ರಜನಿಕಾಂತ್, ನಾನು ವೈರಿಗಳಲ್ಲ: ಕಮಲ್ ಹಾಸನ್!
ಸಿನಿಮಾರಂಗದಲ್ಲಿ ಸ್ಟಾರ್‌ವಾರ್ ಎನ್ನುವುದು. ದೊಡ್ಡ ಕಲಾವಿದರ ನಡುವೆ ವೈಮನಸ್ಸು ಇರುವುದು ಸಹಜ. ಆದರೆ ಕೆಲಸದ ವಿಚಾರದಲ್ಲಿ ಮಾತ್ರವೇ ಹೆಚ್ಚು ವಾರ್ ಆಗೋದು. ಅದು ಬಿಟ್ಟರೆ ವೈಯಕ್ತಿಕವಾಗಿ ಹೆಚ್ಚು ಕಲಾವಿದರು ಆಪ್ತತೆಯನ್ನು ಹೊಂದಿರುತ್ತಾರೆ.
ಆದರೆ ಮೊದಲಿನಿಂದಲೂ ತಮಿಳು ಸಿನಿಮಾರಂಗದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಕಮಲ್ ಹಾಸನ್ ನಡುವೆ ಎಲ್ಲವೂ ಸರಿ ಇಲ್ಲ ಎನ್ನುವ ಬಗ್ಗೆ ಸುದ್ದಿ ಆಗುತ್ತಾ ಇರುತ್ತದೆ. ಇವರಿಬ್ಬರು ತಮಿಳು ಸಿನಿಮಾರಂಗದ ಸ್ಟಾರ್ ನಟರು. ಇಬ್ಬರ ಬಗ್ಗೆ ಹೀಗೊಂದು ಸುದ್ದಿ ಆಗಾಗ ಹರಿದಾಡುತ್ತಲೇ ಇರುತ್ತದೆ.
ಈಗ ನಟ ಕಮಲ್ ಹಾಸನ್ ತನ್ನ ಈಗ ರಜನಿಕಾಂತ್ ಬಗ್ಗೆ ಹೊಸ ಹೇಳಿಕೆ ನೀಡಿದ್ದಾರೆ. ಹಾಗಾಗಿ ಇವರ ಸ್ನೇಹ ಮತ್ತು ವೈರತ್ವದ ಬಗ್ಗೆ ಈಗ ಮತ್ತೆ ಸುದ್ದಿ ಆಗಿದೆ.

ರಜನಿಕಾಂತ್ ಮೊದಲ ಸಿನಿಮಾದಲ್ಲಿ ಕಮಲ್ ಹಾಸನ್ !
ನಟ ರಜಿನಿಕಾಂತ್ ಅಭಿನಯದ ಮೊದಲ ಸಿನಿಮಾ 'ಅಪೂರ್ವ ರಾಗಂಗಳ್' ಸಿನಿಮಾದಲ್ಲಿ ಕಮಲ್ ಹಾಸನ್ ಕೂಡ ಅಭಿನಯಿಸಿದ್ದಾರೆ. ಇಬ್ಬರು ಹಲವು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಅಲ್ಲದೆ ತಮಿಳಿನಲ್ಲಿ ಒಟ್ಟೊಟ್ಟಿಗೆ ಹಿಟ್ ಸಿನಿಮಾಗಳನ್ನು ಕೊಡುತ್ತಾ ಬಂದಿದ್ದಾರೆ. ಹಾಗಾಗಿ ಇವರ ಅಭಿಮಾನಿಗಳ ನುಡುವೆ ಫ್ಯಾನ್ ವಾರ್ ಇದ್ದಿದ್ದೆ.

ನಾವು ವೈರಿಗಳಲ್ಲ, ಸ್ನೇಹಿತರು: ಕಮಲ್ ಹಾಸನ್!
ನಟ ಕಮಲ್ ಹಾಸನ್ 'ವಿಕ್ರಮ್' ಸಿನಿಮಾದ ಕಾರ್ಯಕ್ರಮದ ವೇಳೆ ರಜನಿಕಾಂತ್ ಬಗ್ಗೆ ಮಾತನಾಡಿದ್ದಾರೆ. "ನಾನು ರಜನಿಕಾಂತ್ ವೈರಿಗಳಲ್ಲ. ನಾವು ಸ್ನೇಹಿತರು. ಸಿನಿಮಾ ವಿಚಾರದಲ್ಲಿ ಸ್ಪರ್ಧೆ ಇದ್ದಿದ್ದೆ. ಈ ಕಾರ್ಯಕ್ರಮಕ್ಕೆ ರಜನಿಕಾಂತ್‌ಗೆ ಆಹ್ವಾನ ನೀಡಲಾಗಿತ್ತು. ಆದರೆ ವೈಯಕ್ತಿಕ ಕಾರಣದಿಂದ ಅವರು ಬರಲು ಸಾಧ್ಯವಾಗಿಲ್ಲ". ಎಂದಿದ್ದಾರೆ.

ಕಮಲ್ ಹಾಸನ್ ಬಗ್ಗೆ ಮಾತನಾಡಿದ್ದ ರಜನಿಕಾಂತ್!
ನಟ ರಜನಿಕಾಂತ್ ಕೂಡ ಈ ಹಿಂದೆ ಕಮಲ್ ಹಾಸನ್ ಜೊತೆಗಿನ ಸ್ನೇಹದ ಬಗ್ಗೆ ಮಾತನಾಡಿದ್ದರು. ಸಂದರ್ಶನ ಒಂದರಲ್ಲಿ ಮಾತನಾಡಿದ್ದ ರಜನಿಕಾಂತ್ "ನಾನು ಕಮಲ್ ವೈರಿಗಳೇ? ಅಯ್ಯೋ ದೇವರೆ. ಇದನ್ನು ಯಾರು ಹೇಳಿದ್ದು. ಕಮಲ್ ಹಾಸನ್ ನನ್ನ ಉತ್ತಮ ಸ್ನೇಹಿತ. ಹಾಗೆ ಒಬ್ಬ ನನ್ನ ಸಹ ಸ್ಪರ್ಧಿ ಅಂತಲೂ ಹೇಳುತ್ತೇನೆ. ಈಗಲೂ ನನ್ನ ಆಪ್ತ ಸ್ನೇಹಿತ ಕಮಲ್ ಹಾಸನ್." ಎಂದಿದ್ದರು ರಜನಿಕಾಂತ್.

ಕಮಲ್ ಹಾಸನ್ ವಿಕ್ರಂ ರಿಲೀಸ್!
ಇನ್ನು ನಟ ಕಮಲ್ ಹಾಸನ್ ತಮ್ಮ ಮುಂದಿನ ಸಿನಿಮಾ 'ವಿಕ್ರಂ' ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ವಿಕ್ರಂ ಸಿನಿಮಾ ದೇಶದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದು. ಈಗಾಗಲೇ ಸಿನಿಮಾದ ಟ್ರೈಲರ್, ಟೀಸರ್ ಸಿನಿಮಾದ ಮೇಲೆ ಹೆಚ್ಚಿನ ಕುತೂಹಲ ಹುಟ್ಟು ಹಾಕಿದೆ. ಜೂನ್ 3 ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ.


Click it and Unblock the Notifications











