'ವಿಕ್ರಮ್' ಯಶಸ್ಸಿನ ಬೆನ್ನಲ್ಲೇ ವಿಜಯ್, ಕಾರ್ತಿ, ಕಮಲ್ & ಸೂರ್ಯ ಜತೆ ಚಿತ್ರ ಘೋಷಿಸಿದ ಲೋಕೇಶ್ ಕನಕರಾಜ್!

ಸಿನಿಮಾ ಕ್ಷೇತ್ರಕ್ಕೆ ಅದರಲ್ಲಿಯೂ ದಕ್ಷಿಣ ಚಿತ್ರರಂಗಗಳಿಗೆ ಗೋಲ್ಡನ್ ಇಯರ್ ಎಂದೇ ಹೇಳಲಾಗುತ್ತಿರುವ 2022ರಲ್ಲಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ ಚಿತ್ರಗಳ ಪೈಕಿ ತಮಿಳಿನ ವಿಕ್ರಮ್ ಚಿತ್ರ ಕೂಡ ಪ್ರಮುಖ ಸ್ಥಾನ ಗಿಟ್ಟಿಸಿಕೊಂಡಿದೆ. ಸುಮಾರು 135 ಕೋಟಿ ವೆಚ್ಚದಲ್ಲಿ ತಯಾರಾದ ವಿಕ್ರಮ್ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 500 ಕೋಟಿ ಗಳಿಸಿ ತಮಿಳುನಾಡಿನ ನೂತನ ಇಂಡಸ್ಟ್ರಿ ಹಿಟ್ ಆಗಿ ಹೊರಹೊಮ್ಮಿತ್ತು.

ಸಾಲು ಸಾಲು ಸೋಲು ಕಂಡಿದ್ದ ಕಮಲ್ ಹಾಸನ್ ಈ ಚಿತ್ರದ ಮೂಲಕ ನಟನಾಗಿ ಗೆದ್ದರು ಹಾಗೂ ನಿರ್ಮಾಪಕನಾಗಿ ಕಳೆದುಕೊಂಡಿದ್ದನ್ನು ಮರಳಿ ವಾಪಸ್ ಪಡೆದರು. ಇನ್ನು ಈ ಹಿಂದೆ ಖೈದಿ ಹಾಗೂ ಮಾಸ್ಟರ್ ಚಿತ್ರಗಳ ಮೂಲಕ ಸೂಪರ್ ಹಿಟ್ ನೀಡಿ ಹೆಸರು ಮಾಡಿದ ಲೋಕೇಶ್ ಕನಕರಾಜ್ ವಿಕ್ರಮ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿ ಈ ಬಾರಿ ಇನ್ನೂ ದೊಡ್ಡ ಮಟ್ಟದ ಸಕ್ಸಸ್ ಗಳಿಸಿದರು.

ಇನ್ನು ಈ ವಿಕ್ರಮ್ ಚಿತ್ರದಲ್ಲಿ ತಮ್ಮ ಹಿಂದಿನ ಚಿತ್ರ ಖೈದಿಯ ಕೆಲ ಅಂಶಗಳ ಕನೆಕ್ಷನ್ ಅನ್ನು ಇಟ್ಟಿದ್ದ ಲೋಕೇಶ್ ಕನಕರಾಜ್ ತಮ್ಮದೇ ಆದ ಸಿನಿಮಾವರ್ಸ್ ಸೃಷ್ಟಿಸಿ ಸಿನಿ ರಸಿಕರಲ್ಲಿ ಕ್ರೇಜ್ ಹೆಚ್ಚಿಸಿದ್ದರು. ಅದರಲ್ಲಿಯೂ ವಿಕ್ರಮ್ ಕ್ಲೈಮ್ಯಾಕ್ಸ್‌ನಲ್ಲಿ ಬರುವ ರೋಲೆಕ್ಸ್ ಪಾತ್ರ ಕಂಡು ಸಿನಿ ಪ್ರೇಮಿಗಳು ರೊಚ್ಚಿಗೆದ್ದಿದ್ದರು. ಹೀಗೆ ಸಿನಿಮ್ಯಾಟಿಕ್ ವರ್ಸ್ ನಿರ್ಮಿಸಿ, ಕಮಲ್ ಹಾಸನ್‌ಗೆ ಕಮ್‌ಬ್ಯಾಕ್ ನೀಡಿದ ಲೋಕೇಶ್ ಕನಕರಾಜ್ ಇದೀಗ ಇತ್ತೀಚೆಗಷ್ಟೆ ನಡೆದ ಸಂದರ್ಶನವೊಂದರಲ್ಲಿ ತಮ್ಮ ಮುಂದಿನ ಸಿನಿಮಾಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಈ ಎಲ್ಲಾ ಪ್ರಾಜೆಕ್ಟ್ ಬಗ್ಗೆ ಕೇಳಿದ ಸಿನಿ ರಸಿಕರು ಹುಬ್ಬೇರಿಸಿದ್ದಾರೆ.

ಲೋಕೇಶ್ ಕನಕರಾಜ್ ಮುಂದಿನ ಚಿತ್ರ ಯಾವುದು?

ಲೋಕೇಶ್ ಕನಕರಾಜ್ ಮುಂದಿನ ಚಿತ್ರ ಯಾವುದು?

ಸಂದರ್ಶನವೊಂದರಲ್ಲಿ ತಮ್ಮ ಮುಂದಿನ ಚಿತ್ರಗಳ ಬಗ್ಗೆ ಮಾಹಿತಿ ನೀಡಿರುವ ಲೋಕೇಶ್ ಕನಕರಾಜ್ ವಿಜಯ್ ಜತೆ ಮುಂದಿನ ಚಿತ್ರ ಎಂದು ಹೇಳಿಕೊಂಡಿದ್ದಾರೆ. ಈ ಹಿಂದೆ ವಿಜಯ್‌ಗೆ ಮಾಸ್ಟರ್ ಎಂಬ ಚಿತ್ರ ನಿರ್ದೇಶಿಸಿ ಕೊವಿಡ್ ಸಮಯದಲ್ಲೂ ಕೋಟಿ ಕೋಟಿ ಗಳಿಕೆ ಆಗುವಂತೆ ಮಾಡಿದ್ದ ಲೋಕೇಶ್ ಕನಕರಾಜ್ ಈ ಬಾರಿ ಮತ್ತೆ ಬಿಗ್ ಕಲೆಕ್ಷನ್ ಮಾಡುವ ಚಿತ್ರ ನೀಡುವುದು ಖಚಿತ. ಇನ್ನು ವಿಜಯ್ ಅಭಿನಯದ ವಾರಿಸು ಬಿಡುಗಡೆಗೆ ಸಿದ್ಧವಾಗಿದ್ದು, ಈ ಚಿತ್ರ ಬಿಡುಗಡೆಯಾದ ನಂತರ ಲೋಕೇಶ್ ಕನಕರಾಜ್ ಚಿತ್ರ ಸೆಟ್ಟೇರಲಿದೆ.

ಉಳಿದ ಚಿತ್ರಗಳಾವುವು?

ಉಳಿದ ಚಿತ್ರಗಳಾವುವು?

ವಿಜಯ್‌ಗೆ ಚಿತ್ರ ನಿರ್ದೇಶಿಸಿದ ನಂತರ ಲೋಕೇಶ್ ಕನಕರಾಜ್ ಕಾರ್ತಿಗೆ ಖೈದಿ 2 ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಈ ಚಿತ್ರದ ಬಳಿಕ ಮತ್ತೆ ಕಮಲ್ ಹಾಸನ್‌ಗೆ ಲೋಕೇಶ್ ಚಿತ್ರವೊಂದನ್ನು ನಿರ್ದೇಶಿಸುವುದಾಗಿ ಹೇಳಿಕೆ ನೀಡಿದ್ದು, ಇದು ವಿಕ್ರಮ್ ಮುಂದುವರಿದ ಭಾಗ ಎಂದೂ ಸಹ ಹೇಳಿಕೆ ನೀಡಿದ್ದಾರೆ. ಇಷ್ಟೇ ಅಲ್ಲದೇ ವಿಕ್ರಮ್ ಕ್ಲೈಮ್ಯಾಕ್ಸ್‌ನ ಐದು ನಿಮಿಷಗಳ ಮೂಲಕವೇ ದೊಡ್ಡ ಇಂಪ್ಯಾಕ್ಟ್ ಮೂಡಿಸಿರುವ ರೋಲೆಕ್ಸ್ ಪಾತ್ರಕ್ಕೂ ಒಂದು ಪ್ರತ್ಯೇಕ ಚಿತ್ರವನ್ನು ನಿರ್ದೇಶಿಸಲಿದ್ದೇನೆ ಎಂದು ಲೋಕೇಶ್ ಕನಕರಾಜ್ ಮಾಹಿತಿ ನೀಡಿದ್ದಾರೆ.

ಹತ್ತು ವರ್ಷಗಳು ಲೋಕೇಶ್ ಬ್ಯುಸಿ

ಹತ್ತು ವರ್ಷಗಳು ಲೋಕೇಶ್ ಬ್ಯುಸಿ

ಇನ್ನು ಮುಂದಿನ ಹತ್ತು ವರ್ಷಗಳು ನಿರತನಾಗುವಷ್ಟು ಯೋಜನೆಗಳನ್ನು ಈಗಾಗಲೇ ಹಾಕಿಕೊಂಡಿದ್ದೇನೆ ಎಂದು ಲೋಕೇಶ್ ಕನಕರಾಜ್ ಘೋಷಿಸಿದ್ದು, ಸದ್ಯ ದಕ್ಷಿಣದ ಸ್ಟಾರ್ ನಿರ್ದೇಶಕರ ಪಟ್ಟಿ ಸೇರ್ಪಡೆಗೊಂಡಿದ್ದಾರೆ ಹಾಗೂ ಮುಂದಿನ ಚಿತ್ರಗಳೆಲ್ಲಾ ಕೋಟ್ಯಂತರ ರೂಪಾಯಿ ವ್ಯವಹಾರ ಮಾಡುವುದು ಖಚಿತವಾಗಿದ್ದು ನಿರ್ಮಾಪಕರು ದೊಡ್ಡ ಹೂಡಿಕೆ ಮಾಡಲಿದ್ದಾರೆ.

More from Filmibeat

English summary
Lokesh Kanagaraj to direct his next films for Vijay, Karthi, Kamal Haasan and Suriya. Take a look
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X