'ನೀಲಕಂಠ', 'ಹೂ' ಸಿನಿಮಾದ ನಟಿ ನಮಿತಾ ತುಂಬು ಗರ್ಭಿಣಿ: ಬೇಬಿ ಬಂಪ್ ಫೋಟೊಶೂಟ್ ವೈರಲ್!

ಬಹುಭಾಷಾ ನಟಿ ನಮಿತಾ ಯಾರಿಗೆ ಗೊತ್ತಿಲ್ಲ ಹೇಳಿ? ಸಿನಿಮಾ ಪ್ರೀತಿಸುವ ಪ್ರತಿಯೊಬ್ಬರಿಗೂ ನಮಿತಾ ಯಾರು ಅಂತ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಕನ್ನಡದಲ್ಲೂ ಸಾಕಷ್ಟು ಸಿನಿಮಾಗಳಲ್ಲಿ ನಮಿತಾ ನಟಿಸಿದ್ದಾರೆ. ದಕ್ಷಿಣ ಭಾರತದ ಬೋಲ್ಡ್ ನಟಿ ನಮಿತಾ ಸದ್ಯ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಮೇ 10 ರಂದು ತನ್ನ ಹುಟ್ಟುಹಬ್ಬದ ಸಂಭ್ರಮದಲ್ಲಿ ತನ್ನ ಅಭಿಮಾನಿಗಳಿಗೆ ಹಾಗೂ ಸ್ನೇಹಿತರಿಗೆ ಸಿಹಿ ಸುದ್ದಿಯನ್ನು ನೀಡಿದ್ದರು. ಮಗುವಿನ ನಿರೀಕ್ಷೆಯಲ್ಲಿರುವ ಸುದ್ದಿಯನ್ನು ಫೋಟೊಗಳ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಅನೌನ್ಸ್ ಮಾಡಿದ್ದರು. "ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇನೆ ನನ್ನ ಜೀವನದ ಹೊಸ ದಿನಗಳು ಆರಂಭವಾಗುತ್ತಿದೆ." ಎಂದು ಬರೆದುಕೊಂಡಿದ್ದರು.

ಈಗ ಮತ್ತೊಂದು ಫೋಟೊಶೂಟ್ ಮಾಡಿಸಿದ್ದು, ಆ ಫೋಟೊಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ನಮಿತಾಗೆ ಅಭಿಮಾನಿಗಳು ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಕಳೆದೊಂದು ತಿಂಗಳಿಂದ ನಮಿತಾ ತಾಯ್ತನದ ಸಂಭ್ರಮವನ್ನು ಹಂಚಿಕೊಳ್ಳುತ್ತಿದ್ದಾರೆ.

ಬೇಬಿ ಬಂಪ್ ಫೋಟೊ ವೈರಲ್

ಬೇಬಿ ಬಂಪ್ ಫೋಟೊ ವೈರಲ್

ಕನ್ನಡ ಸಿನಿಮಾಗಳಲ್ಲೂ ನಟಿಸಿರುವ ನಮಿತಾ ದಕ್ಷಿಣ ಭಾರತ ಸಿನಿಪ್ರಿಯರಿಗೆ ಚಿರಪರಿಚಿತ. ಈ ಕಾರಣಕ್ಕೆ ದಕ್ಷಿಣ ಭಾರತದ ಮೂಲೆ ಮೂಲೆಯಿಂದಲೂ ಅಭಿಮಾನಿಗಳು ಶುಭಾಶಗಳನ್ನು ತಿಳಿಸುತ್ತಿದ್ದಾರೆ. ಎರಡು ದಿನಗಳ ಹಿಂದಷ್ಟೇ ನಮಿತಾ ಬೇಬಿ ಬಂಪ್ ಫೋಟೊಶೂಟ್ ಮಾಡಿಸಿದ್ದರು. ಆ ಫೋಟೊಗಳನ್ನು ತನ್ನ ಇನ್‌ಸ್ಟಾಗ್ರಾಂನಲ್ಲಿ ಫೋಟ್ ಮಾಡಿದ್ದರು. ಆ ಫೋಟೊಗಳೇ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಅದ್ಧೂರಿ ಸೀಮಂತ ಶಾಸ್ತ್ರ

ಅದ್ಧೂರಿ ಸೀಮಂತ ಶಾಸ್ತ್ರ

ಇತ್ತೀಚೆಗಷ್ಟೇ ಬಹುಭಾಷಾ ನಟಿ ನಮಿತಾಗೆ ಸೀಮಂತದ ಶಾಸ್ತ್ರ ನೆರವೇರಿತ್ತು. ಕುಟುಂಬಸ್ಥರು ಹಾಗೂ ಆಪ್ತರು ಹಾಗೂ ಚಿತ್ರರಂಗದ ಗಣ್ಯರು ಈ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಆ ಫೋಟೊಗಳನ್ನು ನಮಿತಾ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಮಾಡಿ ಶೇರ್ ಮಾಡಿಕೊಂಡಿದ್ದರು. ಪಕ್ಕಾ ಟ್ರೆಡಿಷನಲ್ ಲುಕ್‌ನಲ್ಲಿ ನಟಿ ನಮಿತಾ ಕಾಣಿಸಿಕೊಂಡಿದ್ದರು. ಸೀರೆಯುಟ್ಟು ಕಂಗೊಳಿಸುತ್ತಿದ್ದ ನಮಿತಾ ಕಂಡು ಅಭಿಮಾನಿಗಳು ಹಾರೈಸಿದ್ದರು.

ನಮಿತಾ ತುಂಬು ಗರ್ಭಿಣಿ

ನಮಿತಾ ತುಂಬು ಗರ್ಭಿಣಿ

2017ರಲ್ಲಿ ಬಹುಭಾಷಾ ನಟಿ ನಮಿತಾ ಉದ್ಯಮಿ ವೀರೇಂದ್ರ ಚೌಧರಿ ಎಂಬುವವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ವಿವಾಹದ ಬಳಿಕವೂ ನಮಿತಾ ಸಿನಿಮಾದಲ್ಲಿ ಆಕ್ಟಿವ್ ಆಗಿದ್ದರು. ಸದ್ಯ 41 ವರ್ಷದ ನಮಿತಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ತುಂಬು ಗರ್ಭಿಣಿಯಾಗಿರುವ ನಟಿ ಕೆಲವೇ ದಿನಗಳಲ್ಲಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಕಾರಣಕ್ಕೆ ಮಧುರ ನೆನಪಿಗಾಗಿ ಬೇಬಿ ಬಂಪ್ ಫೋಟೊಶೂಟ್ ಮಾಡಿದ್ದಾರೆ.

Recommended Video

Niveditha Gowda ಹೊಸ ಸಾಧನೆಗೆ ಅಭಿಮಾನಿಗಳೆಲ್ಲಾ ಖುಷ್ *Sandalwood | Filmibeat Kannada

ದಕ್ಷಿಣದ ಬೋಲ್ಡ್ ನಟಿ ನಮಿತಾ

ದಕ್ಷಿಣ ಭಾರತದ ಬೋಲ್ಡ್ ನಟಿ ನಮಿತಾ. ಕನ್ನಡ ಸೇರಿದಂತೆ ತೆಲುಗು, ತಮಿಳು ತೆಲುಗು ಭಾಷೆಗಳಲ್ಲಿಯೂ ನಮಿತಾ ಮಿಂಚಿದ್ದಾರೆ. ಅದರಲ್ಲೂ ತಮಿಳುನಾಡಿನಲ್ಲಿ ನಮಿತಾಗೆ ಅಭಿಮಾನಿಗಳು ಗುಡಿ ಕಟ್ಟಿದ್ದರು. ಇನ್ನು ಕನ್ನಡದಲ್ಲಿ ಕ್ರೇಜಿಸ್ಟಾರ್ ಜೊತೆ 'ನೀಲಕಂಠ' ಹಾಗೂ 'ಹೂ' ಸಿನಿಮಾಗಳಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್‌ ಜೊತೆ ರೊಮ್ಯಾಂಟಿಕ್ ಆಗಿ ಕಂಡಿದ್ದರು. 1998 ರಲ್ಲಿ ನಮಿತಾ 'ಮಿಸ್ ಸೂರತ್' ಆಗಿದ್ದರು. ಆಗ ಇವರಿಗೆ 17 ವರ್ಷ ವಯಸ್ಸಾಗಿತ್ತು. 2001ರಲ್ಲಿ ಮಿಸ್‌ ಇಂಡಿಯಾ ಸೌಂದರ್ಯ ಸ್ಪರ್ಧೆಯಲ್ಲಿ ಭಾಗಿಯಾಗಿ ಮೂರನೇ ಸ್ಥಾನಕ್ಕೆ ಬಂದಿದ್ದರು. ಸಿರಿಯಲ್‌ನಲ್ಲಿ ನಟಿಸಿದ ಬಳಿಕ 2002ರಲ್ಲಿ ತೆಲುಗಿನ 'ಸೊಂತಮ್' ಸಿನಿಮಾದ ಮೂಲಕ ಪಾದಾರ್ಪಣೆ ಮಾಡಿದರು.

More from Filmibeat

English summary
Kannada Movie Neelakanta Actress Namitha Baby Bump Photoshoot Goes Viral, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X