ಶತ್ರುಗಳ ಜೊತೆ ಕಮಲ್ ಹಾಸನ್ ಭರ್ಜರಿ ಭೋಜನ: ವಿಕ್ರಂ ಟೀಸರ್‌

ಇಂದು (ನವೆಂಬರ್ 7) ಕಮಲ್ ಹಾಸನ್ ಹುಟ್ಟುಹಬ್ಬ. ಇದೇ ದಿನ ಕಮಲ್ ಅಭಿನಯಿಸುತ್ತಿರುವ 232ನೇ ಸಿನಿಮಾದ ಟೈಟಲ್ ಟೀಸರ್ ಅನ್ನು ಬಿಡುಗಡೆ ಮಾಡಲಾಗಿದೆ.

ಪಕ್ಕಾ ಆಕ್ಷನ್ ಸಿನಿಮಾ 'ವಿಕ್ರಂ' ನಲ್ಲಿ ಕಮಲ್ ಹಾಸನ್ ನಟಿಸುತ್ತಿದ್ದು, ಸಿನಿಮಾದ ಟೈಟಲ್ ಪ್ರಕಟಿಸಲು ಕುತೂಹಲಕಾರಿಯಾದ ಟೀಸರ್ ಅನ್ನು ಸಿನಿಮಾ ತಂಡ ಇಂದು ಬಿಡುಗಡೆ ಮಾಡಿದೆ.

ಇದೊಂದು ಪಕ್ಕಾ ಆಕ್ಷನ್ ಕತೆ ಸಿನಿಮಾ ಎಂಬುದು ಟೀಸರ್‌ನಲ್ಲಿ ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಕಮಲ್ ಹಾಸನ್, ಶತ್ರುಗಳ ಜೊತೆಗೆ ಕೂತು ಭರ್ಜರಿ ಭೋಜನ ಮಾಡುವ ದೃಶ್ಯ ಟೀಸರ್‌ನಲ್ಲಿದ್ದು, ಸಿನಿಮಾದ ಬಗ್ಗೆ ಸಾಕಷ್ಟು ಕುತೂಹಲ ಕೆರಳಿಸುತ್ತಿದೆ ಟೀಸರ್.

ಶತ್ರುಗಳಿಗಾಗಿ ಭೋಜನ ತಯಾರಿಸಿಡುವ ಕಮಲ್

ಶತ್ರುಗಳಿಗಾಗಿ ಭೋಜನ ತಯಾರಿಸಿಡುವ ಕಮಲ್

ಟೀಸರ್‌ನಲ್ಲಿರುವಂತೆ, ಕಮಲ್‌ ಹಾಸನ್, ತಮ್ಮ ಶತ್ರುಗಳು ತಮ್ಮನ್ನು ಹುಡುಕಿಕೊಂಡು ಬರುತ್ತಿದ್ದಾರೆಂದು ಮೊದಲೇ ಗೊತ್ತಿದ್ದು, ಅವರಿಗೆಲ್ಲಾ ಭೋಜನ ತಯಾರಿ ಮಾಡಿ, ಟೇಬಲ್‌ ಮೇಲಿಟ್ಟು ಅವರಿಗಾಗಿ ಕಾಯುತ್ತಿದ್ದಾರೆ.

ಮುಖಕ್ಕೆ ಕಪ್ಪು ಬಟ್ಟೆ ಧರಿಸಿ ಬರುವ ಶತ್ರುಗಳು

ಮುಖಕ್ಕೆ ಕಪ್ಪು ಬಟ್ಟೆ ಧರಿಸಿ ಬರುವ ಶತ್ರುಗಳು

ಆದರೆ ಹೀಗೆ ಕಾಯುವ ಮುನ್ನಾ, ಮನೆಯ ತುಂಬೆಲ್ಲಾ ಯಾರಿಗೂ ಗೊತ್ತಾಗದಂತೆ, ತಾವು ಕೈಯಿಟ್ಟಲೆಲ್ಲಾ ಶಸ್ತ್ರಾಸ್ತ್ರಗಳೇ ಸಿಗುವಂತೆ ಒಂದೊಂದೆ ಬಂದೂಕು, ಕತ್ತಿಗಳನ್ನು ಜೋಡಿಸಿಟ್ಟಿದ್ದಾರೆ. ಪೊಲೀಸ್, ರಾಜಕಾರಣಿ ಹೀಗೆ ಶತ್ರುಗಳು ವಿವಿಧ ವೇಷಗಳಲ್ಲಿ ಬರುತ್ತಾರೆ. ಎಲ್ಲರೂ ಮುಖಕ್ಕೆ ಕಪ್ಪು ಬಣ್ಣದ ಮಾಸ್ಕ್ ತೊಟ್ಟಿದ್ದಾರೆ.

'ಈಗ ಆರಂಭ ಮಾಡೋಣವೇ?'

'ಈಗ ಆರಂಭ ಮಾಡೋಣವೇ?'

ಶತ್ರುಗಳ ಊಟವೆಲ್ಲಾ ಮುಗಿದ ನಂತರ ಕಮಲ್ ಹಸನ್ ತಮ್ಮ ಶೈಲಿಯಲ್ಲಿ, 'ಈಗ ಆರಂಭ ಮಾಡೋಣವೇ' ಎನ್ನುತ್ತಾ ಊಟದ ಟೇಬಲ್ ಕೆಳಗಿಂದ ಎರಡು ಕತ್ತಿಗಳನ್ನು ತೆಗೆದು ಮುಂದಕ್ಕೆ ಎಸೆಯುತ್ತಾರೆ. ಅಲ್ಲಿ ಸಿನಿಮಾದ ಹೆಸರು 'ವಿಕ್ರಂ' ಎಂದು ಭರ್ಜರಿ ಹಿನ್ನೆಲೆ ಸಂಗೀತದೊಂದಿಗೆ ಕಾಣಿಸಿಕೊಳ್ಳುತ್ತದೆ.

Recommended Video

ಮತ್ತೆ ಗ್ರ್ಯಾಂಡ್ ಎಂಟ್ರಿ ಕೊಡಲಿದ್ದಾರೆ ಅಗ್ನಿಸಾಕ್ಷಿ ಖ್ಯಾತಿಯ Priyanka | Filmibeat Kannada
ಲೋಕೇಶ್ ಕನಕರಾಜನ್ ನಿರ್ದೇಶನ

ಲೋಕೇಶ್ ಕನಕರಾಜನ್ ನಿರ್ದೇಶನ

ವಿಕ್ರಂ ಸಿನಿಮಾವನ್ನು ನಿರ್ದೇಶಕ ಲೋಕೇಶ್ ಕನಕರಾಜನ್ ನಿರ್ದೇಶಿಸುತ್ತಿದ್ದಾರೆ. ಸಿನಿಮಾದ ನಿರ್ಮಾಣವನ್ನು ರಾಜ್ ಕಮಲ್ ಇಂಟರ್ನ್ಯಾಷನಲ್ ವಹಿಸಿಕೊಂಡಿದೆ. ಸಿನಿಮಾಕ್ಕೆ ಅನಿರುದ್ಧ ಸಂಗೀತ ನೀಡಿದ್ದಾರೆ. ವಿಕ್ರಂ ಸಿನಿಮಾಕ್ಕೂ ಮುನ್ನಾ ಇಂಡಿಯನ್ 2 ಬಿಡುಗಡೆ ಆಗಲಿದೆ.

More from Filmibeat

English summary
On Kamal Haasan's birthday his next movie 'Vikram's title teaser released. Movie directing by Lokesh Kanakarajan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X