ಡೈರೆಕ್ಟರ್ ಕ್ಯಾಪ್ ತೊಡಲಿದ್ದಾರೆ ಕೆಜಿಎಫ್, ಸಲಾರ್ ಸ್ಟಂಟ್ ಮಾಸ್ಟರ್ಸ್: ಲಾಂಚ್ ಮಾಡುತ್ತಿರುವುದು ಸೂಪರ್ ಸ್ಟಾರ್!
ತಮಿಳು ಚಿತ್ರರಂಗ ಮಾತ್ರವಲ್ಲದೆ ಇಡೀ ಭಾರತೀಯ ಚಲನಚಿತ್ರೋದ್ಯಮದಲ್ಲಿ ದೊಡ್ಡ ಸೂಪರ್ ಸ್ಟಾರ್‌ಗಳ ಹೆಸರುಗಳಲ್ಲಿ ಕಮಲ್ ಹಾಸನ್ ಹೆಸರು ಕೂಡ ಸೇರಿಕೊಂಡಿದೆ. ದಶಕಗಳಿಂದ ಸಿನಿಮಾಗಳಲ್ಲಿ ತೊಡಗಿಸಿಕೊಂಡಿರುವ ಅವರು, ವಿವಿಧ ಪ್ರಕಾರಗಳಲ್ಲಿ ವೈವಿಧ್ಯಮಯ ಚಿತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಲೇ ಇದ್ದಾರೆ.
ಇತ್ತೀಚಿನ ಹೊಸ ಅಪ್‌ಡೇಟ್ ಪ್ರಕಾರ ಕಮಲ್ ಹಾಸನ್ ಅವರು ತಮ್ಮ 237 ನೇ ಸಿನಿಮಾವನ್ನು ಘೋಷಿಸಿದ್ದಾರೆ. ಸೋಶಿಯಲ್ ಮಿಡಿಯಾದಲ್ಲಿ ಈ ಬಗ್ಗೆ ತಿಳಿಸಿರುವ ಅವರು, ಚಿತ್ರಕ್ಕೆ ತಾತ್ಕಾಲಿಕವಾಗಿ KH237 ಎಂಬ ಶೀರ್ಷಿಕೆಯನ್ನು ಇಡಲಾಗಿದೆ. ಜೊತೆಗೆ ಈ ಸಿನಿಮಾ ಮೂಲಕ ಸಾಹಸ ನಿರ್ದೇಶನಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದಿರುವ ಸ್ಟಂಟ್ ಮಾಸ್ಟರ್ಸ್‌ಗಳಾದ 'ಅನ್ಬರಿವ್' ಅವರಿಗೆ ನಿರ್ದೇಶಕರ ಕ್ಯಾಪ್ ತೊಡಿಸಲಿದ್ದಾರೆ.

ಕೆಜಿಎಫ್, ಸಲಾರ್ ಸ್ಟಂಟ್ ಮಾಸ್ಟರ್ಸ್ ಈಗ ಡೈರೆಕ್ಟರ್ಸ್
ಅನ್ಬರಿವ್ ಎಂದು ಕರೆಯಲ್ಪಡುವ ಅಂಬುಮಣಿ ಮತ್ತು ಅರಿವುಮಣಿ ಸಿನಿಮಾ ಇಂಡಸ್ಟ್ರಿಯಲ್ಲಿ ಸಕತ್ ಸದ್ದು ಮಾಡುತ್ತಿರುವ ಹೆಸರುಗಳು. ತಮಿಳು, ತೆಲುಗು, ಕನ್ನಡ, ಮಲಯಾಳಂ ಮತ್ತು ಹಿಂದಿ ಸಿನಿಮಾಗಳಲ್ಲಿ ಸ್ಟಂಟ್ ಡೈರೆಕ್ಟರ್ ಆಗಿರುವ ಇವರು ತಮ್ಮ ಕೆಲಸದಿಮದ ರಾಷ್ಟರ ಪ್ರಶಸ್ತಿಯನ್ನು ತೆಗೆದುಕೊಂಡಿದ್ದಾರೆ.
ಕನ್ನಡದ ಕೆಜಿಎಫ್ ಎರಡು ಸಿನಿಮಾಗಳಿಗೂ ಇವರೆ ಸ್ಟಂಟ್ ಮಾಡಿದ್ದು, ಕೆಜಿಎಫ್ ಸಿನಿಮಾಗಾಗಿ ಪ್ರಸ್ಸತಿ ಮುಡಿಗೇರಿಸಿಕೊಂಡಿದ್ದಾರೆ. ಸಲಾರ್ ಸಿನಿಮಾ, ದರ್ಶನ್ ಅವರ ರಾಬರ್ಟ್, ಪುನೀತ್ ರಾಜ್‌ಕುಮಾರ್ ಅವರ ಯುವರತ್ನ, ವಿಜಯ್ ಅವರ ಬೀಸ್ಟ್, ಕಮಲ್ ಹಾಸನ್ ಅವರ ವಿಕ್ರಂ ಸಿನಿಮಾ ಸೇರಿ ಹಲವು ಸೂಪರ್ ಹಿಟ್ ಸಿನಿಮಾಗಳಿಗೆ ಸಾಹಸ ಸಂಯೋಜನೆ ಮಾಡಿದ್ದಾರೆ.
ಸ್ಟಂಟ್ ಮಾಸ್ಟರ್ಸ್ ಜೊತೆ ಹೊಸ ಸಿನಿಮಾ ಘೋಷಿಸಿದ ಕಮಲ್ ಹಾಸನ್
ನಟ ಕಮಲ್ ಹಾಸನ್, ತಮ್ಮ ಟ್ವಿಟರ್‌ನಲ್ಲಿ ಹೊಸ ಸಿನಿಮಾ ಬಗ್ಗೆ ಮಾಹಿತಿ ನೀಡಿದ್ದಾರೆ. ಜೊತೆಗೆ ಟೀಸರ್ ವಿಡಿಯೋ ಕೂಡ ಹಂಚಿಕೊಂಡಿದ್ದಾರೆ. "KH237 ಗಾಗಿ ನಿರ್ದೇಶಕರಾಗಿ ಇಬ್ಬರು ಪ್ರತಿಭೆಗಳನ್ನು ತಮ್ಮ ಹೊಸ ಅವತಾರದಲ್ಲಿ ಸೇರಿಸಲು ಹೆಮ್ಮೆಪಡುತ್ತೇನೆ. ಮಾಸ್ಟರ್ಸ್ ಅನ್ಬರಿವ್ ರಾಜ್ ಕಮಲ್ ಫಿಲ್ಮ್ಸ್ ಇಂಟರ್‌ನ್ಯಾಶನಲ್‌ಗೆ ಮತ್ತೆ ಸ್ವಾಗತ" ಎಂದಿದ್ದಾರೆ. ಈ ವಿಡಿಯೋದಲ್ಲಿ ಕಮಲ್ ಹಾಸನ್ ಲುಕ್ ಸಕತ್ ಮಾಸ್ ಆಗಿದೆ.
KH237 ಸಿನಿಮಾಗೆ ಆಕ್ಷನ್ ಕಟ್ ಹೇಳುವ ಮೊದಲೇ ಈಗಾಗಲೇ ಕಮಲ್ ಹಾಸನ್ ಮತ್ತು ಅನ್ಬರಿವ್ ಮಾಸ್ಟರ್ಸ್ ಎರಡು ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಪ್ರಸ್ತುತ ಒಂದು ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. 2022 ರ ಲೋಕೇಶ್ ಕನಕರಾಜ್ ನಿರ್ದೇಶನದ ವಿಕ್ರಮ್ ಸಿನಿಮಾದಲ್ಲಿ ಮೊದಲ ಬಾರಿಗೆ ಒಟ್ಟಾಗಿದ್ದರು.

ವಿಕ್ರಮ್ ಸಿನಿಮಾದಲ್ಲಿ ಫಹಾದ್ ಫಾಸಿಲ್, ವಿಜಯ್ ಸೇತುಪತಿ, ಗಾಯತ್ರಿ, ಕಾಳಿದಾಸ್ ಜಯರಾಮ್ ಮತ್ತು ಇನ್ನೂ ಅನೇಕರಿದ್ದರು. ಸಿನಿಮಾದ ಆಕ್ಷನ್ ಸೀನ್‌ಗಳಿಗೆ ಅಭಿಮಾನಿಗಳು ಮತ್ತು ವಿಮರ್ಶಕರು ಸಕಾರಾತ್ಮಕ ವಿಮರ್ಶೆ ನೀಡಿದ್ದರು. ಇದಲ್ಲದೇ, ಈ ಮೂವರು ಶಂಕರ್ ಅವರ ಮುಂಬರುವ ಚಿತ್ರ ಇಂಡಿಯನ್ 2 ಗಾಗಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ಇದು 1996 ರ ಇಂಡಿಯನ್ ಚಲನಚಿತ್ರದ ಮುಂದುವರಿದ ಭಾಗವಾಗಿದೆ. ಚಿತ್ರವು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.
ಇಂಡಿಯನ್ 2 ನಲ್ಲಿ ಕಾಜಲ್ ಅಗರ್ವಾಲ್, ರಾಕುಲ್ ಪ್ರೀತ್ ಸಿಂಗ್, ಸಿದ್ಧಾರ್ಥ್, ಬಾಬಿ ಸಿಂಹ, ವಿವೇಕ್, ನೆಡುಮುಡಿ ವೇಣು ಮತ್ತು ಇನ್ನೂ ಅನೇಕರು ನಟಿಸಲಿದ್ದಾರೆ. ಇನ್ನು, ಕಮಲ್ ಹಾಸನ್ ಪ್ರಭಾಸ್ ಅಭಿನಯದ ಕಲ್ಕಿ 2898 AD ಚಿತ್ರದಲ್ಲಿಯೂ ನಟಿಸಲಿದ್ದಾರೆ.


Click it and Unblock the Notifications










