ದಳಪತಿ ವಿಜಯ್ ಜೊತೆ ಕೀರ್ತಿ ಸುರೇಶ್ ಮದುವೆ? ಮೌನ ಮುರಿದ ನಟಿ ಅಮ್ಮ ಮೇನಕಾ!
ಕೆಲವು ದಿನಗಳ ಹಿಂದೆ ದಳಪತಿ ವಿಜಯ್ ಹಾಗೂ ಪತ್ನಿ ಸಂಗೀತ ನಡುವಿನ ವೈಮನಸ್ಸಿನ ಬಗ್ಗೆ ಗಾಳಿಯೊಂದು ಹರಿದಾಡಿತ್ತು. ವಿಜಯ್ ಪತ್ನಿ ಸಂಗೀತಾಗೆ ವಿಚ್ಛೇದನ ನೀಡಲು ಮುಂದಾಗಿದ್ದಾರೆ ಅನ್ನೋ ಸುದ್ದಿ ಹರಿದಾಡಿದ್ದವು. ಈ ವಿಷಯ ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ಪ್ರಚಾರವನ್ನೂ ಪಡೆದುಕೊಂಡಿತ್ತು.
ದಳಪತಿ ವಿಜಯ್ ಹಾಗೂ ಪತ್ನಿ ಸಂಗೀತಾ ಸಂಸಾರದಲ್ಲಿ ಹುಳಿಹಿಂಡಿದ್ದು ಬಹುಭಾಷಾ ನಟಿ ಕೀರ್ತಿ ಸುರೇಶ್ ಎಂಬ ಸುದ್ದಿ ಹಲ್‌ಚಲ್ ಎಬ್ಬಿಸಿತ್ತು. ಆದರೆ, ಈ ಸುದ್ದಿಯನ್ನು ಒಪ್ಪಿಕೊಳ್ಳಲು ದಳಪತಿ ವಿಜಯ್ ಅಭಿಮಾನಿಗಳು ಸಿದ್ಧರಿರಲಿಲ್ಲ. ಇದು ಕೇವಲ ಊಹಾ-ಪೋಹಾವೆಂದು ಕಿಡಿಕಾರಿದ್ದರು.
ಸಾಲದ್ದಕ್ಕೆ ದಳಪತಿ ವಿಜಯ್ ಪತ್ನಿ ಪರವಾಗಿ #justiceforsangeetha (ಜಸ್ಟೀಸ್ ಫಾರ್ ಸಂಗೀತಾ) ಅನ್ನೋ ಅಭಿಮಾನ ಕೂಡ ಸೋಶಿಯಲ್ ಮೀಡಿಯಾದಲ್ಲಿ ಶುರುವಾಗಿತ್ತು. ಈ ಬಗ್ಗೆ ವಿಜಯ್ ಆಗಲಿ, ಕೀರ್ತಿ ಸುರೇಶ್ ಆಗಲಿ ಅಥವಾ ಇಬ್ಬರ ಮನೆಯವರಾಗಲಿ ಈ ಬಗ್ಗೆ ಎಲ್ಲೂ ಹೇಳಿಕೆಗಳನ್ನು ನೀಡಿರಲಿಲ್ಲ. ಈಗ ಕೀರ್ತಿ ಸುರೇಶ್ ತಾಯಿ ಮಗಳ ಮದುವೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

2ನೇ ಮದುವೆ ಬಗ್ಗೆ ವಿಜಯ್ ಪ್ರತಿಕ್ರಿಯೆ ಇಲ್ಲ
ದಳಪತಿ ವಿಜಯ್ ಹಾಗೂ ಕೀರ್ತಿ ಸುರೇಶ್ ಇಬ್ಬರೂ ಒಳ್ಳೆ ಸ್ನೇಹಿತರು. ಇಬ್ಬರೂ ಒಟ್ಟಿಗೆ 'ಭೈರವ' ಹಾಗೂ 'ಸರ್ಕಾರ್' ಸಿನಿಮಾಗಳಲ್ಲಿ ನಟಿಸಿದ್ದರು. ಹೀಗಾಗಿ ಈ ಸ್ನೇಹ ಮತ್ತಷ್ಟು ಗಾಢವಾಗಿದೆ. ಇದನ್ನೇ ಮುಂದಿಟ್ಟುಕೊಂಡು ಇಬ್ಬರೂ ಮದುವೆ ಆಗುತ್ತಿದ್ದಾರೆ ಅನ್ನೋ ಸುದ್ದಿ ಹಬ್ಬಿಸಲಾಗಿತ್ತು. ಈ ಕಾರಣಕ್ಕೆ ಪತ್ನಿ ಸಂಗೀತಾಗೆ ನಟ ದಳಪತಿ ವಿಜಯ್ ವಿಚ್ಚೇಧನ ನೀಡುತ್ತಾರೆ ಅನ್ನೋ ಗುಲ್ಲೆದ್ದಿತ್ತು. ಇದು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ್ದರೂ, ವಿಜಯ್ ಹಾಗೂ ಕೀರ್ತಿ ಸುರೇಶ ಇಬ್ಬರೂ ಪ್ರತಿಕ್ರಿಯೆ ನೀಡುವ ಗೋಜಿಗೆ ಹೋಗಿರಲಿಲ್ಲ.

ಕೀರ್ತಿ ಸುರೇಶ್ ಮದುವೆ ಅಮ್ಮನ ಪ್ರತಿಕ್ರಿಯೆ
ಕೀರ್ತಿ ಸುರೇಶ್ ಮದುವೆ ಬಗ್ಗೆ ಅಮ್ಮ ಮೇನಕಾ ತಮಿಳು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. " ಕೆಲವು ದಿನಗಳಿಂದ ಓಡಾಡುತ್ತಿರುವ ಸುದ್ದು ಕೇವಲ ಪ್ರಚಾರಕ್ಕಷ್ಟೇ. ನಾವು ಇಂತಹ ಯಾವುದೇ ಸುದ್ದಿಗಳನ್ನು ಇಚ್ಛೆ ಪಡುವುದಿಲ್ಲ. ಕೀರ್ ಸುರೇಶ್ ಮದುವೆಯ ಬಗ್ಗೆ ಸೋಶಿಯಲ್ ಮೀಡಿಯಾಗಳಲ್ಲಿ ಹಲವು ಸುದ್ದಿಗಳು ಹರಿದಾಡುತ್ತಿವೆ. ಇದು ಕೇವಲ ಗಾಳಿಸುದ್ದಿಗಳು ಅಷ್ಟೇ." ಎಂದು ಕೀರ್ತಿ ಪ್ರತಿಕ್ರಿಯಿಸಿದ್ದಾರೆ.

ಉದ್ಯಮಿ ಜೊತೆ ಕೀರ್ತಿ ಮದುವೆ?
ಕೀರ್ತಿ ಸುರೇಶ್ ಮದುವೆ ಮ್ಯಾಟರ್ ಆಗಾಗ ಸುದ್ದಿಯಾಗುತ್ತಲೇ ಇರುತ್ತೆ. ದಳಪತಿ ವಿಜಯ್‌ಗಿಂತಲೂ ಮುನ್ನ ಮ್ಯೂಸಿಕ್ ಡೈರೆಕ್ಟರ್ ಅನಿರುದ್ಧ್ ಜೊತೆ ಹೆಸರು ತಳುಕು ಹಾಕೊಂಡಿತ್ತು. ವಿಜಯ್ ಮ್ಯಾಟರ್ ತಣ್ಣಗಾಗುತ್ತಿದ್ದಂತೆ, ಮತ್ತೊಂದು ಸುದ್ದಿ ಸದ್ದು ಮಾಡಿತ್ತು. ಉದ್ಯಮಿ ಹಾಗೂ ಬಾಲ್ಯದ ಗೆಳೆಯನ ಜೊತೆ ಕೀರ್ತಿ ಸುರೇಶ್ ಹಸೆಮಣೆ ಏರುತ್ತಾರೆ. ಇನ್ನೇನು ಮದುವೆ ಆಗಬಿಡ್ತಾರೆ ಅನ್ನೋ ಸುದ್ದಿನೂ ಹಬ್ಬಿತ್ತು.

ಕೀರ್ತಿ ಸುರೇಶ್ ಫುಲ್ ಬ್ಯುಸಿ
ರಜನಿಕಾಂತ್, ದಳಪತಿ ವಿಜಯ್, ವಿಕ್ರಮ್ ಅಂತಹ ದಿಗ್ಗಜರೊಂದಿಗೆ ಕೀರ್ತಿ ಸುರೇಶ್ ನಟಿಸಿದ್ದಾರೆ. ಸದ್ಯ ಮೂರು ಮೂರು ಸಿನಿಮಾಗಳಲ್ಲಿ ಕೀರ್ತಿ ಸುರೇಶ್ ಬ್ಯುಸಿಯಾಗಿದ್ದಾರೆ. ತೆಲುಗಿನ ನ್ಯಾಚುರಲ್ ಸ್ಟಾರ್ ನಾನಿ ಜೊತೆ 'ದಸರಾ', ಸಂಡೂರು ನಿರ್ದೇಶನದ 'ರಿವಾಲ್ವರ್ ರೀಟಾ' ಹಾಗೂ ತಮಿಳಿನಲ್ಲಿ ಉದಯನಿಧಿ ಜೊತೆ 'ಮಾಮನ್ನನ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ.


Click it and Unblock the Notifications











