ಕಮಲ್-ರಮೇಶ್ ಚಿತ್ರದಿಂದ ನಷ್ಟ; ಸಮಸ್ಯೆ ಬಗೆಹರಿಸುವಂತೆ ನಿರ್ಮಾಪಕರಿಂದ ದೂರು

'ವಿಕ್ರಂ' ಸಿನಿಮಾ ಉಳಗ ನಾಯಕನ್ ಕಮಲ್ ಹಾಸನ್ ಕಂಬ್ಯಾಕ್ ಮಾಡಿದ್ದಾರೆ. 'ಇಂಡಿಯನ್-2' ಹಾಗೂ 'ಥಗ್ ಲೈಫ್' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಆದರೆ ಇದೆಲ್ಲದರ ನಡುವೆ ಕಮಲ್ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಅದಕ್ಕೆ ಕಾರಣ 9 ವರ್ಷಗಳ ಹಿಂದೆ ಬಂದಿದ್ದ 'ಉತ್ತಮ ವಿಲನ್' ಸಿನಿಮಾ.

ರಮೇಶ್ ಅರವಿಂದ್ ನಿರ್ದೇಶನದ 'ಉತ್ತಮ ವಿಲನ್' ಸಿನಿಮಾ 2015ರಲ್ಲಿ ತೆರೆಕಂಡಿತ್ತು. ಈ ಕಾಮಿಡಿ ಡ್ರಾಮಾ ಸಿನಿಮಾ ಪ್ರೇಕ್ಷಕರ ಮನಗೆಲ್ಲುವಲ್ಲಿ ವಿಫಲವಾಗಿತ್ತು. ಕಮಲ್ ಹಾಸನ್, ಚಂದ್ರಹಾಸನ್ ಒಡೆತನದ ರಾಜ್‌ ಕಮಲ್ ಫಿಲ್ಮ್ಸ್ ಜೊತೆ ಸೇರಿ ಲಿಂಗುಸ್ವಾಮಿ ತಮ್ಮ ತಿರುಪತಿ ಬ್ರದರ್ಸ್ ಫಿಲ್ಮ್ ಮೀಡಿಯಾ ಬ್ಯಾನರ್‌ನಲ್ಲಿ ಚಿತ್ರವನ್ನು ನಿರ್ಮಿಸಿದ್ದರು. ಅವತ್ತಿನ ಕಾಲಕ್ಕೆ ಅದ್ಧೂರಿಯಾಗಿ ನಿರ್ಮಾಣವಾಗಿದ್ದ ಸಿನಿಮಾ ಸೋತಿತ್ತು.

Lingusamy files a complaint against Kamal Haasan in TFPC for Uttama Villain

ಇತ್ತೀಚೆಗೆ ತಿರುಪತಿ ಬ್ರದರ್ಸ್ ಫಿಲ್ಮ್ ಮೀಡಿಯಾ ಸಂಸ್ಥೆ ನಮಗೆ 'ಉತ್ತಮ ವಿಲನ್' ಚಿತ್ರದಿಂದ ನಷ್ಟವಾಗಿತ್ತು ಎಂದು ಆರೋಪಿಸಿತ್ತು. ನಿರ್ಮಾಪಕರ, ನಿರ್ದೇಶಕ ಲಿಂಗುಸ್ವಾಮಿ ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಚಿತ್ರದಿಂದ ನಷ್ಟವಾಯಿತು ಎನ್ನುವುದಕ್ಕಿಂತ ಕಮಲ್ ಹಾಸನ್ ತಮ್ಮ ಮಾತು ಉಳಿಸಿಕೊಳ್ಳಲಿಲ್ಲ ಎಂದು ಆರೋಪಿಸಿದ್ದರು. ಈ ಸಂಬಂಧ ಈಗ ಸಹ ನಿರ್ಮಾಪಕ ಸುಭಾಷ್ ಚಂದ್ರ ಬೋಸ್ ಜೊತೆ ಸೇರಿ ಲಿಂಗುಸ್ವಾಮಿ ತಮಿಳು ಸಿನಿಮಾ ನಿರ್ಮಾಪಕರ ಸಂಘಕ್ಕೆ ದೂರು ನೀಡಲಾಗಿದೆ.

'ಉತ್ತಮ ವಿಲನ್' ಚಿತ್ರದಿಂದ ನಮಗೆ ನಷ್ಟವಾಗಿ ಸಾಕಷ್ಟು ಸಮಸ್ಯೆ ಎದುರಿಸಿದೆವು. ಆ ಬಳಿಕ 30 ಕೋಟಿ ರೂ. ಬಜೆಟ್‌ನಲ್ಲಿ ಒಂದು ಸಿನಿಮಾ ಮಾಡಿಕೊಡುವುದಾಗಿ ಕಮಲ್ ಮಾತು ನೀಡಿದ್ದರು. 9 ವರ್ಷ ಕಳೆದರೂ ಕಾಲ್‌ಶೀಟ್ ಕೊಡುತ್ತಿಲ್ಲ. ಸಿನಿಮಾ ಮಾಡುತ್ತಿಲ್ಲ. ಈ ಸಮಸ್ಯೆ ಬಗೆಹರಿಸಬೇಕು ಎಂದು ತಿರುಪತಿ ಬ್ರದರ್ಸ್ ಸಂಸ್ಥೆ ದೂರಿನಲ್ಲಿ ತಿಳಿಸಿದ್ದಾರೆ.

Lingusamy files a complaint against Kamal Haasan in TFPC for Uttama Villain

ಕಮಲ್ 'ಉತ್ತಮ ವಿಲನ್' ಕಥೆಯಲ್ಲಿ ವಾರಕ್ಕೊಮ್ಮೆ ಬದಲಾವಣೆ ಮಾಡುತ್ತಿದ್ದರು. ಅದೇ ಕಾರಣಕ್ಕೆ ಸಿನಿಮಾ ಗೆಲ್ಲಲಿಲ್ಲ. ನಮ್ಮ ಮಾತನ್ನು ಕೇಳುತ್ತಿರಲಿಲ್ಲ. ಸಿನಿಮಾ ಶುರು ಮಾಡುವ ಮುನ್ನ ನಾನು ಯಾವುದೇ ಕಾರಣಕ್ಕೂ ಮಧ್ಯಪ್ರವೇಶಿಸಲ್ಲ ಎಂದು ಹೇಳಿದ್ದೆ. ಆದರೆ ಫಸ್ಟ್ ಕಾಪಿ ನೋಡಿ ಬದಲಾವಣೆ ಹೇಳಿದರೆ ಮಾಡಬೇಕು ಎಂದಿದ್ದೆ. ಅದಕ್ಕೆ ಒಪ್ಪಿದ್ದರು. ಆದರೆ ಕೊನೆ ಗಳಿಗೆಯಲ್ಲಿ ನಾನು ಹೇಳಿದ ಬಲಾವಣೆಯನ್ನು ಮಾಡಲಿಲ್ಲ. ಇದೇ ಸಿನಿಮಾ ಸೋಲಿಗೆ ಕಾರಣ ಎಂದು ಲಿಂಗುಸ್ವಾಮಿ ಇತ್ತೀಚೆಗೆ ಹೇಳಿಕೊಂಡಿದ್ದರು.

ನಾನು ಹೇಳಿದ ಬದಲಾವಣೆಗಳು ಕಮಲ್ ಸರ್‌ಗೆ ಅರ್ಥ ಆಯಿತು. ನೀವು ಹೇಳಿದ್ದಂತೆ ಮಾಡೋಣ ಎಂದಿದ್ದರು. ಆದರೆ ಸಿನಿಮಾ ತೆರೆಕಂಡಾಗ ಆ ಬದಲಾವಣೆ ಆಗಿರಲಿಲ್ಲ. ಅದಕ್ಕೂ ಮುನ್ನ ನಾವು
'ದೃಶ್ಯಂ' ಚಿತ್ರವನ್ನು ಕಮಲ್ ಹಾಸನ್ ಅವರೊಂದಿಗೆ ರೀಮೇಕ್ ಮಾಡಲು ಬಯಸಿದ್ದೇವೆ. ಆದರೆ ಅದು ಆಗಲಿಲ್ಲ. ಬೇರೆ ನಿರ್ಮಾಪಕರ ಜೊತೆ ಸೇರಿ ಆ ಸಿನಿಮಾ ಮಾಡಿದರು ಎಂದು ವಿವರಿಸಿದ್ದರು.

ರಮೇಶ್ ಅರವಿಂದ್ ಸಾರಥ್ಯದ 'ಉತ್ತಮ ವಿಲನ್' ಚಿತ್ರದಲ್ಲಿ ಮನೋರಂಜನ್ ಎಂಬ ಸಿನಿಮಾ ನಟನ ಪಾತ್ರದಲ್ಲಿ ಕಮಲ್ ಮಿಂಚಿದ್ದರು. ಕೆ. ವಿಶ್ವನಾಥ್, ಕೆ. ಬಾಲಚಂದರ್ ಚಿತ್ರದಲ್ಲಿದ್ದರು. ಊರ್ವಶಿ, ಜಯರಾಂ, ಆಂಡ್ರಿಯಾ ಮುಖ್ಯಭೂಮಿಲೆಉಲ್ಲಿ ನಟಿಸಿದ್ದರು. ಗಿಬ್ರನ್ ಸಂಗೀತ ಚಿತ್ರಕ್ಕಿತ್ತು.

ಇತ್ತೀಚಿನ ವರ್ಷಗಳಲ್ಲಿ ಕಮಲ್ ಹಾಸನ್ ನಟಿಸಿದ ಅಷ್ಟಾಗಿ ಸದ್ದು ಮಾಡಲಿಲ್ಲ. ಆದರೆ 'ಲೋಕೇಶ್ ಕನಕರಾಜ್' ನಿರ್ದೇಶನದ 'ವಿಕ್ರಂ' ಸಿನಿಮಾ ಗೆದ್ದಿದೆ. ಹಾಗಾಗಿ ಉಳಗನಾಯಗನ್ ಸಿನಿಮಾಗಳ ಬಗ್ಗ ಕ್ರೇಜ್ ಶುರುವಾಗಿದೆ. ಇದೇ ಕಾರಣಕ್ಕೆ ಕಮಲ್ ಕಾಲ್‌ಶೀಟ್ ಪಡೆಯಲು ಅಥವಾ ಸೆಟ್ಲ್‌ಮೆಂಟ್ ಮಾಡಿಕೊಳ್ಳಲು ಈಗ ಲಿಂಗುಸ್ವಾಮಿ ದೂರು ನೀಡಿದ್ದಾರೆ ಎನ್ನುವ ವಾದವೂ ಇದೆ.

More from Filmibeat

English summary
Kamal Haasan Compensation film for Uttama Villain loss, Lingusamy asked TFPC help.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X