ಅನುಪಮಾ ಆಯ್ತು ಈಗ ಕೀರ್ತಿ ಸುರೇಶ್: ಒಬ್ಬೊಬ್ಬರೇ ಹೀಗೆ ಬದಲಾದರೆ ಅಭಿಮಾನಿಗಳ ಗತಿಯೇನು?

ಭಾರತದಾದ್ಯಂತ ಬೇರೆ ಬೇರೆ ಭಾಷೆಯಲ್ಲಿ ನಾಯಕಿಯರು ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕೆಲವರು ಪಾತ್ರಕ್ಕೆ ತಕ್ಕಂತೆ ಬದಲಾಗಿದ್ದು ಇದೆ. ಹಾಗಾಗಿ ಅಂತಹ ನಟಿಯರು ಟ್ರೆಡಿಷನಲ್ ಲುಕ್‌ನಲ್ಲಿ ಕಂಡರೂ, ಗ್ಲಾಮರಸ್ ಲುಕ್‌ನಲ್ಲಿ ಕಾಣಿಸಿಕೊಂಡರೂ ಫ್ಯಾನ್ಸ್ ಹೆಚ್ಚೇನು ತಲೆಕೆಡಿಸಿಕೊಳ್ಳುವುದಿಲ್ಲ. ಅದೇ ಇನ್ನು ಕೆಲವು ನಟಿಯರು ಹಾಗಲ್ಲ. ಅಭಿಮಾನಿಗಳ ಮನಸ್ಸಿನಲ್ಲಿ ಅವರ ಇಮೇಜ್ ಬೇರೆನೇ ಇರುತ್ತೆ. ಅಂತಹವರು ಬದಲಾದರೆ ಫ್ಯಾನ್ಸ್‌ಗೆ ತಡೆದುಕೊಳ್ಳುವುದಕ್ಕೆ ಆಗುವುದಿಲ್ಲ.

ದಕ್ಷಿಣ ಭಾರತದಲ್ಲಿರುವ ನಾಯಕಿಯರಲ್ಲಿ ಸದಾ ಟ್ರೆಡಿಷನಲ್‌ ಲುಕ್‌ನಲ್ಲಿ ಕಾಣಿಸಿಕೊಳ್ಳುವ ಕೆಲವೇ ಕೆಲವು ನಟಿಯರಿದ್ದಾರೆ. ಅಂತಹವರಲ್ಲಿ ಸಾಯಿ ಪಲ್ಲವಿ, ಕೀರ್ತಿ ಸುರೇಶ್ ಮೊದಲಿಗರಾಗಿ ನಿಲ್ಲುತ್ತಾರೆ. ಆದರೆ, ಇವರಲ್ಲಿ ಕೀರ್ತಿ ಸುರೇಶ್ ಯಾಕೋ ಬದಲಾದರು ಅಂತ ಅಭಿಮಾನಿಗಳಿಗೆ ಅನಿಸುತ್ತಿದೆ. ಅದಕ್ಕೆ ಕಾರಣ ಇತ್ತೀಚೆಗೆ ಕೀರ್ತಿ ಸುರೇಶ್ ಅವಾರ್ಡ್ ಫಂಕ್ಷನ್‌ನಲ್ಲಿ ಕಾಣಿಸಿಕೊಂಡ ರೀತಿ.

Keerthy Suresh Bold looks stunning at the filmfare award event

ಇತ್ತೀಚೆಗೆ ಹೈದರಾಬಾದ್‌ನಲ್ಲಿ 69ನೇ ಫಿಲ್ಮ್‌ ಫೇರ್ ಪ್ರಶಸ್ತಿ ಸಮಾರಂಭ ನಡೆದಿತ್ತು. ಈ ವೇಳೆ ಬೇರೆ ಚಿತ್ರರಂಗದ ಸ್ಟಾರ್‌ಗಳು ಈ ಕಾರ್ಯಕ್ರಮಕ್ಕೆ ಬಂದಿದ್ದರು. ಅದರಲ್ಲೂ ದಕ್ಷಿಣ ಭಾರತದ ಫಿಲ್ಮ್‌ಫೇರ್ ಆಗಿದ್ದರಿಂದ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರರಂಗದ ತಾರೆಯರು ಆಗಮಿಸಿದ್ದರು. ಈ ವೇಳೆ ಕೀರ್ತಿ ಸುರೇಶ್ ಕೂಡ ಆಗಮಿಸಿದ್ದರು. ಅವರ ಕಾಸ್ಟ್ಯೂಮ್‌ ಸೆನ್ಸ್‌ ಕಂಡು ಫ್ಯಾನ್ಸ್ ಕಂಗಾಲಾಗಿ ಹೋಗಿದ್ದಾರೆ.

ಕೆಲವು ನಾಯಕಿಯರನ್ನು ಟ್ರೆಡಿಷನಲ್ ಲುಕ್‌ನಲ್ಲಿ ನೋಡುವುದಕ್ಕೆ ಅಭಿಮಾನಿಗಳು ಇಷ್ಟ ಪಡುತ್ತಾರೆ. ಅವರಲ್ಲಿ ತಮನ್ನಾ, ಅನುಪಮಾ ಪರಮೇಶ್ವರನ್, ಸಾಯಿ ಪಲ್ಲವಿ, ಕೀರ್ತಿ ಸುರೇಶ್ ಅಂತ ನಟಿಯರು ಸೇರಿಕೊಳ್ಳುತ್ತಾರೆ. ಆದರೆ, ಈ ಪಟ್ಟಿಯಿಂದ ಈಗಾಗಲೇ ತಮನ್ನಾ ಹಾಗೂ ಅನುಪಮಾ ಪರಮೇಶ್ವರನ್ ಈ ಪಟ್ಟಿಯಿಂದ ಹೊರಬಿದ್ದಿದ್ದಾರೆ. ಈಗ ಕೀರ್ತಿ ಸುರೇಶ್ ಕೂಡ ಅದೇ ಸಾಲಿಗೆ ಸೇರುವ ಹಾಗೆ ಕಾಣಿಸುತ್ತಿದೆ.

ಇದೂವರೆಗೂ ಕೀರ್ತಿ ಸುರೇಶ್ ಬೋಲ್ಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದೇ ಇಲ್ಲ. ಅದರಲ್ಲೂ ಸ್ಕಿನ್ ಶೋ ಮಾಡಿದ್ದು ಅಪರೂಪದಲ್ಲಿ ಅಪರೂಪ ಅಂತಲೇ ಹೇಳಬಹುದು. ಆದ್ರೀಗ ಕೀರ್ತಿ ಸುರೇಶ್ ಫಿಲ್ಮ್‌ಫೇರ್ ಪ್ರಶಸ್ತಿ ಸಮಾರಂಭದಲ್ಲಿ ಸಿಕ್ಕಾಪಟ್ಟೆ ಬೋಲ್ಡ್ ಲುಕ್‌ನಲ್ಲಿ ಕ್ಯಾಮರಾ ಮುಂದೆ ಪ್ರತ್ಯಕ್ಷ ಆಗಿದ್ದರು. ಇವರ ಡ್ರೆಸ್ಸಿಂಗ್ ಸೆನ್ಸ್ ಹಿಂದೆಂದಿಗೂ ಹೀಗೆ ಇರಲಿಲ್ಲ ಅಂತ ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುವುದಕ್ಕೆ ಶುರು ಮಾಡಿದ್ದಾರೆ.

ದಕ್ಷಿಣ ಭಾರತದ ನಟಿ ಕೀರ್ತಿ ಸುರೇಶ್ ಸ್ಕಿನ್ ಶೋ ಹಾಗೂ ಎಕ್ಸ್‌ಪೋಸ್‌ ಮಾಡುವುದರಿಂದ ದೂರವೇ ಉಳಿದಿದ್ದರು. ಆದ್ರೀಗ ಕೀರ್ತಿ ಸುರೇಶ್ ಕೂಡ ಇದೇ ಹಾದಿ ಹಿಡಿದುಬಿಟ್ಟರೇ ಎಂಬ ಅನುಮಾನ ಮೂಡಿದೆ. ಕೀರ್ತಿ ಸುರೇಶ್ ಇತ್ತೀಚೆಗೆ ಬಾಲಿವುಡ್‌ಗೂ ಎಂಟ್ರಿ ಕೊಟ್ಟಿದ್ದಾರೆ. ಅಟ್ಲೀ ನಿರ್ಮಿಸುತ್ತಿರುವ 'ಬೇಬಿ ಜಾನ್' ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಕೀರ್ತಿ ಸುರೇಶ್‌ಗೆ ಬಾಲಿವುಡ್ ಗಾಳಿ ಬೀಸಿದೆ. ಆ ಕಾರಣಕ್ಕೆ ಈ ರೂಪದಲ್ಲಿ ಬಂದಿದ್ದಾರೆ ಅಂತಲೂ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.

'ಬೇಬಿ ಜಾನ್' ಸಿನಿಮಾದಲ್ಲಿ ಕೀರ್ತಿ ಸುರೇಶ್ ಕೆಲವು ಬೋಲ್ಡ್ ಸೀನ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಅಂದ್ಹಾಗೆ ಈ ಸಿನಿಮಾಗೆ ವರುಣ್ ಧವನ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂದ್ಹಾಗೆ, ಕೀರ್ತಿ ಸುರೇಶ್ ಈ ಬಾರಿ ಫಿಲ್ಮ್‌ ಫೇರ್ ಪ್ರಶಸ್ತಿ ಸಮಾರಂಭದಲ್ಲಿ 'ದಸರಾ' ಸಿನಿಮಾದ ನಟನೆಗಾಗಿ ಅತ್ಯುತ್ತಮ ನಾಯಕಿ ಪ್ರಶಸ್ತಿಯನ್ನು ಗಿಟ್ಟಿಸಿಕೊಂಡಿದ್ದಾರೆ. ಅದೂ ಡಿ ಗ್ಲಾಮರ್‌ ರೋಲ್ ಅನ್ನೋದು ವಿಶೇಷ.

More from Filmibeat

English summary
Keerthy Suresh Bold looks stunning at the filmfare award event  
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X