'ಕೆಜಿಎಫ್ 2' ಅರಗಿಣಿ ಶ್ರೀನಿಧಿ ಶೆಟ್ಟಿಯ ಮೂರನೇ ಸಿನಿಮಾ ರಿಲೀಸ್ ಡೇಟ್ ಅನೌನ್ಸ್!

ಕೆಜಿಎಫ್ 2 ಸಿನಿಮಾ ಬಳಿಕ ಶ್ರೀನಿಧಿ ಶೆಟ್ಟಿ ಹೊಸ ಸಿನಿಮಾ ಯಾವುದೂ ಅನೌನ್ಸ್ ಆಗಿಲ್ಲ. ಹಾಗಂತ ಅವರ ಅಭಿಮಾನಿಗಳು ಬೇಸರ ಮಾಡಿಕೊಳ್ಳುವ ಅಗತ್ಯವೇನೂ ಇಲ್ಲ. 'ಕೆಜಿಎಫ್ 2' ಸಿನಿಮಾದಲ್ಲಿ ನಟಿಸುವಾಗಲೇ ಶ್ರೀನಿಧಿ ಶೆಟ್ಟಿ ತಮಿಳು ಸಿನಿಮಾವೊಂದರಲ್ಲಿ ನಟಿಸಿ ಆಗಿತ್ತು. ಆ ಸಿನಿಮಾವೀಗ ಸಂಪೂರ್ಣ ಮುಗಿದಿದೆ. ಅದುವೇ 'ಕೋಬ್ರಾ'

ರಾಕಿಂಗ್ ಸ್ಟಾರ್ ಯಶ್ ಬಳಿಕ ಶ್ರೀನಿಧಿ ಶೆಟ್ಟಿ ಮತ್ತೊಬ್ಬ ಸ್ಟಾರ್ ನಟನೊಂದಿಗೆ ನಟಿಸಿದ್ದಾರೆ. ತಮಿಳಿನಲ್ಲಿ ವಿಭಿನ್ನ ಸಿನಿಮಾಗಳ ಮೂಲಕ ಹೆಸರಾಗಿರುವ ವಿಕ್ರಮ್ ಜೊತೆ ಶ್ರೀನಿಧಿ ಶೆಟ್ಟಿ ಕಾಣಿಸಿಕೊಳ್ಳಿದ್ದಾರೆ. ಆ ಸಿನಿಮಾವೇ ಈಗ ಕಂಪ್ಲೀಟ್ ಆಗಿದ್ದು, ಸಿನಿಮಾದ ರಿಲೀಸ್ ಡೇಟ್ ಅನ್ನು ಅನೌನ್ಸ್ ಮಾಡಿದೆ. ಈ ಸಿನಿಮಾ ಚಿಯಾನ್ ವಿಕ್ರಮ್ 20 ಅವತಾರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

7 ಸ್ಕ್ರೀನ್ ಸ್ಟುಡಿಯೋ 'ಕೋಬ್ರಾ' ಸಿನಿಮಾವನ್ನು ನಿರ್ಮಾಣ ಮಾಡಿದೆ. ಇದೊಂದು ಪಕ್ಕಾ ಆಕ್ಷನ್ ಎಂಟರ್‌ಟೈನರ್. ವಿಕ್ರಮ್ ಮತ್ತೊಮ್ಮೆ ತನ್ನ ವಿಶಿಷ್ಟ ಅಭಿನಯ ಹಾಗೂ ಮ್ಯಾನರಿಸಂನಿಂದ ಪ್ರೇಕ್ಷಕರ ಗಮನ ಸೆಳೆಯಲಿದ್ದಾರೆ. ಇದೇ ವೇಳೆ 'ಕೆಜಿಎಫ್ 2' ಬಳಿಕ ಶ್ರೀನಿಧಿ ಶೆಟ್ಟಿ ಹೇಗೆ ಕಾಣಿಸಿಕೊಳ್ಳಬಹುದು ಎಂಬುದನ್ನು ನೋಡಬಹುದು. ಅದಕ್ಕೂ ಮುನ್ನ 'ಕೋಬ್ರಾ' ಸಿನಿಮಾ ತಡವಾಗಿದ್ದು ಯಾಕೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.

'ಕೋಬ್ರಾ' ಜೊತೆ ಶ್ರೀನಿಧಿ ಶೆಟ್ಟಿ

'ಕೋಬ್ರಾ' ಜೊತೆ ಶ್ರೀನಿಧಿ ಶೆಟ್ಟಿ

ಶ್ರೀನಿಧಿ ಶೆಟ್ಟಿಗೆ 'ಕೋಬ್ರಾ' ಮೂರನೇ ಸಿನಿಮಾ. 'ಕೆಜಿಎಫ್ ಚಾಪ್ಟರ್ 1' ರಿಲೀಸ್ ಆದಾಗಲೇ ಈ ಸಿನಿಮಾಗೆ ಆಫರ್ ಬಂದಿತ್ತು. 'ಕೋಬ್ರಾ' ಸೆಟ್ಟೇರಿದ ವೇಳೆದ 'ಕೆಜಿಎಫ್ 2' ಶೂಟಿಂಗ್ ಕೂಡ ಆರಂಭ ಆಗಿತ್ತು. ಹೀಗಾಗಿ ಎರಡೂ ಸಿನಿಮಾಗಳಲ್ಲಿ ಶ್ರೀನಿಧಿ ಶೆಟ್ಟಿ ನಟಿಸುತ್ತಿದ್ದರು. ಒಂದು ವರ್ಷದ ಹಿಂದೆನೇ 'ಕೋಬ್ರಾ' ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ಪಕ್ಕಾ ತಮಿಳು ಹುಡುಗಿಯಾಗಿ ಶ್ರೀನಿಧಿ ಶೆಟ್ಟಿ ಕಾಣಿಸಿಕೊಂಡಿದ್ದಾರೆ.

'ಕೆಜಿಎಫ್' ತಂಡದೊಂದಿಗೆ ಅಗ್ರಿಮೆಂಟ್?

'ಕೆಜಿಎಫ್' ತಂಡದೊಂದಿಗೆ ಅಗ್ರಿಮೆಂಟ್?

ಶ್ರೀನಿಧಿ ಶೆಟ್ಟಿ 'ಕೆಜಿಎಫ್' ಸಿನಿಮಾ ಮಾಡಿದ ಬಳಿಕ ತನ್ನ ಬಳಿ ಯಾವುದೇ ಆಫರ್ ಇಲ್ಲ ಎಂದಿದ್ದರು. ಆದರೆ, ಒಬ್ಬ ನಾಯಕಿಯಾಗಿ ಹೆಚ್ಚು ಕಡಿಮೆ ಆರು ವರ್ಷ ಒಂದೇ ಫ್ರಾಂಚೈಸಿ ಸಿನಿಮಾ ನಟಿಸಲು ಹೇಗೆ ಒಪ್ಪಿಕೊಂಡರು? ಅನ್ನೋ ಪ್ರಶ್ನೆಗಳು ಎದ್ದಿತ್ತು. ಸ್ಯಾಂಡಲ್‌ವುಡ್‌ನಲ್ಲಿ ಮಾತ್ರ ಬೇರೆಯದ್ದೇ ಸುದ್ದಿ ಹರಿದಾಡಿತ್ತು. 'ಕೆಜಿಎಫ್' ಎರಡು ಫ್ರಾಂಚೈಸಿ ಮುಗಿಯುವವರೆಗೂ ಶ್ರೀನಿಧಿ ಶೆಟ್ಟಿ ಬೇರೊಂದು ಸಿನಿಮಾ ಒಪ್ಪಿಕೊಳ್ಳುವಂತಿಲ್ಲ ಎಂದು ಅಗ್ರಿಮೆಂಟ್ ಆಗಿತ್ತು. ಈ ಕಾರಣಕ್ಕಾಗಿಯೇ 'ಕೋಬ್ರಾ' ಕೂಡ ರಿಲೀಸ್ ಆಗಿರಲಿಲ್ಲ ಎಂದು ಹೇಳಲಾಗುತ್ತಿದೆ. ಈಗ 'ಕೆಜಿಎಫ್ 2' ತೆರೆಕಂಡ ಬಳಿಕ 'ಕೋಬ್ರಾ' ಕೂಡ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ ಎನ್ನಲಾಗಿದೆ.

'ಕೋಬ್ರಾ' ಸಿನಿಮಾ ರಿಲೀಸ್ ಯಾವಾಗ?

'ಕೋಬ್ರಾ' ಶ್ರೀನಿಧಿ ಶೆಟ್ಟಿಗೆ ತುಂಬಾನೇ ಮುಖ್ಯವಾದ ಸಿನಿಮಾ. 'ಕೆಜಿಎಫ್ 2' ಅಂತಹ ಅದ್ಭುತ ಯಶಸ್ಸು ಕಂಡ ಸಿನಿಮಾದಲ್ಲಿ ನಟಿಸಿದ್ದ ನಟಿಗೆ 'ಕೋಬ್ರಾ' ಗೆಲ್ಲಲೇ ಬೇಕು. ಹೀಗಾಗಿ ಶ್ರೀನಿಧಿ ಶೆಟ್ಟಿ ಕೂಡ ಈ ಸಿನಿಮಾವನ್ನು ಎದುರು ನೋಡುತ್ತಿದ್ದಾರೆ. ಅದರಂತೆ, 7 ಸ್ಕ್ರೀನ್ ಸ್ಟುಡಿಯೋ ರಿಲೀಸ್ ಡೇಟ್ ಅನ್ನು ಅನೌನ್ಸ್ ಮಾಡಿದೆ. ಆಗಸ್ಟ್ 11ರಂದು 'ಕೋಬ್ರಾ' ಸಿನಿಮಾ ವಿಶ್ವದಾದ್ಯಂತ, ತಮಿಳು, ತೆಲುಗು ಹಾಗೂ ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗಲಿದೆ.

ಕೋಬ್ರಾದಲ್ಲಿ ಇರ್ಫಾನ್ ಪಠಾಣ್

ಕೋಬ್ರಾದಲ್ಲಿ ಇರ್ಫಾನ್ ಪಠಾಣ್

'ಕೋಬ್ರಾ ' ಸಿನಿಮಾ ಸಖತ್ ಇಂಟ್ರೆಸ್ಟಿಂಗ್ ಕ್ಯಾರೆಕ್ಟರ್‌ಗಳಿವೆ. ಇದೇ ಮೊದಲ ಬಾರಿಗೆ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ 'ಕೋಬ್ರಾ' ಸಿನಿಮಾದಲ್ಲಿ ನಟಿಸಿದ್ದಾರೆ. ತುರ್ಕಿಯ ಇಂಟರ್‌ಪೋಲ್ ಆಫೀಸರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನೊಂದು ಕಡೆ ತಮಿಳಿನ ಖ್ಯಾತ ನಿರ್ದೇಶಕ ಕೆ ಎಸ್ ರವಿಕುಮಾರ್ ಕೂಡ ಬಣ್ಣ ಹಚ್ಚಿದ್ದಾರೆ. ಈ ಕಾರಣಕ್ಕೆ ಶ್ರೀನಿಧಿ ಶೆಟ್ಟಿಗೆ 'ಕೋಬ್ರಾ' ಸಿನಿಮಾ ಮತ್ತೊಂದು ಭರ್ಜರಿ ಹಿಟ್ ಕೊಡಲಿದೆ ಎನ್ನಲಾಗುತ್ತಿದೆ.

More from Filmibeat

English summary
KGF 2 Star Srinidhi Shetty And Vikram Starrer Cobra Release Date Annouced, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X