ಜಯಂ ರವಿ ವಿಚ್ಚೇದನ ವಿವಾದ: ಸಿಂಹದ ಮರಿಗಳೊಂದಿಗೆ ಸಿಂಹಿಣಿ ಫೋಟೋ ಹಾಕಿ ಆರತಿ ರವಿಗೆ ಖುಷ್ಬೂ ಬೆಂಬಲ
ತಮಿಳಿನ ಜನಪ್ರಿಯ ಜನ ಜಯಂ ರವಿ. ಹಲವು ಸಿನಿಮಾಗಳಲ್ಲಿ ನಟಿಸಿ ಹೆಸರು ಗಳಿಸಿರುವ ಈ ನಟನೀಗ ವೈಯಕ್ತಿಕ ಜೀವನದಿಂದ ಅದನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಒಂದಿಷ್ಟು ದಿನ ತಮಿಳಿನಲ್ಲಿ ಪ್ಲಾಪ್ ಸಿನಿಮಾಗಳನ್ನು ಕೊಟ್ಟು ಸೈಡಿಗೆ ಸರಿದಿದ್ದ ಈ ನಟ ಮಣಿರತ್ನಂ ನಿರ್ದೇಶಿಸಿದ 'ಪೊನ್ನಿಯಿನ್ ಸೆಲ್ವನ್' ಸಿನಿಮಾ ಮೂಲಕ ಮತ್ತೆ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದ್ದಾರೆ.
ಕಾಲಿವುಡ್‌ನಲ್ಲಿ ಮತ್ತೆ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಜಯಂ ರವಿ ವೃತ್ತಿ ಬದುಕೇನೋ ಯಶಸ್ಸಿನ ಹಾದಿ ಹಿಡಿದಿದೆ. ಆದರೆ, ವೈಯಕ್ತಿಕ ಬದುಕು ಮಾತ್ರ ಹಳ್ಳ ಹಿಡಿದೆ. ಕಳೆದ ಕೆಲವು ತಿಂಗಳಿನಿಂದ ಜಯಂ ರವಿ ಉರ್ಫ್ ರವಿ ಮೋಹನ್ ವೈವಾಹಿಕ ಜೀವನ ಬೀದಿ ರಂಪಾಟವಾಗಿ ಮಾರ್ಪಟ್ಟಿದೆ. ಸಿನಿಮಾಗಳಲ್ಲಿ ಆದರ್ಶ ತಂದೆಯಾಗಿ ನಟಿಸಿದ್ದ ರವಿ ತನ್ನ ಮಕ್ಕಳು ಹಾಗೂ ಪತ್ನಿಯಿಂದ ದೂರವಾಗಿದ್ದಾರೆ. ಗಾಯಕಿ ಕೆನಿಷಾ ಫ್ರಾನ್ಸಿಸ್ ಅವರೊಂದಿಗೆ ಸುತ್ತಾಡುತ್ತಿದ್ದಾರೆ.

ಇತ್ತೀಚೆಗೆ ತಮಿಳಿನ ನಿರ್ಮಾಪಕರೊಬ್ಬರ ಮದುವೆ ಸಮಾರಂಭದಲ್ಲಿ ಗೆಳತಿ ಕೆನಿಷಾ ಜೊತೆ ಬಹಿರಂಗವಾಗಿ ಕಾಣಿಸಿಕೊಂಡಿದ್ದರು. ಅಲ್ಲಿಂದ ಜಯಂ ರವಿ ಅವರ ಪತ್ನಿ ಬೆಂಬಲಕ್ಕೆ ತಮಿಳಿನ ಜನರು ನಿಂತಿದ್ದಾರೆ. ವಿಶೇಷವಾಗಿ ತಮಿಳು ನಟಿ ಖುಷ್ಬೂ ಈ ನಟನ ಪತ್ನಿ ಆರತಿ ರವಿಗೆ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ 2 ಸಿಂಹದ ಮರಿಯೊಂದಿಗೆ ಹೆಣ್ಣು ಸಿಂಹವಿರುವ ಫೋಟೋವನ್ನು ಹಂಚಿಕೊಂಡು ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.
ಪತ್ನಿ ಜಯಂ ರವಿ ವಿಚ್ಛೇದನ
ಅನ್ಯೋನ್ಯವಾಗಿದ್ದ ಜಯಂ ರವಿ ಹಾಗೂ ಆರತಿ ಇಬ್ಬರ ದಾಂಪತ್ಯದಲ್ಲಿ ಬಿರುಕು ಬಿಟ್ಟಿದೆ. ಇಷ್ಟು ವರ್ಷ ಸಂಸಾರ ಮಾಡಿದ್ದ ಜಯಂ ರವಿ ತನ್ನ ಪತ್ನಿ ಹಾಗೂ ಮಕ್ಕಳಿಂದ ದೂರ ಆಗುವುದಕ್ಕೆ ನಿರ್ಧರಿಸಿ, ವಿಚ್ಛೇದನ ನೀಡುವುದಕ್ಕೆ ಮುಂದಾಗಿದ್ದರು. ಗಾಯಕಿ ಕೆನಿಷಾ ಫ್ರಾನ್ಸಿಸ್ ಜೊತೆಗಿನ ಸಂಬಂಧದಿಂದ ಪತ್ನಿ ಡಿವೋರ್ಸ್ ಕೊಡುವುದಕ್ಕೆ ನಿರ್ಧರಿಸಿದ್ದರು. ಈ ವಿಷಯವೀಗ ಬೀದಿ ಬಂದಿದೆ. ಆರಂಭದಲ್ಲಿ ಜಯಂ ರವಿ ಮಾಡಿದ ಆರೋಪಗಳನ್ನೇ ನಂಬಿದ್ದ ಜನರು ಈಗ ಪತ್ನಿ ಆರತಿಗೆ ಬೆಂಬಲವನ್ನು ಸೂಚಿಸಿದ್ದಾರೆ.
ಕೆನಿಷಾ ಜೊತೆ ಸುತ್ತಾಟ
ಇತ್ತೀಚೆಗೆ ತಮಿಳಿನ ನಿರ್ಮಾಪಕ ಇಸಾರಿ ಗಣೇಶ್ ಅವರ ಪುತ್ರಿ ಮದುವೆಯಲ್ಲಿ ಜಯಂ ರವಿ ಹಾಗೂ ಗಾಯಕಿ ಕೆನಿಷಾ ಒಟ್ಟಿಗೆ ಕಾಣಿಸಿಕೊಂಡಿದ್ದರು. ಕೆನಿಷಾ ಫ್ರಾನ್ಸಿಸ್ ಅವರ ಕೈ ಹಿಡಿದ ಬಂದಿದ್ದ ಜಯಂ ರವಿಯನ್ನು ಕಂಡು ಅಲ್ಲಿ ನೆರೆದಿದ್ದವರು ಕಂಗಾಲಾಗಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೂ ಒಳಗಾಗಿದ್ದರು. ಹೀಗಿದ್ದರೂ, ಆರತಕ್ಷತೆಗೂ ಈ ಜೋಡಿ ಮತ್ತೆ ಒಟ್ಟಿಗೆ ಕಾಣಿಸಿಕೊಂಡಿತ್ತು. ಇದನ್ನು ನೋಡಿದ್ದ ಪತ್ನಿ ಆರತಿ ಅಸಮಧಾನಗೊಂಡು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹತಾಶೆಯಿಂದ ಪೋಸ್ಟ್ ಮಾಡಿದ್ದರು. ಅಲ್ಲಿಂದ ಜಯಂ ರವಿ ವಿರುದ್ಧದ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಆರತಿ ರವಿಗೆ ನಟಿ ಖುಷ್ಬೂ ಬೆಂಬಲ
ಜಯಂ ರವಿ ತಮ್ಮ ಪತ್ನಿಗೆ ವಿಚ್ಚೇದನ ನೀಡಿ, ಗಾಯಕಿ ಕೆನಿಷಾ ಫ್ರಾನ್ಸಿಸ್ ಜೊತೆ ವಿವಾಹವಾಗುವ ತರಾತುರಿಯಲ್ಲಿದ್ದಾರೆ. ಇದೇ ವೇಳೆ ಆರತಿ ಪೋಸ್ಟ್ ವೈರಲ್ ಆದ ಬಳಿಕ ನಟಿ ಖುಷ್ಬೂ ಈ ನಟನ ಪತ್ನಿ ಆರತಿ ರವಿಗೆ ಬೆಂಬಲ ನೀಡಿ ಪೋಸ್ಟ್ ಮಾಡಿದ್ದಾರೆ. ಆರತಿಗೆ ನ್ಯಾಯ ಸಿಗಬೇಕು ಎಂದು ಒತ್ತಾಯ ಮಾಡಿದ್ದಾರೆ. ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಒಂದು ಫೋಟೊವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಒಂದು ಹೆಣ್ಣು ಸಿಂಹ ತನ್ನ ಎರಡು ಸಿಂಹದ ಮರಿಗಳನ್ನು ಅಪ್ಪಿಕೊಂಡು ರಕ್ಷಿಸುತ್ತಿರುವ ಫೋಟೊ ಅದು. ಈ ಪೋಸ್ಟ್‌ನಲ್ಲಿ ಆ ತಾಯಿ ಅನುಭವಿಸುತ್ತಿರುವ ನೋವಿಗೆ ಖಂಡಿತವಾಗಿಯೂ ನ್ಯಾಯ ಸಿಗುತ್ತದೆ. ಆಕೆ ಈ ಹೋರಾಟವನ್ನು ತನಗಾಗಿ ಮಾಡಿಲ್ಲ. ತನಗೆ ನೀಡುವ ಭರವಸೆ ಏನಾಯ್ತು ಎಂದು ವಾದ ಮಾಡುತ್ತಿದ್ದಾಳೆಂದು ಬೆಂಬಲ ಸೂಚಿಸುವ ರೀತಿಯಲ್ಲಿ ಪೋಸ್ಟ್ ಮಾಡಿದ್ದಾರೆ. ಇದೇ ವೇಳೆ ಹಲವು ಅಭಿಮಾನಿಗಳು ಆರತಿ ರವಿಯನ್ನು ಬೆಂಬಲಿಸಿ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ.


Click it and Unblock the Notifications











