Chandramukhi 2: 18 ವರ್ಷಗಳ ಬಳಿಕ ಮತ್ತೆ 'ಚಂದ್ರಮುಖಿ' ಸದ್ದು..ಗಣೇಶ ಚತುರ್ಥಿಗೆ 'ನಾಗವಲ್ಲಿ' ದರ್ಶನ ಗ್ಯಾರಂಟಿ

ಕನ್ನಡದಲ್ಲಿ 'ಆಪ್ತಮಿತ್ರ'.. ತಮಿಳಿನಲ್ಲಿ 'ಚಂದ್ರಮುಖಿ'.. ಕನ್ನಡದಲ್ಲಿ ಸಾಹಸ ಸಿಂಹ ವಿಷ್ಣುವರ್ಧನ್, ಅತ್ತ ತಮಿಳಿನಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್ ನಟಿಸಿದ್ದರು. ಈ ಎರಡೂ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೊಸ ಹೊಸ ದಾಖಲೆಗಳನ್ನೇ ಬರೆದವು.

ಈ ಯಶಸ್ಸಿನ ಬೆನ್ನಲ್ಲೇ ನಿರ್ದೇಶಕ ಪಿ.ವಾಸು ಕನ್ನಡದಲ್ಲಿ 'ಆಪ್ತಮಿತ್ರ' ಸೀಕ್ವೆಲ್‌ಗೆ ಕಥೆ ಬರೆದು ನಿರ್ದೇಶಿಸಿದ್ದರು. ಅದುವೇ 'ಆಪ್ತರಕ್ಷಕ'. ಈ ಸಿನಿಮಾ ಕೂಡ ಬಾಕ್ಸಾಫೀಸ್‌ನಲ್ಲಿ ಗೆದ್ದು ಬೀಗಿತ್ತು. ಈಗ ಮತ್ತೆ ತಮಿಳು ಚಿತ್ರರಂಗದಲ್ಲಿ 'ಚಂದ್ರಮುಖಿ'ಯ ಸದ್ದು ಕೇಳಿ ಬರುತ್ತಿದೆ.

Kangana Ranaut and Raghava Lawrence Movie Chandramukhi 2 is releasing on Ganesha Festival

ನಿರ್ದೇಶಕ ಪಿ.ವಾಸು, ನಟ ರಾಘವ ಲಾರೆನ್ಸ್ ಹಾಗೂ ಬಾಲಿವುಡ್ ನಟಿ ಕಂಗನಾ ರನೌತ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್ ಬಹುತೇಕ ಮುಗಿದಿದ್ದು, ರಿಲೀಸ್ ಡೇಟ್ ಕೂಡ ಅನೌನ್ಸ್ ಆಗಿದೆ. ಗಣೇಶ್ ಹಬ್ಬದಂದೇ ಥಿಯೇಟರ್‌ಗೆ ಲಗ್ಗೆ ಇಡುತ್ತಿದೆ.

18 ವರ್ಷಗಳ ಬಳಿಕ 'ಚಂದ್ರಮುಖಿ' ಸೀಕ್ವೆಲ್

'ಚಂದ್ರಮುಖಿ 2' ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ 'ಚಂದ್ರಮುಖಿ' ಸಿನಿಮಾದ ಸೀಕ್ವೆಲ್. ಆದರೆ, ಸೀಕ್ವೆಲ್‌ನಲ್ಲಿ ರಜನಿಕಾಂತ್ ಪಾತ್ರದ ಬದಲಾಗಿ ರಾಘವ ಲಾರೆನ್ಸ್ ಕಾಣಿಸಿಕೊಂಡಿದ್ದಾರೆ. 'ಚಂದ್ರಮುಖಿ' ಸಿನಿಮಾವನ್ನೇ ನಿರ್ದೇಶನ ಮಾಡಿದ್ದ ಪಿ ವಾಸು ಇದಕ್ಕೂ ಆಕ್ಷನ್ ಕಟ್ ಹೇಳುತ್ತಿದ್ದಾರೆ.

'ಇಂಡಿಯನ್ 2', 'ಎಂದಿರನ್', 2.0', 'ಪೊನ್ನಿಯಿನ್ ಸೆಲ್ವನ್' ಅಂತಹ ದುಬಾರಿ ಬಜೆಟ್ ಸಿನಿಮಾಗಳನ್ನೇ ನಿರ್ಮಿಸಿರೋ ಲೈಕಾ ಪ್ರೊಡಕ್ಷನ್ ಬಂಡವಾಳ ಹೂಡಿದೆ. 2005ರಲ್ಲಿ 'ಚಂದ್ರಮುಖಿ' ಸಿನಿಮಾದಲ್ಲಿ ರಜನಿ ನಟಿಸಿದ್ದರು. ಅಲ್ಲಿಂದ ಸುಮಾರು 18 ವರ್ಷಗಳ ಬಳಿಕ 'ಚಂದ್ರಮುಖಿ' ಸೀಕ್ವೆಲ್ ಬಿಡುಗಡೆಯಾಗುತ್ತಿದೆ. ಹೀಗಾಗಿ ಈ ಸಿನಿಮಾದ ಮೇಲೆ ನಿರೀಕ್ಷೆ ದುಪ್ಪಟ್ಟಾಗಿದೆ.

Kangana Ranaut and Raghava Lawrence Movie Chandramukhi 2 is releasing on Ganesha Festival

'ಚಂದ್ರಮುಖಿ 2'ನಲ್ಲಿ ಬಾಲಿವುಡ್ ಕ್ವೀನ್

ಬಾಲಿವುಡ್‌ನ ಕಾಂಟ್ರವರ್ಸಿ ಕ್ವೀನ್ ಕಂಗನಾ ರನೌತ್ ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕೆಲವು ತಿಂಗಳುಗಳ ಹಿಂದಷ್ಟೇ 'ಚಂದ್ರಮುಖಿ 2' ಸಿನಿಮಾದ ಶೂಟಿಂಗ್‌ಗೆ ರೆಡಿಯಾಗುತ್ತಿರುವ ಫೋಟೊವನ್ನು ಶೇರ್ ಮಾಡಿದ್ದರು. ಅಲ್ಲಿಂದ ನಟಿ ಕಂಗನಾ ರನೌತ್‌ 'ಚಂದ್ರಮುಖಿ' ಇರಬಹುದಾ? ಇಲ್ಲ ಬೇರೆ ನಟಿನಾ? ಕಥೆ ಏನು? ಅನ್ನೋ ಕುತೂಹಲ ಹುಟ್ಟಿಕೊಂಡಿದೆ.

ಈ ಸಿನಿಮಾದಲ್ಲಿ ಕಂಗನಾ ರನೌತ್‌ ಜೊತೆ ಮಾಡಲ್ ಕಮ್ ನಟಿ ಲಕ್ಷ್ಮಿ ಮೆನನ್ ಕೂಡ ಪ್ರಮುಖ ಪಾತ್ರದಲ್ಲಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ಇವರೊಂದಿಗೆ ಹಾಸ್ಯ ನಟ ವಡಿವೇಲು, ಮಹಿಮಾ ನಂಬಿಯಾರ್, ರಾಧಿಕಾ ಶರತ್ ಕುಮಾರ್, ಸುರೇಶ್ ಮೆನನ್ ಕೂಡ ಈ ಸಿನಿಮಾದಲ್ಲಿದ್ದಾರೆ.

ಗಣೇಶ ಚತುರ್ಥಿಗೆ ರಿಲೀಸ್

'ಚಂದ್ರಮುಖಿ 2' ತಮಿಳಿನ ಬಹು ನಿರೀಕ್ಷಿತ ಸಿನಿಮಾಗಳಲ್ಲೊಂದು. 18 ವರ್ಷಗಳ ಬಳಿಕ 'ಚಂದ್ರಮುಖಿ' ಸೀಕ್ವೆಲ್ ರಿಲೀಸ ಆಗುತ್ತಿರೋದ್ರಿಂದ ಗಣೇಶ್ ಹಬ್ಬದ ಸಂಭ್ರಮದಲ್ಲಿಯೇ ಸಿನಿಮಾ ರಿಲೀಸ್ ಮಾಡುವುದಕ್ಕೆ ಲೈಕಾ ನಿರ್ಧರಿಸಿದೆ. ಈ ವೇಳೆ ಕುಟುಂಬ ಸಮೇತ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಾರೆ ಅನ್ನೋ ನಂಬಿಕೆ.

18 ವರ್ಷಗಳ ಬಳಿಕ 'ಚಂದ್ರಮುಖಿ' ಸೀಕ್ವೆಲ್ ಬರುತ್ತಿರೋದ್ರಿಂದ, ಈ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಬಿಡುಗಡೆಯಾಗುತ್ತಿದೆ. ತಮಿಳು, ತೆಲುಗು, ಹಿಂದಿ, ಕನ್ನಡ ಹಾಗೂ ಮಲಯಾಳಂ ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ಸದ್ಯ 'ಚಂದ್ರಮುಖಿ 2'ಗೂ ಕನ್ನಡದ 'ಆಪ್ತರಕ್ಷಕ'ನಿಗೂ ಏನಾದರೂ ಸಂಬಂಧವಿದೆಯೇ ಅನ್ನೋ ಕುತೂಹಲವಂತೂ ಅಭಿಮಾನಿಗಳಲ್ಲಿ ಇದ್ದೇ ಇದೆ.

More from Filmibeat

English summary
Kangana Ranaut and Raghava Lawrence Movie Chandramukhi 2 is releasing on Ganesha Festival, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X