ಒಂದೇ ವಾರಕ್ಕೆ ಚಿತ್ರಮಂದಿರಗಳಿಂದ 'ಥಗ್‌ ಲೈಫ್' ಎತ್ತಂಗಡಿ; ದಾರುಣವಾಗಿದೆ ಕಲೆಕ್ಷನ್

ಕಮಲ್ ಹಾಸನ್ ನಟನೆಯ 'ಥಗ್‌ ಲೈಫ್' ಸಿನಿಮಾ ಪ್ರೇಕ್ಷಕರ ನಿರೀಕ್ಷೆ ತಲುಪುವಲ್ಲಿ ವಿಫಲವಾಗಿದೆ. ಒಂದೇ ವಾರಕ್ಕೆ ಸಿನಿಮಾ ಫ್ಲಾಪ್ ಲಿಸ್ಟ್ ಸೇರಿಕೊಳ್ತಿದೆ. ಕರ್ನಾಟಕದಲ್ಲಿ ಬಿಡುಗಡೆ ಆಗದಿದ್ದರೂ ಬೇರೆ ಭಾಗಗಳಲ್ಲಿ ಸಿನಿಮಾ ತೆರೆಕಂಡಿತ್ತು. ಆದರೆ 10 ದಿನಕ್ಕೆ ಬಹುತೇಕ ಚಿತ್ರಮಂದಿಗಳಿಂದ ಸಿನಿಮಾವನ್ನು ತೆಗೆದು ಹಾಕಲಾಗುತ್ತಿದೆ.

ಮಣಿರತ್ನಂ ನಿರ್ದೇಶನ, ಕಮಲ್, ಸಿಂಬು, ತ್ರಿಷಾ ನಟನೆ, ಎ. ಆರ್ ರಹಮಾನ್ ಸಂಗೀತ, ದೊಡ್ಡ ತಾಂತ್ರಿಕ ವರ್ಗ ಹೀಗೆ ನಾನಾ ಕಾರಣಗಳಿಂದ 'ಥಗ್‌ ಲೈಫ್' ಸಿನಿಮಾ ನಿರೀಕ್ಷೆ ಹುಟ್ಟಾಕ್ಕಿತ್ತು. ಆದರೆ ತಮಿಳು ಪ್ರೇಕ್ಷಕರೇ ಸಿನಿಮಾ ನೋಡಿ ಗೇಲಿ ಮಾಡಿಬಿಟ್ಟರು. ಕಮಲ್ ಹಾಸನ್ ನಟನೆಯ 'ಇಂಡಿಯನ್-2' ಸಿನಿಮಾ ಹೀನಾಯವಾಗಿ ಸೋತಿತ್ತು, ಟ್ರೋಲ್ ಆಗಿತ್ತು. 'ಥಗ್‌ ಲೈಫ್' ಫಲಿತಾಂಶ ಅದನ್ನು ಮೀರಿಸುವಂತಿದೆ.

Kamal haasan s Thug Life removed from Many theatres amid box office failure

ಜೂನ್ 5ಕ್ಕೆ 'ಥಗ್ ಲೈಫ್' ಸಿನಿಮಾ ತೆರೆಗಪ್ಪಳಿಸಿತ್ತು. ಆದರೆ ತಮಿಳುನಾಡು ಬಿಟ್ಟು ಬಹುತೇಕ ಕಡೆಗಳಲ್ಲಿ ಚಿತ್ರಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹೊಸತೇನು ಇಲ್ಲ, ಬಹಳ ಬೋರಿಂಗ್ ಎಂದು ಪ್ರೇಕ್ಷಕರು ಬೇಸರಗೊಂಡಿದ್ದರು. ಕೆಲವರು ಟ್ರೋಲ್ ಮಾಡಿದ್ದರು. "ಕರ್ನಾಟಕ ಪ್ರೇಕ್ಷಕರು ಈ ಸಿನಿಮಾ ನೋಡದೇ ಬಚಾವಾದರು" ಎಂದು ಕೆಲ ತಮಿಳು ಪ್ರೇಕ್ಷಕರೇ ಮಾಧ್ಯಮಗಳ ಮುಂದೆ ಹೇಳಿದ್ದರು.

ಅದ್ಯಾಕೋ ಕಮಲ್ ಹಾಗೂ ಮಣಿರತ್ನಂ ಮ್ಯಾಜಿಕ್ ಈ ಬಾರಿ ನಡೆಯಲಿಲ್ಲ. ಭಾರತದ ಬಾಕ್ಸಾಫೀಸ್‌ನಲ್ಲಿ 'ಥಗ್ ಲೈಫ್' ಸಿನಿಮಾ 50 ಕೋಟಿ ರೂ. ಗಳಿಸುವುದು ಕಷ್ಟ ಎಂದು ಬಾಕ್ಸಾಫೀಸ್ ಪಂಡಿತರು ಲೆಕ್ಕ ಹಾಕುತ್ತಿದ್ದಾರೆ. 200 ಕೋಟಿ ರೂ. ಬಜೆಟ್ ಚಿತ್ರಕ್ಕೆ ಇಂತಹ ಪರಿಸ್ಥಿತಿ ಬರಬಾರದಿತ್ತು ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.

ಫಸ್ಟ್ ವೀಕ್ ಕಲೆಕ್ಷನ್

ಮೊದಲ 8 ದಿನಕ್ಕೆ 'ಥಗ್ ಲೈಫ್' ಸಿನಿಮಾ ಭಾರತದ ಬಾಕ್ಸಾಫೀಸ್‌ನಲ್ಲಿ 44 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ Sacnilk.com ವೆಬ್‌ಸೈಟ್ ವರದಿ ಮಾಡಿದೆ. ತಮಿಳು ವರ್ಷನ್ 38.3 ಕೋಟಿ ರೂ. ಹಿಂದಿ 1.65 ಕೋಟಿ ರೂ. ಹಾಗೂ ತೆಲುಗು 4.05 ಕೋಟಿ ರೂ. ಗಳಿಕೆ ಮಾಡಿದೆ. 9 ದಿನ 75 ಲಕ್ಷ ರೂ.ಗೆ ಕಲೆಕ್ಷನ್ ಕುಸಿದಿತ್ತು.

ಚಿತ್ರಮಂದಿರಗಳಿಂದ ಎತ್ತಂಗಡಿ

ಚೆನ್ನೈ ಸೇರಿದಂತೆ ಹಲವು ಕಡೆಗಳಲ್ಲಿ 'ಥಗ್ ಲೈಫ್' ಚಿತ್ರವನ್ನು ಚಿತ್ರಮಂದಿರಗಳಿಂದ ತೆಗೆದು ಬೇರೆ ಸಿನಿಮಾಗಳನ್ನು ಹಾಕಲಾಗುತ್ತಿದೆ. ಚೆನ್ನೈನ ಸತ್ಯಂ ಚಿತ್ರಮಂದಿರದ ದೊಡ್ಡ ಪರದೆಯಲ್ಲಿ ಒಂದೇ ವಾರಕ್ಕೆ 'ಥಗ್ ಲೈಫ್' ಎತ್ತಂಗಡಿಯಾಗಿದೆ. 'ಇಂಡಿಯನ್- 2' ಕೊನೆ ಪಕ್ಷ 2 ವಾರ ಅಲ್ಲಿ ಪ್ರದರ್ಶನ ಕಂಡಿತ್ತು. ಬಹುತೇಕ ಚಿತ್ರಮಂದಿರಗಳಲ್ಲಿ 'ಥಗ್ ಲೈಫ್' ಸಿನಿಮಾ ತೆಗೆದು ಹಾಕಿದ್ದಾರೆ ಎಂದು ತಮಿಳು ಸಿನಿಮಾ ವಿಶ್ಲೇಷಕ ಮನೋಬಾಲ ವಿಜಯಬಾಲನ್ ಟ್ವೀಟ್ ಮಾಡಿದ್ದಾರೆ.

ಕರ್ನಾಟಕದಲ್ಲಿ 'ಥಗ್ ಲೈಫ್'?

ಇನ್ನು ಕರ್ನಾಟಕದಲ್ಲಿ 'ಥಗ್ ಲೈಫ್' ಸಿನಿಮಾ ಸದ್ಯಕ್ಕೆ ಬಿಡುಗಡೆ ಆಗುವ ಸುಳಿವು ಸಿಗುತ್ತಿಲ್ಲ. ರೈಟ್ಸ್ ಕೊಂಡುಕೊಂಡಿರುವ ವಿತರಕರು ತಲೆಕೆಡಿಸಿಕೊಂಡಿದ್ದಾರೆ. ಕಮಲ್ ಹಾಸನ್ ಇನ್ನೂ ಕ್ಷಮೆ ಕೇಳಿಲ್ವಾ? ಎಂದು ಪ್ರಶ್ನಿಸಿ 'ಥಗ್ ಲೈಫ್' ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿದೆ. ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ ನಡೆದು ಇದಕ್ಕೆ ರಾಜ್ಯ ಸರ್ಕಾರದ ಪ್ರತಿಕ್ರಿಯೆ ಕೇಳಿದ್ದಾರೆ.

ತ್ರಿಶಾ ಹಾಡು ಟ್ರೋಲ್

'ಥಗ್ ಲೈಫ್' ಚಿತ್ರದ 'ಮುತ್ತ ಮಳೈ' ಎಂಬ ಹಾಡು ಈಗ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ. ಆದರೆ ಚಿತ್ರದಲ್ಲಿ ಇದನ್ನು ತೆಗೆದು ಹಾಕಲಾಗಿದೆ. ತ್ರಿಷಾ ಹೆಜ್ಜೆ ಹಾಕಿರುವ ಈ ಹಾಡನ್ನು ಟ್ರೋಲ್ ಮಾಡಲಾಗುತ್ತಿದೆ. ಈ ಹಾಡನ್ನು ಸಿನಿಮಾದಿಂದ ಕೈಬಿಟ್ಟು ಒಳ್ಳೆ ಕೆಲಸ ಮಾಡಿದ್ರಿ ಮಣಿ ಸರ್ ಎಂದು ನೆಟ್ಟಿಗರು ವ್ಯಂಗ್ಯವಾಡುತ್ತಿದ್ದಾರೆ.

More from Filmibeat

English summary
Kamal Haasan and Mani Ratnam's Thug life receiving poor reviews and underwhelming box office returns across languages
Read more about: kamal haasan kollywood box office
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X