಎಕ್ಸ್‌ ಶೋರೂಂ ಬೆಲೆಯೇ 84 ಲಕ್ಷ ರೂಪಾಯಿ ಇದೆ. ಈಗ ಕಮಲ್ ಹಾಸನ್ ಲೋಕೇಶ್‌ಗೆ ಕೊಟ್ಟಿರುವ ಕಾರಿನ ಬೆಲೆ ಕನಿಷ್ಟ 1.10 ಕೋಟಿಗೂ ಹೆಚ್ಚಿರಲಿದೆ.

  ಜೂನ್ 3 ರಂದು ಬಿಡುಗಡೆ ಆದ 'ವಿಕ್ರಂ' ಸಿನಿಮಾ ಭಾರಿ ಹಿಟ್ ಆಗಿದೆ ಕೇವಲ ಎರಡೇ ದಿನಕ್ಕೆ 100 ಕೋಟಿ ದಾಟಿದ 'ವಿಕ್ರಂ' ಮೂರೇ ದಿನಕ್ಕೆ 150 ಕೋಟಿ ಗಳಿಸಿ ನಾಗಾಲೋಟದಲ್ಲಿ ಮುನ್ನುಗ್ಗುತ್ತಿದೆ. ಹಿಂದಿ ಭಾಷಿಕ ಪ್ರದೇಶದಲ್ಲಿ ದೊಡ್ಡದಾಗಿ ಪ್ರಚಾರ ಮಾಡದೇ ಇದ್ದರೂ ಸಹ ಆ ಭಾಗದಲ್ಲಿ ಸಿನಿಮಾ ಒಳ್ಳೆಯ ರೆಸ್ಪಾನ್ಸ್ ಪಡೆದಿದೆ.

  'ವಿಕ್ರಂ' ಸಿನಿಮಾ ಪಕ್ಕಾ ಆಕ್ಷನ್ ಥ್ರಿಲ್ಲರ್ ಸಿನಿಮಾ ಆಗಿದ್ದು, ಸಿನಿಮಾದಲ್ಲಿ ಫಹಾದ್ ಫಾಸಿಲ್, ವಿಜಯ್ ಸೇತುಪತಿ ನಟಿಸಿದ್ದಾರೆ. ನಟ ಸೂರ್ಯ ಸಹ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.

  English summary
  Kamal Haasan gifted Luxury car to Vikram movie director Lokesh Kanagraj. Vikram movie became massive hit.
  Wednesday, June 8, 2022, 9:36
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X