ಕೊರೊನಾ ಬಳಿಕ ಕಮಲ್ ಹಾಸನ್‌ಗೆ ಬಿಗ್ ಬಾಸ್ ಸಂಕಷ್ಟ!
ನಟ ಕಮಲ್ ಹಾಸನ್ ಅವರಿಗೆ ಇತ್ತೀಚೆಗೆ ಕೊರೊನಾ ಬಂದಿತ್ತು. ಹಾಗಾಗಿ ಅವರು ಚೆನ್ನೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಸದ್ಯ ಗುಣ ಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಆದರೆ ಡಿಸ್ಚಾರ್ಜ್ ಆದ ಮೇಲೆ ಕಮಲ್ ಹಾಸನ್ ಅವರ ಬಗ್ಗೆ ಹೊಸ ವದಂತಿ ಹಬ್ಬಿದೆ. ಕಮಲ್ ಹಾಸನ್ ಗುಣಮುಖರಾದ ಮೇಲೆ, ಕೊರೊನಾ ರೂಲ್ಸ್ ಬ್ರೇಕ್ ಮಾಡಲು ಮುಂದಾಗಿದ್ದಾರೆ. ಕಮಲ್ ಈ ನಡೆಯ ಬಗ್ಗೆ ಸಾಕಷ್ಟು ಚರ್ಚೆ ಅಗುತ್ತಿದೆ.
ಅಷ್ಟಕ್ಕೂ ಕಮಲ್ ಹಾಸನ್ ಮಾಡಿದ್ದೇನು?. ಕೊರೊನಾ ರೂಲ್ಸ್ ಮುರಿಯುವಂತಹದ್ದು ಏನಾಯ್ತು ಎನ್ನುವ ಸುದ್ದಿ ಇಲ್ಲಿದೆ. ಮುಂದೆ ಓದಿ..

ಬಿಗ್‌ಬಾಸ್‌ನಿಂದ ಕಮಲ್ ಹಾಸನ್‌ಗೆ ಸಂಕಷ್ಟ!
ನಟ ಕಮಲ್ ಹಾಸನ್ ತಮಿಳು ಬಿಗ್ ಬಾಸ್ ಕಾರ್ಯಕ್ರಮ ನಡೆಸಿ ಕೊಡುತ್ತಿದ್ದರು. ಆದರೆ ಕೊರೊನಾ ಬಂದ ಕಾರಣ ಅವರು ಶೋ ಬಿಟ್ಟು ಚಿಕಿತ್ಸೆಗಾಗಿ ಆಸ್ಪತ್ರೆ ಸೇರಿದ್ದರು. ಸದ್ಯ ಚಿಕಿತ್ಸೆ ಬಳಿಕ ಡಿಸೆಂಬರ್ 4ರಂದು ಕಮಲ್ ಹಾಸನ್ ಮನೆಗೆ ಮರಳಿದ್ದಾರೆ. ಅದರೆ ಈಗ ಬಿಗ್‌ಬಾಸ್ ಶೋ ನಿಂದ ಕಮಲ್ ಹಾಸನ್ ಅವರಿಗೆ ಸಂಕಷ್ಟ ಎದುರಾಗಿದೆ. ಕಮಲ್ ಹಾಸನ್ ಮತ್ತೆ ಬಿಗ್ ಬಾಸ್ ಶೋಗೆ ಮರಳುತ್ತಲಿರುವುದೇ ಅವರಿಗೆ ಸಂಕಷ್ಟ ತಂದೊಡ್ಡಿದೆ.

ಕ್ವಾರಮಟೈನ್ ಆಗದೆ ಕಮಲ್ ಹಾಸನ್ ರೂಲ್ಸ್ ಬ್ರೇಕ್!
ನಟ ಕಮಲ್ ಹಾಸನ್ ಕೊರೊನಾ ಚಿಕಿತ್ಸೆ ಬಳಿಕ 7 ದಿನಗಳು ಕ್ವಾರಂಟೈನ್ ಆಗಬೇಕಿತ್ತು. ಆದರೆ ಕಮಲ್ ಹಾಸನ್ 7 ದಿನಕ್ಕೂ ಮೊದಲೇ ಬಿಗ್ ಬಾಸ್ ಶೋನಲ್ಲಿ ಭಾಗವಹಿಸಿದ್ದಾರೆ. ಹಾಗಾಗಿ ಕಮಲ್ ಹಾಸನ್ ಸರ್ಕಾರದ ಕೆಂಗಣ್ಣಿಗೆ ಗುರಿ ಆಗಿದ್ದಾರೆ. ಸದ್ಯದದಲ್ಲೆ ಕಮಲ್ ಹಾಸನ್ ಅವರಿಗೆ ಈ ಕುರಿತಾಗಿ ನೋಟಿಸ್ ಜಾರಿ ಆಗುವ ಸಾಧ್ಯತೆ ಇದೆ. ಜೊತೆಗೆ ಸಾರ್ವಜನಿಕ ವಲಯದಲ್ಲೂ ಕೂಡ ಕಮಲ್ ನಡೆಗೆ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ.

7 ದಿನ ಕ್ವಾರಂಟೈನ್‌ನಲ್ಲಿ ಇರಬೇಕಿದ್ದ ಕಮಲ್!
ನಟ ಕಮಲ್ ಹಾಸನ್ ಚಿಕಿತ್ಸೆ ಬಳಿಕ ತಮಗೆ ಕೊರೊನಾ ನೆಗೆಟಿವ್ ಆದ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಆದರೆ 7 ದಿನಗಳ ಕಾಲ ಕ್ವಾರಂಟೈನ್ ಆಗಬೇಕು. ಇಲ್ಲವಾದರೆ ಅವರಿಂದ ಮತ್ತೊಬ್ಬರಿಗೆ ವೈರಸ್ ಹರಡುವ ಸಾಧ್ಯತೆ ಇರುತ್ತದೆ. ಆದರೆ ನಿಯಮ ಬ್ರೇಕ್ ಮಾಡಿ ಕಮಲ್ ಹಾಸನ್ ಅವರು ಬಿಗ್‌ಬಾಸ್ ಶೂಟಿಂಗ್‌ನಲ್ಲಿ ಭಾಗಿ ಆಗುತ್ತಿದ್ದಾರೆ. ನಿಯಮ ಪಾಲನೆ ಮಾಡದೆ ಇರುವ ಕಾರಣ ಈಗ ಕಮಲ್ ಹಾಸನ್ ಸಂಕಷ್ಟಕ್ಕೀಡಾಗಿದ್ದಾರೆ.

ಚಿಕಾಗೊ ಭೇಟಿ ಇಂದ ಕಮಲ್‌ಗೆ ಕೊರೊನಾ ಬಂದಿತ್ತು!
ನಟ ಕಮಲ್ ಹಾಸನ್ ಅವರು ಡಿಸ್ಚಾರ್ಜ್ ಆದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪತ್ರ ಬರೆದಿದ್ದರು. ಪತ್ರದಲ್ಲಿ ಮಗಳು ಶೃತಿ ಹಾಸನ್ ಸೇರಿದಂತೆ ತಮಗಾಗಿ ಪ್ರಾರ್ಥನೆ ಮಾಡಿದ ಎಲ್ಲರಿಗೂ ಕಮಲ್ ಹಾಸನ್ ಧನ್ಯವಾದ ತಿಳಿಸಿದ್ದರು. ಕಮಲ್ ಹಾಸನ್ ಸದ್ಯ ವಿಕ್ರಂ ಚಿತ್ರದ ರಿಲೀಸ್ ನಿರೀಕ್ಷೆಯಲ್ಲಿ ಇದ್ದಾರೆ. ಜೊತೆಗೆ ಇಂಡಿಯನ್2 ಚಿತ್ರದ ಶೂಟಿಂಗ್‌ನಲ್ಲೂ ಕಮಲ್ ಹಾಸನ್ ಭಾಗಿ ಆಗಬೇಕಾಗಿದೆ. ಈ ನಡುವೆ ತಮ್ಮ ಬಟ್ಟೆ ಉದ್ಯಮದ ಬ್ಯ್ರಾಂಡ್ ಕೂಡ ಲಾಂಚ್ ಮಾಡಿದ್ದಾರೆ. ಇದೆ ಬ್ರ್ಯಾಂಡ್ ಲಾಂಚ್‌ಗಾಗಿ ಚಿಕಾಗೊಗೆ ತೆರಳಿದ್ದ ವೇಳೆ ಕಮಲ್ ಹಾಸನ್ ಅವರಿಗೆ ಕೊರೊನಾ ವಕ್ಕರಿಸಿದೆ.


Click it and Unblock the Notifications











