50 ವರ್ಷಗಳ ಹಿಂದೆ ರಜನಿಕಾಂತ್- ಕಮಲ್ ಹಾಸನ್ ಪರಸ್ಪರ ತೆಗೆದುಕೊಂಡಿರುವ ಪ್ರಾಮಿಸ್ ಏನು?
'ವಿಕ್ರಂ' ಸಿನಿಮಾ ಮೂಲಕ ಕಮಲ್ ಹಾಸನ್ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ. ಅತ್ತ 'ಜೈಲರ್' ರೀತಿಯ ಬ್ಲಾಕ್‌ಬಸ್ಟರ್ ಸಿನಿಮಾ ಮಾಡಿ ರಜನಿಕಾಂತ್ ಕಮಾಲ್ ಮಾಡಿದ್ದಾರೆ. ರಜನಿ- ಕಮಲ್ ಇಬ್ಬರೂ ಇಬ್ಬರೇ, ಇಬ್ಬರಿಗೂ ಅಪಾರ ಅಭಿಮಾನಿ ಬಳಗವಿದೆ.
ಸೂಪರ್ ಸ್ಟಾರ್ ತಮ್ಮ ಸ್ಟೈಲ್, ಸ್ಕ್ರೀನ್ ಪ್ರಸೆನ್ಸ್‌ನಿಂದ ಮೋಡಿ ಮಾಡಿದರೆ ಉಳಗನಾಯಕನ್ ತಮ್ಮ ಅದ್ಭುತ ನಟನೆ, ಗೆಟಪ್‌ಗಳಿಗೆ ಎಲ್ಲರ ಹುಬ್ಬೇರಿಸುತ್ತಾರೆ. ಸದ್ಯ 'ಕಲ್ಕಿ 2898 AD' ಚಿತ್ರದಲ್ಲಿ ಶೈತಾನ್ ದೊರೆ ಯಾಸ್ಕಿನ್ ಆಗಿ ಕಮಲ್ ಅಬ್ಬರಿಸಿದ್ದಾರೆ. ಎರಡೇ ಸನ್ನಿವೇಶದಲ್ಲಿ ಬಂದರೂ ಮ್ಯಾಜಿಕ್ ಮಾಡಿದ್ದಾರೆ. ಸೀಕ್ವೆಲ್‌ನಲ್ಲಿ ಆ ಪಾತ್ರಕ್ಕೆ ಹೆಚ್ಚಿನ ಮಹತ್ವ ಇದೆ ಎನ್ನುವುದು ಕ್ಲೈಮ್ಯಾಕ್ಸ್ ನೋಡಿದರೆ ಅರ್ಥವಾಗುತ್ತದೆ.

ಕಮಲ್ ಹಾಸನ್ ನಟನೆಯ 'ಇಂಡಿಯನ್-2' ಸಿನಿಮಾ ಕೂಡ ಕುತೂಹಲ ಮೂಡಿಸಿದೆ. ಮುಂದಿನ ತಿಂಗಳು ಸಿನಿಮಾ ತೆರೆಗೆ ಬರ್ತಿದೆ. 28 ವರ್ಷಗಳ ಹಿಂದೆ ಬಂದಿದ್ದ 'ಇಂಡಿಯನ್' ಸೀಕ್ವೆಲ್ ಇದು. ಈಗಾಗಲೇ ಚಿತ್ರದ ಪ್ರಚಾರ ಆರಂಭವಾಗಿದೆ. ನಿರ್ದೇಶಕ ಶಂಕರ್, ಕಮಲ್ ಹಾಸನ್ ಹಾಗೂ ಸಿದ್ದಾರ್ಥ್ ಸಂದರ್ಶನಗಳಲ್ಲಿ ಮಾತನಾಡಿ ಸಿನಿಮಾ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಮುಂಬೈನಲ್ಲಿ ಚಿತ್ರದ ಟ್ರೈಲರ್ ರಿಲೀಸ್ ಆಗಿ ಸದ್ದು ಮಾಡಿತ್ತು.
ಸಂದರ್ಶನವೊಂದರಲ್ಲಿ ಮಾತನಾಡಿರುವ ಕಮಲ್ ಹಾಸನ್ ಸ್ನೇಹಿತ ರಜನಿಕಾಂತ್ ಜೊತೆಗಿನ ಒಡನಾಟದ ಬಗ್ಗೆ ಮಾತನಾಡಿದ್ದಾರೆ. ಇಂಟ್ರೆಸ್ಟಿಂಗ್ ಸಂಗತಿಯೊಂದನ್ನು ಬಿಚ್ಚಿಟ್ಟಿದ್ದಾರೆ. "ನಾನು ಮತ್ತು ರಜನಿ ಯಾವತ್ತೂ ಕಾಂಪಿಟೇಟರ್‌ಗಳಲ್ಲ. ನಮ್ಮಿಬ್ಬರಿಗೂ ಒಬ್ಬರೇ(ಬಾಲಚಂಧನ್) ಅಂತ ನಿಮಗೆಲ್ಲಾ ಗೊತ್ತು. ಹಾಗಿದ್ದರೂ ನಮ್ಮ ನಡುವೆ ಪೈಪೋಟಿ ಇದೆ. ಆದರೆ ಯಾವತ್ತೂ ಅಸೂಯೆ ಇಲ್ಲ. ನಮ್ಮಿಬ್ಬರ ದಾರಿ ಬೇರೆ"
"ನಾವು ಸುಮಾರು 20 ವರ್ಷದವರಾಗಿದ್ದಾಗ ಮಾತನಾಡಿಕೊಂಡಿದ್ದೆವು. ನಾವು ಒಬ್ಬರನ್ನೊಬ್ಬರು ಕುರುಡಾಗಿ ಟೀಕಿಸುವುದಿಲ್ಲ ಎಂದು ಪ್ರಾಮಿಸ್ ತಗೊಂಡಿದ್ದೇವೆ" ಎಂದು ನಟ ಕಮಲ್ ಹಾಸನ್ ವಿವರಿಸಿದ್ದಾರೆ. ಸದ್ಯ ಈ ವೀಡಿಯೋ ವೈರಲ್ ಆಗುತ್ತಿದೆ. ಉಳಗ ನಾಯಕನ್ ಹೇಳಿದ್ದು ನಿಜ. ಇಬ್ಬರೂ ಎಂದಿಗೂ ಒಬ್ಬರ ಬಗ್ಗೆ ಒಬ್ಬರೂ ಕಾಮೆಂಟ್ ಮಾಡುವ ಗೋಜಿಗೆ ಹೋಗಲಿಲ್ಲ. ಒಬ್ಬರನ್ನೊಬ್ಬರು ಗೌರವಿಸುತ್ತಲೇ ಬರುತ್ತಿದ್ದಾರೆ.
ಇದೇ ಸಂದರ್ಶನದಲ್ಲಿ ನಟ ಸಿದ್ಧಾರ್ಥ್ ಕೂಡ ಕಮಲ್-ರಜಿನಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಇಂತಹ ಲೆಜೆಂಡ್ಸ್ ಇರುವ ಇಂಡಸ್ಟ್ರಿಯಲ್ಲಿ ಇರುವುದು ನನ್ನ ಅದೃಷ್ಟ ಎಂದು ಸಿದ್ಧಾರ್ಥ್ ಹೇಳಿದ್ದಾರೆ. ರಜನಿ ಮತ್ತು ಕಮಲ್ ಸರ್ ಅವರು ಇತರ ಅನೇಕ ಸ್ಟಾರ್‌ಗಳಂತೆ ಡ್ರಗ್ಸ್, ಸಿಗರೇಟ್ ಮತ್ತು ಪಾನ್ ಮಸಾಲಾಗಳಂತಹ ಜಾಹೀರಾತುಗಳನ್ನು ಎಂದಿಗೂ ಪ್ರಚಾರ ಮಾಡಿಲ್ಲ ಎಂದು ಸಿದ್ಧಾರ್ಥ್ ಹೇಳಿದ್ದಾರೆ.
#KamalHaasan speaks about his relationship with #Rajnikanth. He acknowledges they are direct competitors but does not have any envious thoughts between them.#Indian2 #Kalki2828ADpic.twitter.com/9IUcVpWk16
— Mohammed Ihsan (@ihsan21792) June 28, 2024
ಕಮಲ್ ಹಾಸನ್ ನಟನೆಯ 'ಇಂಡಿಯನ್' ಸರಣಿಯ ಮತ್ತೊಂದು ಸಿನಿಮಾ ಕೂಡ ಮುಂದಿನ ವರ್ಷ ಬರಲಿದೆ. ಅಂದ್ರೆ 'ಇಂಡಿಯನ್-3' ಸಹ ಸಿದ್ಧವಾಗಿದೆ. ಸೇನಾಪತಿಯಾಗಿ ಎರಡೆರಡು ಸಿನಿಮಾಗಳಲ್ಲಿ ಮುಂದೆ ಕಮಲ್ ರಂಜಿಸಲಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಹೋರಾಡುವ ಸ್ವಾತಂತ್ರ್ಯ ಹೋರಾಟಗಾರ ಸೇನಾಪತಿ ಕಥೆ ಮುಂದುವರೆಯಲಿದೆ.
ಇನ್ನು ಮಣಿರತ್ನಂ ಜೊತೆ 'ಥಗ್ ಲೈಫ್' ಎನ್ನುವ ಚಿತ್ರದಲ್ಲಿ ಕೂಡ ಕಮಲ್ ಹಾಸನ್ ನಟಿಸುತ್ತಿದ್ದಾರೆ. 'ಅಪೂರ್ವ ರಾಗಂಗಳ್' ಚಿತ್ರದಲ್ಲಿ ರಜನಿ- ಕಮಲ್ ಮೊದಲಿಗೆ ನಟಿಸಿದ್ದರು. ಬಳಿಕ 'ಅಂತುಲೇನಿ ಕಥ', 'ಮೂಂಡ್ರು ಮುಡಿಚ್ಚಿ', 'ಪದಿನಾರು ವಯದನಿಲೆ', 'ಆಡು ಪುಲಿ ಆಟಂ', 'ಅವರ್ಗಳ್', 'ಇಳಮೈ ಊಂಜಾಲ್', 'ವಯಸ್ಸು ಪಿಲಿಚಿಂದಿ', 'ತಪ್ಪು ತಾಳಂಗಳ್', 'ಅವಳ್ ಅಪ್ಪಡಿತಾನ್' ಸೇರಿದಂತೆ ಹಲವು ಸಿನಿಮಾಗಳಲ್ಲಿ ಇಬ್ಬರೂ ನಟಿಸಿದ್ದರು.


Click it and Unblock the Notifications











