Halamathi Habibo: 'ಬೀಸ್ಟ್' ಹಾಡಿಗೆ 200 ಮಿಲಿಯನ್ ವೀವ್ಸ್: ದಾಖಲೆ ಮುರಿಯುತ್ತಾ 'ಕೆಜಿಎಫ್ 2' ತೂಫಾನ್?

ದಳಪತಿ ವಿಜಯ್ ಹಾಗೂ ಪೂಜಾ ಹೆಗ್ಡೆ ಮೊದಲ ಕಾಂಬಿನೇಷನ್ ಸಿನಿಮಾ 'ಬೀಸ್ಟ್'. ಈ ಸಿನಿಮಾ ಈಗ ಸದ್ದು ಮಾಡುತ್ತಿರುವುದು ಫಸ್ಟ್ ಕಾಂಬಿನೇಷನ್‌ ಅಂತ ಅಲ್ಲ. ಒಂದು ಹಾಡು ಯುಟ್ಯೂಬ್‌ನಲ್ಲಿ ಬೇಜಾನ್ ಸೌಂಡ್ ಮಾಡುತ್ತಿದೆ. ಅತೀ ವೇಗವಾಗಿ ಒಂದೊಂದೇ ದಾಖಲೆಗಳನ್ನು ಮುರಿಯುತ್ತಾ ಮುನ್ನುಗ್ಗುತ್ತಿದೆ.

Recommended Video

KGF 2 | 'ತೂಫಾನ್' ಹಾಡಿನ ವಿಶೇಷತೆ ಏನೇನು ನೋಡಿ! | Yash

ಕೆಲವೇ ದಿನಗಳ ಹಿಂದಷ್ಟೇ ದಳಪತಿ ವಿಜಯ್, ಪೂಜಾ ಹೆಗ್ಡೆಯ 'ಬೀಸ್ಟ್' ಚಿತ್ರದ ಹಲಮತಿ ಹಬಿಬೋ ಸಾಂಗ್ ರಿಲೀಸ್ ಆಗಿದೆ. ಈ ಹಾಡು ರಿಲೀಸ್ ಆಗಿದ್ದೇ ಆಗಿದ್ದು, ಯುಟ್ಯೂನ್‌ನಲ್ಲಿ ಇದರ ಓಟ ಇನ್ನೂ ನಿಂತಿಲ್ಲ. ಕಣ್ಮುಚ್ಚಿ ಕಣ್ಬಿಡುವುದರೊಳಗೆ ಹೊಸ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿದೆ.

ಅನಿರುದ್ಧ್ ಕಂಪೋಸ್ ಮಾಡಿ, ಹಾಡಿದ ಹಲಮತಿ ಹಬಿಬೋ ಸಾಂಗ್ ಯುಟ್ಯೂನ್‌ನಲ್ಲಿ ದಾಖಲೆ ವೀವ್ಸ್ ಕಂಡಿದೆ. ಮೇಲ್ನೋಟಕ್ಕೆ ಈ ಹಾಡು 'ಕೆಜಿಎಫ್ 2' ಟೀಸರ್ ಸೃಷ್ಟಿಸಿದ ದಾಖಲೆಯನ್ನೇ ಸೈಡಿಗಟ್ಟುವ ಎಲ್ಲಾ ಸಾಧ್ಯತೆಗಳೂ ಕೂಡ ಇವೆ. ಹಾಗಿದ್ದರೆ, ವಿಜಯ್ ಹಾಗೂ ಪೂಜಾ ಹೆಗ್ಡೆಯ ಹಾಡು ಬರೆದ ದಾಖಲೆ ಏನು? ತಿಳಿಯಲು ಮುಂದೆ ಓದಿ.

ಹಲಮತಿ ಹಬಿಬೋಗೆ 200 ಮಿ. ವೀವ್ಸ್

ಹಲಮತಿ ಹಬಿಬೋಗೆ 200 ಮಿ. ವೀವ್ಸ್

'ಬೀಸ್ಟ್' ತಮಿಳಿನ ಬಿಗ್ ಬಜೆಟ್ ಸಿನಿಮಾ. ಈ ಸಿನಿಮಾಗೆ ಬರೀ ಒಂದು ಹಾಡಿಂದಲೇ ಬೇಜಾನ್ ಹೈಫ್ ಸಿಕ್ಕಿದೆ. ದಳಪತಿ ವಿಜಯ್ ಸ್ಟೆಪ್ಸ್, ಪೂಜಾ ಹೆಗ್ಡೆ ಬೆಲ್ಲಿ ಡ್ಯಾನ್ಸ್, ಅನಿರುದ್ಧ್ ಮ್ಯೂಸಿಕ್, ಶಿವಕಾರ್ತಿಕೇಯನ್ ಸಾಹಿತ್ಯ ಇವೆಲ್ಲವೂ ಬೇಜಾನ್ ಸದ್ದು ಇಷ್ಟ ಆಗೋಗಿದೆ. ಈ ಹಾಡು ಕೇಳಿದವರೆಲ್ಲಾ ತಮಗೆ ಗೊತ್ತಿಲ್ಲದಂತೆ ಸ್ಟೆಪ್ಸ್ ಹಾಕುತ್ತಿದ್ದಾರೆ. ತಮಿಳುನಾಡು ಅಷ್ಟೇ ಅಲ್ಲ. ವಿಶ್ವದ ಮೂಲೆ ಮೂಲೆಯಲ್ಲಿರುವ ತಮಿಳರಿಗೆ ಸೆಲೆಬ್ರೆಟ್ ಮಾಡಲು ಹೊಸ ಹಾಡು ಸಿಕ್ಕಂತಾಗಿದೆ. ಅದಕ್ಕೆ ಅತೀ ವೇಗವಾಗಿ ಯುಟ್ಯೂಬ್‌ನಲ್ಲಿ 200 ಮಿಲಿಯನ್ ವೀವ್ಸ್ ಪಡೆದುಕೊಂಡಿದೆ.

ಹಲಮತಿ ಹಬಿಬೋ ಹೊಸ ಟ್ರೆಂಡ್

ಹಲಮತಿ ಹಬಿಬೋ ಹೊಸ ಟ್ರೆಂಡ್

ದಳಪತಿ ವಿಜಯ್ ಸ್ಟೆಪ್ಸ್ ನೋಡಿ ಡ್ಯಾನ್ಸ್ ಪ್ರಿಯರು ಥ್ರಿಲ್ ಆಗಿದ್ದರು. ಅವರ ಸ್ಟೆಪ್ಸ್ ಅನ್ನೇ ಕಾಪಿ ಮಾಡಲು ಯತ್ನಿಸಿದ್ದಾರೆ. ತಮ್ಮದೇ ಶೈಲಿಯಲ್ಲಿ ಸ್ಟೆಪ್ ಹಾಕಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಇಂತಹ ವಿಡಿಯೋಗಳಿಗೂ ಬೇಜಾನ್ಸ್ ವೀವ್ಸ್ ಸಿಗುತ್ತಿದೆ. ಈ ಕಾರಣಕ್ಕೆ ಹಲಮತಿ ಹಬಿಬೋ ಹೊಸ ಡ್ಯಾನ್ಸ್ ಟ್ರೆಂಡ್ ಆಗಿ ಹೊರಹೊಮ್ಮಿದೆ. ವಿಜಯ್ ಹಾಗೂ ಪೂಜಾ ಹೆಗ್ಡೆ ಸಾಂಗ್ ಅನ್ನೇ ರೀ-ಕ್ರಿಯೇಟ್ ಮಾಡುತ್ತಿದ್ದಾರೆ.

'ಕೆಜಿಎಫ್ 2' ದಾಖಲೆ ಮುರಿಯುತ್ತಾ?

'ಕೆಜಿಎಫ್ 2' ದಾಖಲೆ ಮುರಿಯುತ್ತಾ?

ಹಲಮತಿ ಹಬಿಬೋ ಹಾಡನ್ನು ಜನರ ಹುಚ್ಚೆದ್ದು ನೋಡುತ್ತಿದ್ದಾರೆ. ಈ ಕಾರಣಕ್ಕೆ 200 ಮಿಲಿಯನ್ ವೀವ್ಸ್ ಪಡೆದು ಹೊಸ ಟ್ರೆಂಡ್ ಅನ್ನೇ ಹುಟ್ಟಾಗಿದೆ. ಆದರೆ, ಮೊದಲಿಂದಲೂ 'ಕೆಜಿಎಫ್ 2'ಗೆ ಟಕ್ಕರ್ ಕೊಡುವುದಕ್ಕೆ ಸಜ್ಜಾಗಿರುವ 'ಬೀಸ್ಟ್' ಹೊಸ ದಾಖಲೆ ಸೃಷ್ಟಿಸುವುದರಲ್ಲಿದೆ. ಕಳೆದ ವರ್ಷದ ಆರಂಭದಲ್ಲಿ ರಿಲೀಸ್ ಆಗಿದ್ದ 'ಕೆಜಿಎಫ್ 2' ಟೀಸರ್ ಇದೂವರೆಗೂ 244 ಮಿಲಿಯನ್ ವೀವ್ಸ್ ಪಡೆದುಕೊಂಡು 250 ಮಿಲಿಯನ್ ಕಡೆ ಮುನ್ನುಗ್ಗುತ್ತಿದೆ. ಈಗಿರುವ ಟ್ರೆಂಡ್ ನೋಡಿದರೆ, ಕೆಲವೇ ದಿನಗಳಲ್ಲಿ ಹಲಮತಿ ಹಬಿಬೋ 250 ಮಿಲಿಯನ್ ವೀವ್ಸ್ ಪಡೆದರೂ ಅಚ್ಚರಿ ಪಡಬೇಕಿಲ್ಲ.

'ಬೀಸ್ಟ್' ದಾಖಲೆ ಮುರಿಯುತ್ತಾ 'ಕೆಜಿಎಫ್ 2' ಸಾಂಗ್?

'ಬೀಸ್ಟ್' ದಾಖಲೆ ಮುರಿಯುತ್ತಾ 'ಕೆಜಿಎಫ್ 2' ಸಾಂಗ್?

'ಕೆಜಿಎಫ್ 2' ಸಿನಿಮಾದ ತೂಫಾನ್ ಸಾಂಗ್ ಬಿಡುಗಡೆಗೆ ಇನ್ನು ಕೆಲವೇ ಗಂಟೆಗಳು ಬಾಕಿ ಉಳಿದಿವೆ. 'ಕೆಜಿಎಫ್ 2' ಟೀಸರ್ ರಿಲೀಸ್ ಆಗಿ ಅದೆಷ್ಟೋ ದಿನಗಳಾದ ಬಳಿಕ ಹಾಡೊಂದು ರಿಲೀಸ್ ಆಗುತ್ತಿದೆ. ಇದು ಯುಟ್ಯೂಬ್‌ನಲ್ಲಿ ತೂಫಾನ್ ಎಬ್ಬಿಸುತ್ತಾ ಅನ್ನೋದು ಕುತೂಹಲ. 'ಬೀಸ್ಟ್' ಚಿತ್ರದ ಹಲಮತಿ ಹಬಿಬೋ ಹಾಡು ಬರೆದ 200ಮಿಲಿಯನ್ ದಾಖಲೆ ರಿಲೀಸ್‌ಗೂ ಮುನ್ನ ಉಡೀಸ್ ಸಿನಿಮಾ ಬಾಕ್ಸಾಫೀಸ್‌ನಲ್ಲೂ ದಾಖಲೆ ಮಾಡುವುದು ಕನ್ಫರ್ಮ್.

More from Filmibeat

English summary
KGF 2 Toofan song can beat Vijay Beast movie Habibo song record of 200 million views. Here is the more detailes about the song.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X