ಕೀರ್ತಿ ಸುರೇಶ್ ಮೇಲೆ ಹಲ್ಲೆ, ಫೋಟೊ ನೋಡಿ ಬೆಚ್ಚಿಬಿದ್ದ ಫ್ಯಾನ್ಸ್: ಇದು ರೀಲ್ or ರಿಯಲ್?

ಕೀರ್ತಿ ಸುರೇಶ್ ದಕ್ಷಿಣ ಭಾರತದ ಮಹಾನಟಿ ಅನ್ನುವುದರಲ್ಲಿ ಡೌಟೇ ಇಲ್ಲ. ಕೀರ್ತಿ ಸುರೇಶ್ ಕೇವಲ ಕಮರ್ಷಿಯಲ್ ಸಿನಿಮಾಗಳ ನಟಿ ಅಷ್ಟೇ ಅಲ್ಲ. ವಿಶಿಷ್ಟ ಕಥೆಯುಳ್ಳ ಸಿನಿಮಾಗಳಲ್ಲೂ ಕಾಣಿಸಿಕೊಳ್ಳುತ್ತಾರೆ. ಇಂತಹ ಸಿನಿಮಾಗಳಲ್ಲಿ ಕೆಲವೊಮ್ಮೆ ಸೋತಿದ್ದಾರೆ. ಮತ್ತೆ ಕೆಲವೊಮ್ಮೆ ಗೆದ್ದಿದ್ದಾರೆ.

Recommended Video

ಮಹೇಶ್ ಬಾಬು ಮೇಲೆ ಕೋಪಕ್ಕೆ ಕಾರಣ ಏನು? | Keerthy Suresh | Mahesh Babu | Sarkaru Vaari Paata

ಕಥೆಯೇ ಪ್ರಧಾನ ಅನ್ನುವಂತಹ ಸಿನಿಮಾಗಳಲ್ಲೂ ಮಿಂಚಿರುವ ಕೀರ್ತಿ ಸುರೇಶ್ ದಕ್ಷಿಣ ಭಾರತದ ಬಹು ಬೇಡಿಕೆಯ ನಟಿ. ಆದರೆ, ಇತ್ತೀಚೆಗೆ ಒಂದೆರಡು ಫೋಟೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಕೀರ್ತಿ ಸುರೇಶ್‌ ಫೋಟೊಗಳನ್ನು ನೋಡಿ ಅಭಿಮಾನಿಗಳೇ ಬೆಚ್ಚಿಬಿದ್ದಿದ್ದಾರೆ.

ಕೀರ್ತಿ ಸುರೇಶ್ ದಕ್ಷಿಣ ಭಾರತದಲ್ಲಿ ಬಹುಬೇಡಿಕೆಯ ನಟಿ. ಹಾಗಂತ ಇವರ ಸಿನಿಮಾಗಳೇನು ಬಾಕ್ಸಾಫೀಸ್‌ನಲ್ಲಿ ಜಾದು ಮಾಡುತ್ತಿಲ್ಲ. ಆದರೂ, ಸೂಪರ್‌ಸ್ಟಾರ್‌ಗಳ ಜೊತೆ ಸಿನಿಮಾ ಮಾಡುವ ಅವಕಾಶ ಸಿಕ್ಕಿದೆ. ಇನ್ನು ಕೆಲವೇ ದಿನಗಳಲ್ಲಿ ಮಹೇಶ್ ಬಾಬು ಜೊತೆ ನಟಿಸಿದ 'ಸರ್ಕಾರು ವಾರಿ ಪಾಟ' ಸಿನಿಮಾ ರಿಲೀಸ್ ಆಗಲಿದೆ. ಈ ಮಧ್ಯೆನೇ ಕೀರ್ತಿ ಸುರೇಶ್ ಮೇಲೆ ಹಲ್ಲೆ ಮಾಡಿ, ಮುಖಕ್ಕೆ ಯಾರೋ ಹೊಡೆದ ಫೋಟೊಗಳು ವೈರಲ್ ಆಗುತ್ತಿವೆ. ಅಸಲಿಗೆ ಈ ಫೋಟೊಗಳ ಕಥೆಯೇನು? ಅಂತ ತಿಳಿಯಲು ಮುಂದೆ ಓದಿ.

ಕೀರ್ತಿ ಸುರೇಶ್ ಮೇಲೆ ಹಲ್ಲೆ ಆಯ್ತಾ?

ಕೀರ್ತಿ ಸುರೇಶ್ ಮೇಲೆ ಹಲ್ಲೆ ಆಯ್ತಾ?

ಬಹುಭಾಷಾ ನಟಿ ಕೀರ್ತಿ ಸುರೇಶ್, ಮುಖದ ಮೇಲೆ ಗಾಯಗಳಾಗಿವೆ. ಯಾರೋ ಕೀರ್ತಿ ಸುರೇಶ್‌ ಮೇಲೆ ಅಟ್ಯಾಕ್ ಮಾಡಿದ್ದಾರೆ ಅನ್ನುವಂತಹ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಈ ಫೋಟೊಗಳನ್ನು ನೋಡಿ ಒಂದು ಕ್ಷಣ ಅವರ ಅಭಿಮಾನಿಗಳು ಹಾಗೂ ಸಿನಿಪ್ರಿಯರೇ ಬೆಚ್ಚಿಬಿದ್ದಿದ್ದಾರೆ. ಅಷ್ಟಕ್ಕೂ ಕೀರ್ತಿ ಸುರೇಶ್ ಮೇಲೆ ಹಲ್ಲೆ ಆಯ್ತಾ ಅಂತ ಗಾಬರಿ ಬಿದ್ದಿದ್ದಾರೆ.

ಕೀರ್ತಿ ಸುರೇಶ್ ಫೋಟೊ ಕಥೆಯೇನು?

ಕೀರ್ತಿ ಸುರೇಶ್ ಫೋಟೊ ಕಥೆಯೇನು?

ಬಹುಭಾಷಾ ನಟಿ ಕೀರ್ತಿ ಸುರೇಶ್ ಮೇಲೆ ಹಲ್ಲೆ ಆದಂತೆ ಕಾಣುವ ಪೋಟೊಗಳು ಸೋಶಿಯಲ್ ಮೀಡಿಯಾಗೆ ಎಂಟ್ರಿ ಕೊಡುತ್ತಿದ್ದಂತೆ ವೈರಲ್ ಆಗಿದ್ದವು. ಆದರೆ, ಇದು ರಿಯಲ್ ಫೋಟೊಗಳು ಅಲ್ಲ. ಕೀರ್ತಿ ಸುರೇಶ್ ಅಭಿನಯದ ಹೊಸ ಸಿನಿಮಾ 'ಸಾನಿ ಕಾಯಿಧಮ್' (Saani Kaayidham) ಸಿನಿಮಾದ ಮೇಕಿಂಗ್ ವೇಳೆ ತೆಗೆದ ಫೋಟೊಗಳು. ಇದೇ ಫೋಟೊ ನೋಡಿ ಕೀರ್ತಿ ಫ್ಯಾನ್ಸ್ ಗಾಬರಿಗೊಂಡಿದ್ದರು. ಈ ಸಿನಿಮಾದಲ್ಲಿ ಕೀರ್ತಿ ಸುರೇಶ್ ರಗಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಕೀರ್ತಿ ಸುರೇಶ್ ಸೇಡು

ಕೀರ್ತಿ ಸುರೇಶ್ ಸೇಡು

ತಮಿಳು ಸಿನಿಮಾ 'ಸಾನಿ ಕಾಯಿಧಮ್' ಈಗಾಗಲೇ ನೇರವಾಗಿ ಒಟಿಟಿಯಲ್ಲಿ ರಿಲೀಸ್ ಆಗಿದೆ. ಕೀರ್ತಿ ಸುರೇಶ್ ಹಿಂದೆಂದೂ ಇಂತಹದ್ದೊಂದು ಪಾತ್ರದಲ್ಲಿ ಕಾಣಿಸಿಕೊಂಡಿಲ್ಲ. ಈ ಸಿನಿಮಾದಲ್ಲಿ ಕೀರ್ತಿ ಸುರೇಶ್ ಪೊಲೀಸ್ ಕಾನ್‌ಸ್ಟೇಬಲ್ ಪೊನ್ನಿಯಾಗಿ ಕಾಣಿಸಿಕೊಂಡಿದ್ದಾರೆ. ಈಕೆಯ ಮೇಲೆ ಗ್ಯಾಂಗ್ ರೇಪ್ ಆಗುತ್ತೆ. ಅಲ್ಲಿಂದ ಸಿನಿಮಾ ಪೊನ್ನಿ ಹೇಗೆ ಸೇಡು ತೀರಿಸಿಕೊಳ್ಳುತ್ತಾಳೆ? ಆಕೆಯ ಕ್ರೂರ ಮುಖವನ್ನು ಇಲ್ಲಿ ಬಿಂಬಿಸಲಾಗಿದೆ. ಇಂತಹ ಸಂದರ್ಭವೊಂದರಲ್ಲಿ ತೆಗೆದ ಫೋಟೊಗಳೇ ಈಗ ವೈರಲ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಸಿನಿಮಾಗೆ ಸೂಪರ್‌ ರೆಸ್ಪಾನ್ಸ್

ಸಿನಿಮಾಗೆ ಸೂಪರ್‌ ರೆಸ್ಪಾನ್ಸ್

ಅಮೆಜಾನ್ ಪ್ರೈಂನಲ್ಲಿ 'ಸಾನಿ ಕಾಯಿಧಮ್' ಸಿನಿಮಾ ರಿಲೀಸ್ ಆಗಿದೆ. ಸಿನಿಮಾ ನೋಡಿದ ಬಳಿಕ ನೆಟ್ಟಿಗರು ಮೆಚ್ಚುಗೆ ಮಾತುಗಳನ್ನಾಡುತ್ತಿದ್ದಾರೆ. ಕೀರ್ತಿ ಸುರೇಶ್ ಪರ್ಫಾಮೆನ್ಸ್ ನೋಡಿ ಮೆಚ್ಚಿಕೊಂಡಿದ್ದಾರೆ. ಸಿನಿಮಾದ ಭಾವನಾತ್ಮಕ ಸನ್ನಿವೇಶಗಳಿಗೆ ಮರುಳಾಗಿದ್ದಾರೆ. ವಿಶೇಷ ಅಂದರೆ, ನಿರ್ದೇಶಕ ಸೆಲ್ವರಾಘವನ್ ಪಾತ್ರಕ್ಕೂ ಪ್ರೇಕ್ಷಕರು ಭೇಷ್ ಅನ್ನುತ್ತಿದ್ದಾರೆ.

More from Filmibeat

English summary
Keerthy Suresh Saani Kaayidham Movie BTS Photos Goes Viral. It Looks Like Someone Smashed Keerthy Suresh Face, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X