Jan Nayagan: 'ಜನ ನಾಯಗನ್' ರಿಲೀಸ್ ಆಗಲ್ಲ.. ಟಿಕೆಟ್ ಹಣ ವಾಪಸ್.. ಯಾವ್ಯಾವ ಥಿಯೇಟರ್‌ಗಳಲ್ಲಿ ಎಷ್ಟೆಷ್ಟು?

ದಳಪತಿ ವಿಜಯ್ ನಟನೆಯ ಕೊನೆಯ ಸಿನಿಮಾ 'ಜನ ನಾಯಗನ್' ಸಂಕಷ್ಟಕ್ಕೆ ಸಿಲುಕಿದೆ. ಸೆನ್ಸಾರ್ ಬೋರ್ಡ್‌ ಹಾಗೂ ಸಿನಿಮಾ ತಂಡದ ನಡುವಿನ ಕಿತ್ತಾಟದಲ್ಲಿ ಜನವರಿ 9ರಂದು ಬಿಡುಗಡೆಯಾಗಬೇಕಿದ್ದ 'ಜನ ನಾಯಗನ್' ಮುಂದೂಡಿಕೆಯಾಗಿದೆ. ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ ಅಧಿಕೃತವಾಗಿಯೇ ಈ ಹೇಳಿಕೆಯಲ್ಲಿ ಈ ವಿಚಾವನ್ನು ಸ್ಪಷ್ಟಪಡಿಸಿದೆ.

'ಜನ ನಾಯಗನ್' ರಿಲೀಸ್ ಆಗಿಯೇ ಆಗುತ್ತೆ ಅನ್ನೋ ನಂಬಿಕೆಯಲ್ಲಿ ಥಿಯೇಟರ್ ಮಾಲೀಕರು ಇದ್ದರು. ಅಲ್ಲದೆ ಸಿನಿಮಾ ಕೂಡ ರಿಲೀಸ್‌ಗೂ ಮುನ್ನವೇ ಸೆನ್ಸಾರ್ ಸಮಸ್ಯೆ ಇತ್ಯರ್ಥ ಆಗುತ್ತೆ ಅನ್ನೋ ನಂಬಿಕೆಯಲ್ಲಿತ್ತು. ಆದರೆ, ಅಂದುಕೊಂಡಂತೆ ಆಗಲಿಲ್ಲ. ಕೆವಿಎನ್‌ ಸಂಸ್ಥೆ ಕೋರ್ಟ್‌ ಮೆಟ್ಟಿಲೇರಿದ್ದು, ಬಿಡುಗಡೆ ದಿನ ಅಂದರೆ ಜನವರಿ 9ರಂದೇ ಚೈನ್ನೈ ಕೋರ್ಟ್‌ನಲ್ಲಿ ವಿಚಾರಣೆಯಿದೆ. ಹೀಗಾಗಿ ಜನವರಿ 9ರಂದು ಈ ಸಿನಿಮಾ ರಿಲೀಸ್ ಆಗೋದಿಲ್ಲ.

Karnataka s many Theaters Returning Jana Nayagan ticket amount to audience due to censor issue

ಇತ್ತ ಕರ್ನಾಟಕದಲ್ಲಿ ಬುಕ್‌ ಮೈ ಶೋ ಹಾಗೂ ಕೆಲವು ಥಿಯೇಟರ್‌ಗಳು ಪ್ರೇಕ್ಷಕರಿಗೆ ಜನವರಿ 9 ರಂದು ಟಿಕೆಟ್‌ಗಳನ್ನು ಕೊಟ್ಟಿತ್ತು. ಆ ಎಲ್ಲಾ ಚಿತ್ರಮಂದಿರಗಳು ಈಗ ಮೊದಲ ದಿನ ವಿತರಣೆ ಮಾಡಿದ ಟಿಕೆಟ್‌ಗಳನ್ನು ಹಿಂತಿರುಗಿಸುತ್ತಿವೆ. ಹಾಗಿದ್ದರೆ, ಕರ್ನಾಟಕದ ಯಾವೆಲ್ಲ ಚಿತ್ರಮಂದಿರಗಳು ಟಿಕೆಟ್ ದರವನ್ನು ಹಿಂತಿರುಗಿಸಿದೆ? ರೀ-ಫಂಡ್ ಆಗಿದ್ದು ಎಷ್ಟು ಹಣ? ಮೊದಲ ದಿನ ಎಷ್ಟು ಕೋಟಿ ಕಲೆಕ್ಷನ್ ಆಗಿತ್ತು? ತಿಳಿಯುವುದಕ್ಕೆ ಮುಂದೆ ಓದಿ.

ಕರ್ನಾಟಕದಲ್ಲಿ 'ಜನ ನಾಯಗನ್' ರೀ-ಫಂಡ್

ದಳಪತಿ ವಿಜಯ್ ಸಿನಿಮಾಗಳಿಗೆ ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಬೇಡಿಕೆ ಇರುತ್ತೆ. ಅದರಲ್ಲೂ ಕೊನೆಯ ಸಿನಿಮಾ 'ಜನ ನಾಯಗನ್' ನೋಡುವುದಕ್ಕೆ ಅವರ ಫ್ಯಾನ್ಸ್ ತುದಿಗಾಲಲ್ಲಿ ನಿಂತಿದ್ದರು. ಹೀಗಾಗಿ ಬೆಂಗಳೂರಿನಲ್ಲಿ ಹೆಚ್ಚು ಚಿತ್ರಮಂದಿರಗಳಲ್ಲಿ ಈ ಸಿನಿಮಾವನ್ನು ರಿಲೀಸ್ ಮಾಡುವುದಕ್ಕೆ ಪ್ಲ್ಯಾನ್ ಮಾಡಲಾಗಿತ್ತು. ಅಲ್ಲದೆ ಅಡ್ವಾನ್ಸ್ ಟಿಕೆಟ್‌ ಬುಕಿಂಗ್ ಅನ್ನೂ ಓಪನ್ ಮಾಡಲಾಗಿತ್ತು. ಇದಕ್ಕೆ ಬೆಂಗಳೂರಿನಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಜನರು 'ಬುಕ್‌ ಮೈ ಶೋ' ಹಾಗೂ ಥಿಯೇಟರ್‌ ಕೌಂಟರ್‌ನಲ್ಲಿ ಟಿಕೆಟ್‌ಗಳನ್ನು ಖರೀದಿ ಮಾಡಿದ್ದರು. ಅದನ್ನೀಗ ಹಿಂತಿರಿಗಿಸಲಾಗುತ್ತಿದೆ.

ಎಷ್ಟೆಷ್ಟು ರೀ-ಫಂಡ್ ಆಗಿದೆ?

'ಜನ ನಾಯಗನ್' ಸಿನಿಮಾ ರಿಲೀಸ್ ಪೋಸ್ಟ್‌ಪೋನ್ ಆಗಿದ್ದರಿಂದ ಕರ್ನಾಟಕದ ಥಿಯೇಟರ್ ಮಾಲೀಕರು ಹಣವನ್ನು ಹಿಂತಿರುಗಿಸುತ್ತಿದ್ದಾರೆ. ಬೆಂಗಳೂರಿನ ಪ್ರಮುಖ ಚಿತ್ರಮಂದಿರಗಳು ಈಗಾಗಲೇ ಮೊದಲ ದಿನದ ಟಿಕೆಟ್ ದರವನ್ನು ಹಿಂತಿರುಗಿಸುತ್ತಿದ್ದಾರೆ. ಅಂತಹ ಥಿಯೇಟರ್‌ಗಳ ಲಿಸ್ಟ್ ಇಲ್ಲಿದೆ.

Karnataka s many Theaters Returning Jana Nayagan ticket amount to audience due to censor issue

ರೀ-ಫಂಡ್ (ಅನ್‌ಲೈನ್+ಕೌಂಟರ್)

ಊರ್ವಶಿ ₹13 ಲಕ್ಷ
ಮುಕುಂದ ₹21 ಲಕ್ಷ
ಅರುಣ ₹14 ಲಕ್ಷ
ಸಂಪಿಗೆ ₹9 ಲಕ್ಷ
ಪುಷ್ಪಾಂಜಲಿ ಬಿಎನ್‌ಪುರ ₹14 ಲಕ್ಷ
ಬಾಲಾಜಿ ತಾವರೆಕೆರೆ ₹19 ಲಕ್ಷ
ಸಿದ್ದೇಶ್ವರ+ಸಿದ್ದಲಿಂಗೇಶ್ವರ ₹13 ಲಕ್ಷ
ಕೃಷ್ಣ ಬೊಮ್ಮನಹಳ್ಳಿ ₹11 ಲಕ್ಷ

3 ದಿನದ ಬ್ಯುಸಿನೆಸ್ ಎಷ್ಟಾಗಿತ್ತು?

ಕರ್ನಾಟಕದಲ್ಲಿ 'ಜನ ನಾಯಗನ್' ಅಡ್ವಾನ್ಸ್ ಬುಕಿಂಗ್ ಆದ ಮೂರು ದಿನಗಳಲ್ಲಿ (ಶುಕ್ರವಾರ ಬೆಳಗ್ಗೆ 6 ಗಂಟೆಯಿಂದ ಭಾನುವಾರ ರಾತ್ರಿವರೆಗೆ) ಹೆಚ್ಚು ಕಡಿಮೆ ₹10 ಕೋಟಿಗೂ ಅಧಿಕ ಬುಕ್ ಮೈ ಶೋನಿಂದ ಬ್ಯುಸಿನೆಸ್ ಆಗಿದೆ ಎನ್ನಲಾಗಿದೆ. ಸೆನ್ಸಾರ್ ವಿವಾದ ಆಗುತ್ತಿದ್ದಂತೆ ಮಂಗಳವಾರದಿಂದ ಬುಕಿಂಗ್ ನಿಲ್ಲಿಸಿದ್ದರು. ಒಂದು ವೇಳೆ ಇಲ್ಲಿವರೆಗೂ ಕಂಟಿನ್ಯೂ ಆಗಿದ್ದರೆ, ಹೆಚ್ಚು ಕಡಿಮೆ ₹20 ಕೋಟಿ ಬ್ಯುಸಿನೆಸ್ ಆಗುತ್ತಿತ್ತು ಎನ್ನಲಾಗಿದೆ.

ಇನ್ನೂ 'ಜನ ನಾಯಗನ್' ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಅನ್ನೋ ಕ್ಲಾರಿಟಿ ಇಲ್ಲ. ಹೀಗಾಗಿ ಸಿನಿಮಾ ಬಿಡುಗಡೆ ಬಗೆ ನಿರ್ಮಾಣ ಸಂಸ್ಥೆಯಿಂದಲೂ ಖಚಿತ ಮಾಹಿತಿ ಇಲ್ಲ. ಕೋರ್ಟ್‌ನಲ್ಲಿ ಸಮಸ್ಯೆಗೆ ಪರಿಹಾರ ಸಿಕ್ಕಿದರೆ, ಸಂಕ್ರಾಂತಿ ಒಳಗೆ ರಿಲೀಸ್ ಆಗಬಹುದು. ಇಲ್ಲಾ ಹೊಸದೊಂದು ಡೇಟ್‌ಗೆ ಹುಡುಕಾಟ ನಡೆಸಬಹುದು. ಒಂದು ಲೆಕ್ಕಾಚಾರದ ಪ್ರಕಾರ ಯುಗಾದಿ ಹಬ್ಬಕ್ಕೆ ರಿಲೀಸ್ ಆಗುವ ಸಾಧ್ಯತೆಯಿದೆ.

More from Filmibeat

English summary
Karnataka's many Theaters Returning Jana Nayagan ticket amount to audience due to censor issue.
Read more about: vijay ticket karnataka
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X