ಖುಷ್ಭೂ ಮಕ್ಕಳು "ಅಮ್ಮ ದಯವಿಟ್ಟು ಈ ಸಿನಿಮಾ ನೋಡಬೇಡ" ಎಂದಿದ್ದೇಕೆ? 'ಅನಿಮಲ್' ಬಗ್ಗೆ ಈ ನಟಿ ಹೇಳಿದ್ದೇನು?
ಕಳೆದ ವರ್ಷ ಸಿಕ್ಕಾಪಟ್ಟೆ ಚರ್ಚೆಯಾಗಿದ್ದ ಸಿನಿಮಾ 'ಅನಿಮಲ್'. ಈ ಸಿನಿಮಾ ಬಗ್ಗೆ ಮಹಿಳೆಯರು ಕಿಡಿಕಾರಿದ್ದರು. ಮಹಿಳೆಯರಿಗೆ ಹಿಂಸೆ ಕೊಡುವ, ಶೋಷಣೆ ಮಾಡುವ ದೃಶ್ಯಗಳೇ ಹೆಚ್ಚಿವೆ ಎಂದು ಕಿಡಿಕಾರಿದ್ದರು. ಈಗ ಈ ಸಿನಿಮಾ ಬಗ್ಗೆ ಖುಷ್ಬೂ ಸುಂದರ್ ಕೂಡ ವೇದಿಕೆಯೊಂದರಲ್ಲಿ ಕಿಡಿಕಾರಿದ್ದಾರೆ. ರಣ್‌ಬೀರ್ ಕಪೂರ್ ಹಾಗೂ ರಶ್ಮಿಕಾ ಮಂದಣ್ಣ ಜೋಡಿಯ ಸಿನಿಮಾ ವಿರುದ್ಧ ತಿರುಗಿಬಿದ್ದಿದ್ದಾರೆ.
ಖುಷ್ಬೂ ಸುಂದರ್ ಕೇವಲ ನಟಿಯಷ್ಟೇ ಅಲ್ಲ. ರಾಷ್ಟ್ರೀಯ ಮಹಿಳಾ ಆಯೋಗದ ಚೇರ್‌ಪರ್ಸನ್ ಕೂಡ ಹೌದು. ಹೀಗಾಗಿ ಖುಷ್ಬೂ ಮಹಿಳೆಯರ ವಿರುದ್ಧದ ಚಟುವಟಿಗಳಿಗೆ ಪ್ರತಿಕ್ರಿಯೆ ನೀಡುತ್ತಾರೆ. ಇತ್ತೀಚೆಗೆ ಖುಷ್ಬೂ ಸುಂದರ್ 'ವಾಟ್ ಇಂಡಿಯಾ ಥಿಂಕ್ಸ್ ಟುಡೇ' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸಿದ 'ಅನಿಮಲ್' ಸಿನಿಮಾ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಇದೇ ವೇದಿಕೆಯಲ್ಲಿ ಖುಷ್ಬೂ ಸುಂದರ್ 'ಅನಿಮಲ್' ಸಿನಿಮಾ ಬಗ್ಗೆ ತಮ್ಮ ಮಕ್ಕಳು ಏನಂದ್ರು? ಅನ್ನೋದನ್ನು ರಿವೀಲ್ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಈ ಸಿನಿಮಾವನ್ನು ಜನರು ಗೆಲ್ಲಿಸಿದ್ದಕ್ಕೆ ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಖುಷ್ಬೂ ಸುಂದರ್ ಹೆಣ್ಣು ಮಕ್ಕಳು 'ಅನಿಮಲ್' ಬಗ್ಗೆ ಹೇಳಿದ್ದೇನು? ಇದೇ ಸಿನಿಮಾ ಬಗ್ಗೆ ಖುಷ್ಬೂ ಹೇಳಿದ್ದೇನು? ತಿಳಿಯಲು ಮುಂದೆ ಓದಿ.
ರಣ್‌ಬೀರ್ ಕಪೂರ್ ಹಾಗೂ ರಶ್ಮಿಕಾ ಮಂದಣ್ಣ ಕಾಂಬಿನೇಷನ್ ಸಿನಿಮಾ 'ಅನಿಮಲ್' ಬಗ್ಗೆ ಬೇಸರ ಹೊರ ಹಾಕಿದ್ದಾರೆ. "ಅನಿಮಲ್ ಅಂತ ಸಿನಿಮಾ ಯಶಸ್ಸು ಕಂಡಿದೆ ಅನ್ನೋದು ನನಗೆ ಇನ್ನೂ ಅಚ್ಚರಿ ಮೂಡಿಸಿದೆ. ಪದೇ ಪದೆ ಇಂತಹ ಸಿನಿಮಾವನ್ನು ನೋಡಿದ ಜನರ ಮನಸ್ಥಿತಿಯ ಬಗ್ಗೆ ಏನು ಹೇಳಬೇಕು ಅನ್ನೋದು ನನಗೆ ಗೊತ್ತಾಗುತ್ತಿಲ್ಲ." ಎಂದು ಖುಷ್ಬೂ ಸುಂದರ್ ಹೇಳಿದ್ದಾರೆ.

ಹಾಗೇ, " ಇದೇ ಸಮಯದಲ್ಲಿ ನಾವು ಸಮಾನತೆ, ಗೌರವ, ಸಮಾನ ಹಕ್ಕು ಅಂತ ಮಾತಾಡುತ್ತಿದ್ದೇವೆ. ಹೋರಾಟ ಮಾಡುತ್ತಿದ್ದೇವೆ. ಇದೇ ವೇಳೆ ಮಹಿಳೆಯರನ್ನು ಕೀಳಾಗಿ ತೋರಿಸಿದ ರಣ್‌ಬೀರ್ ಕಪೂರ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ 'ಅನಿಮಲ್' ಸಿನಿಮಾ ರಿಲೀಸ್ ಆಗಿದೆ. ನಾನಿನ್ನು ಈ ಸಿನಿಮಾವನ್ನು ನೋಡಿಲ್ಲ. ಯಾಕಂದ್ರೆ, ಇದು ನಾನು ಇಷ್ಟ ಪಡುವ ಸಿನಿಮಾ ಅಲ್ಲ." ಎಂದು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಖುಷ್ಬೂ ಸುಂದರ್ ತಮ್ಮ ಮಕ್ಕಳು ಈ ಸಿನಿಮಾ ನೋಡಬಾರದು ಅಂತ ಬಯಸಿದ್ದರು. ಆದರೆ, ಅವರ ಮಕ್ಕಳು ಈ ಸಿನಿಮಾ ನೋಡಿ ಪ್ರತಿಕ್ರಿಯೆ ನೀಡಿದ್ದರು. "ಅನಿಮಲ್ ಸಿನಿಮಾವನ್ನು ನನ್ನ ಹೆಣ್ಣು ಮಕ್ಕಳು ನೋಡಬಾರದು ಎಂದು ಬಯಸಿದ್ದೆ. ಆದರೆ, ಅವರು ಹೋಗಿ ಸಿನಿಮಾ ನೋಡಿದ್ದಾರೆ. ಅವರಿಗೆ ಆ ಸಿನಿಮಾ ಏನಿದೆ ಅಂತ ನೋಡಬೇಕಿತ್ತು. ಆದರೆ, ಸಿನಿಮಾ ನೋಡಿದ ಬಳಿಕ ಅಮ್ಮ ದಯವಿಟ್ಟು ಈ ಸಿನಿಮಾ ನೋಡಬೇಡ ಅಂದ್ರು" ಎಂದು ಖುಷ್ಭು ರಿವೀಲ್ ಮಾಡಿದ್ದಾರೆ.
ಯಾರು ಎಷ್ಟೇ ವಿರೋಧ ವ್ಯಕ್ತಪಡಿಸಿದ್ದರೂ 'ಅನಿಮಲ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಬ್ಲಾಕ್‌ಬಸ್ಟರ್ ಅಂತ ಸಾಬೀತಾಗಿದೆ. ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸುಮಾರು 900 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದ್ದು, 2023ರಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾಗಳಲ್ಲಿ ಪಟ್ಟಿ ಸೇರಿಕೊಂಡಿದೆ.


Click it and Unblock the Notifications











