ಈ ಬಾರಿ ''ಬಿಗ್ ಬಾಸ್‌''ಗೆ ಸಖತ್ ಶಾಕ್ ನೀಡಿದ ಸೂಪರ್ ಸ್ಟಾರ್...!

ತಮ್ಮ ಇಷ್ಟದ ಸ್ಟಾರ್ ಬೇರೆ ಬೇರೆ ಭಾಷೆಯವರಿಗೆ ಗುರುತು-ಪರಿಚಯ ಇದ್ದರೆ ಸಾಕು, ಅವರ ಮೇಲೆ ಅವರ ಭಕ್ತಗಣದಲ್ಲಿ ಎಲ್ಲಿಲ್ಲದ ಮಮತೆ ಉಕ್ಕಿ ಉರಿಯುತ್ತೆ. ಅವರ ವಾಟ್ಸಾಫ್ ಡಿಪಿಯಿಂದ ಹಿಡಿದು ಫೇಸ್ ಬುಕ್, ಇನ್‌ಸ್ಟಾಗ್ರಾಮ್‌, ಟ್ವಿಟರ್‌ ಹೀಗೆ ಎಲ್ಲೆಡೆ ತಮ್ಮ ನೆಚ್ಚಿನ ತಾರೆಯರ ಫೋಟೋಗಳನ್ನೂ ಹಂಚಿಕೊಳ್ಳುವುದಲ್ಲದೇ ಆ ಫೋಟೋಗಳನ್ನೂ ತಮ್ಮ ಫ್ರೊಫೈಲ್ ಫೋಟೋವನ್ನಾಗಿಯೂ ಸೇವ್ ಮಾಡಿಕೊಳ್ಳುತ್ತಾರೆ. ಇದಕ್ಕೆ ಕಮಲ್ ಹಾಸನ್ ಅತ್ಯುತ್ತಮ ಉದಾಹರಣೆ.

ದಶಾವತಾರ್.. ಇಂಡಿಯನ್ 2.. ವಿಕ್ರಮ್.. ಹೀಗೆ ಒಂದಿಲ್ಲೊಂದು ಪ್ರಯೋಗಗಳನ್ನೂ ಮಾಡುತ್ತಲೇ ಬಂದ ಸಕಲ ಕಲಾ ವಲ್ಲಭ.. ವಿಶ್ವರೂಪಿ.. ಉಳಗನಾಯಗನ್.. ಹೀಗೆ ಮುಂತಾದ ಬಿರುದು ಬಾವಲಿಗಳನ್ನು ಪಡೆದಿರುವ ಕಮಲ್ ಹಾಸನ್, ಅತ್ಯುತ್ತುಮ ನಿರೂಪಕ ಕೂಡ ಹೌದು. ಇದಕ್ಕೆ ಕೈಗನ್ನಡಿ ಎಂಬಂತೆ ಪಕ್ಕದ ಮನೆಯಲ್ಲಿ ಬಿಗ್ ಬಾಸ್ ಹೆಸರಿನಲ್ಲಿ ದೊಂಬರಾಟವನ್ನೂ ಇವರೇ ಕಳೆದ ಹಲವಾರು ವರ್ಷಗಳಿಂದ ಚೂರು ದಣಿವು ಮಾಡಿಕೊಳ್ಳದೆ ನಡೆಸಿಕೊಂಡು ಬರುತ್ತಿದ್ದಾರೆ. ಇವತ್ತು ಬಿಗ್ ಬಾಸ್ ಎಂಬ ಈ ಶೋ ತಮಿಳು ಪ್ರೇಕ್ಷಕರ ಹೃದಯವನ್ನೂ ಅಲ್ಪ-ಸ್ವಲ್ಪ ಮಟ್ಟಿಗೆಯಾದರೂ ಗೆದ್ದಿದೆ ಅಂದರೆ ಅದಕ್ಕೆ ಪ್ರಮುಖ ಕಾರಣ ಕಮಲ್ ಹಾಸನ್ ಅಂದರೆ ಅತಿಶಯೋಕ್ತಿಯಲ್ಲ.

kamal-haasan-will-not-host-bigg-boss-tamil-season-8-find-out-why

ಇಂಥಾ ಕಮಲ್ ಹಾಸನ್ ಇದೀಗ ಬಿಗ್ ಬಾಸ್ ನಿರೂಪಣೆ ಮಾಡಲು ಹಿಂದೇಟು ಹಾಕಿದ್ದಾರೆ. ಈ ವರ್ಷ ಬಿಗ್ ಬಾಸ್ ಕಾರ್ಯಕ್ರಮದ ಹೊಣೆ ಹೊರಲು ಸಾಧ್ಯ ಇಲ್ಲ ಅಂದಿದ್ದಾರೆ. 07 ವರ್ಷಗಳ ಕಾಲ ಕಿರುತೆರೆಯ ಮೂಲಕ ನಿಮ್ಮ ಮನೆ ಮತ್ತು ಮನಗಳನ್ನು ತಲುಪಲು ಸಹಕಾರವನ್ನೂ ನೀಡಿದ ವಿಜಯ್ ಟಿವಿಗೆ ಧನ್ಯವಾದ ಎಂದಿರುವ ಕಮಲ್ ಹಾಸನ್,ಕೆಲಸದ ಒತ್ತಡ ಮತ್ತು ಒಪ್ಪಿಕೊಂಡಿರುವ ಕೆಲಸಗಳನ್ನು ಮುಗಿಸಲೇಬೇಕಾದ ಕಾರಣದಿಂದ ಈ ಬಾರಿಯ ಬಿಗ್ ಬಾಸ್‌ ನ ನಾನು ನಿರೂಪಣೆ ಮಾಡುತ್ತಿಲ್ಲ ಎಂದಿದ್ದಾರೆ.

ಬಿಗ್ ಬಾಸ್ ಕಾರ್ಯಕ್ರಮವನ್ನೂ ಮುನ್ನಡೆಸುವ ಹವಾಬ್ಧಾರಿ ನನಗೆ ಸಿಕ್ಕಿದ್ದು ನನ್ನ ಅದೃಷ್ಟ ಅಂದಿರುವ ಕಮಲ್ ಹಾಸನ್, ನಾನು ನನ್ನ ಕಲಿಕೆಯನ್ನು ಈ ಕಾರ್ಯಕ್ರಮದ ಮೂಲಕ ಹಂಚಿಕೊಂಡಿದ್ದೇನೆ. ಸಾಧ್ಯವಾದಷ್ಟು ಕಲಿಯುವ ಪ್ರಯತ್ನವನ್ನೂ ಮಾಡಿದ್ದೇನೆ ಎಂದಿದ್ದಾರೆ. ಇನ್ನೂ ಇಂಥಹದ್ದೊಂದು ಅವಕಾಶ ನೀಡಿದ್ದಕ್ಕೆ ನಾನು ಕೃತಜ್ಞನಾಗಿರುತ್ತೇನೆ ಎಂದಿರುವ ಕಮಲ್ ಹಾಸನ್ ಈ ಪ್ರಯಾಣದಲ್ಲಿ ತಮ್ಮ ಜೊತೆ ಭಾಗಿಯಾದ ಎಲ್ಲ ಸ್ಫರ್ಧಿಗಳಿಗೆ ಧನ್ಯವಾದವನ್ನೂ ಹೇಳಿದ್ದಾರೆ. ಈ ಹೊಸ ಸೀಸನ್ ಅಭೂತಪೂರ್ವ ಯಶಸ್ಸು ಪಡೆಯುತ್ತೆ ಎನ್ನುವುದು ನನಗೆ ಖಾತ್ರಿ ಇದೆ ಎಂದು ತಮ್ಮ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ ಕಮಲ್ ಹಾಸನ್.

kamal-haasan-will-not-host-bigg-boss-tamil-season-8-find-out-why

ಅಂದ್ಹಾಗೇ 2017ರಲ್ಲಿ ಶುರುವಾದ ದಿನದಿಂದ ಇಲ್ಲಿಯವರೆಗೆ ಕಮಲ್ ಹಾಸನ್ ಈ ಕಾರ್ಯಕ್ರಮವನ್ನು ನಡೆಸಿಕೊಂಡು ಬಂದಿದ್ದಾರೆ. 07 ಸೀಸನ್‌ಗಳನ್ನೂ ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದಾರೆ. ಆದರೆ ಈ ಬಾರಿ ಕಮಲ್ ಹಾಸನ್ ಅವರ ದರ್ಶನದಿಂದ ಅವರ ಅಭಿಮಾನಿಗಳು ವಂಚಿತರಗಾಲಿದ್ದಾರೆ. ಇನ್ನೂ ಕಮಲ್ ಹಾಸನ್ ಈ ಬಾರಿ ಬಿಗ್ ಬಾಸ್‌ ಗೆ ಮತ್ತು ನನಗೆ ಸಂಬಂಧ ಇಲ್ಲ ಎಂದು ಹೇಳಿದ ಕಾರಣ, ಕಮಲ್ ಹಾಸನ್ ಜಾಗವನ್ನು ತುಂಬುವ ಆ ನಾಯಕ ಯಾರು ಎನ್ನುವ ಪ್ರಶ್ನೆ ಅನೇಕರನ್ನು ಈಗ ಕಾಡುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಚರ್ಚೆಯೂ ನಡೆಯುತ್ತಿದೆ. ಕಮಲ್ ಹಾಸನ್ ಅನುಪಸ್ಥಿತಿಯಲ್ಲಿ ಈ ಶೋವನ್ನು ಮುನ್ನಡೆಸುವರು ಯಾರು ಅನ್ನುವುದನ್ನು ಈಗ ಕಾದು ನೋಡಬೇಕಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X