Keerthy Suresh Marriage: ಅನಿರುದ್ಧ್ ಜೊತೆ ಕೀರ್ತಿ ಸುರೇಶ್ ಮದುವೆ: ಕೊನೆಗೂ ಸ್ಪಷ್ಟನೆ ಕೊಟ್ಟ 'ಮಹಾನಟಿ' ಅಪ್ಪ
ಸೌತ್ ಸಿನಿಮಾ ಇಂಡಸ್ಟ್ರಿಯ ಮಹಾನಟಿ ಕೀರ್ತಿ ಸುರೇಶ್. ಈ ನಟಿಯ ಹಲವು ಸಿನಿಮಾಗಳು ಸೋತಿದ್ದರೂ ಅವರ ಅಭಿನಯಕ್ಕೆ ಮೆಚ್ಚುಗೆ ಸಿಕ್ಕಿತ್ತು. ಹಾಗೇ ಅವಕಾಶಗಳು ಕೂಡ ಕಡಿಮೆ ಆಗಿಲ್ಲ. ಒಂದರ ಹಿಂದೊಂದು ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಡುತ್ತಲೇ ಇದ್ದಾರೆ.
'ಮಹಾನಟಿ' ಕೀರ್ತಿ ಸುರೇಶ್ ವೃತ್ತಿ ಬದುಕಿಗೆ ಹೊಸ ತಿರುವನ್ನೇ ಕೊಟ್ಟಿತ್ತು. ಕೆಲವೊಮ್ಮೆ ತಪ್ಪು ಆಯ್ಕೆ ಮಾಡಿಕೊಂಡು ಸೋತರೂ ಅಭಿಮಾನಿಗಳು ಮಾತ್ರ ಕೈ ಬಿಡಲಿಲ್ಲ. ಸದ್ಯ ಕೀರ್ತಿ ಸುರೇಶ್ ತಮ್ಮ ವೃತ್ತಿ ಬದುಕಿನಲ್ಲಿ ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುತ್ತಲೇ ಮುಂದೆ ಸಾಗುತ್ತಿದ್ದಾರೆ.

ಕೀರ್ತಿ ಸುರೇಶ್ ವೃತ್ತಿ ಬದುಕು ಒಂದೆಡೆಯಾದರೆ, ಇನ್ನೊಂದು ಕಡೆ ಮದುವೆ ಬಗ್ಗೆ ಗಾಳಿ ಸುದ್ದಿಗಳು ಜೋರಾಗಿಯೇ ಸದ್ದು ಮಾಡುತ್ತವೆ. ತಮಿಳಿನ ನಟರೊಂದಿಗೆ, ಸಂಗೀತ ನಿರ್ದೇಶಕರೊಂದಿಗೆ ಇವರ ಹೆಸರು ತಳುಕು ಹಾಕಿಕೊಳ್ಳುತ್ತಲೇ ಇರುತ್ತೆ. ಕಳೆದ ಕೆಲವು ದಿನಗಳಿಂದ ಕೀರ್ತಿ ಸುರೇಶ್ 'ಜವಾನ್' ಸಿನಿಮಾದ ಸಂಗೀತ ನಿರ್ದೇಶಕ ಅನಿರುದ್ಧ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ ಅನ್ನೋ ಸುದ್ದಿ ಹಬ್ಬಿತ್ತು. ಈ ವಿಚಾರಕ್ಕೆ ಕೀರ್ತಿ ಸುರೇಶ್ ತಂದೆ ಸುರೇಶ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಕೀರ್ತಿ ಸುರೇಶ್ ಮದುವೆ ಮ್ಯಾಟರ್ ಏನು?
ಇದ್ದಕ್ಕಿದ್ದ ಹಾಗೇ ರಾಷ್ಟ್ರೀಯ ಮಾಧ್ಯಮಗಳಲ್ಲಿ ಕೀರ್ತಿ ಸುರೇಶ್ ಮದುವೆ ಸುದ್ದಿಯಾಗುತ್ತಿತ್ತು. ಬಹುತೇಕ ಮಾಧ್ಯಮಗಳು 'ಮಹಾನಟಿ' ಕೀರ್ತಿ ಸುರೇಶ್ ತನ್ನ ಗೆಳೆಯ ಅನಿರುದ್ಧ್ ರವಿಚಂದರ್‌ರನ್ನು ಮದುವೆ ಆಗಲಿದ್ದಾರೆ. ಮುಂದಿನ ವರ್ಷ ಜನವರಿಯಲ್ಲಿ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದೆ ಎಂದು ಸುದ್ದಿಯನ್ನು ಬಿತ್ತರಿಸಿದ್ದವು. ಇದು ವೈರಲ್ ಆಗುತ್ತಿದ್ದಂತೆ ಕೀರ್ತಿ ಸುರೇಶ್ ತಂದೆ ಪ್ರತಿಕ್ರಿಯೆ ನೀಡಿದ್ದಾರೆ.

ಕೀರ್ತಿ ಸುರೇಶ್ ಮದುವೆ ಬಗ್ಗೆ ರೂಮರ್
ನಟಿ ಕೀರ್ತಿ ಸುರೇಶ್ ಮದುವೆ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್‌ನಲ್ಲಿ ಇರುತ್ತೆ. 'ಮಹಾನಟಿ'ಯ ಮದುವೆ ಮ್ಯಾಟರ್ ಹೊಸದೇನು ಅಲ್ಲ. ಈ ಹಿಂದೆ ಹಲವು ಬಾರಿ ಕೀರ್ತಿ ಸುರೇಶ್ ಹೆಸರು ತಮಿಳಿನ ಸೆಲೆಬ್ರೆಟಿ ಜೊತೆ ತಳುಕು ಹಾಕಿಕೊಂಡಿತ್ತು. ಒಮ್ಮೆ ದಳಪತಿ ವಿಜಯ್ ಹೆಸರು ಕೇಳಿ ಬಂದಿತ್ತು. ಮತ್ತೊಮ್ಮೆ ಸಂಗೀತ ನಿರ್ದೇಶಕ ಅನಿರುದ್ದ್ ರವಿಚಂದ್ರನ್ ಜೊತೆ ಸಪ್ತಪದಿ ತುಳಿಯುತ್ತಾರೆಂಬ ಸುದ್ದಿನೂ ಹಬ್ಬಿತ್ತು. ಅದೆಲ್ಲವೂ ಸುಳ್ಳು ಎಂದು ಕೀರ್ತಿ ಸುರೇಶ್ ಕುಟುಂಬವೇ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು.
ಅನಿರುದ್ಧ್ ಜೊತೆ ಮದುವೆ ಸುಳ್ಳು
ತಮಿಳು ನಟ ಅನಿರುದ್ಧ್ ರವಿಚಂದರ್ ಜೊತೆ ಕೀರ್ತಿ ಸುರೇಶ್ ಮದುವೆ ಆಗುತ್ತಾರೆಂಬ ಸುದ್ದಿ ಈ ಹಿಂದೆ ಕೂಡ ಕೇಳಿ ಬಂದಿತ್ತು. ಈಗ ಮತ್ತೆ ಅನಿರುದ್ಧ್ ಹಾಗೂ ಕೀರ್ತಿ ಮದುವೆ ಸುದ್ದಿ ಹರಿದಾಡುತ್ತಿದೆ. ಆದರೆ, ಈ ಬಾರಿ ಕೂಡ ಈ ಸುದ್ದಿ ಸುಳ್ಳು ಎಂದು ಕೀರ್ತಿ ಸುರೇಶ್ ತಂದೆ ಸುರೇಶ್ ಕುಮಾರ್ ತಿಳಿಸಿದ್ದಾರೆ. " ಕೀರ್ತಿ ಸುರೇಶ್ ಹಾಗೂ ಅನಿರುದ್ಧ್ ಬಗ್ಗೆ ಸುದ್ದಿ ಹಬ್ಬುತ್ತಿರೋದು ಇದೇ ಮೊದಲೇನಲ್ಲ. ಸುಮ್ಮನೆ ಸುಳ್ಳು ಸುದ್ದಿಗಳನ್ನು ಹಬ್ಬಿಸಬೇಡಿ." ಎಂದು ಸುರೇಶ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ದುಬೈ ಉದ್ಯಮಿ ಜೊಯೆ ಮದುವೆ
ದಳಪತಿ ವಿಜಯ್, ಅನಿರುದ್ಧ್ ರವಿಚಂದರ್ ಅಷ್ಟೇ ಅಲ್ಲದೆ, ದುಬೈ ಮೂಲದ ಉದ್ಯಮಿಯನ್ನು ವಿವಾಹವಾಗುತ್ತಿದ್ದಾರೆ ಎಂದೂ ಸುದ್ದಿ ಹಬ್ಬಿತ್ತು. ಫರ್ಹಾನ್ ಬಿನ್ ಲಿಖಾಯತ್ ಅನ್ನೋ ದುಬೈ ಮೂಲದ ಉದ್ಯಮಿ ಜೊತೆ ಮದುವೆ ಆಗುತ್ತಿದ್ದಾರೆ ಅನ್ನೋ ಸುದ್ದಿ ಕೂಡ ಓಡಾಡಿತ್ತು. ಆದರೆ, ಕೀರ್ತಿ ಸುರೇಶ್ ಈ ಮ್ಯಾಟರ್ ಅನ್ನೂ ತಳ್ಳಿ ಹಾಕಿದ್ದರು. "ಆ ಮಿಸ್ಟರಿ ಮ್ಯಾನ್ ಯಾರು ಅನ್ನೋದನ್ನು ಸಮಯ ಬಂದಾಗ ತಿಳಿಸುವುದಾಗಿ" ಹೇಳಿದ್ದರು.


Click it and Unblock the Notifications











