"ನಾವೆಲ್ಲಾ ದ್ರಾವಿಡರು.. ಮೊದಲು ಪಕ್ಕದ ರಾಜ್ಯ ಭಾಷೆ ಕಲಿಯೋಣ, ಆಮೇಲೆ ಹಿಂದಿ"; ಕಮಲ್ ಹಾಸನ್

ಹಿಂದಿ ಹೇರಿಕೆ ಬಗ್ಗೆ ದಕ್ಷಿಣದ ರಾಜ್ಯಗಳಲ್ಲಿ ಮೊದಲಿನಿಂದಲೂ ವಿರೋಧವಿದೆ. ಇತ್ತೀಚೆಗೆ ಈ ಬಗ್ಗೆ ಆಕ್ರೋಶ ಹೆಚ್ಚಾಗುತ್ತಿದೆ. ಉತ್ತರ ಭಾರತದ ಕೆಲವರು ಕರ್ನಾಟಕಕ್ಕೆ ಬಂದು ಕನ್ನಡ ಹಾಗೂ ಕನ್ನಡಿಗರ ಬಗ್ಗೆ ಅವಹೇಳನ ಮಾಡುತ್ತಿದ್ದಾರೆ. 'ಕನ್ನಡ ಬರಲ್ಲ, ಮಾತಾಡಲ್ಲ, ನಾನು ಮಾತಾಡೋದೇ ಹಿಂದಿ' ಎಂದು ಇತ್ತೀಚೆಗೆ ಬ್ಯಾಂಕ್ ಉದ್ಯೋಗಿ ಕಿರಿಕ್ ಮಾಡಿದ್ದು ಗೊತ್ತೇಯಿದೆ.

ಕನ್ನಡಿಗರನ್ನು ಅವಮಾನಿಸಿದ್ದಕ್ಕಾಗಿ ನಗರದ ಕೋರಮಂಗಲದ ಜಿಎಸ್​​ ಸೂಟ್ ಹೋಟೆಲ್​ ಸೀಜ್ ಮಾಡಲಾಗಿದೆ. ಗಾಯಕ ಸೋನು ನಿಗಮ್ ಕೂಡ ಕನ್ನಡ ಹಾಗೂ ಕನ್ನಡಿಗರ ಬಗ್ಗೆ ನೀಡಿದ್ದ ಹೇಳಿಕೆ ಎಲ್ಲವೂ ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಮೈಸೂರು ಸ್ಯಾಂಡಲ್‌ ಸೋಪ್ ರಾಯಭಾರಿಯಾಗಿ ಬಾಲಿವುಡ್ ನಟಿಯನ್ನು ನೇಮಿಸಿರುವುದು ಕನ್ನಡ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ. ಒಟ್ಟಾರೆ ನಮ್ಮ ಭಾಷೆಗಳ ಉಳಿವಿನ ಬಗ್ಗೆ ಎಲ್ಲರೂ ಜಾಗೃತರಾಗುವಂತಾಗಿದೆ. ಸದ್ಯ ತಮಿಳು ನಟ ಕಮಲ್ ದಕ್ಷಿಣದ ಭಾಷೆಗಳ ಉಳಿವಿನ ಬಗ್ಗೆ ಮಾತನಾಡಿದ್ದಾರೆ.

Kamal Haasan Sparks Language Debate Learn Neighboring State Languages Before Hindi

ಮಣಿರತ್ನಂ ನಿರ್ದೇಶನದಲ್ಲಿ ಕಮಲ್ ಹಾಸನ್ ಹಾಗೂ ಸಿಂಬು ನಟನೆಯ 'ಥಗ್‌ ಲೈಫ್' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಬಿಡುಗಡೆ ಪ್ರಯತ್ನ ನಡೀತಿದೆ. ಕೇರಳದಲ್ಲಿ ಚಿತ್ರದ ಪ್ರಚಾರಕ್ಕೆ ಚಿತ್ರತಂಡ ಹೋಗಿತ್ತು. ಈ ವೇಳೆ ವೇದಿಕೆಯಲ್ಲಿ ಮಾತನಾಡುತ್ತಾ ಕಮಲ್ "ಮೊದಲು ನಿಮ್ಮ ಪಕ್ಕದ ರಾಜ್ಯದ ಭಾಷೆ ಕಲಿಯಿರಿ, ಆಮೇಲೆ ಹಿಂದಿ" ಎಂದಿದ್ದಾರೆ.

ಮಲಯಾಳಂ ಭಾಷೆ ಹಾಗೂ ಕೇರಳದ ಜೊತೆಗಿನ ನಂಟಿನ ಬಗ್ಗೆ ಮಾತನಾಡುತ್ತಾ ಕಮಲ್ ಹಾಸನ್ ವೇದಿಕೆಯಲ್ಲಿ ಅಭಿಮಾನಿಗಳ ಗಮನ ಸೆಳೆದರು. ನಾನು ಆರಂಭದಲ್ಲಿ ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದೆ. ಒಂದರ್ಥದಲ್ಲಿ ನನಗೆ ನಟನಾಗಿ ಮರುಹುಟ್ಟು ಸಿಕ್ಕಿದ್ದೆ ಇಲ್ಲೇ. "ಒಂದು ವಿಚಾರ ಯೋಚಿಸಿ ನೋಡಿ. ತಮಿಳುನಾಡಿನಲ್ಲಿ ಮಲಯಾಳಂ ಮಾತನಾಡಬಹುದು. ಆದರೆ ಬಹಳ ಹೊತ್ತು ಮಾತನಾಡಿದರೆ ಅರ್ಥವಾಗುವುದಿಲ್ಲ. ಆದರೆ ಇಲ್ಲಿ ತಮಿಳು ಅರ್ಥವಾಗುತ್ತದೆ. ಹಾಗಾಗಿ ಎಲ್ಲರೂ ಪಕ್ಕದ ರಾಜ್ಯದ ಭಾಷೆ ಮೊದಲು ಕಲಿಯಿರಿ, ಹಿಂದಿ ಆಮೇಲೆ" ಎಂದು ಕಮಲ್ ಹೇಳಿದ್ದಾರೆ.

ಮಾತು ಮುಂದುವರೆಸಿರುವ ಕಮಲ್ ಹಾಸನ್ "ನಮ್ಮ ಭಾಷೆ ಅಳಿದು ಹೋಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ. ಅದನ್ನು ಇಲ್ಲಿ ಬಂದು ಹೇಳುವ ಧೈರ್ಯ ಹೇಗೆ ಬಂತು ಗೊತ್ತಾ? ನಾವೆಲ್ಲದರೂ ದ್ರಾವಿಡರು. ಮರೆಯಬೇಡಿ. ಇದು ನಮ್ಮ ಹೆಮ್ಮೆ" ಎಂದು ಕಮಲ್ ಹಾಸನ್ ಹೇಳಿರುವ ವೀಡಿಯೋ ವೈರಲ್ ಆಗುತ್ತಿದೆ. ಜೂನ್ 5ರಂದು 'ಥಗ್‌ ಲೈಫ್' ಸಿನಿಮಾ ಬಿಡುಗಡೆ ಆಗಲಿದೆ.

ಕಮಲ್ ಹಾಸನ್ ಹಾಗೂ ಮಣಿರತ್ನಂ ಸೇರಿ 'ಥಗ್‌ ಲೈಫ್' ಸಿನಿಮಾ ಕಥೆ ಸಿದ್ಧಪಡಿಸಿದ್ದಾರೆ. ಸಿನಿಮಾ ನಿರ್ಮಾಣಕ್ಕೆ ಇಬ್ಬರೂ ಕೈಜೋಡಿಸಿದ್ದಾರೆ. ಗ್ಯಾಂಗ್‌ಸ್ಟರ್ ಕಥೆಯನ್ನು ಚಿತ್ರದಲ್ಲಿ ಹೇಳಲಾಗುತ್ತಿದೆ. ಅಭಿರಾಮಿ ಹಾಗೂ ತ್ರಿಶಾ ನಾಯಕಿಯರಾಗಿ ನಟಿಸಿದ್ದಾರೆ. ಈಗಾಗಲೇ ಚಿತ್ರದ ಟ್ರೈಲರ್ ಹಾಗೂ ಸಾಂಗ್ಸ್ ಗಮನ ಸೆಳೆದಿವೆ. ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿಸಿವೆ. ಚಿತ್ರದಲ್ಲಿ ಕಮಲ್ ಹಾಗೂ ಅಭಿರಾಮಿ ನಡುವಿನ ಲಿಪ್‌ಲಾಕ್ ಸನ್ನಿವೇಶ ವೈರಲ್ ಆಗಿತ್ತು.

ರವಿ ಕೆ ಚಂದ್ರನ್ ಛಾಯಾಗ್ರಹಣ ಹಾಗೂ ಎ. ಆರ್ ರಹಮಾನ್ ಸಂಗೀತ 'ಥಗ್‌ ಲೈಫ್' ಚಿತ್ರಕ್ಕಿದೆ. ಐಶ್ವರ್ಯ ಲಕ್ಷ್ಮಿ, ಅಶೋಕ್ ಸೆಲ್ವನ್, ನಾಸರ್, ಜೊಜೊ ಜಾರ್ಜ್, ಪಂಕಜ್ ತ್ರಿಪಾಠಿ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ದೆಹಲಿ, ಚೆನ್ನೈ, ಕಾಂಚಿಪುರಂ ಸೇರಿದಂತೆ ಸಾಕಷ್ಟು ಲೋಕೇಶನ್‌ಗಳಲ್ಲಿ ಸಿನಿಮಾ ಚಿತ್ರೀಕರಣ ಮಾಡಲಾಗಿದೆ. 36 ವರ್ಷಗಳ ಬಳಿಕ ಕಮಲ್ ಹಾಗೂ ಮಣಿರತ್ನಂ ಒಟ್ಟಿಗೆ ಕೈ ಜೋಡಿಸಿರುವುದು ಕುತೂಹಲ ಮೂಡಿಸಿದೆ. ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ಬಿಡುಗಡೆ ಮಾಡುವ ಪ್ರಯತ್ನ ನಡೀತಿದೆ.

More from Filmibeat

English summary
Actor Kamal Haasan's remarks urging South Indians to prioritize regional languages over Hindi amid rising tensions in Karnataka go viral
Read more about: kamal haasan kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X