"ಪಿಕೆ, ಪಠಾಣ್ ವಿರುದ್ಧ ಪ್ರತಿಭಟನೆ ಯಾಕೆ ಮಾಡಿದ್ರಿ?" ಕಪಿಲ್ ಸಿಬಲ್: "ನಿಮ್ಮಂತೆ ನಾವು ಬ್ಯಾನ್ ಮಾಡಿಲ್ಲ" ಖುಷ್ಬೂ
ನಟಿ ಹಾಗೂ ಬಿಜೆಪಿ ನಾಯಕಿ ಖುಷ್ಬೂ ವಿರುದ್ಧ ರಾಜ್ಯ ಸಭೆ ಎಂಪಿ ಕಪಿಲ್ ಸಿಬಲ್ ಕಿಡಿಕಾರಿದ್ದಾರೆ. ವಿವಾದಾತ್ಮಕ ಸಿನಿಮಾ 'ದಿ ಕೇರಳ ಸ್ಟೋರಿ' ಸಿನಿಮಾಗೆ ಬೆಂಬಲ ನೀಡಿದ್ದಕ್ಕಾಗಿ ಟ್ವೀಟ್ ಮೂಲಕವೇ ತಿರುಗಿಬಿದ್ದಿದ್ದಾರೆ.
ಖುಷ್ಬೂ ಸುಂದರ್ 'ದ್ವೇಷವನ್ನು ಉತ್ತೇಜಿಸುವ ರಾಜಕೀಯ'ವನ್ನು ಬೆಂಬಲಿಸುತ್ತಿದ್ದಾರೆ ಎಂದು ಟ್ವಿಟರ್‌ನಲ್ಲಿ ಆರೋಪ ಮಾಡಿದ್ದಾರೆ. ಖುಷ್ಭೂ ಸುಂದರ್ 'ದಿ ಕೇರಳ ಸ್ಟೋರಿ' ಸಿನಿಮಾಗೆ ಬೆಂಬಲ ನೀಡಿದ ಬಳಿಕ ಕಪಿಲ್ ಸಿಬಲ್ ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.

'ದಿ ಕೇರಳ ಸ್ಟೋರಿ' ಸಿನಿಮಾವನ್ನು ಬ್ಯಾನ್ ಮಾಡಬೇಕು ಅಂತ ಹೋರಾಡುತ್ತಿರುವವರಿಗೆ ಅಂತಹದ್ದೇನು ಭಯ ಕಾಡುತ್ತಿದೆ." ಎಂದು ಈ ಹಿಂದೆ ಖುಷ್ಬು ಸುಂಧರ್ ಟ್ವೀಟ್ ಮಾಡಿದ್ದರು. ಇಲ್ಲಿಂದ ಒಬ್ಬರಿಗೊಬ್ಬರು ಟ್ವೀಟ್ ಮೂಲಕ ಟಾಂಗ್ ಕೊಡುತ್ತಲೇ ಇದ್ದಾರೆ.
"ದಿ ಕೇರಳ ಸ್ಟೋರಿ ನೋಡಲೇಬೇಕಾದ ಸಿನಿಮಾ"
ಖುಷ್ಬೂ ಸುಂದರ್ 'ದಿ ಕೇರಳ ಸ್ಟೋರಿ' ಸಿನಿಮಾ ಬೆಂಬಲಿಸಿ ಬಗ್ಗೆ ಟ್ವೀಟ್ ಮಾಡಿದ್ದರು. ಇದು ರಾಜ್ಯಸಭೆ ಎಂಪಿ ಕಪಿಲ್ ಸಿಬಲ್ ಕೆಂಗಣ್ಣಿಗೆ ಗುರಿಯಾಗಿದೆ. " ಹಲವು ವರ್ಷಗಳಿಂದ ಮೌನವಾಗಿಯೇ ನಿರ್ಲಜ್ಜವಾಗಿ ಹೇಳಿದ ಸತ್ಯ ಅಥವಾ ಸತ್ಯದ ಭಾಗವಾಗಿದ್ದನ್ನು ಅರಿಯುವ ಭಯ. ಯಾವ ಸಿನಿಮಾ ನೋಡಬೇಕು ಅನ್ನೋ ನಿರ್ಧಾರವನ್ನು ಜನರಿಗೆ ಬಿಡಿ. ಬೇರೆಯವರ ನಿರ್ಧಾರವನ್ನು ನಿರ್ಧರಿಸಬೇಡಿ." ಎಂದು ಟ್ವೀಟ್ ಮಾಡಿದ್ದರು.
ಇದರೊಂದಿಗೆ ತಮಿಳುನಾಡು ಸರ್ಕಾರಕ್ಕೂ ಟಾಂಗ್ ಕೊಟ್ಟಿದ್ದರು."ತಮಿಳುನಾಡು ಸರ್ಕಾರ 'ದಿ ಕೇರಳ ಸ್ಟೋರಿ' ಶೋಗಳನ್ನು ರದ್ದುಗೊಳಿಸಲು ಕುಂಟು ನೆಪ ಹೇಳುತ್ತಿದೆ. ಇದು ನೋಡಲೇಬೇಕಾದ ಸಿನಿಮಾವೆಂದು ಜನರಿಗೆ ತಿಳಿಸಿದ್ದಕ್ಕೆ ಧನ್ಯವಾದಗಳು" ಎಂದು ಖುಷ್ಬೂ ಸುಂದರ್ ಟ್ವೀಟ್ ಮಾಡಿ #TheKeralaStoryAMustWatch ಸಿನಿಮಾ ಎಂದು ಹೇಳಿದ್ದರು.
ಖುಷ್ಬೂಗೆ ಕಪಿಲ್ ಸಿಬಲ್ ತಿರುಗೇಟು
ಖುಷ್ಬೂ ಸುಂದರ್ ಟ್ವೀಟ್ ಮಾಡುತ್ತಿದ್ದಂತೆ ಕಪಿಲ್ ಸಿಬಲ್ ರಾಂಗ್ ಆಗಿದ್ದಾರೆ. ಇವರೂ ಟ್ವೀಟ್ ಮೂಲಕವೇ ತಿರುಗೇಟು ನೀಡಿದ್ದರು. ಯುಪಿಎ ಸರ್ಕಾರದಲ್ಲಿ ಕಪಿಲ್ ಸಿಬಲ್ ಕೇಂದ್ರ ಸಚಿವರಾಗಿದ್ದರು. ಈಗ ಕಾಂಗ್ರೆಸ್ ಬಿಟ್ಟಿ ಸಮಾಜವಾದಿ ಪಕ್ಷದ ಬೆಂಬಲದಿಂದ ರಾಜ್ಯಸಭೆ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
"ಕೇರಳ ಫೈಲ್ಸ್ ಬಗ್ಗೆ ಬಿಜೆಪಿಯ ಖುಷ್ಬೂ ಸುಂದರ್: ಜನರಿಗೆ ಏನು ನೋಡಬೇಕು ಅಂತ ಅವರೇ ನಿರ್ಧಾರ ಮಾಡಲಿ. ಬೇರೆಯವ ನಿರ್ಧಾರವನ್ನು ನೀವು ನಿರ್ಧರಿಸಬೇಡಿ ಎಂದಿದ್ದಾರೆ. ಆಮಿರ್ ಖಾನ್ ಪಿಕೆ, ಶಾರುಖ್ ಖಾನ್ ಪಠಾಣ್, ಬಾಜಿರಾವ್ ಮಸ್ತಾನಿ ಬಗ್ಗೆ ಯಾಕೆ ಪ್ರತಿಭಟನೆ ಮಾಡಿದ್ರಿ" ಎಂದು ಟ್ವೀಟ್ ಮಾಡಿ ತಿರುಗೇಟು ನೀಡಿದ್ದರು.
"ನೀವೆಷ್ಟು ಹತಾಷರಾಗಿದ್ದೀರಿ?"
"ಕಪಿಲ್ ಅವರೇ ಸತ್ಯವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಮಾತಾಡಿದ್ದೀರಿ. ಅದಕ್ಕೆ ಬೇಸರವಾಗುತ್ತಿದೆ. ನೀವು ಹೇಳಿದ ಸಿನಿಮಾವನ್ನು ನಾವು ಬ್ಯಾನ್ ಮಾಡಿಲ್ಲ. ನೀವು ನಿಮ್ಮ ಸುಳ್ಳುಗಳನ್ನು ಸಮರ್ಥನೆ ಮಾಡಿಕೊಂಡು, ಪ್ರತಿಭಟನೆ ಮಾಡುತ್ತಿರುವವರನ್ನು ಬೆಂಬಲಿಸುತ್ತಿದ್ದೀರಿ ಎಂದು ನೀವೆಷ್ಟು ಹತಾಷರಾಗಿದ್ದೀರಿ" ಎಂದು ಖುಷ್ಬು ಮರುಟ್ವೀಟ್ ಮಾಡಿದ್ದಾರೆ.
'ದಿ ಕೇರಳ ಸ್ಟೋರಿ' ಸಿನಿಮಾ ರಿಲೀಸ್ ಆದ ಬಳಿಕವೂ ಪರ, ವಿರೋಧ ಚರ್ಚೆಗಳು ನಡೆಯುತ್ತಿದೆ. ಕೆಲವು ರಾಜ್ಯಗಳಲ್ಲಿ ಈ ಸಿನಿಮಾಗೆ ತೆರಿಗೆ ವಿನಾಯಿತಿಯನ್ನೂ ನೀಡಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಈ ಸಿನಿಮಾವನ್ನು ಬ್ಯಾನ್ ಮಾಡಲಾಗಿದೆ.


Click it and Unblock the Notifications











