KH234: 36 ವರ್ಷಗಳ ನಂತರ ಮತ್ತೆ ಒಂದಾಗುತ್ತಿದ್ದಾರೆ ಕಮಲ್ ಹಾಸನ್-ಮಣಿರತ್ನಂ
ತಮಿಳಿನಲ್ಲಿ 36 ವರ್ಷಗಳ ಹಿಂದೆ ಗ್ಯಾಂಗ್‌ಸ್ಟರ್ ಸಿನಿಮಾ 'ನಾಯಕನ್' ಬಿಡುಗಡೆಯಾಗಿ ಭರ್ಜರಿ ಹಿಟ್ ಆಗಿತ್ತು. ಈ ಚಿತ್ರದಲ್ಲಿ ಕಮಲ್ ಹಾಸನ್ ಮತ್ತು ಮಣಿರತ್ನಂ ಜೋಡಿ ಕಮಾಲ್ ಮಾಡಿತ್ತು. ಈಗ ಮತ್ತೆ ಈ ಜೋಡಿ ಒಂದಾಗುತ್ತಿದ್ದು, ತಮಿಳು ಸಿನಿರಂಗದಲ್ಲಿ ಹೊಸ ಇತಿಹಾಸ ಬರೆಯಲು ಸಜ್ಜಾಗಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ರಾಜಕೀಯದತ್ತ ಗಮನಹರಿಸಿದ ನಟ ಕಮಲ್ ಹಾಸನ್ ಅವರು ಲೋಕೇಶ್ ಕನಕರಾಜ್ ಅವರ 'ವಿಕ್ರಮ್' ಚಿತ್ರದ ಮೂಲಕ ಚಿತ್ರರಂಗಕ್ಕೆ ರೀ ಎಂಟ್ರಿ ಕೊಟ್ಟಿದ್ದರು. ಈ ಚಿತ್ರವು ದೊಡ್ಡ ಹಿಟ್ ಆಯಿತು. 400 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಹೀಗಾಗಿ ಕಮಲ್ ಹಾಸನ್ ವರ್ಷದ ಭರ್ಜರಿ ಹಿಟ್ ನೀಡಿದ್ದಾರೆ. ಇದಾದ ಬಳಿಕ ಮತ್ತೆ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

36 ವರ್ಷಗಳ ನಂತರ ಮತ್ತೆ ಒಂದಾದ ಮಲ್ ಹಾಸನ್-ಮಣಿರತ್ನಂ ಜೋಡಿ
36 ವರ್ಷಗಳ ಹಿಂದೆ ಬಮದ ತಮಿಳಿನ ಸೂಪರ್ ಹಿಟ್ 'ನಾಯಕನ್' ಸಿನಿಮಾದಲ್ಲಿ ಕೊನೆಯ ಬಾರಿಗೆ ಒಂದಾಗಿದ್ದ ಕಮಲ್ ಹಾಸನ್ ಮತ್ತು ನಿರ್ದೇಶಕ ಮಣಿರತ್ನಂ ಈಗ ಕಮಲ್ ಹಾಸನ್ ಅವರ 234ನೆ ಸಿನಿಮಾಗೆ ಒಂದಾಗಲಿದ್ದಾರೆ. ಇತ್ತೀಚೆಗೆ ಇನ್ನೂ ಹೆಸರಿಸದ ಚಿತ್ರದ ಸಿಬ್ಬಂದಿಯನ್ನು ಪರಿಚಯ ಮಾಡಿಕೊಡುವ ಕಾರ್ಯಕ್ರಮಕ್ಕಾಗಿ ಒಟ್ಟುಗೂಡಿತ್ತು. ಚಿತ್ರವನ್ನು ತಾತ್ಕಾಲಿಕವಾಗಿ 'KH234' ಎಂದು ಕರೆಯಲಾಗುತ್ತಿದೆ. KH234 ಸಿನಿಮಾದ ಸಿಬ್ಬಂದಿ ಪಟ್ಟಿಯ ವಿಡಿಯೋವನ್ನು ಚಿತ್ರತಂಡ ಹಂಚಿಕೊಂಡಿದೆ.
ಕಮಲ್ ಹಾಸನ್ ಮತ್ತು ಮಣಿರತ್ನಂ ಈಗಾಗಲೇ 1987 ರಲ್ಲಿ ಕ್ಲಾಸಿಕ್ ಚಿತ್ರ ನಾಯಗನ್ ನೀಡಿದ್ದಾರೆ. ಹಾಗಾಗಿ ಈ ಚಿತ್ರವೂ ಕೂಡ ಅದೇ ಹಾದಿಯಲ್ಲಿರಲಿದೆ ಎಂಬ ಭರವಸೆಯಲ್ಲಿ ಅಭಿಮಾನಿಗಳು ಕಾಯುತ್ತಿದ್ದಾರೆ. ಮಣಿರತ್ನಂ ಕೂಡ ಚಿತ್ರದ ಚಿತ್ರಕಥೆ ಬರೆಯುವುದರಲ್ಲಿ ನಿರತರಾಗಿದ್ದರು. ಈ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಬಿಗ್ ಬಾಸ್ ಸೀಸನ್ 7ರಲ್ಲಿ ಮಾತನಾಡಿದ ಕಮಲ್ ಹಾಸನ್, ಮಣಿರತ್ನಂ ಸಿನಿಮಾದ ಟೀಸರ್ ಶೂಟ್ ಮಾಡಲಿದ್ದಾರೆ. ನನ್ನ ಹುಟ್ಟುಹಬ್ಬದ ದಿನವಾದ ನವೆಂಬರ್ 7ರಂದು ಬಿಡುಗಡೆ ಚಿತ್ರದ ಟೀಸರ್ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದರು.

'KH234'
ರಾಜ್ ಕಮಲ್ ಫಿಲಂಸ್ ಇಂಟರ್‌ನ್ಯಾಶನಲ್, ಮದ್ರಾಸ್ ಟಾಕೀಸ್ ಮತ್ತು ರೆಡ್ ಜೈಂಟ್ ಮೂವೀಸ್ ಅಡಿಯಲ್ಲಿ ಕಮಲ್ ಹಾಸನ್, ಮಣಿರತ್ನಂ, ಆರ್.ಮಹೇಂದ್ರನ್ ಮತ್ತು ಶಿವ ಅನಂತ್ ಅವರು 'ಕೆಹೆಚ್ 234' ಅನ್ನು ನಿರ್ಮಿಸುತ್ತಿದ್ದಾರೆ. ಎಆರ್ ರೆಹಮಾನ್ ಸಂಗೀತ ಸಂಯೋಜಿಸುತ್ತಿದ್ದು, ಶ್ರೀಕರ್ ಪ್ರಸಾದ್ ಎಡಿಟರ್ ಆಗಿದ್ದಾರೆ. ಈ ಹಿಂದೆ ಮಣಿರತ್ನಂ ಅವರೊಂದಿಗೆ ಕನ್ನತಿಲ್ ಮುತ್ತಮಿತ್ತಲ್ ಮತ್ತು ಆಯುತ ಎಳುತ್ತು ಚಿತ್ರಗಳಲ್ಲಿ ಕೆಲಸ ಮಾಡಿರುವ ರವಿ ಕೆ ಚಂದ್ರನ್ ಛಾಯಾಗ್ರಹಣವ ನೊಡಿಕೊಳ್ಳಲಿದ್ದಾರೆ.
ವಿಕ್ರಮ್ ಚಿತ್ರದಲ್ಲಿ ಕಮಲ್ ಜೊತೆ ಕೆಲಸ ಮಾಡಿದ್ದ ಅನ್ಬರಿವ್ ಮಾಸ್ಟರ್ಸ್ ಆಕ್ಷನ್ ಕೊರಿಯೋಗ್ರಫಿಯ ಹೊಣೆ ಹೊತ್ತಿದ್ದಾರೆ. ಶರ್ಮಿಷ್ಟಾ ರಾಯ್ ಮತ್ತು ಏಖಾ ಲಖಾನಿ ಅವರನ್ನು ಕ್ರಮವಾಗಿ ಪ್ರೊಡಕ್ಷನ್ ಡಿಸೈನರ್ ಮತ್ತು ಕಾಸ್ಟ್ಯೂಮ್ ಡಿಸೈನರ್ ಆಗಿ ನೇಮಿಸಲಾಗಿದೆ. ಪಾತ್ರವರ್ಗದ ವಿವರಗಳನ್ನು ಇನ್ನೂ ಪ್ರಕಟಿಸಲಾಗಿಲ್ಲ. ಚಿತ್ರವು 2024 ರಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.


Click it and Unblock the Notifications











