ಕಮಲ್ ಹಾಸನ್ 'ವಿಕ್ರಂ' ಪ್ರೀ-ರಿಲೀಸ್ 200 ಕೋಟಿ ಗಳಿಕೆ: ದೊಡ್ದದಾಗಿದೆ ಬಾಕ್ಸಾಫೀಸ್ ಲೆಕ್ಕಾಚಾರ!

ನಟ ಕಮಲ್ ಹಾಸನ್ ಅಭಿನಯದ 'ವಿಕ್ರಂ' ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಚಿತ್ರದ ರಿಲೀಸ್‌ಗೆ ದಿನಗಣನೆ ಶುರುವಾಗಿದೆ. ಸಿನಿಮಾ ರಿಲೀಸ್‌ಗೂ ಮುನ್ನ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಹಲವು ದಿನಗಳ ಬಳಿಕ ನಟ ಕಮಲ್ ಹಾಸನ್ ಈ ರೀತಿಯ ಮಾಸ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಹಾಗಾಗಿ ಕಮಲ್ ಹಾಸನ್‌ರನ್ನು ಈ ಲುಕ್‌ನಲ್ಲಿ ಕಣ್ತುಂಬಿಕೊಳ್ಳಲು ಅವರ ಅಭಿಮಾನಿಗಳು ಮತ್ತು ಸಿನಿಮಾ ಪ್ರಿಯರು ಕಾಯುತ್ತಿದ್ದಾರೆ. 'ವಿಕ್ರಂ' ಜೂನ್ 3ಕ್ಕೆ ತೆರೆಕಾಣಲಿದೆ. ಸಿನಿಮಾ ರಿಲೀಸ್ ಹತ್ತಿರ ಆಗುತ್ತಿದ್ದಹಾಗೆ ಸಿನಿಮಾದ ಕಲೆಕ್ಷನ್ ಲೆಕ್ಕಾಚಾರಗಳು ಹೊರ ಬಿದ್ದಿವೆ.

'ವಿಕ್ರಂ' ಸಿನಿಮಾ ಸದ್ಯ ಪ್ರೀ ರಿಲೀಸ್ ಬ್ಯುಸಿನೆಸ್ ಬಗ್ಗೆ ಹೆಚ್ಚು ಸುದ್ದಿಯಾಗುತ್ತಾ ಇದೆ. ಈ ಸಿನಿಮಾದ ಮೂಲಕ ನಟ ಕಮಲ್ ಹಾಸನ್ ಮತ್ತೊಂದು ದೊಡ್ಡ ದಾಖಲೆ ಬರೆದಿದ್ದಾರೆ. 'ವಿಕ್ರಂ' ಸಿನಿಮಾ ಕಮಲ್ ಹಾಸನ್ ಈ ಹಿಂದಿನ ಯಾವ ಸಿನಿಮಾಗಳು ಮಾಡಿರದಷ್ಟು ಬ್ಯುಸಿನೆಸ್ ಈ ಚಿತ್ರಕ್ಕೆ ಆಗಿರುವುದು ವಿಶೇಷ.

'ವಿಕ್ರಂ' ಪ್ರೀ ರಿಲೀಸ್ ವ್ಯಾಪಾರ 200 ಕೋಟಿ ರೂ!

'ವಿಕ್ರಂ' ಪ್ರೀ ರಿಲೀಸ್ ವ್ಯಾಪಾರ 200 ಕೋಟಿ ರೂ!

ನಟ ಕಮಲ್ ಹಾಸನ್ ಅಭಿನಯದ 'ವಿಕ್ರಂ' ಸಿನಿಮಾ ಒಂದೊಂದೇ ದಾಖಲೆ ಮಾಡುತ್ತಿದೆ. ಸದ್ಯ ಪ್ರೀ ರಿಲೀಸ್ ವ್ಯಾಪಾರದ ವಿಚಾರವಾಗಿ ಸುದ್ದಿ ಆಗಿದೆ. 'ವಿಕ್ರಂ' ಸಿನಿಮಾ ರಿಲೀಸ್‌ಗೂ ಮುನ್ನ 200 ಕೋಟಿಯ ಬ್ಯುಸಿನೆಸ್ ಮಾಡಿದೆ ಎನ್ನಲಾಗುತ್ತಿದೆ. ಇದು ಕೂಡ ದೊಡ್ಡ ಮಟ್ಟದ ವ್ಯವಹಾರವೇ. ಇನ್ನು ನಟ ಕಮಲ್ ಹಸನ್ ಸಿನಿಮಾ ಜರ್ನಿಯಲ್ಲಿ ಯಾವ ಸಿನಿಮಾ ಕೂಡ ಇಷ್ಟರ ಮಟ್ಟಿಗೆ ಗಳಿಕೆ ಕಂಡಿಲ್ಲ. ಇದೇ ಮೊದಲ ಬಾರಿಗೆ ಸಿನಿಮಾ ರಿಲೀಸ್‌ಗೂ ಮುನ್ನವೆ 200 ಕೋಟಿ ಬಾಚಿಕೊಂಡಿದೆ.

'ವಿಕ್ರಂ' ಭರ್ಜರಿ ಅಡ್ವಾನ್ಸ್ ಬುಕ್ಕಿಂಗ್!

'ವಿಕ್ರಂ' ಭರ್ಜರಿ ಅಡ್ವಾನ್ಸ್ ಬುಕ್ಕಿಂಗ್!

'ವಿಕ್ರಂ' ಸಿನಿಮಾ ಮುಂಗಡ ಟಿಕೆಟ್ ಬುಕ್ಕಿಂಗ್ ತೆರೆಯಲಾಗಿದೆ. ಚಿತ್ರದ ಅಡ್ವಾನ್ಸ್ ಬುಕ್ಕಿಂಗ್‌ಗೆ ಭರ್ಜರಿಯಾಗಿ ಸಾಗುತ್ತಿದೆ. ಇನ್ನು ಸದ್ಯದ ಮಾಹಿತಿಯ ಪ್ರಕಾರ 'ವಿಕ್ರಂ' ಸಿನಿಮಾ ಮುಂಗಡ ಬುಕ್ಕಿಂಗ್‌ನಿಂದ 3.40 ಕೋಟಿ ಗಳಿಕೆ ಕಂಡಿದೆ. ಇದರಲ್ಲಿ ಬಹುತೇಕ ಟಿಕೆಟ್‌ಗಳು ಚೆನ್ನೈನಲ್ಲೇ ಬುಕ್ ಆಗಿವೆ. ಇನ್ನು ಸಿನಿಮಾ ರಿಲೀಸ್‌ಗೆ 3 ದಿನಗಳು ಬಾಕಿ ಇರುವುದರಿಂದ ಅಷ್ಟರಲ್ಲಿ ಮತ್ತಷ್ಟು ಮುಂಗಡ ಬುಕ್ಕಿಂಗ್ ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ.

4000 ಸ್ಕ್ರೀನ್‌ಗಳಲ್ಲಿ 'ವಿಕ್ರಂ' ರಿಲೀಸ್!

4000 ಸ್ಕ್ರೀನ್‌ಗಳಲ್ಲಿ 'ವಿಕ್ರಂ' ರಿಲೀಸ್!

'ವಿಕ್ರಂ' ಸಿನಿಮಾ ದೊಡ್ಡ ಮಟ್ಟದಲ್ಲಿ ತೆರೆಗೆ ಬರುತ್ತಾ ಇದೆ. ದೇಶದಾದ್ಯಂತ ಸುಮಾರು 4000 ಪರದೆಗಳಲ್ಲಿ 'ವಿಕ್ರಂ' ಸಿನಿಮಾ ತೆರೆಕಾಣುತ್ತಾ ಇದೆ. ಹಾಗಾಗಿ ಸಿನಿಮಾದ ಕಲೆಕ್ಷನ್ ಮೇಲೆ ನಿರೀಕ್ಷೆ ಸಹಜವಾಗಿಯೇ ಹೆಚ್ಚಾಗಿದೆ. ಇನ್ನು ಬಾಲಿವುಡ್‌ನ ಅಕ್ಷಯ್ ಕುಮಾರ್ ಅಭಿನಯದ 'ಸಾಮ್ರಾಟ್ ಪೃಥ್ವಿ ರಾಜ್' ಕೂಡ ದೇಶದಾದ್ಯಂತ 4000 ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗುತ್ತಾ ಇದೆ.

ಮೊದಲ ದಿನ ಕಲೆಕ್ಷನ್ ನಿರೀಕ್ಷೆ!

ಮೊದಲ ದಿನ ಕಲೆಕ್ಷನ್ ನಿರೀಕ್ಷೆ!

'ವಿಕ್ರಂ' ರಿಲೀಸ್‌ಗೂ ಮುನ್ನ ಸಾಕಷ್ಟು ನಿರೀಕ್ಷೆಯನ್ನು ಹುಟ್ಟು ಹಾಕಿದೆ. ಇದು ಪ್ಯಾನ್ ಇಂಡಿಯಾ ಸಿನಿಮಾ ಅಲ್ಲದೇ ಇದ್ದರೂ, ಪ್ಯಾನ್ ಇಂಡಿಯಾ ಸಿನಿಮಾದ ಮಾದರಿ ಕ್ರೇಜ್ ಹುಟ್ಟಕೊಂಡಿದೆ. ಹಾಗಾಗಿ ಈ ಸಿನಿಮಾದ ಬಾಕ್ಸಫೀಸ್ ಕಲೆಕ್ಷನ್ ಮೇಲು ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದೆ. ಮುಂಗಡ ಟಿಕೆಟ್ ಬುಕ್ಕಿಂಗ್ ಮೊದಲ ದಿನದ ಗಳಿಕೆ ಮೇಲೆ ಎಲ್ಲಿಲ್ಲದ ನಿರೀಕ್ಷೆ ಮೂಡಿದೆ.

More from Filmibeat

English summary
Kamal Haasan Starrer Vikram Movie Pre Release business Is 200 crore, High Expectation on collection because Of advance Booking.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X