ದಳಪತಿ, ರಜನಿಕಾಂತ್ ಬಳಿಕ ತಮಿಳಿನ ಮತ್ತೋರ್ವ ಸ್ಟಾರ್ ನಟನ ಸಿನಿಮಾದಲ್ಲಿ ನಟಿ ಕೀರ್ತಿ ಸುರೇಶ್
ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಟಿ ಕೀರ್ತಿ ಸುರೇಶ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪೆಂಗ್ವಿನ್ ಸಿನಿಮಾ ಮೂಲಕ ಲಾಕ್ ಡೌನ್ ನಲ್ಲಿಯೂ ಅಭಿಮಾನಿಗಳನ್ನು ರಂಜಿಸಿದ ನಟಿ ಕೀರ್ತಿ ಮತ್ತೆ ಸುದ್ದಿಯಲ್ಲಿದ್ದಾರೆ. ಕೈತುಂಬ ಸಿನಿಮಾಗಳ ಜೊತೆಗೆ ಕೀರ್ತಿ ಮತ್ತೊಂದು ದೊಡ್ಡ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
Recommended Video
ಹೌದು, ನಟಿ ಕೀರ್ತಿ ತಮಿಳಿನ ಖ್ಯಾತ ನಟ ಕಮಲ್ ಹಾಸನ್ ಜೊತೆ ತೆರೆಹಂಚಿಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಈಗಾಗಲೆ ತಮಿಳಿನ ಖ್ಯಾತ ನಟ ವಿಜಯ್ ಜೊತೆ ಭೈರವ ಮತ್ತು ಸರ್ಕಾರ್ ಸಿನಿಮಾಗಳಲ್ಲಿ ನಟಿಸಿರುವ ಕೀರ್ತಿ ಸದ್ಯ ರಜನಿಕಾಂತ್ ಸಿನಿಮಾದಲ್ಲಿಯೂ ಅಭಿನಯಿಸುತ್ತಿದ್ದಾರೆ. ಸೂಪರ್ ಸ್ಟಾರ್ ಅಭಿನಯದ ಬಹುನಿರೀಕ್ಷೆಯ ಅಣ್ಣಾತೆ ಸಿನಿಮಾದಲ್ಲಿ ಕೀರ್ತಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಇದರ ಬೆನ್ನಲ್ಲೆ ಈಗ ಕಮಲ್ ಹಾಸನ್ ಸಿನಿಮಾಗೂ ಸಹಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಕಮಲ್ ಹಾಸನ್ ನಿರ್ದೇಶಕ ಗೌತಮ್ ಜೊತೆ 'ವೆಟ್ಟೈಯಾಡು ವಿಲಾಡು 2' ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ನಟಿ ಕೀರ್ತಿ ಕೀರ್ತಿ ಸುರೇಶ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ನಿಜವೇ ಆದರೆ ಮೊದಲ ಬಾರಿಗೆ ಕೀರ್ತಿ, ಕಮಲ್ ಹಾಸನ್ ಜೊತೆ ತೆರೆಹಂಚಿಕೊಳ್ಳಲಿದ್ದಾರೆ.

ಈ ಬಗ್ಗೆ ಸಿನಿಮಾತಂಡವಾಗಲಿ ಅಥವಾ ಕೀರ್ತಿ ಸುರೇಶ್ ಕಡೆಯಿಂದ ಯಾವುದೆ ಮಾಹಿತಿ ಬಹಿರಂಗವಾಗಿಲ್ಲ. ಇನ್ನೂ ಕೀರ್ತಿ ಸುರೇಶ್ ಮಹೇಶ್ ಬಾಬು ಅಭಿನಯದ ಸರ್ಕಾರ್ ವಾರಿ ಪಾಟ ಸಿನಿಮಾದಲ್ಲಿಯೂ ನಟಿಸಲಿದ್ದಾರೆ ಎನ್ನುವ ಸುದ್ದಿ ಇದೆ. ಆದರೆ ಈ ಬಗ್ಗೆಯೂ ಎಲ್ಲಿಯೂ ಹೇಳಿಕೊಂಡಿಲ್ಲ.
ನಟ ಕಮಲ್ ಹಾಸನ್ ಸದ್ಯ ಇಂಡಿಯನ್-2 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ನಂತರ 'ವೆಟ್ಟೈಯಾಡು ವಿಲಾಡು' ಸಿನಿಮಾದ ಸೀಕ್ವೆಲ್ ಮಾಡಲಿದ್ದಾರೆ. ನಟಿ ಕೀರ್ತಿ ಸುರೇಶ್ ಸದ್ಯ ಮಿಸ್ ಇಂಡಿಯಾ, ಗುಡ್ ಲಕ್ ಸಖಿ, ರಂಗ್ ದೆ ಮತ್ತು ಅಣ್ಣಾತೆ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.


Click it and Unblock the Notifications











